Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೆಕೆಂಡ್‌ನಲ್ಲಿ ಐದಾರು ಪೂರಿ ಒಟ್ಟಿಗೆ ಮಾಡಿ..! ಯುವತಿಯ ಐಡಿಯಾಗೆ ಜನ ಫಿದಾ...!
ಜನ ಈಗ ಸಮಯಕ್ಕೆ ಬೆಲೆ ಕೊಡೋದನ್ನ ಕಲಿತಿದ್ದಾರೆ. ಕಡಿಮೆ ಸಮಯದಲ್ಲಿ ನಮಗೆ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಬೇಕು ಅನ್ನೋದು ಅವರ ಹಠವಾಗಿದೆ. ಹೀಗಾಗಿ ಕಡಿಮೆ ಸಮಯದಲ್ಲಿ ಹೇಗೆಲ್ಲಾ ಕೆಲಸ ಮಾಡಲು ಸಾಧ್ಯ ಅನ್ನೋದನ್ನು ಅವರು ಹುಡುಕುತ್ತಲೇ ಇರುತ್ತಾರೆ. ಇನ್ನು ಅಡುಗೆ ವಿಚಾರದರಲ್ಲೂ ಇದಕ್ಕಿಂತ ಭಿನ್ನವೇನಿಲ್ಲ
ಕೇವಲ 10 ರಿಂದ 15 ನಿಮಿಷದಲ್ಲಿ ತಿಂದು ಮುಗಿಸುವ ಅಡುಗೆಗೆ ಕೆಲವೊಮ್ಮೆ ದಿನವೆಲ್ಲಾ ಒದ್ದಾಡಬೇಲಾಗುತ್ತದೆ. ಜೊತೆಗೆ ಅಡುಗೆ ಮನೆಯಲ್ಲಿಯೇ ಹೆಚ್ಚು ಸಮಯ ಕಳೆಯಬೇಕಾದ ಪರಿಸ್ಥಿತಿ ಇರುತ್ತದೆ. ಅಡುಗೆ ಮನೆಯಲ್ಲಿ ಎಷ್ಟು ಕಡಿಮೆ ಸಮಯ ಕಳೆಯುತ್ತೇವೆಯೋ ಅಷ್ಟು ಸಮಯ ಬೇರೆ ಕೆಲಸದಲ್ಲಿ ತೊಡಗಬಹುದು. ಹೀಗಾಗಿಯೇ ಮಹಿಳೆಯರು ಅಡುಗೆ ಮನೆಯಲ್ಲಿ ಕಡಿಮೆ ಸಮಯದಲ್ಲಿ ಅಡುಗೆ ಮಾಡಲು ಇಷ್ಟಪಡುತ್ತಾರೆ.
ಇನ್ನು ಕಡಿಮೆ ಸಮಯದಲ್ಲಿ ಅಡುಗೆ ಮಾಡುವ ವಿಧಾನವೂ ಇದೆ. ಇದರಲ್ಲಿ ಹಲವು ರೀತಿಯ ಖಾದ್ಯಗಳನ್ನು ಪಟ್ ಅಂತ ಮಾಡಬಹುದು. ಹೀಗಾಗಿ ಜನ ಇಂದು ವೇಗವಾಗಿ ಮಾಡಬಹುದಾದ ಅಡುಗೆಗಳಿಗೆ ಮಾರು ಹೋಗಿದ್ದಾರೆ. ಅಂದರೆ ಮಾರುಕಟ್ಟೆಯಲ್ಲಿ ಇನ್ಸ್‌ಸ್ಟಂಟ್ ಮಿಕ್ಸರ್‌ಗಳು ರೆಡಿಮೇಡ್ ಮಸಾಲಗಳು ಕಾಲಿಟ್ಟಿವೆ. ಇವುಗಳನ್ನು ಬಳಸುವ ಮೂಲಕ ವೇಗವಾಗಿ ಅಡುಗೆ ಮಾಡಬಹುದು.

ಆದರೆ ಇಲ್ಲೊಂದು ವಿಡಿಯೋ ಅಡುಗೆ ಮನೆಯಲ್ಲಿ ಯುವತಿಯೊಬ್ಬಳು ಹೇಗೆ ತನ್ನ ಸಮಯ ಉಳಿಸುತ್ತಿದ್ದಾಳೆ ನೋಡಿ ಎಂದು ವೈರಲ್ ಆಗ್ತಿದೆ. ಅಂದರೆ ಆಕೆ ಅಡುಗೆ ಮಾಡುವ ಸ್ಟೈಲ್‌ಗೆ ಜನ ಫಿದಾ ಆಗಿದ್ದಾರೆ. ಆಕೆ ಒಂದೇ ನಿಮಿಷದಲ್ಲಿ ಪೂರಿ ಮಾಡುತ್ತಿರುವ ವಿಧಾನ ಕಂಡು ಜನ ಹೀಗೂ ಅಡುಗೆ ಮಾಡಬಹುದಾ ಎಂದು ಹುಬ್ಬೇರೆಸಿದ್ದಾರೆ.
ವೈರಲ್ ಆಗಿರವ ವಿಡಿಯೋದಲ್ಲಿ ಯುವತಿಯೊಬ್ಬಳು ಪೂರಿ ಮಾಡುತ್ತಿರುವುದನ್ನು ನಾವು ನೋಡಬಹುದು. ಆದರೆ ಆಕೆ ಎಲ್ಲರಂತೆ ಪೂರಿ ಮಾಡುತ್ತಿಲ್ಲ ಬದಲಾಗಿ ಕಡಿಮೆ ಸಮಯದಲ್ಲಿ ಅತ್ಯಂತ ನಾಜೂಕಾಗಿ ಪೂರಿ ಮಾಡುತ್ತಿರುವುದನ್ನು ನಾವು ನೋಡಬಹುದು. ಆಕೆ ಒಂದೇ ಬಾರಿಗೆ 4ರಿಂದ 5 ಪೂರಿ ಮಾಡುತ್ತಿದ್ದಾಳೆ. ಸಾಮಾನ್ಯವಾಗಿ ಒಂದು ಪೂರಿ ಮಾಡಲು 1 ನಿಮಿಷ ಹಿಡಿಯಬಹುದು. ಇಲ್ಲವೆ ಇದಕ್ಕಿಂತ ಕಡಿಮೆ ಸಮಯವೂ ಹಿಡಿಯಬಹುದು. ಆದರೆ ಆಕೆ ಒಂದು ಪೂರಿ ಮಾಡುವ ಸಮಯದಲ್ಲಿ 4 ರಿಂದ 5 ಪೂರಿ ಮಾಡುತ್ತಿದ್ದಾಳೆ.
ಪೂರಿ ಹಿಟ್ಟನ್ನು ಒಂದು ಪ್ಲಾಸ್ಟಿಕ್ ಮೇಲೆ ಇಟ್ಟು ಅದನ್ನು ಪ್ಲಾಸ್ಟಿಕ್‌ನಿಂದ ಮುಚ್ಚಿ ಚಪಾಟಿ ಮಣೆಯಿಂದ ಮೇಲಿನಿಂದ ಆ ಪೂರಿಯನ್ನು ಒತ್ತಿದರೆ ಸೆಕೆಂಡ್‌ನಲ್ಲಿ ಪೂರಿ ರೆಡಿಯಾಗುತ್ತದೆ. ಹೀಗಾಗಿ ಒಟ್ಟಿಗೆ ಐದಾರು ಪೂರಿ ಮಾಡಿಕೊಳ್ಳಬಹುದು. ಜೊತೆಗೆ ಒಂದೊಂದೆ ಪೂರಿ ಕರಿಯುವ ಬದಲು ಒಟ್ಟಿಗೆ ಐದಾರು ಪೂರಿ ಕರಿಯುವ ಮೂಲಕ ಆಕೆ ಸಮಯ ಉಳಿಸುತ್ತಿದ್ದಾಳೆ.
ಈ ವಿಡಿಯೋ ನೋಡಿದ ನೆಟ್ಟಿಗರು ಅಡುಗೆ ಮನೆಯಲ್ಲಿ ದಿನ ಪೂರ್ತಿ ಕಳೆಯುವ ಮಂದಿಗೆ ಇದರಿಂದ ಖಂಡಿತ ಸಹಾಯವಾಗಲಿದೆ ಎನ್ನುತ್ತಿದ್ದಾರೆ. ಅಲ್ಲದೆ ಈ ವಿಡಿಯೋದಿಂದ ಗೃಹಿಣಿಯರ ಸಮಯ ಉಳಿಸುವ ಪ್ಲಾನ್‌ಗೆ ಖಂಡಿತ ಉಪಯೋಗವಾಗಲಿದೆ. ಈ ರೀತಿ ಮಾಡುವುದರಿಂದ ಸಮಯದ ಜೊತೆಗೆ ಎಣ್ಣೆಯನ್ನೂ ಉಳಿಸಬಹುದು.
ಈ ವಿಡಿಯೋವನ್ನು ರುಚಿ ಕೆವತ್ ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ಯುವತಿಯ ಐಡಿಯಾಗೆ ಮೆಚ್ಚುಗೆ ಕೇಳಿಬಂದಿದೆ. ಒಂದಿಷ್ಟು ಜನ ಈ ರೀತಿ ನಾವು ಸಹ ಮಾಡಿ ನೋಡುತ್ತೇವೆ. ಇದರಿಂದ ಬೆಳಗ್ಗೆಯ ತಿಂಡಿ ಬೇಗ ರೆಡಿ ಮಾಡಬಹುದು. ಅಲ್ಲದೆ ಗಡಿಬಿಡಿಯಲ್ಲಿ ಆಫಿಸ್, ಕೆಲಸಕ್ಕೆ ಹೋಗುವ ಮಂದಿಗೆ ಸಹಾಯವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಈ ವಿಡಿಯೋ ನೋಡಿ ನೀವು ಸಹ ಒಮ್ಮೆ ಟ್ರೈ ಮಾಡಿ ನಿಮಗೂ ಒಂದಿಷ್ಟು ಉಪಯೋಗವಾಗಬಹುದು.



Click it and Unblock the Notifications











