Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
28 ಎಕರೆ ತೋಟದ ಮನೆ..ಒಬ್ಬನೇ ಮಗ ಬೇಕಾಗಿದ್ದಾನೆ: ಯುವತಿಯ ವರನ್ವೇಷಣೆ ಜಾಹೀರಾತು ವೈರಲ್
ಈಗ ತಮ್ಮ ಬಾಳ ಸಂಗಾತಿ ಹಾಗೂ ಜೊತೆಗಾರನ ಹುಡುಕುವಾಗ ಎಲ್ಲರು ಬಹಳ ಎಚ್ಚರಿಕೆಯಿಂದ ಹೇಗೆಲ್ಲಾ ಇರಬೇಕು ಎಂಬ ಆಸೆಯೊಂದಿಗೆ ಹುಡುಕಾಡುತ್ತಾರೆ. ಹುಡುಗ ಒಳ್ಳೆಯ ಕೆಲಸದಲ್ಲಿ ಇರಬೇಕು, ಮನೆ, ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ ಹೀಗೆ ಹತ್ತಾರು ರೀತಿಯ ಬೇಡಿಕೆ ಇಡುವುದು ಸಾಮಾನ್ಯ. ಈಗ ಪ್ರತಿಯೊಬ್ಬರು ಬಯಸೋದು ಇದನ್ನೆ. ಹೀಗಾಗಿ ಹುಡುಗಿಯರು ಈಗ ವರನ ಹುಡುಕಾಟದಲ್ಲಿ ತುಂಬಾನೆ ಯೋಚಿಸುತ್ತಾರೆ.
ಹಾಗೆ ಈಗ ಇಂಟರ್‌ನೆಟ್‌ನಲ್ಲಿ ಹುಡುಗ ಹುಡುಗಿಯ ಹುಡುಕಾಟ ನಡೆಸುವುದು ನೋಡಿದ್ದೇವೆ. ಆನ್‌ಲೈನ್‌ನಲ್ಲಿ ಮ್ಯಾಚ್ ಮೇಕಿಂಗ್ ಸೈಟ್‌ಗಳಿವೆ. ಹಣ ನೀಡಿ ನಿಮ್ಮ ಪ್ರೊಫೈಲ್ ರೆಡಿ ಮಾಡಿದರೆ ಒಂದಿಷ್ಟು ಮದುವೆಯ ಪ್ರಪೋಸಲ್ ಗಳು ನಿಮ್ಮ ಕಣ್ಣ ಮುಂದೆ ಬರುತ್ತಿರುತ್ತವೆ. ಆದ್ರೆ ಇಲ್ಲೊಂದು ಯುವತಿ ನೀಡಿರುವ ವರ ಬೇಕಾಗಿದ್ದಾನೆ ಎಂಬ ಜಾಹೀರಾತು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಯುವತಿಯೊಬ್ಬರು ಸೂಕ್ತ ಹುಡುಗನಿಗಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿದೆ. ಆಕೆಯ ಈ ಜಾಹೀರಾತು ಭಾರೀ ವೈರಲ್ ಆಗುತ್ತಿದೆ. ಆಕೆ 25ರಿಂದ 28ರ ನಡುವಿನ ಸೂಕ್ತ ವರ ಬೇಕಾಗಿರುವುದಾಗಿ ಬೇಡಿಕೆ ಮುಂದಿಟ್ಟಿದ್ದಾಳೆ. ಈ ಜಾಹೀರಾತು ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಏಕೆಂದರೆ ಆತ ಸುಸಜ್ಜಿತ ಬಂಗಲೆ, 28 ಎಕರೆ ತೋಟದ ಮನೆ ಹೊಂದಿದ್ದು, ಒಬ್ಬನೇ ಮಗ ಆಗಿರಬೇಕು. ಅಡುಗೆ ಮಾಡಲು ಬರಬೇಕು ಎಂಬ ಜಾಹೀರಾತು ನೀಡಿದ್ದಾಳೆ.
ಇಷ್ಟೊಂದು ಬೇಡಿಕೆಗಳ ನಡುವೆ ಇನ್ನೆರಡು ಬೇಡಿಕೆಗಳು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದರಲ್ಲಿ ಗ್ಯಾಸ್ ಸಮಸ್ಯೆ ಹಾಗೂ ತೇಗುವವರು ಬೇಡ ಎಂದು ಆಕೆ ನಮೂಧಿಸಿದ್ದಾಳೆ. ಈ ಪೋಸ್ಟ್ ನೋಡಿದ ಮಂದಿ ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾರೆ. ಆಕೆ ನಿಜವಾಗಿಯೂ ಹುಡುಗನನ್ನು ಹುಡುಕುತ್ತಿಲ್ಲ ಎಂದು ಕುಹಕವಾಡಿದ್ದಾರೆ.
ಅನೇಕರು ಪೋಸ್ಟ್ ಅನ್ನು ಅಸಂಬದ್ಧವೆಂದು ಕಿಡಿಕಾರಿದ್ದಾರೆ. ಇದು ತಮಾಷೆ ಎಂದು ಯಾರಾದರು ನನಗೆ ಹೇಳಿ? ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಹಾಗೆ ಇದೊಂದು ವ್ಯವಸ್ಥಿತ ಜಾಲ. ಹುಡುಗನಿಂದ ಇಷ್ಟೊಂದು ಬೇಡಿಕೆ ಇಟ್ಟಿರುವ ಆ ಹುಡುಗಿ ಆಕೆಯ ಬಳಿ ಯಾವ ಅರ್ಹತೆ ಇದೆ ಎಂದು ತಿಳಿಸಿದರೆ ಉತ್ತಮ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇಂತಹ ಗುಣಗಳಿರುವ ಈ ಎಲ್ಲಾ ಬೇಡಿಕೆ ಈಡೇರಿಸುವ ಹುಡುಗ 10 ನಿಮಿಷದಲ್ಲಿ ನಿಮ್ಮ ಮನೆ ಮುಂದೆ ನಿಲ್ಲುತ್ತಾನೆ, ಜೆಪ್ಟೋ ಮಾಡಿ ಎಂದು ಮತ್ತೊಬ್ಬರು ಬರೆದಿದ್ದಾರೆ. ಆಕೆ ಗಂಡನಾಗಿರಲು ಹುಡುಗನ ಹುಡುಕುತ್ತಿಲ್ಲ ಬದಲಿಗೆ ತನಗಾಗಿ ಆಸ್ತಿ ಮಾಡಿಟ್ಟಿರುವ ಒಬ್ಬ ಉದ್ಯಮಿಯನ್ನು ನೇಮಿಸಿಕೊಳ್ಳುತ್ತಿದ್ದಾಳೆ ಎಂದು ಒಬ್ಬರು ಬರೆದಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೆ ಆ ಯುವತಿಯ ಮನಸ್ಥಿತಿ ಕುರಿತಂತೆ ಒಂದಿಷ್ಟು ವಿರೋಧ ಕೂಡ ಕೇಳಿಬಂದಿದೆ. ಆಕೆ ಮದುವೆಯಾಗುವ ಬಯಕೆ ಇದ್ದರೆ ಈ ರೀತಿ ಆಫರ್ ನೀಡುವ ಬದಲು ಒಪ್ಪಂದ ಮಾಡಿಕೊಳ್ಳಬಹುದಿತ್ತು. ಆಕೆ ಬಯಸಿದ್ದು ಆಸ್ತಿ ಮಾಡಿ, ಹಣವೂ ನೀಡುವ ಪುರುಷನನ್ನು ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
ಇದಕ್ಕೂ ಮೊದಲು ಕೂಡ ಇಂತಹದ್ದೆ ಹಲವು ಜಾಹೀರಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದು ಹಲವು ರೀತಿಯ ಚರ್ಚೆಗೂ ಕಾರಣವಾಗುತ್ತಿತ್ತು, ಯುವತಿಯರ ಬೇಡಿಕೆಗಳ ಪಟ್ಟಿ ಕಂಡು ಜನರು ಶಾಕ್ ಆಗುತ್ತಿದ್ದರು.



Click it and Unblock the Notifications
