Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬಲಗೈಗೆ ಅಂತ್ಯಕ್ರಿಯೆ ನೆರವೇರಿಸಿದ 22ರ ಯುವತಿ..! ಏಕೆ ಎಂಬುದು ತಿಳಿದರೆ ನೀವು ಸರಿ ಅಂತೀರಿ..!
ಅವರವರ ದೇಹದ ಭಾಗಗಳ ಮೇಲೆ ಪ್ರೀತಿ ಇದ್ದೇ ಇರುತ್ತೆ. ನನಗೆ ನನ್ನ ಈ ದೇಹದ ಭಾಗ ಇಷ್ಟವಿಲ್ಲ ಎಂದು ಹೇಳುವುದು ಬಹಳ ಕಷ್ಟ. ಏಕೆಂದರೆ ನಮ್ಮ ದೇಹದ ಪ್ರತಿಯೊಂದು ಅಂಗ ಕೂಡ ನಮಗೆ ಬಹಳ ಮುಖ್ಯವಾಗಿರುತ್ತೆ. ಅದರಲ್ಲು ಕೈ, ಕಾಲು, ಕಣ್ಣು, ಬಾಯಿ, ಕಿವಿ ಹೀಗೆ ಎಲ್ಲವೂ ಪ್ರಮುಖ ಅಂಗಗಳೇ. ದೇಹದ ಒಳಗಿರುವ ಅಂಗಗಳು ನಮಗೆ ಕಾಣದಿರುವ ಕಾರಣ ಅವುಗಳ ಕುರಿತು ನಾವು ಎಂದಿಗೂ ಯೋಚಿಸುವುದಿಲ್ಲ.
ಆದ್ರೆ ನಮ್ಮ ಕಣ್ಣಿಗೆ ಕಾಣುವಂತಹ ಕೈಗಳು, ಕಾಲುಗಳ ಕುರಿತು ಹೆಚ್ಚು ಜಾಗೃತೆ ವಹಿಸುತ್ತೇವೆ. ಎಷ್ಟು ಗಮನವಿಟ್ಟರೂ ಸಾಲದು ಎಂಬಂತೆ ಇರುತ್ತೇವೆ. ಆದ್ರೆ ಇಲ್ಲೊಬ್ಬಾಕೆ ತನ್ನ ಬಲಗೈಗೆ ಅಂತ್ಯಕ್ರಿಯೆ ನೆರವೇರಿಸಿ ಸುದ್ದಿಯಾಗಿದ್ದಾಳೆ. ತನ್ನ ಬಲಕೈಯನ್ನು ಮನೆಯ ಹಾಸಿಗೆಯಲ್ಲಿ ಇಟ್ಟು ಅದಕ್ಕೆ ಕೊನೆಯ ವಿದಾಯ ಹೇಳಿದ್ದಾಳೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕೆ ಯಾರು? ಯಾಕೆ ಈ ರೀತಿ ಮಾಡಿದ್ದಾಳೆ ಎಂಬುದನ್ನು ಹುಡುಕಾಡಿದ್ದಾರೆ.

ಯುವತಿ ತನ್ನ ಬಲಗೈ ಅನ್ನು ಹಾಸಿಗೆಯಲ್ಲಿ ಇಟ್ಟು ಅದಕ್ಕೊಂದು ಹೂವು ಇಟ್ಟು ನಮನ ಸಲ್ಲಿಸುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಇದು ಆಕೆಯ ನಿಜವಾದ ಕೈ ಆಗಿದೆ. ಆದರೆ ಆಕೆ ಈ ರೀತಿ ಮಾಡುತ್ತಿರುವುದೇಕೆ ಎಂದು ತಿಳಿದ ಬಳಿಕ ಜನರಿಗೆ ಶಾಕ್ ಆಗಿದೆ. ಹಾಗೆ ಅವಳ ಕಾರ್ಯಕ್ಕೆ ಕಂಬನಿ ಮಿಡಿದಿದ್ದಾರೆ. ಅಷ್ಟಕ್ಕೂ ಆಕೆ ಯಾರು? ಹೀಗೆ ಮಾಡಿದ್ಯಾಕೆ ಎಂಬ ಪ್ರಶ್ನೆ ನಾವಿಲ್ಲಿ ಉತ್ತರ ತಿಳಿಯೋಣ.
ಆಕೆ ಅಮೆರಿಕ ಮೂಲದ ನಿವಾಸಿ ಎಲ್ಡಿಯಾರಾ ಡೌಸೆಟ್, ಆಕೆಯ ಬಲಗೈಗೆ ಅಂತ್ಯಕ್ರಿಯೆ ನೆರವೇರಿಸಲು ಆಕೆಗೆ ಕಾಡುತ್ತಿರುವ ಒಂದು ವಿಚಿತ್ರ ಹಾಗೂ ಅಪರೂಪದ ಕ್ಯಾನ್ಸರ್ ಕಾರಣವಾಗಿದೆ. ಆಕೆ ಬದುಕುಳಿಯಬೇಕಾದರೆ ಬಲಗೈ ಕಳೆದುಕೊಳ್ಳಬೇಕಾಯಿತು. ಹೀಗಾಗಿ ತನ್ನ ಬಲಕೈ ಕಳೆದುಕೊಂಡು ಭಾರವಾದ ನೆನಪುಗಳಲ್ಲಿ ಆಕೆ ಅಂತ್ಯಕ್ರಿಯೆ ನೆರವೇರಿಸಿದ್ದಾಳೆ.
ಸೈನೋವಿಯಲ್ ಸಾರ್ಕೋಮಾ ಎಂಬ ಅಪರೂಪದ ಕ್ಯಾನ್ಸರ್‌ಗೆ ಆಕೆ ಒಳಗಾಗಿದ್ದಳು, ಹೀಗಾಗಿ ಆಕೆ ತನ್ನ ಒಂದು ಕೈ ಕಳೆದುಕೊಳ್ಳಬೇಕಾಯಿತು. 22 ವರ್ಷದ ಆಕೆ 2024ರ ಕೊನೆಯಲ್ಲಿ ಆಕೆ ತನ್ನ ಬಲಕೈ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆಕೆ ಟಿಕ್‌ಟಾಕ್‌ನಲ್ಲಿ ಅತ್ಯಂತ ಫೇಮಸ್ ಆಗಿದ್ದ ಯುವತಿ. ಹಾಗೆ ತನ್ನ ಕಾಯಿಲೆ ಬಗ್ಗೆ ತಿಳಿದುಕೊಂಡ ಅವಳು ಎಲ್ಲಿಗೂ ಕುಗ್ಗದೆ ಅದರ ವಿರುದ್ಧ ಹೋರಾಡಲು ಮುಂದಾದಳು, ಈಗ ಪ್ರತಿ ವರ್ಷ ಈ ಅಪರೂಪದ ಕ್ಯಾನ್ಸರ್ 1000 ಮಂದಿಗೆ ತಗುಲುತ್ತದೆ ಹೀಗಾಗಿ ಆಕೆ ಈ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿದ್ದಾಳೆ.
ಆಕೆ ತನ್ನ ಸಾಮಾಜಿಕ ಜಾಲತಾಣಗಳ ಖಾತೆ ಮೂಲಕ ಜಾಗೃತಿಗೆ ಮುಂದಾಗಿದ್ದಾಳೆ. ಹಾಗೆ ತನ್ನ ಕ್ಯಾನ್ಸರ್ ವಿರುದ್ಧದ ಹಿಂದಿನ ಹೋರಾಟಗಳ ಕುರಿತು ಹೇಳಿಕೊಂಡಿದ್ದಾಳೆ. ಆರಂಭದ ಹಂತದಲ್ಲಿ ಇದೊಂದು ಚಿಕ್ಕ ಅನಾರೋಗ್ಯ ಸಮಸ್ಯೆ ಎಂದು ಆಕೆ ತಿಳಿದಿದ್ದಳಂತೆ. ಆದರೆ ವೈದ್ಯರು ಆಕೆಯ ಕೈ ಕತ್ತರಿಸಬೇಕು ಎಂದಾಗ ಆಘಾತಕ್ಕೊಳಗಾಗಿದ್ದಳು. ಹಲವು ದಿನಗಳ ನಿರಂತರ ಆಲೋಚನೆಯ ಬಳಿಕ ಇದಕ್ಕೆ ಒಪ್ಪಿದ್ದಳಂತೆ. ನಂತರ ಆಸ್ಪತ್ರೆಯಲ್ಲಿ ಮಲಗಿ ಎಚ್ಚರವಾದಾಗ ಒಂದು ಕೈ ಇರಲಿಲ್ಲವಂತೆ.
ಆದ್ರೆ ಆಕೆ ತನ್ನ 22 ವರ್ಷಗಳ ಜೊತೆಗಿದ್ದ, ಎಲ್ಲಾ ಕೆಲಸಗಳಲ್ಲೂ ಒಡನಾಡಿಯಾಗಿದ್ದ ಕೈ ಯನ್ನು ಮನೆಗೆ ತಂದಿದ್ದಾಳೆ. ಹಾಗೆ ಅದು ಕೊಳೆಯದಂತೆ ಮಾಡಲು ರಾಸಾಯನಿಕ ಬಳಸಿ ಅದನ್ನು ಜೀವಂತವಾಗಿಡಲು ಮುಂದಾಗಿದ್ದಾಳೆ. ಆಕೆಯ ಪ್ರಕಾರ ಇದು ಆಕೆಯ ಬಲಗೈಗೆ ಆಕೆ ನೀಡುವ ಗೌರವವಂತೆ.



Click it and Unblock the Notifications
