Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಪ್ರೆಶರ್ ಕುಕ್ಕರ್‌ನಲ್ಲಿ ಚಪಾತಿ..! ಅಚ್ಚರಿಯ ಜೊತೆ ಮಹಿಳೆ ವಿರುದ್ಧ ಟೀಕೆ..! ಏಕೆ ಗೊತ್ತಾ?
ಅಡುಗೆ ಮನೆಯಲ್ಲಿ ಹೊಸ ಹೊಸ ಆವಿಷ್ಕಾರಗಳು ನೋಡಲು ಸಿಗುತ್ತವೆ. ಅಲ್ಲಿ ಕಡಿಮೆ ಸಮಯದಲ್ಲಿ ಹೊಸ ಹೊಸ ಖಾದ್ಯ ಮಾಡಲು ಗೃಹಿಣಿಯರು ಇಷ್ಟಪಡುತ್ತಾರೆ. ಜೊತೆಗೆ ಅಡುಗೆ ಮನೆಯಲ್ಲಿ ಕಡಿಮೆ ಸಮಯ ಕಳೆಯಲು ಅವರು ಇಷ್ಟಪಡುತ್ತಾರೆ. ಇದಕ್ಕಾಗಿ ಎಲ್ಲಾ ರೀತಿಯ ಸಾಹಸವನ್ನು ಅವರು ಮಾಡುತ್ತಿರುತ್ತಾರೆ.
ಅದರಲ್ಲೂ ಮನೆಯ ಸದಸ್ಯರಿಗೆ ಅಡುಗೆ ಮಾಡಿಟ್ಟು ಕೆಲಸ, ಕಾರ್ಯಗಳಿಗೆ ತೆರಳುವ ಮಹಿಳೆಯರಿಗೆ ಅಡುಗೆ ಮಾಡುವುದೇ ಒಂದು ದೊಡ್ಡ ಕೆಲಸವಾಗಿ ಪರಿಣಮಿಸಿರುತ್ತದೆ. ಹೀಗಾಗಿ ಅವರು ಅಡುಗೆ ಮನೆಯಲ್ಲಿ ಕಡಿಮೆ ಸಮಯದಲ್ಲಿ ರುಚಿಕರ ಖಾದ್ಯ ಮಾಡಬೇಕೆಂದುಕೊಂಡಿರುತ್ತಾರೆ.

ಇವರಿಗಾಗಿ ಇಲ್ಲೊಂದು ವಿಡಿಯೋ ಕಾದಿದೆ. ಇಲ್ಲಬ್ಬ ಮಹಿಳೆ ಚಪಾತಿಯನ್ನು ಪ್ರೆಶರ್ ಕುಕ್ಕರ್ ಬಳಸಿ ಮಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ನೀವು ನಂಬಲು ಸಾಧ್ಯವಿಲ್ಲದಂತಹ ವಿಡಿಯೋ ಇದಾಗಿದ್ದು, ಅಡುಗೆ ಮನೆಯಲ್ಲಿ ನೀವು ಕಳೆಯುವ 1ರಿಂದ 2 ಗಂಟೆ ಸಮಯ ಉಳಿತಾಯವಾಗಲಿದೆ.
ವಿಡಿಯೋದಲ್ಲಿ ಏನಿದೆ.?
ಈ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಚಪಾತಿ ಲಟ್ಟಿಸುತ್ತಿರುವುದನ್ನು ನಾವು ನೋಡಬಹುದು. ಸಾಮಾನ್ಯವಾಗಿ ಚಪಾತಿ ಲಟ್ಟಿಸಿದ ಬಳಿಕ ಒಂದೊಂದಾಗಿ ನಾವು ಕಾವಲಿಗೆ ಹಾಕಿಕೊಂಡು ಅದನ್ನು ಎರಡೂ ಕಡೆಗಳಲ್ಲಿ ಕಾಯಿಸುತ್ತೇವೆ. ಆದ್ರೆ ಈ ಮಹಿಳೆ ಚಪಾತಿಯನ್ನು ಒಂದರ ಜೊತೆ ಮತ್ತೊಂದನ್ನು ಲಟ್ಟಿಸಿಕೊಂಡು 10 ಚಪಾತಿಗಳ ಒಟ್ಟಿಗೆ ಕುಕ್ಕರ್‌ನಲ್ಲಿ ಇಡುತ್ತಾಳೆ.
ಬಳಿಕ ಕುಕ್ಕರ್ ಒಂದು ಸೀಟಿ ಹೊಡೆಯುವವರೆಗೂ ಬಿಟ್ಟು ಬಳಿಕ ಅದರ ಮುಚ್ಚಳ ತೆಗೆಯುತ್ತಾಳೆ. ಈ ವೇಳೆ ಚಪಾಟಿ ಚೆನ್ನಾಗಿ ಬೆಂದಿರುತ್ತದೆ. ಅಚ್ಚರಿ ಎಂದರೆ ಇದು ಕಾವಲಿಯಲ್ಲಿ ಬೇಯಿಸಿರುವ ಚಪಾತಿಯಂತೆಯೇ ಕಾಣುತ್ತದೆ. ಸದ್ಯ ಆಕೆಯ ಪ್ಲಾನ್ ಕಂಡು ಜನ ನಿಬ್ಬೆರಗಾಗಿದ್ದಾರೆ.
ಈ ರೀತಿಯೂ ಚಪಾತಿ ಮಾಡಬಹುದಾ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಜೊತೆಗೆ ಚಪಾತಿ ಮಾಡಲು ಬಹಳ ಸಮಯ ಹಿಡಿಯುತ್ತದೆ ಎಂಬ ವಾದವನ್ನು ಆಕೆ ಅಲ್ಲಗೆಳೆದಿದ್ದು, ಸುಲಭವಾಗಿ ಕಡಿಮೆ ಸಮಯದಲ್ಲಿ ಚಪಾತಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾಳೆ.
ಆದ್ರೆ ಇದು ಅನಾಹುತಕ್ಕೆ ದಾರಿಯಂತೆ?
ಈ ವಿಡಿಯೋ ನೋಡಿದ ಕೆಲವರು ಇದರಲ್ಲಿ ನ್ಯೂನತೆ ಕಂಡು ಹಿಡಿದಿದ್ದಾರೆ. ಇದು ನಕಲಿ ವಿಡಿಯೋ ಎಂದು ಪತ್ತೆ ಮಾಡಿದ್ದಾರೆ, ಏಕೆಂದರೆ ಆಕೆ ಕುಕ್ಕರ್‌ಗೆ ನೀರು ಹಾಕದೇ ಒಲೆ ಮೇಲೆ ಇಡುತ್ತಿದ್ದಾಳೆ. ಕುಕ್ಕರ್‌ಗೆ ನೀರು ಹಾಕದೆ ಇಟ್ಟರೆ ಅದು ಸೀಟಿ ಹೊಡೆಯುವುದಿಲ್ಲ ಬದಲಿಗೆ ಸ್ಫೋಟವಾಗುವ ಸಂಭವ ಹೆಚ್ಚಾಗಿರುತ್ತದೆ. ಆಕೆ ವೀವ್ಸ್ ಹಾಗೂ ಲೈಕ್ಸ್‌ಗಾಗಿ ಚಪಾತಿಯನ್ನು ಮೊದಲೇ ಮಾಡಿಟ್ಟುಕೊಂಡು ಬಳಿಕ ಕುಕ್ಕರ್‌ನಲ್ಲಿ ಮಾಡಿರುವಂತೆ ತೋರಿಸುತ್ತಿದ್ದಾಳೆ.
ಜೊತೆಗೆ ಕುಕ್ಕರ್‌ನಿಂದ ಹೊರತೆಗೆದ ಚಪಾತಿ ಮೇಲೆ ಸುಟ್ಟಿರುವಂತೆ ಕಪ್ಪು ಕಪ್ಪು ಮಚ್ಚೆಗಳು ಕಾಣುತ್ತವೆ, ಕುಕ್ಕರ್‌ನಲ್ಲಿ ಮಾಡಿದರೆ ಈ ರೀತಿ ಕಪ್ಪಾಗುವುದು ಹೇಗೆ ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಕಾಡಿದೆ. ಕೇವಲ ಲೈಕ್ಸ್ ಹಾಗೂ ಜನಪ್ರೀಯತೆಗಾಗಿ ಈ ರೀತಿ ದಾರಿ ತಪ್ಪಿಸುವ ವಿಡಿಯೋ ಮಾಡಬಾರದು. ಇದನ್ನು ನೋಡಿ ಜನರೂ ತಾವೂ ಪ್ರಯತ್ನಿಸಲು ಮುಂದಾದರೆ ಅನಾಹುತವಾಗುತ್ತದೆ. ಇದು ತಪ್ಪು ಎಂದು ಮಹಿಳೆಯ ಕಾರ್ಯವನ್ನು ಟೀಕಿಸಿದ್ದಾರೆ.
ಇದಕ್ಕು ಮೊದಲು ಒಂದೇ ನಿಮಿಷದಲ್ಲಿ ಮಹಿಳೆಯೊಬ್ಬರು ಐದಾರು ಪೂರಿ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ವೈರಲ್ ಆಗಿರವ ವಿಡಿಯೋದಲ್ಲಿ ಯುವತಿಯೊಬ್ಬಳು ಪೂರಿ ಮಾಡುತ್ತಿರುವುದು ಕಂಡುಬಂದಿತ್ತು. ಆದರೆ ಆಕೆ ಎಲ್ಲರಂತೆ ಪೂರಿ ಮಾಡುತ್ತಿಲ್ಲ ಬದಲಾಗಿ ಕಡಿಮೆ ಸಮಯದಲ್ಲಿ ಅತ್ಯಂತ ನಾಜೂಕಾಗಿ ಪೂರಿ ಮಾಡಿ ಅಚ್ಚರಗೆ ಕಾರಣವಾಗಿದ್ದಳು. ಆಕೆ ಒಂದೇ ಬಾರಿಗೆ 4ರಿಂದ 5 ಪೂರಿ ಮಾಡುತ್ತಿದ್ದಾಳೆ. ಸಾಮಾನ್ಯವಾಗಿ ಒಂದು ಪೂರಿ ಮಾಡಲು 1 ನಿಮಿಷ ಹಿಡಿಯಬಹುದು. ಇಲ್ಲವೆ ಇದಕ್ಕಿಂತ ಕಡಿಮೆ ಸಮಯವೂ ಹಿಡಿಯಬಹುದು. ಆದರೆ ಆಕೆ ಒಂದು ಪೂರಿ ಮಾಡುವ ಸಮಯದಲ್ಲಿ 4 ರಿಂದ 5 ಪೂರಿ ಮಾಡುತ್ತಿದ್ದಾಳೆ.
ಪೂರಿ ಹಿಟ್ಟನ್ನು ಒಂದು ಪ್ಲಾಸ್ಟಿಕ್ ಮೇಲೆ ಇಟ್ಟು ಅದನ್ನು ಪ್ಲಾಸ್ಟಿಕ್‌ನಿಂದ ಮುಚ್ಚಿ ಚಪಾಟಿ ಮಣೆಯಿಂದ ಮೇಲಿನಿಂದ ಆ ಪೂರಿಯನ್ನು ಒತ್ತಿದರೆ ಸೆಕೆಂಡ್‌ನಲ್ಲಿ ಪೂರಿ ರೆಡಿಯಾಗುತ್ತದೆ. ಹೀಗಾಗಿ ಒಟ್ಟಿಗೆ ಐದಾರು ಪೂರಿ ಮಾಡಿಕೊಳ್ಳಬಹುದು. ಜೊತೆಗೆ ಒಂದೊಂದೆ ಪೂರಿ ಕರಿಯುವ ಬದಲು ಒಟ್ಟಿಗೆ ಐದಾರು ಪೂರಿ ಕರಿಯುವ ಮೂಲಕ ಆಕೆ ಸಮಯ ಉಳಿಸುತ್ತಿದ್ದಾಳೆ.
ಈ ವಿಡಿಯೋ ನೋಡಿದ ನೆಟ್ಟಿಗರು ಅಡುಗೆ ಮನೆಯಲ್ಲಿ ದಿನ ಪೂರ್ತಿ ಕಳೆಯುವ ಮಂದಿಗೆ ಇದರಿಂದ ಖಂಡಿತ ಸಹಾಯವಾಗಲಿದೆ ಎನ್ನುತ್ತಿದ್ದಾರೆ. ಅಲ್ಲದೆ ಈ ವಿಡಿಯೋದಿಂದ ಗೃಹಿಣಿಯರ ಸಮಯ ಉಳಿಸುವ ಪ್ಲಾನ್‌ಗೆ ಖಂಡಿತ ಉಪಯೋಗವಾಗಲಿದೆ. ಈ ರೀತಿ ಮಾಡುವುದರಿಂದ ಸಮಯದ ಜೊತೆಗೆ ಎಣ್ಣೆಯನ್ನೂ ಉಳಿಸಬಹುದು.



Click it and Unblock the Notifications
