Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಇಬ್ಬರು ಫಾಲೋವರ್ಸ್ ಕಡಿಮೆ ಆಗಿದ್ದಕ್ಕೆ ಗಂಡನ ಬಿಟ್ಟ ಪತ್ನಿ..! ಠಾಣೆ ಮೆಟ್ಟಿಲೇರಿದ ರೀಲ್ಸ್ ಕಥೆ!
ಸೋಶಿಯಲ್ ಮೀಡಿಯಾ ಅನ್ನೋದು ಎಲ್ಲರ ಜೀವನದ ಮೇಲೆ ಯಾವ ರೀತಿಯಾಗಿ ಪರಿಣಾಮ ಉಂಟು ಮಾಡಲಿದೆ ಎಂಬುದನ್ನು ನೀವೆಲ್ಲಾ ನೋಡಿರಬಹುದು. ಕೆಲವೊಬ್ಬರ ಜೀವನ ಕಟ್ಟಿ ಕೊಡುವ ಈ ಇಂಟರ್‌ನೆಟ್ ಲೋಕ ಮತ್ತೆ ಕೆಲವರ ಜೀವನ ಹಾಳು ಮಾಡಿಬಿಡಬಹುದು. ಕುಳಿತಲ್ಲೇ ಇಡೀ ಜಗತ್ತಿನ ತಲುಪಬಹುದಾದ ಬಹಳ ಅಗ್ಗದ ಮಾಧ್ಯಮ ಯಾವುದಾದರು ಇದ್ದರೆ ಅದು ಇಂಟರ್‌ನೆಟ್ ಎನ್ನಬಹುದು.
ಅದ್ರಲ್ಲೂ ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳು ಎಷ್ಟರ ಮಟ್ಟಿಗೆ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದರೆ ಮೊಬೈಲ್ ಇಲ್ಲದೆ ಒಂದು ಕ್ಷಣ ಕೂಡ ಇರಲು ಸಾಧ್ಯವಿಲ್ಲ ಎನ್ನುವಷ್ಟು ಪರಿಣಾಮ ಬೀರುತ್ತಿದೆ. ಇನ್ನು ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್, ವಾಟ್ಸಾಪ್, ಎಕ್ಸ್, ಯೂಟ್ಯೂಬ್, ಹೀಗೆ ಹಲವು ಮಾಧ್ಯಮಗಳ ಬಳಕೆ ಹೆಚ್ಚುತ್ತಲೇ ಇದೆ.

ಜನರು ಈಗ ತಮ್ಮ ಜೀವನ ನಿರ್ವಹಣೆಗೆ ಇವುಗಳನ್ನು ವೃತ್ತಿಯನ್ನಾಗಿಯೂ ಆಯ್ಕೆ ಮಾಡಿಕೊಳ್ಳುವುದು ನೋಡಬಹುದು. ಇನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಹಾಕುವುದು ಅದರಿಂದ ಲೈಕ್ಸ್, ಫಾಲೋವರ್ಸ್ ಪಡೆಯುವುದು ಇಂದಿನ ಯುವ ಜನರ ನಿತ್ಯದ ಕೆಲಸ ಎನ್ನುವಂತಾಗಿದೆ. ಹಾಗೆ ಈ ಇನ್ಸ್‌ಸ್ಟಾಗ್ರಾಮ್ ರೀಲ್ಸ್ ಈಗ ದಂಪತಿ ನಡುವೆ ಕಲಹಕ್ಕೂ ಕಾರಣವಾಗಿ ಆಕೆ ಪತಿಯನ್ನೇ ತೊರೆದಿರುವ ಘಟನೆಯೊಂದು ನಡೆದಿದೆ.
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿರುವುದು ವರದಿಯಾಗಿದೆ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಕಡಿಮೆಯಾಗಲು ಪತಿ ಕಾರಣ ಎಂದು ಆಕೆ ಮನೆ ಬಿಟ್ಟು ತೆರಳಿದ್ದಾಳೆ. ಇಲ್ಲಿನ ಪಿಲ್ಖುವಾ ಮೂಲದ ನಿಶಾ ಎಂಬ ಮಹಿಳೆ ನೋಯ್ಡಾ ನಿವಾಸಿ ವಿಜೇಂದ್ರ ಅವರನ್ನು ವಿವಾಹವಾಗಿದ್ದರು.
ನಿಶಾ ಇನ್ಸ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಫೇಮಸ್ ಆಗಿದ್ದ ಯುವತಿ. ಆಕೆ ರೀಲ್ಸ್ ಮಾಡಿ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡುವುದು ಆ ಮೂಲಕ ನಿತ್ಯ ಎಷ್ಟು ಫಾಲೋವರ್ಸ್ ಬಂದಿದ್ದಾರೆ ಎಂಬುದನ್ನು ಪರಿಶೀಲಿಸುವುದು ಕೆಲಸವಾಗಿತ್ತು. ಆದರೆ ಪತಿಗೆ ಇದು ಇಷ್ಟವಿರಲಿಲ್ಲ. ಆತ ವಿಡಿಯೋ ಮಾಡುವುದರಿಂದ ಅಸಮಾಧಾನಗೊಂಡಿದ್ದ. ಹೀಗಾಗಿ ಯಾವಾಗಲು ಆಕೆಗೆ ವಿಡಿಯೋ ಮಾಡದಂತೆ ತಡೆಯುತ್ತಿದ್ದ. ಅಲ್ಲದೆ ಮನೆಯ ಕೆಲಸಗಳಲ್ಲಿ ತೊಡಗುವಂತೆ ಹೇಳುತ್ತಿದ್ದ.
ಇಷ್ಟಾದರೂ ನಿಶಾ ಆತನ ಮಾತು ಕೇಳುತ್ತಿರಲಿಲ್ಲ. ಎಷ್ಟೇ ಕೆಲಸವಿದ್ದರೂ ವಿಡಿಯೋ ಮಾಡುವುದನ್ನು ಆಕೆ ನಿಲ್ಲಿಸಲಿಲ್ಲ. ಬರುಬರುತ್ತಾ ಇಬ್ಬರ ನಡುವೆ ಈ ವಿಚಾರವಾಗಿ ಗಲಾಟೆಗಳು ನಡೆಯುತ್ತಿದ್ದವು. ಆದ್ರೆ ಒಂದು ದಿನ ಈ ಗಲಾಟೆ ಹೆಚ್ಚಾದಾಗ ಅದರಲ್ಲೂ ಆಕೆ ನಿತ್ಯ ಹಾಕುತ್ತಿದ್ದ ವಿಡಿಯೋ ಅಪ್‌ಲೋಡ್ ಮಾಡಲು ಆಗದೆ ಇದ್ದಾಗ ಇಬ್ಬರು ಫಾಲೋವರ್ಸ್ ಕಡಿಮೆ ಆಗಿದ್ದಾರೆ. ಇದರಿಂದ ನೊಂದ ನಿಶಾ ತನ್ನ ಬ್ಯಾಗ್ ಹಿಡಿದು ತಾಯಿ ಮನೆಗೆ ತೆರಳಿದ್ದಾಳೆ.
ಹಾಗೆ ಆಕೆ ಹಾಪುರ್ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ಸಹ ದಾಖಲಿಸಿದಳು. ಬಳಿಕ ಪೊಲೀಸರು ಆಪ್ತ ಸಮಾಲೋfಚಕರ ಭೇಟಿಗೆ ಶಿಫಾರಸ್ಸು ಮಾಡಿ ದಂಪತಿಯ ರಾಜಿ ಮಾಡಲು ಯತ್ನಿಸುತ್ತಾರೆ. ಆದ್ರೆ ಇಬ್ಬರ ನಡುವೆ ಯಾವುದೇ ರೀತಿಯ ಹೊಂದಾಣಿಕೆಯ ಮಾತುಗಳು ಉಂಟಾಗದ ಕಾರಣ ಈಗ ಇಬ್ಬರು ಬೇರೆ ಬೇರೆಯಾಗಿಯೇ ವಾಸವಿದ್ದಾರೆ.
ಇನ್ನೊಂದು ಕಡೆ ವಿಜೇಂದ್ರ ಕೆಲಸ ಕಳೆದುಕೊಂಡಾಗಿನಿಂದ ಆರ್ಥಿಕ ಸ್ಥಿತಿಯೂ ಹದಗೆಟ್ಟಿದೆ. ಹಾಗೆ ಈಗ ಬೇರೊಂದು ಕೆಲಸಕ್ಕಾಗಿ ಆತ ಹುಡುಕಾಟ ಆರಂಭಿಸಿದ್ದಾನೆ. ಸದ್ಯ ಈಗ ಇಬ್ಬರ ನಡುವೆ ಪೊಲೀಸರ ಎಂಟ್ರಿಯಿಂದಾಗಿ ಕೋಪ ಕಡಿಮೆಯಾಗಿದ್ದರೂ ಸಾಮರಸ್ಯ ಮೂಡಿಲ್ಲ. ಹಾಗೆ ಆಕೆ ರೀಲ್ಸ್ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂಬ ನಿಲುವಿಗೆ ಬದ್ಧಳಾಗಿದ್ದಾಳೆ. ಈ ಪ್ರಕರಣ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅನೇಕರಲ್ಲಿ ಅಚ್ಚರಿಗೆ ಕಾರಣವಾಗುತ್ತಿದೆ.



Click it and Unblock the Notifications

