Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮೊಸಳೆ ಎಂದು ವಿಚಿತ್ರ ಪ್ರಾಣಿಯ ವಿಡಿಯೋ ಮಾಡಿದ ಮಹಿಳೆ..! ಅದು ಯಾವ ಪ್ರಾಣಿ ಗೊತ್ತಾ?
ಭೂಮಿ ಮೇಲೆ ಎಷ್ಟು ವಿಚಿತ್ರ ಪ್ರಾಣಿಗಳು ಜೀವಿಸುತ್ತಿವೆ ಎಂಬುದನ್ನು ನಾವು ಊಹಿಸಲು ಸಹ ಸಾಧ್ಯವಾಗುವುದಿಲ್ಲ. ಅವು ಮಾನವರಿಂದ ಬಹಳ ದೂರದಲ್ಲಿ ನಗರ, ಪಟ್ಟಣದ ಪರಿವೇ ಇಲ್ಲದೆ ಬದುಕುತ್ತಿರುತ್ತದೆ, ಆದರೆ ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿ ಆ ಪ್ರಾಣಿಗಳನ್ನು ನಗರಗಳತ್ತ ಬರುವಂತೆ ಮಾಡುತ್ತದೆ.
ಇಲ್ಲೊಂದು ವಿಡಿಯೋದಲ್ಲಿಯೂ ಸಹ ಪ್ರಾಣಿಯೊಂದು ಕಂಡುಬಂದಿದ್ದು ಮಹಿಳೆ ಆ ಪ್ರಾಣಿಯ ಕಂಡು ಅಚ್ಚರಿಗೆ ಒಳಗಾಗಿದ್ದಾರೆ. ಆದರೆ ಅದು ಏಷ್ಯನ್ ಮಾನಿಟರ್ ಲಿಜರ್ಡ್ ಆಗಿದೆ. ಆದರೆ ಈ ಪ್ರಾಣಿಯನ್ನು ಮೊದಲ ಬಾರಿಗೆ ನೋಡಿದ ಮಹಿಳೆ ಶಾಕ್ ಆಗಿದ್ದಾರೆ. ಅಕೆ ಇದನ್ನು ಮೊಸಳೆ ಎಂದುಕೊಂಡು ಮೊದಲು ವಿಡಿಯೋ ಮಾಡಿದ್ದು, ಬಳಿಕ ಈ ಪ್ರಾಣಿ ಯಾವುದೆಂದು ತಿಳಿಯದೆ ಅಚ್ಚರಿಗೆ ಒಳಗಾಗಿದ್ದಾಳೆ.

ಫ್ಲೋರಿಡಾದ ಮಹಿಳೆಯೊಬ್ಬರು ತಾನು ವಾಸವಿದ್ದ ಪ್ರದೇಶದಲ್ಲಿ ರಸ್ತೆಗೆ ಅಡ್ಡಲಾಗಿ ಓಡುತ್ತಿರುವ ಈ ಪ್ರಾಣಿಯ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಏಷ್ಯನ್ ಮಾನಿಟರ್ ಹಲ್ಲಿಯ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮೇ 20 ರಂದು ನಾರ್ತ್ ಪೋರ್ಟ್ ನಗರದಲ್ಲಿ ತನ್ನ ಮಗಳೊಂದಿಗೆ ಮನೆಗೆ ಹೋಗುತ್ತಿದ್ದಾಗ ರೆನೀ ಅಲ್ಯಾಂಡ್ ಎಂಬಾಕೆ ಈ ಪ್ರಾಣಿಯ ವಿಡಿಯೋ ಸೆರೆಹಿಡಿದಿದ್ದಾರೆ.
ಈ ಏಷ್ಯನ್ ಮಾನಿಟರ್ ಲಿಜರ್ಡ್ ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತವೆ. ಇದು ಭೂಮಿ ಮೇಲಿನ ಎರಡನೇ ಅತೀ ದೊಡ್ಡ ಹಲ್ಲಿ ಜಾತಿಗೆ ಸೇರಿದ ಪ್ರಾಣಿಯಾಗಿದೆ. ಕೊಮೊಡೊ ಡ್ರ್ಯಾಗನ್ ಅತ್ಯಂತ ದೊಡ್ಡ ಪ್ರಾಣಿಯಾಗಿದೆ. ಆಕೆ ಮೊದಲು ಇದು ದೊಡ್ಡ ಮೊಸಳೆ ಅಂದುಕೊಂಡಿದ್ದಳಂತೆ ಆದ್ರೆ ಹತ್ತಿರ ಹೋದಾಗ ಇದು ನಾಲಿಗೆಯನ್ನು ಹೊರಹಾಕುತ್ತಿತ್ತು. ಹೀಗಾಗಿ ಮಹಿಳೆ ಅಚ್ಚರಿಗೆ ಒಳಗಾಗಿದ್ದಾರೆ.
ಇಲ್ಲಿ ಅಚ್ಚರಿ ಹುಟ್ಟಿಸಿದ ಅಂಶವೇನೆಂದರೆ ಈ ಪ್ರಾಣಿ ಅಮೆರಿಕದಲ್ಲಿ ಕಂಡುಬಂದಿದ್ದು ಹೇಗೆ ಎಂಬುದು. ಏಕೆಂದರೆ ಇವು ಏಷ್ಯಾದಲ್ಲಿ ಮಾತ್ರ ಕಂಡುಬರುವ ಪ್ರಾಣಿಗಳೆಂದು ವರ್ಗೀಕರಣಗೊಂಡಿವೆ. ಆದರೆ ಇದೇ ಮೊದಲ ಬಾರಿಗೆ ಫ್ಲೋರಿಡಾದಲ್ಲಿ ಪತ್ತೆಯಾಗಿದೆ. ಹೀಗಾಗಿ ಹಿಂದೆಂದಿಗೂ ಈ ಪ್ರಾಣಿಯನ್ನು ನೋಡಿರದ ಆ ಮಹಿಳೆ ಇದನ್ನು ವಿಚಿತ್ರ ಪ್ರಾಣಿ ಎಂದು ಕರೆದಿದ್ದಾಳೆ.
ರಾಜ್ಯದಲ್ಲೂ ಪತ್ತೆಯಾಗಿತ್ತು ಡ್ರ್ಯಾಗನ್
ಈ ಹಿಂದೆ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಈ ರೀತಿಯ ದೊಡ್ಡ ಡ್ರ್ಯಾಗನ್ ಕಂಡು ಬಂದಿತ್ತು. ಜನರು ಇದನ್ನು ಕೊಮೊಡೊ ಡ್ರ್ಯಾಗನ್ ಇರಬಹುದು ಎಂದು ಆತಂಕಕ್ಕೆ ಒಳಗಾಗಿದ್ದರು. ಆದ್ರೆ ಅದು ಸಹ ಈ ಏಷ್ಯನ್ ಲಿಜರ್ಡ್ ಆಗಿತ್ತು. ಆದ್ರೆ ಇವು ಗಾತ್ರದಲ್ಲಿ ಬಹಳ ದೊಡ್ಡದಿತ್ತು. ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಕುಂದಾ ಗ್ರಾಮದಲ್ಲಿ ದೊಡ್ಡ ಗಾತ್ರದ ಈ ಉಡ ಜಾತಿಯ ಪ್ರಾನಿ ಪತ್ತೆಯಾಗಿತ್ತು. ಇದು ಸುಮಾರು 6ರಿಂದ 7 ಅಡಿಯಷ್ಟು ದೊಡ್ಡದಾಗಿತ್ತು.
ಕೊಮೊಡೊ ಡ್ರ್ಯಾಗನ್ ಅಂದರೇನು?
ಭೂಮಿ ಮೇಲೆ ಬದುಕಿರುವ ಹಲ್ಲಿ ಜಾತಿಯ ಅತ್ಯಂತ ದೊಡ್ಡ ಪ್ರಾಣಿಗಳೆಂದರೆ ಅವು ಕೊಮೊಡೊ ಡ್ರ್ಯಾಗನ್, ಇವು ಸುಮಾರು 10 ಅಡಿಯಷ್ಟು ದೊಡ್ಡದಾಗಿರುತ್ತವೆ. ಇವು ಇಂಡೋನೇಷ್ಯಾದ ದ್ವೀಪಗಳಲ್ಲಿ ಕಂಡುಬರುತ್ತವೆ. ಅಚ್ಚರಿ ಅಂದರೆ ಇವುಗಳ ಕಚ್ಚುವಿಕೆಯಿಂದ ವಿಷ ಹರಡಿ ಪ್ರಾಣಿಗಳು ಸಾಯುತ್ತವೆ. ಇವು ವೇಗವಾಗಿ ಚಲಿಸಲು ಆಗುವುದಿಲ್ಲ ಏಕೆಂದರೆ ದೇಹದ ತೂಕ ಹೆಚ್ಚಾಗಿರುತ್ತದೆ ಹಾಗೂ ಅವುಗಳ ಕಾಲು ತುಂಬಾ ಚಿಕ್ಕದಾಗಿರುತ್ತೆ. ಜೊತೆಗೆ ಇವು ಗಾತ್ರದಲ್ಲಿ ಚಿಕ್ಕದಾಗಿರುವ ತಮ್ಮದೇ ಜಾತಿಯ ಕೊಮೊಡೊ ಡ್ರ್ಯಾಗನ್ ಅನ್ನು ಸಹ ಬೇಟೆಯಾಡುತ್ತವೆ. ಆದರೆ ಈ ಪ್ರಾಣಿಗಳು ಈಗ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಾಲಿಗೆ ಸೇರಿದ್ದು, ಕೇವಲ ಬೆರಳೆಣಿಕೆಯಷ್ಟು ಮಾತ್ರ ಭೂಮಿ ಮೇಲೆ ಉಳಿದಿವೆ ಎಂದು ತಿಳಿದುಬಂದಿದೆ.



Click it and Unblock the Notifications
