Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
11 ನಿಮಿಷ ಸ್ವರ್ಗಕ್ಕೆ ಹೋಗಿದ್ದಳಂತೆ ಈಕೆ..! ಅಲ್ಲಿ ನೋಡಿದ್ದೇನು? ಆಕೆ ಹೇಳಿದ ಸತ್ಯವೇನು?
ಸತ್ತ ಮೇಲೆ ಮತ್ತೊಂದು ಜನ್ಮ ಎತ್ತಿಬರುವುದು ಹಾಗೆ ಸತ್ತವರು ಸ್ವರ್ಗ ಲೋಕ ಹಾಗು ನರಕ ಲೋಕಕ್ಕೆ ಹೋಗುವುದು ಎಲ್ಲಾ ಧರ್ಮದಲ್ಲೂ ಇರುವ ಒಂದಿ ನಂಬಿಕೆಯಾಗಿದೆ. ಈ ನಂಬಿಕೆಯಿಂದಲೇ ಜನರು ಇಂದಿಗೂ ಬದುಕಿದ್ದಾರೆ. ಭೂಮಿ ಮೇಲೆ ಒಳ್ಳೆಯ ಕೆಲಸ ಮಾಡಿದವರು ಸ್ವರ್ಗಕ್ಕೆ ಹೋಗುತ್ತಾರೆ. ಕೆಟ್ಟ ಕೆಲಸಗಳ ಮಾಡಿದವರು ನರಕ್ಕೆ ಹೋಗುತ್ತಾರೆ ಎಂದು ನಂಬಲಾಗಿದೆ.
ಹಾಗೆ ನರಕ ಲೋಕದಲ್ಲಿ ನಮ್ ಪಾಪಗಳಿಗೆ ಅನುಸಾರವಾಗಿ ಶಿಕ್ಷೆ ವಿಧಿಸುತ್ತಾನೆ. ಆದ್ರೆ ಸ್ವರ್ಗ ಲೋಕದಲ್ಲಿ ಶಿಕ್ಷೆ ಎಂಬುದಿಲ್ಲ ಬದಲಿಗೆ ನೀವು ಬಯಸಿದಲ್ಲವು ಅಲ್ಲಿ ಸಿಗಲಿದೆ ಎಂದು ನಂಬಲಾಗಿದೆ. ಆದರೆ ನಾವಂದನ್ನು ಊಹಿಸಬಹುದೇ ಹೊರತು ಅದನ್ನು ಅನುಭವಿಸಿ ಹೇಳುವುದು ಸಾಧ್ಯವೇ ಇಲ್ಲ. ಆದರೆ ಈ ಕುರಿತು ನಾವು ಯವುದಾದರು ಪುಸ್ತಕದಲ್ಲಿ, ಸಿನಿಮಾದಲ್ಲಿ ನೋಡಿ ಹೀಗೆಯೇ ಇರಬಹುದು ಎಂದು ಊಹಿಸಿರುತ್ತೇವೆ.

ಆದ್ರೆ ಇಲ್ಲೊಬ್ಬ ಮಹಿಳೆ ತಾನು ಸ್ವರ್ಗ ಲೋಕವನ್ನು ನೋಡಿರುವುದಾಗಿಯೂ ಅಲ್ಲಿಗೆ ಹೋಗಿ ಬಂದಿರುವುದಾಗಿಯೂ ಹೇಳಿಕೊಂಡಿದ್ದಾಳೆ. ಆಕೆಯ ಕಣ್ಣಿಗೆ ಕಾಣಿಸಿಕೊಂಡಿದ್ದನೆಲ್ಲಾ ವಿವರಿಸಿದ್ದಾಳೆ. ಆಕೆ 11 ನಿಮಿಷ ನೋಡಿದ್ದ ಪ್ರತಿಯೊಂದು ವಿಚಾರವನ್ನು ಹಂಚಿಕೊಂಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಹಾಗೂ ಕುತೂಹಲ ಮೂಡಿಸಿದೆ.
ಅಮೆರಿಕದ ಕನ್ಸಾನ್‌ನ 68ವರ್ಷದ ಷಾರ್ಲೆಟ್ ಹೋಮ್ಸ್ ಎಂಬಾಕೆ ಸ್ವರ್ಗ ನೋಡಿ ಬಂದಿರುವಾಗಿ ಹೇಳಿಕೊಂಡಿರುವ ಮಹಿಳೆ. ಆಕೆ ಅಧಿಕ ರಕ್ತದೊತ್ತಡ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು, ಆದ್ರೆ 11 ನಿಮಿಷದ ಬಳಿಕ ಮತ್ತೆ ಉಸಿರಾಟ ಪ್ರಕ್ರಿಯೆ ಆರಂಭಿಸಿದ್ದಳು. ಇದರಿಂದ ವೈದ್ಯರೇ ಒಂದು ನಿಮಿಷ ಶಾಕ್ ಆಗಿದ್ದರು.
ಇದಾದ ಬಳಿಕ ಆಕೆ ಸ್ವರ್ಗ ಲೋಕಕ್ಕೆ ಹೋಗಿದ್ದಾಗಿಯೂ ದೇವರು ಕಂಡಿರುವಂತೆಯೂ ಹೇಳಿಕೊಂಡಿದ್ದಾಳೆ. ಕಣ್ಣು ಕುಕ್ಕವಂತಹ ಬೆಳಕು ಆಕೆಯನ್ನು ಮೊದಲು ಆವರಿಸಿತ್ತಂತೆ. ಬಳಿಕ ಆಕೆ ಕಣ್ಣಿ ಬಿಟ್ಟಾಗ ಒಂದು ಕೋಣೆಯಲ್ಲಿದ್ದಳಂತೆ, ಹಾಗೆ ಅಲ್ಲಿ ಯಾವುದೋ ಹೂವಿನ ಸುವಾಸನೆ ತುಂಬಿತ್ತು, ನನ್ನ ಮನಸ್ಸು ಕೂಡ ಮೋಡದಲ್ಲಿ ತೇಲಿದಂತೆ ಆಗುತ್ತತ್ತು ಎಂದಿದ್ದಾಳೆ.
ಹಾಗೆ ನಾನು ನನ್ನ ಮನೆಯ ಸದಸ್ಯರನ್ನು ನೋಡಿದೆ, ಮಾತನಾಡಿದೆ. ಅಲ್ಲೊಂದು ಮಧುರವಾಗಿ ಸಂಗೀತ ಕೇಳುತ್ತಿತ್ತು. ಆದರೆ ಈ ವೇಳೆ ನರಕದಂತೆ ಕಣ್ಣಿಗೆ ಏನೋ ಕಂಡಿತು. ನಾನು ಕಿರುಚಿದೆ ಈ ವೇಳೆ ಆಸ್ಪತ್ರೆಯ ಬೆಡ್ ಮೇಲೆ ನಾನು ಮಲಗಿದ್ದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಆಕೆ ಗರ್ಭಿಣಿಯಾಗಿದ್ದಾಗಲೇ ಆಕೆಯ ಮಗುವೊಂದು ಸತ್ತು ಹೋಗಿತ್ತಂತೆ. ಆ ಮಗು ಕೂಡ ಸ್ವರ್ಗದಲ್ಲಿತ್ತು ಎಂದು ಆಕೆ ಹೇಳಿಕೊಂಡಿದ್ದಾಳೆ.
ಇದೆಲ್ಲಾ 11 ನಿಮಿಷದಲ್ಲಿ ನಡೆದಿತ್ತು. ನಾನು ಸ್ವರ್ಗದಲ್ಲಿ ಇದನೆಲ್ಲ ಕಂಡಿದ್ದೇನೆ. ನನಗೆ ಎಚ್ಚರಿಕೆ ಆಗದೆ ಇದ್ದರೆ ಅಥವಾ ಮರುಜೀವ ಬಾರದಿದ್ದರೆ ಅಲ್ಲಿಯೇ ಉಳದುಬಿಡುತ್ತಿದ್ದೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಆದರೆ ಆಕೆ ನಿಜವಾಗಲು ಸ್ವರ್ಗ ನೋಡಿದ್ದಾಳಾ? ಸ್ವರ್ಗಕ್ಕೆ ಹೋಗಿ ವಾಪಾಸು ಬರಬಹುದಾ? 11 ನಿಮಿಷ ಆಕೆಗೆ ಜೀವ ಇರಲಿಲ್ಲವಾ? ಈ ಎಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಆದ್ರೆ ಆಕೆ ನೋಡಿದ್ದು ಸತ್ಯ ಎಂದಾದರೆ, ಆಕೆ ಸತ್ತಿರುವುದು ಕೂಡ ನಿಜವೇ. ಆದ್ರೆ ಸತ್ತ ಬಳಿಕ ಮತ್ತೆ ಜೀವ ಆಗಿದ್ದು ಹೇಗೆ? ಈ ರೀತಿಯ ಹಲವು ಪ್ರಶ್ನೆ ಹುಟ್ಟಿಕೊಳ್ಳುತ್ತದೆ.
ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಘಟನೆ ಕೇಳಿದವರು ಅಚ್ಚರಿಗೆ ಒಳಗಾಗಿದ್ದಾರೆ. ಇದೆಲ್ಲಾ ಸಾಧ್ಯವೇ ಇಲ್ಲ. ಇದೊಂದು ಭ್ರಮೆ ಎಂದು ಆಕೆಗೆ ಹೇಳುತ್ತಿದ್ದಾರೆ. ಆದ್ರೆ ಕೆಲವರು ಇದನ್ನು ಒಪ್ಪಿಕೊಂಡಿದ್ದಾರೆ.



Click it and Unblock the Notifications