Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
ಇಂಟರ್‌ನೆಟ್‌ನಲ್ಲಿ ಎಂತಹ ವಿಚಿತ್ರ ಅಡುಗೆಗಳು ವೈರಲ್ ಆಗುತ್ತವೆ ಅಂದ್ರೆ ನಿಮ್ಮ ಕಣ್ಣುನ್ನು ನೀವು ನಂಬಲು ಸಾಧ್ಯವಿಲ್ಲದಷ್ಟು ವಿಭಿನ್ನ ಮತ್ತು ವಿಚಿತ್ರವಾಗಿರುತ್ತೆ. ಕೆಲವರು ಕೇವಲ ಲೈಕ್ಸ್, ಕಮೆಂಟ್‌ಗಳಿಗಾಗಿ ಈ ರೀತಿ ಮಾಡಿದ್ದರೆ ಇನ್ನೂ ಕೆಲವರು ಇದೊಂದು ಪ್ರಯೋಗಾತ್ಮಕ ಕೆಲಸವಾಗಿಯೂ ಮಾಡುತ್ತಾರೆ.
ಆದರೆ ಇದರಲ್ಲಿ ಕೆಲವೇ ಮಂದಿ ಯಶಸ್ವಿಯಾಗಿ ವಿಭಿನ್ನ ರುಚಿಯ, ವಿಭಿನ್ನ ವಸ್ತುವಿನಿಂದ ವಿಚಿತ್ರ ಅಡುಗೆ ಮಾಡುತ್ತಾರೆ. ಈಗಲೂ ಸಹ ಇಲ್ಲೊಬ್ಬ ಮಹಿಳೆ ವಿಚಿತ್ರ ರೀತಿಯ ಅಡುಗೆ ಒಂದು ವೈರಲ್ ಆಗುತ್ತಿದೆ. ಆಕೆ ಚಿಕನ್ ರುಚಿಯ ಅಡುಗೆಯನ್ನು ಚಿಕನ್ ಇಲ್ಲದೆ ಹೂವುಗಳಿಂದ ಮಾಡಿರುವುದು ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.

ಹೌದು ಚಿಕನ್ ಇಲ್ಲದೆ ಕೇವಲ ಹೂವನ್ನು ಬಳಸಿ ಈ ಅಡುಗೆ ಮಾಡಲಾಗಿದೆ. ಇದರ ರುಚಿ ಚಿಕನ್ ಸವಿದಂತೆ ಇದೆಯಂತೆ. ಚಿಕ್ಕ ಚಿಕ್ಕ ಸೂರ್ಯ ಕಾಂತಿ ಹೂವಿನಂತೆ ಇರುವ ಹಳದಿ ಬಣ್ಣದ ಹೂವಿನಲ್ಲಿ ಆಕೆ ಫ್ರೈಡ್ ಚಿಕನ್ ರುಚಿ ಹೋಲುವ ರೆಸಿಪಿ ಮಾಡಿದ್ದಾಳೆ. @saloma_hershberger ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ನೋಡಿದವರು ಅಕ್ಷರಶಃ ಶಾಕ್ ಆಗಿದ್ದಾರೆ.
ಆಕೆ ಮನೆ ಹೊರಗಡೆ ಹುಲ್ಲಿನ ನಡುವೆ ಬೆಳೆದಿರುವ ಹಳದಿ ಬಣ್ಣದ ಹೂವುಗಳನ್ನು ಕಿತ್ತುಕೊಂಡು ಬರುತ್ತಾಳೆ. ಬಳಿಕ ಅವುಗಳನ್ನು ಚೆನ್ನಾಗಿ ತೊಳೆಯುತ್ತಾಳೆ. ಈ ಹೂವುಗಳನ್ನು ನಾವು ಸಹ ನೋಡಿದ್ದೇವೆ. ಬಹುತೇಕ ಹುಲ್ಲುಗಳಿರುವ ಪ್ರದೇಶದಲ್ಲಿ ಇವು ಕಂಡುಬರುತ್ತದೆ. ನೆಲಮಟ್ಟದಲ್ಲೇ ಸಣ್ಣ ಸಣ್ಣ ಹೂವು ಬಿಡುವ ಗಿಡ ಇದಾಗಿದೆ.
ಹೂವುಗಳನ್ನು ಚೆನ್ನಾಗಿ ತೊಳೆದ ಬಳಿಕ ಆಕೆ ಅದನ್ನು ಒಣಗಿಸಿ ಅದಕ್ಕೆ ಮೊಟ್ಟೆ ಹಾಕಿ ನಂತರ ಮಸಾಲೆ ಪದಾರ್ಥಗಳನ್ನು ಹಾಕುತ್ತಿರುವುದು ವಿಡಿಯೋದಲ್ಲಿ ನಾವು ನೋಡಬಹುದು. ಬಳಿಕ ಮಸಾಲೆ ರೆಡಿ ಮಾಡಿಕೊಂಡು ಹೂವುಗಳನ್ನು ಮಸಾಲೆಯೊಳಗೆ ಹಾಕಿ ಚೆನ್ನಾಗಿ ಕಲಸಿ ಬಾಣಲೆಯಲ್ಲಿ ಹುರಿಯುತ್ತಾಳೆ. ಹೂವುಗಳ ಹುರಿದ ನಂತರ ಅವು ಬೆಳ್ಳುಳ್ಳು ಕಬಾಬ್ ಹೋಲುವಂತೆ ಕಾಣುತ್ತವೆ.
ಬಳಿಕ ಆಕೆ ಆ ಹೂವುಗಳನ್ನು ಟೇಸ್ಟ್ ಮಾಡುತ್ತಾ ಚೆನ್ನಾಗಿವೆ ಎಂಬ ಉತ್ತರ ನೀಡುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೋಟೆಲ್ ಉದ್ಯಮದಲ್ಲಿರುವವರು ಈ ವಿಡಿಯೋ ನೋಡಬೇಡಿ ಎಂದು ತಮಾಷೆಯ ಕಮೆಂಟ್‌ಗಳನ್ನು ಜನ ಮಾಡುತ್ತಿದ್ದಾರೆ.
ಆದ್ರೆ ಕೆಲವರು ಈ ಖಾದ್ಯದ ಕುರಿತಂತೆ ಎಚ್ಚರಿಕೆಯ ಮಾತುಗಳ ಆಡಿದ್ದಾರೆ. ಏಕೆಂದರೆ ಸೇವನೆಗೆ ಯೋಗ್ಯವಲ್ಲದ ವಸ್ತುವನ್ನು ಕರಿದು ತಿನ್ನುವುದು ಅಪಾಯಕಾರಿ, ಇದರಿಂದ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಆ ಹೂವಿನಲ್ಲಿರುವ ರಾಸಾಯನಿಕ ಅಂಶವು ಹೊಟ್ಟೆಯ ಹಾಗೂ ನಿಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬುದು ಜನರ ಕಾಳಜಿಯಾಗಿದೆ.
ಆದರೆ ಯಾರು ಸಹ ಈವರಗೆ ಯೋಚಿಸಿರದ ರೀತಿಯಲ್ಲಿ ಆಕೆ ಹೂವುಗಳ ಮೂಲಕ ಚಿಕನ್ ಫ್ರೈ ರೀತಿಯ ಖಾದ್ಯ ಮಾಡಿದ್ದು ಮಾತ್ರ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕೆಲವರು ನಾವು ಸಹ ಈ ರೆಸಿಪಿ ಮನೆಯಲ್ಲಿ ಟ್ರೈ ಮಾಡಿ ರುಚಿ ನೋಡುತ್ತೇವೆ ಎನ್ನುತ್ತಿದ್ದಾರೆ.
ಇದಕ್ಕೂ ಮೊದಲು ಈ ಸೂರ್ಯ ಕಾಂತಿ ಹೂವುಗಳನ್ನು ಗ್ರಿಲ್ಲಿಂಗ್ ಮಾಡಿಕೊಂಡು ವ್ಯಕ್ತಿಯೊಬ್ಬ ಸೇವಿಸುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಇದಲ್ಲದೆ ಕಳೆದೆರಡು ದಿನದ ಹಿಂದೆ ನೀಲಿ ಶಂಖ ಪುಷ್ಪದಿಂದ ಬಿರಿಯಾನಿ ಶೈಲಿ ಅಡುಗೆ ಮಾಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ನೀಲಿ ಶಂಖ ಪುಷ್ಪದಿಂದ ಬರುವ ನೀಲಿಯನ್ನು ತೆಗೆದು ಆ ನೀಲಿ ನೀರಿನಲ್ಲಿ ಅನ್ನ ಮಾಡಿ ನೀಲಿ ಆಕಾರದ ಬಿರಿಯಾನಿ ರೆಸಿಪಿ ಅದಾಗಿತ್ತು. ಈ ವಿಭಿನ್ನ ಹಾಗೂ ವಿಚಿತ್ರ ರೆಸಿಪಿ ಕಂಡು ನೆಟ್ಟಿಗರು ಶಾಕ್ ಆಗಿದ್ದರು.



Click it and Unblock the Notifications