Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ತಾಯಿ ಮನಸ್ಸು ಮಾಡಿದ್ರೆ ಯಾವುದೂ ಅಸಾಧ್ಯವಲ್ಲ..! ಮಗು ಜೊತೆಗೆ ಫುಡ್ ಡೆಲಿವರಿಗೆ ಇಳಿದ ತಾಯಿ..!
ತಾಯಿ ತನ್ನ ಜೀವನವನ್ನ ಕುಟುಂಬಕ್ಕಾಗಿ ಮಕ್ಕಳಿಗಾಗಿ ಮುಡಿಪಾಗಿಟ್ಟು ಯಾವ ಸಾಹಸಕ್ಕೆ ಬೇಕಾದರೂ ಕೈ ಹಾಕುತ್ತಾಳೆ. ಮಕ್ಕಳಿಗಾಗಿ ಆಕೆ ಎಂತಹ ದುಸ್ಸಾಹಸ ಮಾಡಲು ರೆಡಿ. ಹೀಗಾಗಿ ಆಕೆಯನ್ನ ಕರುಣಾಮಯಿ ಅಂತಲೂ ಕರೆಯುತ್ತಾರೆ. ತಾಯಿಗೆ ಯಾವ ಕೆಲಸವೂ ಕಷ್ಟವಲ್ಲ ಆಕೆ ಮನಸ್ಸು ಮಾಡಿದ್ರೆ ಮಕ್ಕಳಿಗೆ ಹಿಮಾಲಯವನ್ನೇ ತಂದು ಕಾಲಡಿ ಇಡಲು ಸಿದ್ಧ. ಹೀಗಾಗಿ ತಾಯಿಯ ಋಣ ತೀರಿಸಲು ಆಗಲ್ಲ ಅನ್ನೋದು.
ಹಾಗೆ ಇಲ್ಲೊಬ್ಬ ತಾಯಿ ಮಾಡುತ್ತಿರುವ ಕೆಲಸ ನೋಡಿದ್ರೆ ಎಂತವರಿಗೂ ಹೆಮ್ಮೆ ಅನಿಸುತ್ತೆ. ಈಗ ಪುರುಷರ ಸಮಾನಕ್ಕೆ ದುಡಿಯುವ ಮಹಿಳೆ ಎಲ್ಲ ರಂಗದಲ್ಲೂ ಮುಂದೆ ಬರುತ್ತಿದ್ದಾಳೆ. ಆಕೆ ಕೈಯಿಂದ ಈ ಕೆಲಸ ಮಾಡಲು ಆಗುವುದಿಲ್ಲ ಎಂಬುದೇ ಇಲ್ಲ. ಆಕೆ ಈಗ ಎಂತಹ ಕಷ್ಟಗಳನ್ನು ಬೇಕಾದರು ಎದುರಿಸಲು ಸಿದ್ದಳಾಗುತ್ತಾಳೆ. ಇಲ್ಲಿಯೂ ಕೂಡ ಮಹಿಳೆ ತನ್ನ ಮಗುವನ್ನು ಸಾಕಲು ತನ್ನ ಕುಟುಂಬ ನಿರ್ವಹಣೆಗೆ ಪೂಡ್ ಡೆಲಿವರಿಗೆ ಇಳಿದಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಆಕೆ ಬೈಕ್ ಏರಿ ಪುರುಷರಂತೆ ಫುಡ್ ಡೆಲಿವರಿ ಮಾಡುತ್ತಿರುವುದು ನೋಡಬಹುದು. ಅಷ್ಟೇ ಆಗಿದ್ದರೆ ಇಲ್ಲೇನು ವಿಶೇಷ ಕಾಣಿಸುತ್ತಿರಲಿಲ್ಲ. ಆಕೆಯ ಬೈಕ್ ಮುಂಭಾಗ ಸಿಕ್ಕ ಮಗು ಕೂಡ ಇರುವುದು ನೋಡಬಹುದು.
ಆಕೆ ತನ್ನ ಮಗುವನ್ನು ತನ್ನ ಬೈಕ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಡೆಲಿವರಿ ಕೆಲಸ ಮಾಡುತ್ತಿದ್ದಾಳೆ ಎನ್ನುವುದಂತು ಸ್ಪಷ್ಟ. ಇದಕ್ಕೆ ತಾಯಿಯನ್ನ ಹೀಗೆಲ್ಲಾ ಹೊಗಳುತ್ತಾರೆ. ತಾಯಿ ತನ್ನ ಮಕ್ಕಳ ಸಾಕಲು ಎಂತಹ ಕಷ್ಟವನ್ನಾದರು ಎದುರಿಸಲು ಸಿದ್ದಳಾಗುತ್ತಾಳೆ ಅನ್ನೋದನ್ನ ಇದೊಂದು ಉದಾಹರಣೆ ಅಷ್ಟೆ.
ಕಂಟೆಂಟ್ ಕ್ರಿಯೇಟರ್ @vishvid ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ. ಹಾಗೆ ಆಕೆ ಜೊಮೆಟೋ ಡೆಲಿವರಿ ಮಹಿಳೆಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಇತ್ತೀಚಿಗೆ ಡೆಲಿವರಿ ಬಾಯ್ಸ್ ಎಷ್ಟೆಲ್ಲಾ ಕಷ್ಟ ಅನುಭವಿಸುತ್ತಾರೆ ಅನ್ನೋದನ್ನ ನಿತ್ಯ ನೋಡುತ್ತಿರುತ್ತೇವೆ. ಟ್ರಾಫಿಕ್, ಮಳೆ, ಬಿಸಿಲು, ರಸ್ತೆ ಹೊಂಡ, ಕಷ್ಟದಲ್ಲೂ ಫುಡ್ ಡೆಲಿವರಿ ಮಾಡುವುದು ಹೀಗೆ ಈ ಪಟ್ಟಿ ಮುಂದುವರೆಯುತ್ತದೆ.
ಪುರುಷರೇ ಇಷ್ಟೆಲ್ಲಾ ಕಷ್ಟ ಅನುಭವಿಸುತ್ತಿರುವಾಗ ಈ ಕೆಲಸಕ್ಕೆ ಮಗುವಿನ ಜೊತೆಗೆ ತಾಯಿಯೊಬ್ಬಳು ಬರುವುದು ಅಂದ್ರೆ ಸುಲಭದ ಮಾತಲ್ಲ. ಈ ಕೆಲಸ ಮಾಡುತ್ತಿರುವ ಆಕೆಯ ಅನಿವಾರ್ಯ ಎಷ್ಟಿದೆ ಎಂಬುದನ್ನು ಅಂದಾಜಿಸಬಹುದು. ಹೀಗಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಲವರು ತಾಯಿಯ ಈ ಶ್ರಮ ಕಂಡು ಆಕೆಗೆ ಸಲ್ಯೂಟ್ ಅಂದಿದ್ದಾರೆ.
ಇದಕ್ಕೆ ತಾಯಿ ಋಣ ತೀರಿಸಲಾಗದು ಎನ್ನುತ್ತಾರೆ. ಮಗುವಿಗಾಗಿ ಆಕೆ ಇಡೀ ವಿಶ್ವವನ್ನೆ ಎದುರು ಹಾಕಿಕೊಳ್ಳುತ್ತಾಳೆ. ಇಲ್ಲಿ ಮಗು ಮುಂದೆ ಕುಳಿತಿದೆ, ಮಗುವಿಗಾಗಿ ಆಕೆ ಬೆವರು ಸುರಿಸುತ್ತಾಳೆ. ಈ ಕೆಲಸ ತಾಯಿ ಬಿಟ್ಟು ಬೇರೆ ಯಾರಿಂದಾದರು ಮಾಡಲು ಸಾಧ್ಯವೇ? ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಯಾವುದೇ ಕೆಲಸ ಚಿಕ್ಕದಲ್ಲ, ಯಾವುದೂ ದೊಡ್ಡದಿಲ್ಲ. ಹಾಗೆ ತಾಯಿಗೆ ಮಕ್ಕಳೆಂದರೆ ಅವರ ಜೀವನ ಆಸೆ ಎಲ್ಲ ಪಕ್ಕಕ್ಕೆ ಇಟ್ಟು ಕೆಲಸ ಮಾಡುತ್ತಾರೆ ಇದು ಒಂದು ಉದಾಹರಣೆ ಅಷ್ಟೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ಕೇವಲ ಒಂದು ತಿಂಗಳಿನಿಂದ ಮಹಿಳಾ ಡೆಲಿವರಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ, ತಾನು ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿನಿ ಎಂದು ಬಹಿರಂಗಪಡಿಸಿದ್ದಾಳೆ. ಮದುವೆಯಾದ ನಂತರ, ಮಗುವಿದ್ದಾಗ ಉದ್ಯೋಗ ಹುಡುಕುವುದು ಕಷ್ಟವಾಗಿತ್ತು. ಹೀಗಾಗಿ ನನ್ನ ಮಗನ ಸಾಕಲು ನಾನೇ ಸ್ವತಃ ಕೆಲಸ ಮಾಡಬೇಕಾಯಿತು. ಹೀಗಾಗಿ ನಾನು ಫುಡ್ ಡಲಿವರಿ ಆಯ್ಕೆ ಮಾಡಿಕೊಂಡೆ. ಮಗುವಿದೆ ಎಂಬ ಕಾರಣಕ್ಕೆ ಹಲವು ಕಡೆ ನನ್ನನ್ನು ತಿರಸ್ಕರಿಸಲಾಗಿತ್ತು ಎಂದು ಆಕೆ ಹೇಳಿಕೊಂಡಿದ್ದಾಳೆ.



Click it and Unblock the Notifications
