Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
ಕೆಲವರು ಎಂತಹ ಆಹಾರ ಕ್ರಮವನ್ನು ಅನುಸರಿಸುತ್ತಾರೆ ಅಂದ್ರೆ ನಾವು ನಂಬೋದು ಸಹ ಕಷ್ಟವಾಗುತ್ತೆ. ಇನ್ನು ಗುಹೆಗಳಲ್ಲಿ ವಾಸಿಸುತ್ತಿದ್ದ ಜನಾಂಗದ ಕಾಲದಲ್ಲಿ ಹಸಿ ಮಾಂಸ ಸೇವನೆ, ರಕ್ತ ಸೇವನೆ, ಅಷ್ಟೇ ಏಕೆ ಮನುಷ್ಯರನ್ನೇ ತಿನ್ನುತ್ತಿದ್ದರು ಎಂದು ನಾವು ಓದಿದ್ದೇವೆ. ಅಲ್ಲದೆ ಇಂದಿಗೂ ವಿಶ್ವದ ವಿವಿಧ ಕಡೆಗಳಲ್ಲಿ ಚಿತ್ರ ವಿಚಿತ್ರ ಆಹಾರ ಕ್ರಮಗಳಿವೆ.
ಕೆಲವು ಕಡೆ ಜನ ಸೇವಿಸು ಆಹಾರ ನೋಡಿ ಶಾಕ್ ಆಗಿತ್ತೆ. ಯಾಕಂದ್ರೆ ಅವರು ಪ್ರಾಣಿ, ಪಕ್ಷಿ, ಹಾವು, ಕಪ್ಪೆ ಹೀಗೆ ಸಿಕ್ಕಿದ್ದೆಲ್ಲಾ ಸೇವಿಸುತ್ತಾರೆ. ಆದ್ರೆ ಕೆಲವು ಕಡೆಗಳಲ್ಲಿ ಎಷ್ಟು ವಿಚಿತ್ರ ಆಹಾರ ಪದ್ಧತಿ ಇದೆಯೋ ಅಷ್ಟೇ ವಿಚಿತ್ರವಾಗಿ ಅಲ್ಲಿನ ಜನರೂ ಇರುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ತಾನು ಹುಟ್ಟಿದಾಗಿನಿಂದ ಹಾಲು ಕುಡಿದಿಲ್ಲ ಬದಲಿಗೆ ರಕ್ತ ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.

ನಿಮಗೆ ಈ ಕಥೆ ಕೇಳಿದ್ರೆ ಅಚ್ಚರಿಯಾಗಬಹುದು. ಯಾಕಂದ್ರೆ ಆಕೆ ಹಂದಿ ರಕ್ತ ಕುಡಿಯುವುದಕ್ಕೆ ದಾಸಿಯಾಗಿದ್ದಾಳೆ. ರಕ್ತವಿಲ್ಲದೆ ಬದುಕು ಕಷ್ಟ ಎಂದು ಭಾವಿಸಿದ್ದಾಳೆ. 10 ವರ್ಷದಿಂದ ಒಂದು ದಿನ ಬಿಡದೆ ಹಂದಿ ರಕ್ತ ಕುಡಿದಿದ್ದಾಳೆ. ಕ್ಯಾಲಿಫೋರ್ನಿಯಾದ ಲ್ಯಾಂಕಾಸ್ಟರ್‌ನ 29 ವರ್ಷದ ಮಹಿಳೆ ಮಿಚೆಲ್ ತನ್ನ ಹದಿಹರೆಯದಿಂದಲೂ ಹಂದಿ ರಕ್ತವನ್ನು ಸೇವಿಸುತ್ತಿದ್ದಾಳೆ. ಅವಳು ಇತ್ತೀಚೆಗೆ ರಕ್ತಕ್ಕೆ ವ್ಯಸನಿಯಾಗಿದ್ದಾಳೆಂದು ಒಪ್ಪಿಕೊಂಡಳು ಮತ್ತು ರಕ್ತ ಇಲ್ಲದೆ ನಾನು ಬದುಕುವುದಿಲ್ಲ ಎಂದು ಹೇಳಿಕೊಂಡಿದ್ದಾಳೆ.
ಹಂದಿ ರಕ್ತ ಕುಡಿಯುವುದರಿಂದ ನನಗೆ ಶಕ್ತಿ ತುಂಬುತ್ತದೆ ಎಂದು ಮಿಚೆಲ್ ಹಂಚಿಕೊಂಡಿದ್ದಾಳೆ. ಆಕೆ ರಕ್ತವನ್ನು ಒಂದು ಚೂರು ಬಿಸಿ ಮಾಡದೆ ನೇರವಾಗಿ ತನ್ನ ಗ್ಲಾಸ್‌ಗೆ ಹಾಕಿಕೊಂಡು ಕುಡಿಯುತ್ತಾಳೆ. ಇದಾದ ಬಳಿಕ ಅನ್ನ ಆಹಾರ ಸೇವಿಸುತ್ತಾಳೆ.
ರಕ್ತವು ತನಗೆ ನೀರಿನಂತೆಯೇ ಅದೇ ಪ್ರಾಮುಖ್ಯತೆಯನ್ನು ಹೊಂದಿದೆ ಎನ್ನುವ ಅವಳು ನಿತ್ಯ ಬೆಳಗ್ಗೆ ತನ್ನ ಕಾಫಿಯೊಂದಿಗೆ ರಕ್ತವನ್ನು ಬೆರೆಸಿದ ಬಳಿಕವೇ ಕುಡಿಯುತ್ತಾಳೆ. ಇದರ ಜೊತೆ ಓದುವಾಗ, ಟಿವಿ ನೋಡುವಾಗ, ವಿಶ್ರಾಂತಿ ಪಡೆಯುವಾಗ ನಾವು ಹೇಗೆ ನೀರು, ಜ್ಯೂಸ್ ಕುಡಿಯುತ್ತೇವೋ ಹಾಗೆ ಆಕೆ ರಕ್ತ ಕುಡಿಯುತ್ತಾಳೆ.
10 ವರ್ಷಗಳಲ್ಲಿ 3,785 ಲೀಟರ್ ರಕ್ತ ಕುಡಿದ ಯುವತಿ
ಆಕೆ ಚಿಕ್ಕವಳಿದ್ಧಾಗ ಖಿನ್ನತೆಗೆ ಒಳಗಾಗಿದ್ದಳಂತೆ. ಈ ಖಿನ್ನತೆ ವಿರುದ್ಧ ಹೋರಾಡುತ್ತಿರುವಾಗ ಹಂದಿ ರಕ್ತ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದಳಂತೆ. ಅಲ್ಲಿನಿಂದ ಈಗಿನ ವರೆಗೆ ಆಕೆ ಬರೋಬ್ಬರಿ 3,785 ಲೀಟರ್ ರಕ್ತ ಕುಡಿದಿದ್ದಾಳೆ. ಆಕೆ ರಕ್ತ ಕುಡಿಯುವುದನ್ನು ವೈನ್ ಕುಡಿಯುವುದಕ್ಕೆ ಹೋಲಿಸುತ್ತಾಳೆ.
ಶೀತ, ಕೆಮ್ಮು ನಿವಾರಣೆ
ಹಂದಿ ರಕ್ತವು ಆಕೆಯ ಶೀತ, ಕೆಮ್ಮಿನಂತೆ ಸಣ್ಣ ಪುಟ್ಟ ಕಾಯಿಲೆಯನ್ನ ವಾಸಿ ಮಾಡಿದೆಯಂತೆ. ರಕ್ತ ಕುಡಿದಾಗ ಆಕೆಗೆ ಬಿಸಿಯಾದ ಅನುಭವಾಗುತ್ತದೆ. ಇದರಲ್ಲಿ ಆರೋಗ್ಯಕರ ಅಂಶಗಳು ಅಡಗಿದೆ. ಅದು ಸಣ್ಣಪುಟ್ಟ ಕಾಯಿಲೆಗೆ ಉತ್ತಮ ಆಯ್ಕೆ ಎನ್ನುತ್ತಾಳೆ. ಜೊತೆಗೆ ಆಕೆ ಪ್ರಾಣಿ ರಕ್ತಕ್ಕಿಂತ ಮನುಷ್ಯರ ರಕ್ತ ಕುಡಿಯಲು ಶಿಫಾರಸು ಮಾಡುತ್ತಾಳಂತೆ. ಜೊತೆಗೆ ಆಕೆಗೂ ಇದು ಇಷ್ಟವಂತೆ. ಆದ್ರೆ ಜನರು ಆಕೆಯನ್ನು ರಕ್ತ ಪಿಶಾಚಿ ಎಂದು ಕರೆಯುತ್ತಾರಂತೆ. ಹೀಗಾಗಿ ಆ ರೀತಿ ಕರೆಸಿಕೊಳ್ಳಲು ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾಳೆ.
ಆಕೆ ಹಂದಿಯ ಫಾರ್ಮ್‌ಗೆ ತೆರಳಿ ಅಲ್ಲಿಂದ ಹಂದಿ ರಕ್ತ ಸಂಗ್ರಹಿಸುತ್ತಾಳಂತೆ. ರಕ್ತವನ್ನು ಹಾಗೆ ಹಸಿಯಾಗಿ ಕುಡಿಯುತ್ತಾಳೆ. ಆದರೆ ಈವರೆಗೂ ಆಕೆಯ ಆರೋಗ್ಯದಲ್ಲಿ ಇದರಿಂದ ಯಾವ ಏರುಪೇರು ಸಂಭವಿಸಿಲ್ಲವಂತೆ. ಹಾಗೆ ರಕ್ತ ಕುಡಿಯುವುದು ಆಕೆ ನಿತ್ಯದ ಕೆಲಸವಾಗಿರುವುದರಿಂದ ಒಂದು ದಿನವೂ ರಕ್ತ ಕುಡಿಯುವುದನ್ನು ತಪ್ಪಿಸಿಲ್ಲವಂತೆ.



Click it and Unblock the Notifications
