Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೆಣ್ಣು ಗೊಂಬೆ ಜೊತೆ ಸಂಸಾರ ಮಾಡಿ ಪುರುಷ ಗೊಂಬೆ ಮದುವೆಯಾದ ಯುವತಿ..! ವಿಚಿತ್ರ ಸ್ಟೋರಿ ಇದು.!
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖವಾದ್ದು. ಜೀವನದುದ್ದಕ್ಕೂ ನಮ್ಮವರು, ನಮಗಾಗಿ ಮಾಡುತ್ತಾರೆ, ನಮ್ಮ ಸಂಸಾರ, ನಮ್ಮ ಮಗ ಎನ್ನುವ ಹೊಸ ಪ್ರಪಂಚದ ಸೃಷ್ಟಿಯಾಗುತ್ತದೆ. ನಾವು ಈ ಪ್ರಂಪಂಚವನ್ನು ಬಿಡುವವರೆಗೂ ನಮ್ಮೊಂದಿಗೆ ಹೊಸ ಪ್ರಪಂಚ ಇರುತ್ತದೆ. ಹಾಗಾಗಿ ಮದುವೆಯ ನಂತರ ಜೀವನ ಸುಖಕರವಾಗಿರಲಿ, ಒಳ್ಳೆಯ ಹುಡುಗ ಸಿಗಲಿ ಎಂದು ಪ್ರತಿಯೊಬ್ಬ ಹುಡುಗಿಯೂ ಆಶಿಸುತ್ತಾಳೆ.
ಕಾಲ ಬದಲಾದಂತೆ ಕೆಲವೊಂದು ಸಂಪ್ರದಾಯ, ಆಚರಣೆಗಳು ಬದಲಾಗುತ್ತಾ ಹೋಗುತ್ತದೆ. ಅಂತಹ ಸಂಪ್ರದಾಯದಲ್ಲಿ ಮದುವೆ ಕೂಡ ಒಂದಾಗಿದೆ. ಈಗ ಹುಡುಗ ಹುಡುಗನ್ನೇ ಮದುವೆಯಾಗುವುದು, ಹುಡುಗಿ ಮತ್ತೊಬ್ಬ ಹುಡುಗಿಯನ್ನೇ ಮದುವೆಯಾಗುವ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಇದು ಕೆಲವು ದೇಶಗಳಲ್ಲಿ ಕಾನೂನು ಬದ್ಧವಾಗಿದ್ದರೂ ಇನ್ನೂ ಕೆಲವು ದೇಶದಲ್ಲಿ ಇಂದಿಗೂ ನ್ಯಾಯಾಲಯದ ಅಂಗಳದಲ್ಲಿದೆ.
ಆದ್ರೆ ನಾವಿಂದು ಹೇಳುತ್ತಿರೋದು ಇದೆಲ್ಲದರಕ್ಕಿಂತ ವಿಚಿತ್ರ ಮದುವೆಯನ್ನ. ಯುವತಿಯೊಬ್ಬಳು ಗೊಂಬೆಯೊಂದಿಗೆ ಮದುವೆಯಾಗಿ ಸಂಸಾರವನ್ನು ನಡೆಸಿ ಈಗ ಮತ್ತೊಂದು ಗೊಂಬೆಯ ಜೊತೆ ಮದುವೆಯಾಗುತ್ತಿರುವ ವಿಚಿತ್ರ ಕಥೆ ಇದು. ನಿಮಗೆ ಅಚ್ಚರಿ ಎನಿಸಿದರು ಇದು ನಡೆದಿರುವುದು ಸತ್ಯ. ಆಕೆ ಮೊದಲು ಹೆಣ್ಣು ಗೊಂಬೆಯೊಂದಿಗೆ ಮದುವೆಯಾಗಿ ಮಕ್ಕಳ ಹೆತ್ತು ಈಗ ಗಂಡು ಗೊಂಬೆಯೊಂದಿಗೆ ಮತ್ತೊಂದು ಮದುವೆಯಾಗಿದ್ದಾಳೆ.

ಅಮೆರಿಕದ ಮ್ಯಾಸಚುಸೆಟ್ಸ್ ನಗರದ ಫೆಲಿಸಿಟಿ ಕ್ಯಾಡ್ಲೆಕ್ ಎಂಬಾಕೆ ಈ ವಿಚಿತ್ರ ಮದುವೆಯಾದ ಯುವತಿ. ಆಕೆ ಗೊಂಬೆಯೊಂದಿಗೆ ಆಧ್ಯಾತ್ಮಿಕ ಸಂಬಂಧ ಹೊಂದಿರುವುದಾಗಿ ಹೇಳಿದ್ದಾಳೆ. ಜೊತೆಗೆ ಈ ಮೊದಲು 2018ರಲ್ಲಿ ಹೆಣ್ಣು ಗೊಂಬೆಯೊಂದಿಗೆ ಮದುವೆಯಾಗಿದ್ದಳು. ಆ ಗೊಂಬೆಗೆ ಕೆಲ್ಲಿ ರೋಸ್ಸಿ ಎಂದು ಹೆಸರಿಟ್ಟಿದ್ದಳು. ಈ ಗೊಂಬೆ ನೋಡಲು ಎಷ್ಟು ಭಯಂಕರವಾಗಿತ್ತೆಂದರೆ ಅದರ ಬಾಯಿಯ ಸುತ್ತ ರಕ್ತದ ಕಲೆಗಳಿತ್ತು.
ಇದೊಂದು ಝೋಂಬಿ ಗೊಂಬೆಯಾಗಿತ್ತು, ಅಂದರೆ ಮನುಷ್ಯರನ್ನೇ ತಿನ್ನುವ ಝೋಂಬಿಯಂತೆ ಇದೊಂದು ನಿರ್ಜೀವ ಗೊಂಬೆಯಾಗಿತ್ತು, ಈ ಮದುವೆ ಸುದ್ದಿ ಬಳಿಕ ಆಕೆ ಭಾರೀ ಸದ್ದು ಮಾಡಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಭಯಾನಕ ಗೊಂಬೆಗೆ ಚುಂಬಿಸುವ, ತಬ್ಬಿಕೊಳ್ಳುವ ಫೋಟೋ ಹಾಕಿ ಎಲ್ಲರಲ್ಲೂ ಭಯ ಹುಟ್ಟಿಸಿದ್ದಳು.
ಆದ್ರೆ ಈಗ ರಾಬರ್ಟ್ ಕ್ಯಾಡ್ಲೆಕ್ ಎಂಬ ಮತ್ತೊಂದು ಪುರುಷ ಗೊಂಬೆ ಜೊತೆ ಮದುವೆಯಾಗಿದ್ದಾಳೆ. ಅದೂ ಸಹ ತನ್ನ 10 ಮಕ್ಕಳ ಜೊತೆ. ಮಕ್ಕಳು ಅಂದರೆ ಮತ್ತಷ್ಟು ಪುಟ್ಟ ವಿಚಿತ್ರ ಗೊಂಬೆಗಳು. ಅವು ಆಕೆಯ ಮೊದಲ ಪತ್ನಿಯ ಮಕ್ಕಳು ಎಂದು ಆಕೆ ಹೇಳಿಕೊಳ್ಳುತ್ತಾಳೆ.
26 ವರ್ಷದ ಫೆಲಿಸಿಟಿ ಕ್ಯಾಡ್ಲೆಕ್ ಈಗ ಪುರುಷ ಗೊಂಬೆಯ ಜೊತೆ ವಿವಾಹವಾಗಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಭಾರಿ ಸದ್ದು ಮಾಡ್ತಿದೆ. ಆಕೆ ಈ ಎರಡೂ ಗೊಂಬೆಗಳನ್ನು 1 ಸಾವಿರ ಡಾಲರ್ ನೀಡಿ ಖರೀದಿಸಿದ್ದಳಂತೆ. ಇದು ಕ್ರಿಸ್‌ಮಸ್ ಸಮಯದಲ್ಲಿ ಹಾಲೋವಿನ್ ಆಚರಣೆಗಾಗಿ ಖರೀದಿಸಿದ್ದಳಂತೆ. ಆದರೆ ಆ ಬಳಿಕ ಈ ಗೊಂಬೆಗಳ ಜೊತೆಗೆ ಜೀವನ ನಡೆಸಬೇಕು ಎನಿಸಿ ಅವುಗಳನ್ನೇ ಮದುವೆಯಾಗಿದ್ದಾಳೆ.
ಜೊತೆಗೆ ಆಕೆಯ 10 ಮಕ್ಕಳಿಗೆ ಹೆಸರನ್ನೂ ಇಟ್ಟಿರುವುದಾಗಿ ಆಕೆ ಹೇಳುತ್ತಾಳೆ. ರಾಚೆಲ್, ಲೂನಾ, ಬಿಲ್ಲಿ, ಹಾಲಿ, ವಿಕ್ಟರ್, ಮಾರ್ಟಿ, ಫಿನ್ನಿ, ಗ್ರೆಮ್ಲಿ, ರಾಬಿ ಮತ್ತು ಮೊಲ್ಲಿ ಎಂಬ ಮಕ್ಕಳನ್ನೂ ಮೂವರು ಸಾಕುತ್ತಿದ್ದಾರಂತೆ. ಇದಲ್ಲದೆ ಥ್ರೂಪಲ್ ಪೀಟರ್ ಎಂಬ ಮತ್ತೊಂದು ಮಗು ಆಗಮನದ ನಿರೀಕ್ಷೆಯಲ್ಲಿ ಆಕೆ ಇದ್ದಾಳಂತೆ.
ಆದರೆ ಆಕೆ ವಸ್ತುಕಾಮದ ಕುರಿತು ಮಾತನಾಡುತ್ತಾ ''ಎರಡೂ ಗೊಂಬೆಗಳ ಜೊತೆ ಆಕೆ ಲೈಂಗಿಕಾಸಕ್ತಿ ಹೊಂದಿದ್ದಾಳಂತೆ. ಇದು ಕಾಯಿಲೆಯಲ್ಲ, ಬದಲಿಗೆ ಇದೂ ಸಹ ಆರೋಗ್ಯಕರ ಲೈಂಗಿಕಾಸಕ್ತಿ'' ಎಂದು ವಿವರಿಸುತ್ತಾಳೆ.



Click it and Unblock the Notifications
