Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ತರಕಾರಿ ಬದಲು ಮಗುವನ್ನೇ ಫ್ರಿಡ್ಜ್‌ನಲ್ಲಿಟ್ಟು ಮರೆತ ಮಹಾತಾಯಿ..! ಆಮೇಲೆ ಆಗಿದ್ದೇನು.?
ಇತ್ತೀಚಿಗೆ ಜನ ಮೊಬೈಲ್ ಫೋನ್‌ಗೆ ಎಷ್ಟು ದಾಸರಾಗುತ್ತಿದ್ದಾರೆ ಅಂದ್ರೆ ನೀವೂ ಊಹಿಸಲು ಸಹ ಸಾಧ್ಯವಿಲ್ಲ. ಪ್ರತಿಯೊಬ್ಬರ ಕೈಲು ಮೊಬೈಲ್ ಬಂದಿದ್ದು, ಸದಾ ಕಾಲ ಆನ್‌ಲೈನ್‌ನಲ್ಲಿ ಕಳೆತ್ತಿರುತ್ತಾರೆ. ಒಂದು ಕಾಲದಲ್ಲಿ ಶ್ರೀಮಂತರ ಸ್ವತ್ತಾಗಿದ್ದ ಮೊಬೈಲ್ ಫೋನ್ ಈಗ ಎಲ್ಲರ ಕೈಗು ಸಿಕ್ಕಿದೆ. ಮಕ್ಕಳಿಂದ ಹಿಡಿದು ಹಿರಿ ವಯಸ್ಸಿನವರಲ್ಲೂ ಮೊಬೈಲ್ ಬಳಕೆ ಕಡಿಮೆ ಏನಿಲ್ಲ.
ಹೀಗೆ ಮೊಬೈಲ್ ಬಳಕೆಯ ಪ್ರಮಾಣವೂ ಸಹ ಏರುಗತಿಯಲ್ಲೇ ಸಾಗುತ್ತಿದೆ. ನಾವು ಊಟ ಮಾಡುವಾಗ, ಅಡುಗೆ ಮಾಡುವಾಗ, ಅಷ್ಟೆ ಏಕೆ ಶೌಚಾಲಯಕ್ಕೆ ಹೋಗುವಾಗಲು ನಮ್ಮ ಕೈಯಲ್ಲಿ ಮೊಬೈಲ್ ಫೋನ್ ಇರಲೇ ಬೇಕು ಎನ್ನುವಂತಾಗಿದೆ. ಫೋನ್ ಇಲ್ಲದಿದ್ದರೆ ಯಾವ ಕೆಲಸವೂ ಆಗುವುದೇ ಇಲ್ಲವೇನೋ ಎಂಬಂತೆ ನಮ್ಮ ಮನಸ್ಥಿತಿ ಬದಲಾಗಿದೆ.

ಆದ್ರೆ ಕೆಲವೊಮ್ಮೆ ಈ ಮೊಬೈಲ್ ಗೀಳು ಎಂತಹ ದುರಂತ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಅಂದ್ರೆ ಎಲ್ಲರಲ್ಲೂ ಒಮ್ಮೆ ಭಯ ಹುಟ್ಟಿಸುತ್ತೆ. ಇದೇ ರೀತಿಯ ಘಟನೆಯೊಂದು ಈಗ ನಡೆದಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುವುದರ ಜೊತೆಗೆ ಮೊಬೈಲ್ ಫೋನ್ ಬಳಕೆಯ ಭಯ ಹುಟ್ಟಿಕೊಂಡಿದೆ.
ಈ ವೈರಲ್ ಆಗಿರುವ ವಿಡಿಯೋದಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಫ್ರಿಡ್ಜ್‌ನಲ್ಲಿಟ್ಟು ಮೈ ಮರೆತು ಮೊಬೈಲ್ ಬಳಸುತ್ತಿರುವುದನ್ನು ನೋಡಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ಮಹಾತಾಯಿಯ ಬೇಜವಾಬ್ದಾರಿಗೆ ಮಗುವಿನ ಜೀವಕ್ಕೆ ಸಂಚಕಾರ ಬಂದೊದಗಿತ್ತು.
ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ ಮೊದಲು ಮಹಿಳೆಯಿಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತಾ ತರಕಾರಿ ಹೆಚ್ಚುತ್ತಿದ್ದಾರೆ. ಜೊತೆಗೆ ಆಕೆಯ ಮುಂದೆಯೇ ಮಗುವೊಂದು ಆಟವಾಡುತ್ತಿರುವುದನ್ನು ನೋಡಬಹುದು. ಕೆಲ ಸಮಯದ ಬಳಿಕ ತರಕಾರಿ ಹೆಚ್ಚಿನ ಮುಗಿದಾಗ ಆಕೆ ಸೀದಾ ಎದ್ದು ತರಕಾರಿಯನ್ನು ಫ್ರಿಡ್ಜ್‌ನಲ್ಲಿ ಇಡಬೇಕಿತ್ತು. ಆದ್ರೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಆಕೆ ತರಕಾರಿ ಬಿಟ್ಟು ತನ್ನ ಮಗುವನ್ನೇ ಎತ್ತಿಕೊಂಡು ಹೋಗಿ ಫ್ರಿಡ್ಜ್ ಬಾಗಿಲು ತೆರೆದು ಒಳಗೆ ಇಟ್ಟು ಬಾಗಿಲು ಹಾಕಿದ್ದಾಳೆ.
ಬಳಿಕ ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದಾಳೆ. ಮಗುವಿನ ಕುರಿತು ಆಕೆಯ ಗಮನವೇ ಇಲ್ಲದಾಗಿದೆ. ಇದಾದ ಬಳಿಕ ಗಂಡ ಬಂದು ತಿಂಡಿ ತಿನ್ನಲು ಕುಳಿತಾದ ಮಗು ಇಲ್ಲದನ್ನು ಗಮನಿಸಿ ಎಲ್ಲಿ ಎಂದು ಪ್ರಶ್ನಿಸಿದ್ದಾನೆ. ಆದರೆ ಆಕೆಗೂ ಈ ಬಗ್ಗೆ ಹೊಳೆಯಲೇ ಇಲ್ಲ. ಅತ್ತಿಂದಿತ್ತ ಹುಡುಕಾಡಲು ಮುಂದಾಗಿದ್ದಾಳೆ.
ಆದರೆ ಫ್ರಿಡ್ಜ್‌ನೊಳಗಿಂದ ಶಬ್ಧ ಬರುತ್ತಿರುವುದನ್ನು ಗಮನಿಸಿದ ಗಂಡ ಫ್ರಿಡ್ಜ್ ಬಾಗಿಲು ತೆರೆದು ನೋಡಿದಾಗ ಮಗು ಅದರೊಳಗಿರುವುದು ಕಂಡುಬಂದಿದೆ. ಈ ವೇಳೆ ಮಗುವನ್ನು ಎತ್ತಿಕೊಂಡು ಆಕೆ ಅಲ್ಲಿಂದ ತೆರಳಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಆಕೆಯ ಕಾರ್ಯ ಕಂಡು ನೆಟ್ಟಿಗರು ಆಕ್ ಆಗಿರುವ ಜೊತೆಗೆ ಆಕೆಗೆ ಹಿಡಿಶಾಪ ಹಾಕಿದ್ದಾರೆ.
ಮಗುವನ್ನೇ ಮರೆಯುವಷ್ಟು ಮೊಬೈಲ್ ಗೀಳಿಗೆ ಒಳಗಾಗಿರುವ ತಾಯಿಯ ಕಾರ್ಯಕ್ಕೆ ಆಕ್ರೋಶ ಕೇಳಿಬಂದಿದೆ. ಒಂದು ವೇಳೆ ಗಂಡ ಆ ಸಮಯಕ್ಕೆ ಬಾರದಿದ್ದರೆ ಮಗು ಫ್ರಿಡ್ಜ್‌ನಲ್ಲಿಯೇ ಉಸಿರು ಚೆಲ್ಲುತ್ತಿತ್ತು. ಇಲ್ಲವೆ ಫ್ರಿಡ್ಜ್ ಲಾಕ್ ಆಗಿಬಿಟ್ಟರೆ ಮಗುವನ್ನು ಹೊರತೆಗೆಯುವುದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ.
ನಾಟಕವೂ ಆಗಿರಬಹುದು
ಇನ್ನೊಂದು ಕಡೆ ಈ ವಿಡಿಯೋ ನೋಡಿದ ಮಂದಿ ಇದೊಂದು ನಾಟಕವೂ ಆಗಿರಬಹುದು ಎಂದಿದ್ದಾರೆ. ಜನ ಲೈಕ್ಸ್‌ಗಾಗಿ ಏನು ಬೇಕಾದರು ಮಾಡುತ್ತಾರೆ. ಇವರೂ ಸಹ ಅದಕ್ಕಿಂತ ಹೊರತಲ್ಲ ಎಂದಿದ್ದಾರೆ. ಲೈಕ್ಸ್, ವೀವ್ಸ್ ಗಾಗಿ ಮಗುವನ್ನು ಫ್ರಿಡ್ಜ್‌ನಲ್ಲಿಟ್ಟು ಇಷ್ಟೆಲ್ಲಾ ಮಾಡುವುದು ಸಹ ಸರಿಯಲ್ಲ. ಒಂದು ವೇಳೆ ಮಗುವಿಗೆ ಸಮಸ್ಯೆ ಆದರೆ ಏನು ಗತಿ ಎಂಬುದು ನೆಟ್ಟಿಗರ ವಾದವಾಗಿದೆ.



Click it and Unblock the Notifications
