Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಪುರುಷರನ್ನು ಕಾಲು ಕಸದಂತೆ ಕಂಡು ಕೋಟಿ ಕೋಟಿ ಗಳಿಸುವ ಯುವತಿ..! ಇದೀಗ ದೊಡ್ಡ ಉದ್ಯಮ!
ಜಗತ್ತಿನಲ್ಲಿ ಯಾವ ರೀತಿಯ ಉದ್ಯೋಗಗಳು ಇವೆ. ಜನ ಹೇಗೆಲ್ಲಾ ಹಣ ಮಾಡುತ್ತಾರೆ ಅನ್ನೋದನ್ನ ನಾವು ನೋಡಿದ್ದೇವೆ. ಅದ್ರಲ್ಲೂ ಕೆಲವೊಂದು ಕೆಲಸಗಳಂತೂ ಎಲ್ಲರಿಗೂ ಅಚ್ಚರಿ ಜೊತೆಗೆ ಶಾಕ್‌ಗೆ ತಳ್ಳುತ್ತವೆ. ಈ ಕೆಲಸಗಳ ಅಂತಿಮ ಗುರಿ ಹಣ ಮಾಡುವುದೇ ಆಗಿರುತ್ತೆ. ಆದ್ರೆ ವಿಚಿತ್ರ ದಾರಿಗಳ ಮೂಲಕವೂ ಜನ ಈಗ ಹಣ ಮಾಡುತ್ತಿರುವುದು ಮಾತ್ರ ಕೆಲವರಲ್ಲಿ ಆತಂಕಕ್ಕೂ ಕಾರಣವಾಗುತ್ತದೆ.
ಇದೇ ರೀತಿ ಇಲ್ಲೊಂದು ಕಡೆ ಯುವತಿಯೊಬ್ಬಾಕೆ ತನ್ನ ವಿಚಿತ್ರ ದಾರಿಯ ಮೂಲಕ ಹಣ ಮಾಡಲು ನಿಂತಿದ್ದಾಳೆ. ಅದೇ ಪುರುಷರನ್ನು ಅವಮಾನಿಸುವ ಮೂಲಕ ಆಕೆ ಕೋಟಿ ಕೋಟಿ ದುಡಿಯುತ್ತಾಳೆ. ಜೊತೆಗೆ ಈ ವೃತ್ತಿಯನ್ನೇ ಈಗ ಆಕೆ ದೊಡ್ಡ ಉದ್ಯಮವಾಗಿ ಬದಲಾಗಿಸಿದ್ದಾಳೆ.

ಅಮೆರಿಕದ ಮಾರ್ಲಿ ಎಂಬ ಯುವತಿ ಈಗ ಈ ವಿಚಿತ್ರ ಕಾರಣಕ್ಕೆ ಸುದ್ದಿಯಾಗಿದ್ದಾಳೆ. ಆಕೆ ಪುರುಷರನ್ನು ಅವಮಾನಿಸಲು ಹಣ ಪಡೆಯುತ್ತಾಳೆ. ಅವರನ್ನೇ ಅವಮಾನಿಸಿ ಆ ವಿಡಿಯೋಗಳ ಪೋಸ್ಟ್ ಹಂಚಿಕೊಳ್ಳುತ್ತಾಳೆ. ಈ 30 ವರ್ಷದ ವಾಣಿಜ್ಯೋದ್ಯಮಿ ವಿವಾದಾತ್ಮಕ ಕಲ್ಪನೆಯನ್ನು ಲಾಭದಾಯಕ ವ್ಯವಹಾರವಾಗಿ ಪರಿವರ್ತಿಸಿದ್ದಾರೆ.
ಅಲ್ಲಿ ನೂರಾರು ಪುರುಷರು ತಮ್ಮನ್ನು ಅವಮಾನಿಸಲು ತಾವೇ ಹಣ ನೀಡುತ್ತಾರೆ. ಉಡುಗೊರೆಗಳ ತಂದು ಆಕೆಗೆ ನೀಡುತ್ತಾರೆ. ಇಂತಹದೊಂದು ವಿಚಿತ್ರ ಘಟನೆ ನಡೆಯುತ್ತಿದೆ. ಆಕೆಯ ಯೂಟ್ಯೂಬ್ ಚಾನಲ್ ಆಗಿರುವ 'ಲವ್ ಡೋಂಟ್ ಜಡ್ಜ್'ನಲ್ಲಿ ಈಗ ಇಂತಹ ನೂರಾರು ವಿಡಿಯೋಗಳು ಹರಿದಾಡುತ್ತಿವೆ. ಆಕೆಯಿಂದ ಅವಮಾನಕ್ಕೊಳಗಾದ ಪುರುಷರ ವಿಡಿಯೋಗಳನ್ನು ಅಲ್ಲಿ ನೋಡಬಹುದು.
ಆಕೆ ಹಣ ಪಡೆದ ಬಳಿಕ ಪುರುಷರನ್ನು ನಾಯಿಯಂತೆ ವರ್ತಿಸಲು ಹೇಳುವುದು, ಚಪ್ಪಲಿ ಎತ್ತುವುದು, ಕಾಲು ನೆಕ್ಕಿಸುವುದು, ಅವರಿಗೆ ಸರಪಳಿ ಹಾಕಿ ಬಂಧಿಯಾಗಿಸಿ ಕೆಲಸ ಮಾಡಲು ಬಿಡುವುದು ಈ ರೀತಿಯ ವಿಡಿಯೋಗಳ ನೋಡಬಹುದು. ಇದೆಲ್ಲವೂ ಪುರುಷರ ಒಪ್ಪಿಗೆಯ ಮೇರೆಗೆ ಅವರಿಂದಲೇ ಹಣ ಪಡೆದು ಈ ರೀತಿ ಮಾಡಲಾಗುತ್ತದೆ.
ಮಾರ್ಲಿಯ ಈ ಉದ್ಯಮ ಪ್ರಯಾಣವು 6 ವರ್ಷಗಳ ಹಿಂದೆ ಅವಳು ಪದವಿ ಪಡೆದ ನಂತರ ಮತ್ತು ಸಾಂಪ್ರದಾಯಿಕ ಕಾರ್ಪೊರೇಟ್ ಉದ್ಯೋಗಗಳು ತನ್ನ ಹಣಕಾಸಿನ ಅಗತ್ಯಗಳನ್ನು ಪೂರೈಸುತ್ತಿಲ್ಲ ಎಂದು ಅರಿತುಕೊಂಡಳು. ಹೀಗಾಗಿ ಪರ್ಯಾಯ ಹಣಕಾಸಿನ ಮೂಲ ಹುಡುಕಲು ಆಕೆ ಮುಂದಾದಳು. ಬಳಿಕ ಹಣಕಾಸಿನ ಮೂಲವಾದ ಪುರುಷರಿಂದ ಹಣ ಪಡೆಯಬೇಕು ಎಂದು ನಿರ್ಧರಿಸಿದಳು. ಹೀಗೆ ಮೊದಲು ಕ್ಲೈಂಟ್‌ಗಳ ಮೂಲಕ ಪುರುಷರು ಹಣ ನೀಡಿ ಈ ರೀತಿ ಅವಮಾನಿಸಿಕೊಳ್ಳಲು ಮುಂದಾದರು. ಬಳಿಕ ಮಾರ್ಲಿ ಇದನ್ನು ಉದ್ಯಮವಾಗಿ ಪರಿವರ್ತಿಸಲು ಮುಂದಾದಳು.
ಆರಂಭದಲ್ಲಿ ಆಕೆ ಒಬ್ಬರನ್ನು ಅವಮಾನಿಸಲು 1 ಸಾವಿರ ಡಾಲರ್‌ನಿಂದ ಶೂಲ್ಕ ವಿಧಿಸಿದಳು. ಶ್ರೀಮಂತ ಪುರುಷರು ಈ ಹೊಸ ಐಡಿಯಾ ನೋಡಿ ಶಾಕ್ ಆದರು, ಜೊತೆಗೆ ಆಕೆಯ ಶುಲ್ಕ ಏರಿಕೆಯಾಗಿತ್ತು, 1 ಸಾವಿರ ಡಾಲರ್‌ನಿಂದ 208,000 ಡಾಲರ್ ವರೆಗೂ ಶುಲ್ಕ ಏರಿಕೆಯಾಗಿತ್ತು. ಬಳಿಕ ದೊಡ್ಡ ಉದ್ಯಮವಾಗಿತ್ತು.
ಈ ಉದ್ಯಮಕ್ಕೆ ತನ್ನ ಮನೆಯನ್ನೇ ಆಕೆ ಬಳಸಿದಳು. ಕ್ಲೈಂಟ್‌ಗಳನ್ನು ಮನೆಗೆ ಕರೆಸುತ್ತದ್ದಳು. ಹಣ ಪಡೆದು ಅವರನ್ನು ಕೀಳಾಗಿ ನಡೆಸಿಕೊಳ್ಳುವುದು, ಸೇವಕರಂತೆ ನಡೆಸಿಕೊಳ್ಳುವುದು, ದೈಹಿಕ ಕೆಲಸಗಳ ನೀಡುವುದು, ಯಾವ ಪುರುಷರು ಮಾಡದೆ ಇರುವ ಕೆಲಸಗಳನ್ನು ಅವರಿಂದ ಮಾಡಿಸುವುದು ಜೊತೆಗೆ ಇದನ್ನು ವಿಡಿಯೋ ಮಾಡಿ ಹಂಚಿಕೊಳ್ಳುವುದು ಆಕೆಯ ಕೆಲಸವಾಗಿತ್ತು. ನೋಡ ನೋಡುತ್ತಲೇ ಆಕೆ ಫೇಮಸ್ ಆಗಿಬಿಟ್ಟಳು. ಎಲ್ಲಾ ಕಡೆ ಆಕೆಯದ್ದೇ ಸದ್ದು. ಪುರುಷರು ಹಣ ನೀಡಿ ಅವಮಾನಿಸಿಕೊಳ್ಳಲು ಸಮಯ ನಿಗದಿ ಮಾಡಬೇಕಾದ ಸ್ಥಿತಿ ಬಂದೊದಗಿದೆ.
ಆದ್ರೆ ಆಕೆಯ ಈ ಕಾರ್ಯಕ್ಕೆ ವಿರೋಧವು ವ್ಯಕ್ತವಾಗಿದೆ. ಈ ರೀತಿ ಅವಮಾನಿಸುವುದು ಅದರಿಂದ ಹಣ ಮಾಡುವುದು ಯಾವ ಸಂಸ್ಕೃತಿ? ಇದರಿಂದ ಪುರುಷರಿಗೆ ಆಗುವ ಲಾಭವೇನು ಎಂದಿದ್ದಾರೆ? ಆದರೆ ಆಕೆಯ ಆಪ್ತ ಸಹಾಯಕ ಬೀಟಾ ಎಂಬಾತ ಮಾತ್ರ ಈ ರೀತಿ ಅವಮಾನಿಸಲ್ಪಟ್ಟ ಪುರುಷರು ಮಾತ್ರ ಮಾನಸಿಕ ನೆಮ್ಮದಿ ಪಡೆದಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.



Click it and Unblock the Notifications
