Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೋಟಿ ಬೆಲೆಯ ಪೋರ್ಸೆ 718 Boxster ಕಾರಿನಲ್ಲಿ ದನಕ್ಕೆ ಹುಲ್ಲು ತಂದ ಮಹಿಳೆ
ಸಾಮಾನ್ಯವಾಗಿ ದುಬಾರಿ ಕಾರುಗಳನ್ನು ನಾವು ಶ್ರಿಮಂತರು, ಸೆಲೆಬ್ರಿಟಿಗಳು ಬಳಸುವುದನ್ನು ನೋಡುತ್ತೇವೆ, ಆದರೆ ಇಲ್ಲೊಬ್ಬ ರೈತ ಮಹಿಳೆ ಪೋರ್ಸೆ ಸ್ಪೋರ್ಡ್ಸ್ ಕಾರಿನಲ್ಲಿ ಹಸುವಿಗೆ ಮೇವು ತರುವ ಮೂಲಗ ಗಮನ ಸೆಳೆದಿದ್ದಾರೆ.
ತಾನೇ ಡ್ರೈವ್ ಮಾಡಿ ಬಂದ ಮಹಿಳೆ ಆ ಮಹಿಳೆ Porsche 718 Boxster ಕಾರಿನಿಂದ ಇಳಿದು ಬಂದು
ಕೆಲವೊಂದು ಮೋಟಿವೇಷನಲ್ ಸ್ಪೀಚ್ ಕೊಡುತ್ತಾಳೆ, ಅದು ಹರಿಯಾಣದ ಭಾಷೆಯಲ್ಲಿ ಏನೋ ಹೇಳುತ್ತಾಳೆ, ನಂತರ ಕಾರಿನ ಬೂಟ್‌ನಿಂದ ಹುಲ್ಲಿನ ಗಂಟು ತೆಗೆದು ಯುವಕನ ಬಳಿ ತೆಗೆದುಕೊಂಡು ಹೋಗಲು ಹೇಳುತ್ತಾಳೆ.

ಅದಕ್ಕೂ ಮೊದಲು ಅವಳು ಆ ಹುಡುಗನ ಕೆನ್ನೆಗೆ ತಮಾಷೆಗೆ ಬಾರಿಸುತ್ತಾಳೆ, ಅದು ನೋಡುವಾಗ ನಿಜವಾಗಲೂ ಬಾರಿಸಿದಂತೆ ಕಾಣುತ್ತದೆ, ನಂತರ ಅವನು ಹುಲ್ಲು ತೆಗೆದುಕೊಂಡು ಹೋಗುತ್ತಾನೆ, ಆಕೆ ಕಾರಿನ ಬೂಟ್ ಮುಚ್ಚುತ್ತಾಳೆ, ಅದು ಸರಿಯಾಗಿ ಮುಚ್ಚುವುದಿಲ್ಲ, ಅಲ್ಲಿರುವ ಮತ್ತೊಬ್ಬ ಹುಡುಗ ಬಂದು ಕಾರಿನ ಬೂಟ್ ಅಥವಾ ಡಿಕ್ಕಿ ಮುಚ್ಚುತ್ತಾನೆ, ಇದಿಷ್ಟು ವೀಡಿಯೋದಲ್ಲಿದೆ..
ಎಲ್ಲಾ ರೀಲ್ಸ್ ಅಷ್ಟೇ...
ನೀವು ಇವರು ನಿಜವಾದ ರೈತ ಮಹಿಳೆ ಎಂದು ನಂಬಲು ಹೋಗಬೇಡಿ, ಏಕೆಂದರೆ ಅವರು ರೀಲ್ಸ್‌ಗಾಗಿ ಮಾಡಿರಬಹುದು, ಏಕೆಂದರೆ ಇದೇ ರೀತಿಯ ಹಲವು ರೀಲ್ಸ್ ndahiya2021 ಎಂಬ ಸಾಮಾಜಿಕ ಬಳಕೆದಾರರ ಅಕೌಂಟ್‌ನಲ್ಲಿದೆ.
ಮಗಳು ಪೋರ್ಸೆ ಕಾರು ತಂದು ಅಮ್ಮನ ಬಳಿ ಕಾರು ತೋರಿಸಿದಾಗ ಹಿಂದೆ ನಿಲ್ಲಿಸಿರುವ ಮಹೇಂದ್ರ ಸ್ಕಾರ್ಪಿಯೂ ಇದಕ್ಕಿಂತ ದೊಡ್ಡದಿದೆ ಆದರೂ ನೀನು ಇಷ್ಟೊಂದು ಕೊಟ್ಟು ಇಷ್ಟು ಚಿಕ್ಕ ಕಾರು ಖರೀದಿಸಿದೆಯಲ್ಲಾ ನಿನಗೆ ಬುದ್ಧಿಯಿಲ್ಲ ಎಂದು ಬೈಯ್ಯುವ ರೀಲ್ಸ್ ಕೂಡ ಇದೆ.
ಅವರ ಐಡಿಯಾ ಚೆನ್ನಾಗಿದೆ
ಇವರು ಸುಮ್ಮನೆ ರೀಲ್ ಮಾಡುತ್ತಿಲ್ಲ, ಎನೋ ಒಂದು ಹೊಸ ಐಡಿಯಾ ತಂದು ರೀಲ್ಸ್ ಮಾಡುತ್ತಿದ್ದಾರೆ, ತಮ್ಮ ರೀಲ್ಸ್‌ಗೆ ದುಬಾರಿ ಕಾರನ್ನು ಭಿನ್ನವಾಗಿ ಬಳಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ ಅಷ್ಟೇ.. ಒಂದು ಥೀಮ್ ಇಟ್ಟು ವೀಡಿಯೋ ಮಾಡುತ್ತಿದ್ದಾರೆ. ಇವರಿಗೆ ಒಂದು ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಕೂಡ ಇದ್ದಾರೆ.



Click it and Unblock the Notifications
