Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗೆಳೆಯನಿಗೆ ಗುಟ್ಕಾ ಪ್ಯಾಕೆಟ್‌ನ ಗುಚ್ಛ: ವಿಭಿನ್ನ ಗಿಫ್ಟ್ ನೀಡಿದ ಯುವತಿ!
ನಿಮ್ಮ ಪ್ರೀತಿಯ ವ್ಯಕ್ತಿಗೆ ನೀವು ದೊಡ್ಡ ದೊಡ್ಡ ಉಡುಗೊರೆ ನೋಡೋದು ಅಥವಾ ಸ್ಪೆಷಲ್ ಎನಿಸುವಂತಹ ಗಿಫ್ಟ್ ನೀಡೋದು ಕಾಮನ್. ಉಡುಗೊರೆಗಳ ಆಯ್ಕೆಯ ವಿಚಾರಕ್ಕೆ ಬಂದಾಗ ಎಲ್ಲರಿಗೂ ಇಷ್ಟವಾಗುವಂತಹ ಹಾಗೆ ಪ್ರೀತಿಯ ಗೆಳೆಯ ಅಥವಾ ಗೆಳತಿಗೆ ಆ ಗಿಫ್ಟ್ ಇಷ್ಟವಾಗುವಂತಹ ಯಾವುದಾದರು ವಸ್ತು ಆಯ್ಕೆ ಮಾಡುತ್ತಾರೆ.
ಪ್ರೀತಿಯ ವ್ಯಕ್ತಪಡಿಸೋಕೆ ಹೂವಿನ ಗುಚ್ಛ, ಸುಂಗಧ ದ್ರವ್ಯ, ವಾಚ್, ಚಾಕೋಲೆಟ್, ಬಟ್ಟೆ ಹೀಗೆ ಹಲವು ವಸ್ತುಗಳನ್ನು ಗಿಫ್ಟ್ ಆಗಿ ನೀಡುವುದು ನೋಡಬಹುದು. ಅದ್ರಲ್ಲೂ ಪ್ರೇಮಿ ಇಷ್ಟಪಡುವಂತಹ ವಸ್ತುವನ್ನೇ ಆತನಿಗೆ ಅಥವಾ ಆಕೆಗೆ ನೀಡುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಯುವತಿ ತನ್ನ ಗೆಳೆಯನಿಗೆ ನೀಡಿದ ಉಡುಗೊರೆ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ.

ಪ್ರೀತಿಯ ಗೆಳೆಯನಿಗೆ ಯುವತಿ ಗುಟ್ಕಾದಿಂದ ಮಾಡಿರುವ ಗುಚ್ಛ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗುಟ್ಕಾದಿಂದ ಗುಚ್ಛಾ ತಯಾರಿಸುವುದು ನೋಡಬಹುದು. ಅದ್ರಲ್ಲೂ ಗುಟ್ಕಾ ಹಾಗೂ ತಂಬಾಕು ಸೇರಿಸಿ ಹೂವಿನ ರೀತಿಯ ರಚನೆ ರೆಡಿ ಮಾಡಲಾಗುತ್ತಿದೆ.
ಯುವತಿ ತನ್ನ ಬಾಯ್‌ಫ್ರೆಂಡ್‌ಗೆ ಗುಟ್ಕಾ ಬಹಳ ಇಷ್ಟವಂತೆ ಹಾಗಾಗಿ ಗುಟ್ಕಾದಿಂದ ಮಾಡಿದ ಈ ಗಿಫ್ಟ್ ನೀಡಲು ಮುಂದಾಗಿದ್ದಾಳೆ. ಸಂಪೂರ್ಣವಾಗಿ ಗುಟ್ಕಾ ಪ್ಯಾಕೆಟ್‌ಗಳಿಂದ ಮಾಡಿದ ನೀಲಿ ಬೊಕೆ, ಹೂವಿನ ಜೋಡಣೆಯನ್ನು ಹೋಲುತ್ತದೆ. ತಂಬಾಕು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ನಿಮಗೆ ಈ ರೀತಿಯ ಗೆಳೆಯ ಅಥವಾ ಗೆಳತಿ ಇದ್ದರೆ ನೀವು ನಿಜವಾಗಿಯೂ ಅದೃಷ್ಟವಂತರು. ಅವರು ನಿಮ್ಮನ್ನು ನರಕಕ್ಕೆ ಎಷ್ಟು ಸುಲಭವಾಗಿ ಕಳುಹಿಸುತ್ತಿದ್ದಾರೆ ಎಂಬ ತಮಾಷೆಯ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.
ಈ ವೀಡಿಯೊ ಇಂಟರ್ನೆಟ್‌ನಲ್ಲಿ ಅಚ್ಚರಿ ತರಿಸಿದೆ. ಹಾಗೆ ಈ ವಿಡಿಯೋ ನೋಡಿದವರಿಗೆ ಶಾಕ್ ಕೂಡ ಆಗಿದೆ. ಅದ್ರಲ್ಲೂ ಹಲವು ಕಮೆಂಟ್‌ಗಳು ಎಲ್ಲರಲ್ಲೂ ನಗು ತರಿಸಿವೆ, ಹಾಗೆ ಮತ್ತೆ ಕೆಲವು ಇದೊಂದು ಅತಿರೇಕದ ವರ್ತನೆ ಎಂಬುದನ್ನು ವಿವರಿಸಿವೆ. ಈ ರೀತಿಯ ಘಟನೆ ಎಲ್ಲಿ ನಡೆದಿದೆ ಎಂಬುದನ್ನು ವಿವರಿಸಲಾಗಿಲ್ಲ.
ಮೂಲಗಳ ಪ್ರಕಾರ ಯುವಕನ ಹುಟ್ಟುಹಬ್ಬದ ದಿನದಂದು ಹುಡುಕಿ ಆತನಿಗೆ ಸಪ್ರೈಸ್ ಗಿಫ್ಟ್ ನೀಡಲು ಗುಟ್ಕಾದಿಂದ ಮಾಡಲು ಮುಂದಾಗಿದ್ದಾಳೆ. ಹಾಗೆ ಈ ಗಿಫ್ಟ್ ಅನ್ನು ಗೇಟ್ ಮುಂದಿಟ್ಟು ಆತನಿಗೆ ನೀಡಲು ಮುಂದಾಗೋದು ನೋಡಬಹುದು. ಸದ್ಯ ಈ ವಿಡಿಯೋ ಲಕ್ಷ ಲಕ್ಷ ವೀಕ್ಷಣೆ ಕಂಡಿದೆ, ಹಾಗೆ ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ.
ಒಬ್ಬ ಈ ವಿಡಿಯೋ ನೋಡಿ ಹುಡುಗಿಯರು ಈಗ ಗುಟ್ಕಾ ಪ್ರೇಮಿಯನ್ನೇ ಪ್ರೇಮಿಯಾಗಿ ಆಯ್ಕೆ ಮಾಡುತ್ತಾರೆ. ಏಕೆಂದರೆ ಗಿಫ್ಟ್ ಆಗಿ ಕಡಿಮೆ ಬೆಲೆಗೆ ಅವರಿಗೆ ಗುಟ್ಕಾ ನೀಡಬಹುದು ಎಂಬ ಮುಂದಾಲೋಚನೆ ಇದು ಎಂದು ಒಬ್ಬರು ಬರೆದುಕೊಂಡಿದ್ದಾರೆ. ಆತ ಅಜಯ್ ದೇವಗನ್ -ಫ್ಯಾನ್ ಆಗಿರಬಹುದು, ಹೀಗಾಗಿ ಗುಟ್ಕಾ ಬಿಟ್ಟಿರೋದಿಲ್ಲ ಎಂದಿದ್ದಾರೆ.
ಆಕೆ ಹುಡುಗನನ್ನು ಬಹುಬೇಗ ನರಕಕ್ಕೆ ಕಳುಹಿಸಲು ಸುಲಭದ ಐಡಿಯಾ ಮಾಡಿದ್ದಾಳೆ ಎಂದು ಮತ್ತೊಬ್ಬರು ತಮಾಷೆಯ ಕಮೆಂಟ್ ಮಾಡಿದ್ದಾರೆ. ಹಾಗೆ ಮತ್ತೊಬ್ಬರು ಆಕೆಯ ತನ್ನ ಪ್ರಿಯತಮನಿಗೆ ಕೇಸರಿ ಸವಿಯಲು ನೀಡುತ್ತಿದ್ದಾಳೆ, ಎಲ್ಲಾ ವಿಷಯವನ್ನು ನೆಗೆಟಿವ್ ಆಗಿ ನೋಡಬಾರದು ಎಂದು ವ್ಯಂಗ್ಯವಾಡಿದ್ದಾರೆ.
ಹಾಗೆ ಈ ಗುಟ್ಕಾ ಪಾನ್ ಪಸಾಲದಂತಹ ಜಾಹೀರಾತುಗಳು ಯುವ ಜನತೆಯ ಮೇಲೆ ಎಷ್ಟು ಪರಿಣಾಮಕಾರಿಯಾದ ಪ್ರಭಾವ ಉಂಟು ಮಾಡುತ್ತವೆ ಎಂಬುದನ್ನು ಇದು ಸಾಕ್ಷಿ ಎಂದು ಆತಂಕ ಸಹ ವ್ಯಕ್ತವಾಗಿರುವುದು ನೋಡಬಹುದು. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.



Click it and Unblock the Notifications
