Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಟ್ಟಿಗೆ-ಮರಳು-ಸಿಮೆಂಟ್ ತಿನ್ನುವ ಮಹಿಳೆ..! ಆಕೆಗೆ 'ಪಿಕಾ' ಕಾಯಿಲೆಯಂತೆ!
ಕೆಲವು ಮಂದಿ ವಿಚಿತ್ರವಾಗಿ ವರ್ತಿಸುವುದು, ವಿಚಿತ್ರ ಅಭ್ಯಾಸಗಳ ಇಟ್ಟುಕೊಂಡಿರುವವರು ನಮ್ಮ ನಡುವೆ ಇರುತ್ತಾರೆ. ಅವರು ಇತರರಿಗಿಂತ ಭಿನ್ನ ಎನಿಸುತ್ತಾರೆ. ಹಾಗೆ ಇಲ್ಲೊಬ್ಬ ಮಹಿಳೆ ಸಹ ವಿಚಿತ್ರ ಅಭ್ಯಾಸದಿಂದಾಗಿ ಅಚ್ಚರಿಕೆ ಕಾರಣವಾಗಿದ್ದಾಳೆ. ಆಕೆಯ ಆಹಾರ ಪದ್ಧತಿ ಕೇಳಿ ಜನರು ಶಾಕ್ ಆಗಿದ್ದಾರೆ.
ಅದರಲ್ಲೂ ಆಕೆಯ ವ್ಯಸನ ಕೇಳಿದ ಮಂದಿ ಇದು ಪವಾಡ ಎನ್ನುವಂತಾಗಿದೆ. 39 ವರ್ಷದ ಬ್ರಿಟಿಷ್ ಮಹಿಳೆಯೊಬ್ಬರು ಸಿಮೆಂಟ್, ಇಟ್ಟಿಗೆ ಮತ್ತು ಮರಳು ತಿನ್ನುವ ಚಟವನ್ನು ಬೆಳೆಸಿಕೊಂಡಿದ್ದಾರೆ. ಇದು ಅವರ ಸಂಗಾತಿಯನ್ನು ಆಶ್ಚರ್ಯಗೊಳಿಸಿತು. ಪ್ಯಾಟ್ರಿಸ್ ಬೆಂಜಮಿನ್ ರಾಮಗೂಲಂ ಎಂಬಾಕೆ ಮರಳು, ಇಟ್ಟಿಗೆ ಮತ್ತು ಸಿಮೆಂಟ್ ತಿನ್ನುವ ವ್ಯಸನಿಯಾಗಿದ್ದಾರೆ.

ಆಕೆ ತನ್ನ 18ನೇ ವಯಸ್ಸಿನಲ್ಲಿ ಇಂತಹ ಅಭ್ಯಾಸ ಬೆಳೆಸಿಕೊಂಡಿದ್ದರಂತೆ. ಇದು ಆಕೆಗೆ ನೆಮ್ಮದಿಯೆ ಕಂಬಳಿ ಹೊದ್ದು ಮಲಗಿದ ಅನುಭವು ನೀಡುತ್ತದೆಯಂತೆ. ಆಕೆ ಮರಳು, ಸಿಮೆಂಟ್ ಮತ್ತು ಇಟ್ಟಿಗೆ ತುಣುಕುಗಳನ್ನು ಕಿವಿಯೋಲೆಗಳಾಗಿ ಧರಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾಳೆ.
ಅನೇಕ ಜನರು ಸಿಹಿತಿಂಡಿಗಳನ್ನು ತಿನ್ನುವುದನ್ನು ಆನಂದಿಸುತ್ತಾರೆ, ಮತ್ತೆ ಕೆಲವರು ಖಾರ, ಮಸಾಲೆಯುಕ್ತ ಆಗಾರ ಸವಿಯಲು ಇಷ್ಟಪಡುತ್ತಾರೆ. ಕೆಲವರಂತು ಫಾಸ್ಟ್ ಫುಡ್, ಫಿಜ್ಹಾ, ಬರ್ಜರ್‌ಗೆ ದಾಸರಾಗಿರುತ್ತಾರೆ. ಆದ್ರೆ ಈಕೆಯ ಈ ಇಟ್ಟಿಗೆ ಮರಳು ತಿನ್ನುವ ಅಭ್ಯಾಸ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ವರದಿಗಳ ಪ್ರಕಾರ, ಆಕೆ ಮನೆಯ ಗೋಡೆಗಳನ್ನು ನೋಡುತ್ತಲೇ ಇರುತ್ತಾಳೆ ಮತ್ತು ಅದರಿಂದ ಇಟ್ಟಿಗೆ ಮರಳು ತಿನ್ನಲು ಪ್ಲಾಸ್ಟರ್ ಅನ್ನು ಒಡೆದು ತಿನ್ನಲು ಆರಂಭಿಸುತ್ತಾಳಂತೆ. ಪ್ಯಾಟ್ರಿಸ್ ಬೆಂಜಮಿನ್ ರಾಮಗೂಲಂ ಅವರ ಪತಿ ತನ್ನ ಹೆಂಡತಿಯ ಚಟವನ್ನು ಕಂಡು ಅಚ್ಚರಿ ಜೊತೆ ಶಾಕ್‌ಗೆ ಒಳಗಾಗಿದ್ದಾರೆ.
ಪ್ಯಾಟ್ರಿಸ್ ಮತ್ತು ಅವಳ ಪತಿ ಶಾಲಾ ಸ್ನೇಹಿತರಂತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ನಂತರ ವಿವಾಹವಾದರು. ಪ್ಯಾಟ್ರಿಸ್ ತನ್ನ ಚಟವನ್ನು ಆತನಿಂದ ಮುಚ್ಚಿಟ್ಟಿದ್ದಳಂತೆ. ಆದುವೆಯಾದ ಬಳಿಕಷ್ಟೇ ಆತನಿಗೆ ಹೆಂಡತಿಯ ಈ ವಿಚಿತ್ರ ಚಟ ಕಂಡು ದಂಗಾಗಿದ್ದಾನೆ.
ಅವನು ತನ್ನ ಹೆಂಡತಿಯ ಚಟದ ಬಗ್ಗೆ ತಿಳಿದಾಗ, ಅವನು ಪ್ಯಾಟ್ರಿಸ್ ಈ ಚಟ ಬಿಡುವಂತೆ ಮನವಿ ಮಾಡಿದ್ದನಂತೆ. ಆದರೆ ಆಕೆ ಇದನ್ನು ದಿನ ದಿನ ಹೆಚ್ಚು ಮಾಡುತ್ತಲೇ ಹೋದಳಂತೆ. ಆಕೆಗೆ ಈ ಅಭ್ಯಾಸದಿಂದ ಆರೋಗ್ಯ ಹದಗೆಡುತ್ತಿದೆ ಎಂದು ತಿಳಿದಿದ್ದರೂ ಇದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲವಂತೆ.
ವೈದ್ಯರು ಈ ರೀತಿಯ ಚಟವನ್ನು ಪಿಕಾ (Pica) ಎಂದು ಉಲ್ಲೇಖಿಸುತ್ತಾರೆ. ಈ ಕಾಯಿಲೆ ಇರುವವರು ಆಹಾರೇತರ ವಸ್ತುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಅಂದರೆ ಆಹಾರಗಳ ನೋಡಿದರೆ ಅವರಿಗೆ ಸೇವಿಸುವ ಮನಸಾಗುವುದಿಲ್ಲ. ಪಿಕಾದಿಂದ ಬಳಲುತ್ತಿರುವ ವಿವಿಧ ವ್ಯಕ್ತಿಗಳು ತಿನ್ನಲು ಉದ್ದೇಶಿಸದ ಆಹಾರವನ್ನು ತಿನ್ನುವ ವ್ಯಸನವನ್ನು ಬೆಳೆಸಿಕೊಳ್ಳುತ್ತಾರೆ.
ಪ್ಯಾಟ್ರಿಸ್ ಅವರ ವೈದ್ಯರು ಸಿಮೆಂಟ್ ಅಥವಾ ಇಟ್ಟಿಗೆಗಳನ್ನು ತಿನ್ನುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ರೋಗಿಗೆ ಔಷಧಿಗಳನ್ನೂ ಸಹ ಶಿಫಾರಸು ಮಾಡಿದ್ದಾರೆ. ಇದರ ಹೊರತಾಗಿಯೂ, ಅವಳು ತನ್ನ ಚಟವನ್ನು ಮುಂದುವರಿಸುತ್ತಿದ್ದಾಳೆ. ಆದ್ರೆ ಇದು ಆಕೆ ಆರೋಗ್ಯ ಮತ್ತಷ್ಟು ಹದಗೆಡುವಂತೆ ಮಾಡಿದೆ.
ಇದೇ ರೀತಿ ಹಲವರು ವಿಚಿತ್ರ ಊಟ, ತಿಂಡಿಯ ಅಭ್ಯಾಸ ಇಟ್ಟುಕೊಂಡಿರುವ ಮಂದಿಯನ್ನು ನಾವು ನೋಡಿದ್ದೇವೆ. ಈ ಮೊದಲು ಒಬ್ಬ ವ್ಯಕ್ತಿ ಗ್ಯಾರೇಜ್‌ನಲ್ಲಿ ಸಿಗುವ ಹಳೆಯ ಆಯಿಲ್ ಕುಡಿದು ಬದುಕುತ್ತಿದ್ದ ಸುದ್ದಿ ನಾವು ಕೇಳಿದ್ದೆವು. ಆದ್ರೆ ಅದಕ್ಕಿಂತ ಈ ಮಹಿಳೆ ಅಚ್ಚರಿ ಹುಟ್ಟಿಸುತ್ತಾಳೆ. ಆಕೆ ಇಟ್ಟಿಗೆ, ಮರಳಿನ ಜೊತೆಗೆ ಊಟ ಸಹ ಮಾಡುತ್ತಾಳೆ. ಆದರೆ ಆಕೆಯ ಆರೋಗ್ಯದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ.



Click it and Unblock the Notifications