Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ತಿಂಗಳಿಗೆ ₹10 ಸಾವಿರ ದುಡಿಯುವ ಯುವತಿಗೆ ₹1 ಲಕ್ಷ ವೇತನದ ವರ ಬೇಕಂತೆ..!
ಇತ್ತೀಚಿಗೆ ಮದುವೆ ಅನ್ನೋದು ಒಂದು ಭಾಂದವ್ಯವಾಗಿ ಉಳಿದಿಲ್ಲ, ಬದಲಿಗೆ ಒಂದು ವ್ಯಾಪಾರ ಆಗೊ ಬದಲಾಗಿದೆ ಎಂಬುದು ಹಲವರ ದೂರಾಗಿದೆ. ಏಕೆಂದರೆ ಮದುವೆಯನ್ನ ಈಗ ಹಣದಿಂದ, ಸಂಪತ್ತಿನಿಂದಲೇ ಅಳೆಲಾಗುತ್ತದೆ. ಇನ್ನು ಹುಡುಗ ಹುಡುಗಿಯನ್ನು ನೋಡುವುದೇ ಈಗ ಸಂಪತ್ತಿನ ಮೇಲೆ. ಹುಡುಗ ಸರ್ಕಾರಿ ಕೆಲಸದಲ್ಲಿದ್ದಾನೆಯೇ?, ಆಸ್ತಿ ಎಷ್ಟಿದೆ.? ಸ್ವಂತ ಮನೆ ಇದೆಯೇ ಎಂಬುದನೆಲ್ಲಾ ಈಗ ನೋಡಿಕೊಂಡೇ ಮದುವೆ ನಿಶ್ಚಯವಾಗುತ್ತದೆ.
ಅದರಲ್ಲೂ ವಿದೇಶದಲ್ಲಿ ನೆಲೆಸಿರಬೇಕು, ಕಾರು, ಬಂಗಲೆ, ತೋಟ, ಗೆಸ್ಟ್ ಹೌಸ್, ಜಮೀನು ಹೀಗೆ ಹತ್ತಾರು ಅರ್ಹತೆಗಳಿದ್ದರೆ ಮಾತ್ರವೇ ಮದುಗೆ ನಿಶ್ಚಯವಾಗುತ್ತದೆ. ಇದು ಬರಿ ಹುಡುಗನ ಕಥೆಯಲ್ಲ, ಹುಡುಗಿಯ ಕಥೆಯೂ ಇದೆ ಆಗಿರುತ್ತದೆ. ಈಗಂತು ಮದುವೆಗೆ ಹುಡುಗ ಅಥವಾ ಹುಡುಗಿಯ ಹುಡುಕುವುದು ಕಷ್ಟದ ವಿಷಯವಲ್ಲ.
ಈಗ ವಧು-ವರರ ಅನ್ವೇಷಣೆಗೆಂದೇ ಒಂದಿಷ್ಟು ಕೇಂದ್ರಗಳು, ಮೊಬೈಲ್ ಆಪ್‌ಗಳು, ವೆಬ್‌ಸೈಟ್‌ಗಳು ಸೇರಿ ಹಲವು ಮಾಧ್ಯಮಗಳಿವೆ. ಈ ಮೂಲಕವೇ ಮದುವೆ ನಿಶ್ಚಯವೂ ಆಗುತ್ತಿವೆ. ಹೀಗಾಗಿ ಇಂದು ನಾವು ಲಕ್ಷ ಲಕ್ಷ ಮಂದಿಯ ಬಯಕೆ ಯಾವ ರೀತಿ ಇದೆ ಎಂಬುದನ್ನು ಸುಲಭವಾಗಿ ನೋಡುತ್ತಿದ್ದೇವೆ.

ಹೀಗೆ ಇಲ್ಲೊಂದು ಯುವತಿಯ ಬಯಕೆ ಕಂಡು ಜನರೇ ಶಾಕ್ ಆಗಿದ್ದಾರೆ. ಆಕೆ ತನಗೆ ವಿದೇಶದಲ್ಲಿರುವ ಇಂಜಿನಿಯರ್ ವರ ಬೇಕು ಎಂದು ನೀಡಿರುವ ಜಾಹೀರಾತು ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಈ ಜಾಹೀರಾತಿನಲ್ಲಿ ಆಕೆ ಹಾಕಿರುವ ಮಾಹಿತಿ ನೋಡಿದ ಜನರು ಮದುವೆಯ ಮೇಲೆ ನನಗೆ ಆಸಕ್ತಿ ಕಳೆದುಕೊಳ್ಳಲು ಇದೇ ಮುಖ್ಯ ಕಾರಣ ಎನ್ನುತ್ತಿದ್ದಾರೆ.
ಅಷ್ಟಕ್ಕೂ ಆ ಪೋಸ್ಟ್‌ನಲ್ಲಿ ಅಂತಹ ಯಾವ ಅಂಶಗಳನ್ನು ಆಕೆ ಸೇರಿಸಿದ್ದಾಳೆ ಎನ್ನುವುದನ್ನು ನಾವು ನೋಡೋಣ.
ಟೆಕ್ಕಿ ವರನನ್ನು ಹುಡುಕುತ್ತಿರುವ ಮಹಿಳೆಯು ಸಂಬಳ, ಮನೆ, ರಜೆ ಮತ್ತು ಹೆಚ್ಚಿನ ನಿಯತಾಂಕಗಳನ್ನು ಒಳಗೊಂಡಿರುವ "ಅವಶ್ಯಕತೆಗಳ" ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ ಯುವತಿಯೊಬ್ಬಳು ತನಗೆ ಸೂಕ್ತ ವರ ಬೇಕಾಗಿದ್ದಾನೆ ಎಂದು ತಿಳಿಸಿದ್ದಾಳೆ. ಆದರೆ ಅಲ್ಲಿರುವ ಷರತ್ತುಗಳ ನೋಡಿ ಜನರು ಆಘಾತಕ್ಕೆ ಒಳಗಾಗಿದ್ದಾರೆ.
ಈ ಪೋಸ್ಟ್‌ನ ಪ್ರಕಾರ ಆಕೆಗೆ ವಾರ್ಷಿಕವಾಗಿ 1.3 ಲಕ್ಷ ವೇತನವಂತೆ. ಆದರೆ ಹುಡುಗನಿಗೆ ವಾರ್ಷಿಕ 30 ಲಕ್ಷ ವೇತನ ಇರಬೇಕು ಎಂದು ನಮೂದಿಸಲಾಗಿದೆ. ತನ್ನ B.Ed ಅನ್ನು ಪೂರ್ಣಗೊಳಿಸಿದ ಮಹಿಳೆ 1.3 LPA ಗಳಿಸುತ್ತಾಳೆ ಮತ್ತು ಭಾರತ, ಅಮೆರಿಕ ಅಥವಾ ಇಂಗ್ಲೆಂಡ್ ನಲ್ಲಿ ನೆಲೆಸಿರುವ ವ್ಯಕ್ತಿ ವಾರ್ಷಿಕವಾಗಿ 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ವೇತನ ಪಡೆಯುತ್ತಿರಬೇಕು ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ. ಇದಿಷ್ಟೆ ಅಲ್ಲ ಆತ ಪ್ರಪಂಚದಾದ್ಯಂತ ವಿವಿಧ ಸ್ಥಳಗಳಿಗೆ ಪ್ರಯಾಣಿಸಲು ಇಷ್ಟಪಡುತ್ತಾಳೆ ಹಾಗೆ 5-ಸ್ಟಾರ್ ಹೋಟೆಲ್‌ಗಳಲ್ಲಿ ತಮಗುವುದೆಂದರೆ ಇಷ್ಟವೆಂದು ಹೇಳಲಾಗಿದೆ.
ಆದ್ರೆ ಆಕೆ ಈಗಾಗಲೇ ವಿಚ್ಛೇದನ ಹೊಂದಿದ್ದಾಳೆ, ಆದ್ರೆ ವಿಚ್ಚೇದನ ಆಗಿರದ ವರನನ್ನು ಬಯಸಿದ್ದಾಳೆ. ಈ ಪೋಸ್ಟ್ 1.2 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಹಾಗೆ ಈ ಪೋಸ್ಟ್ ನೋಡಿದ ಮಂದಿ ಕಮೆಂಟ್‌ಗಳಲ್ಲಿ ವಿಚಿತ್ರ ಬಯಕೆಯ ವಿರುದ್ಧ ವಿಷಾದ ಸಹ ವ್ಯಕ್ತಪಡಿಸಿದ್ದಾರೆ.
ಆಕೆ ಸುಮಾರು 11 ಸಾವಿರ ವೇತನ ಪಡೆಯುತ್ತಿದ್ದಾಳೆ. ಆದ್ರೆ 1,32,000 ವೇತನ ಇರುವ ಹುಡುಗ ಬೇಕು ಎಂದು ಬಯಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಇದರ ಜೊತೆಗೆ ಆಕೆ ಬಿಎಡ್ ಮಾಡಿದ್ದರು ಹುಡುಗ ಮಾತ್ರ ಇಂಜಿನಿಯರ್ ಆಗಿರಬೇಕು, ವಿದೇಶದಲ್ಲಿರಬೇಕು ಎಂಬ ಆಕೆಯ ಬಯಕೆ ನೋಡಿದ ಮಂದಿ ಆಕೋಶ ಹೊರಹಾಕಿದ್ದಾರೆ.
ಮೊದಲು ಆಕೆಗೆ ಆತನ ಅರ್ಧ ಸಂಬಂಳ ದುಡಿದು ತೋರಿಸಲು ತದನಂತರ ಲಕ್ಷ ಲಕ್ಷ ವೇತನದ ಹುಡುಗನ ಹುಡುಕಲಿ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.



Click it and Unblock the Notifications