Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಖಗೋಳದಲ್ಲಿ ಗ್ರಹಗಳ ಪರೇಡ್: ಮಿಸ್ ಮಾಡದೇ ನೋಡಿ..ಬರಿಗಣ್ಣಿಗೆ ಕಾಣುತ್ತೆ..!
ಆಕಾಶದಲ್ಲಿ ಎಷ್ಟೆಲ್ಲಾ ವಿಚಿತ್ರ ಸಂಗತಿಗಳು ನಡೆಯುತ್ತವೆ ಅನ್ನೋದನ್ನ ನಾವು ಕೆಲವೊಮ್ಮೆ ಊಹಿಸಲು ಸಹ ಸಾಧ್ಯವಾಗುವುದಿಲ್ಲ. ಅದರಲ್ಲೂ 2025ರಲ್ಲಿ ಹಲವು ವಿಸ್ಮಯಗಳು ನಡೆಯಲಿವೆ, ಅದರ ಆರಂಭಿಕ ಹಂತವಾಗಿ ಜನವರಿ 21ರಂದು 6 ಗ್ರಹಗಳು ಒಂದೇ ರೇಖೆಯಲ್ಲಿ ಚಲಿಸುವ ಅತ್ಯಪರೂಪದ ವಿದ್ಯಮಾನ ನಡೆಯುತ್ತಿದೆ. ಈ ವಿಶೇಷ ವಿದ್ಯಮಾನ ಕಣ್ತುಂಬಿಕೊಳ್ಳಲು ಇಡೀ ವಿಶ್ವದ ಖಗೋಳ ತಜ್ಞರು ಕಾತರದಿಂದ ಕಾದಿದ್ದಾರೆ.
ಈ ದಿನದಂದು ಸೌರ ಮಂಡಲದ ಎಲ್ಲಾ ಗ್ರಹಗಳು ಒಂದೇ ರೇಖೆಯಲ್ಲಿ ಇರುವುದು ನೋಡಬಹುದು. ಅಂದರೆ ಈ ವಿದ್ಯಮಾನವನ್ನು ಪ್ಲಾನೆಟ್ ಪರೇಡ್ ಅಥವಾ ಗ್ರಹಗಳ ಪಥ ಸಂಚಲನ ಎಂಬುದಾಗಿ ಕರೆಯಲಾಗಿದೆ. ಈ ದಿನದಂದು ಸೌರಮಂಡಲದ ಗ್ರಹಗಳಾದ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಒಂದೇ ರೇಖೆಯಲ್ಲಿ ಚಲಿಸಲಿವೆ.

ಈ ವಿಶೇಷ ವಿದ್ಯಮಾನ ಜನವರಿ ಹಾಗೂ ಫೆಬ್ರವರಿಯಲ್ಲಿ ಕಣ್ತುಂಬಿಕೊಳ್ಳಬಹುದು. ಜನವರಿ 21ರ ಸಂಜೆ ಆರು ಗ್ರಹಗಳು ಒಂದೇ ರೇಖೆಯಲ್ಲಿರುವುದನ್ನು ನೋಡಬಹುದು. ಅಚ್ಚರಿ ಎಂದರೆ ಯುರೇನೆಸ್ ಹಾಗೂ ನೆಪ್ಚ್ಯೂನ್ ಗ್ರಹಗಳ ಹೊರತುಪಡಿಸಿ ಉಳಿದೆಲ್ಲಾ ಗ್ರಹಗಳನ್ನು ಬರಿಗಣ್ಣಿನಲ್ಲೇ ನೋಡಬಹುದು. ಅರದಲ್ಲೂ ಮಂಗಳ ಹಾಗೂ ಶುಕ್ರ ಎಂದಿಗಿಂತ ಬಹಳ ಪ್ರಕಾಶಮಾನವಾಗಿ ಬರಿಗಣ್ಣಿಗೆ ಬೀಳಲಿದೆ. ಇದರಿಂದ ನೀವು ಕೂಡ ಮಂಗಳನನ್ನು ಗುರುತು ಹಚ್ಚಬಹುದು.
ಆದ್ರೆ ಫೆಬ್ರವರಿ 28ರಂದು ಎಲ್ಲಾ 7 ಗ್ರಹಗಳು ಕೂಡ ಒಂದೇ ರೇಖೆಯಲ್ಲಿ ಕಾಣಸಿಗುತ್ತವೆ. ಈ ರೀತಿಯ ಅಪರೂಪದ ಗ್ರಹ ಸಂಯೋಗವು ಪ್ರತಿ ವರ್ಷ ಸಂಭವಿಸಬಹುದು. ಆದ್ರೆ ಈ ವರ್ಷ ಎರಡು ಬಾರಿಯ ಸಂಯೋಗವು ವಿಶೇಷ ಎನಿಸಿದೆ. ಪ್ರತಿಯೊಂದು ಗ್ರಹದ ಅಕ್ಷವು ಕೆಲವು ಡಿಗ್ರಿಗಳಷ್ಟು ಓರೆಯಾಗುತ್ತದೆ ಮತ್ತು ಸೂರ್ಯನ ಸುತ್ತ ಅಂಡಾಕಾರದ ಕಕ್ಷೆಗಳಲ್ಲಿ ಸುತ್ತುತ್ತದೆ. ಬುಧ ಮತ್ತು ಶುಕ್ರವು ಎರಡು ಡಿಗ್ರಿಗಳಷ್ಟು ಓರೆಯಾಗಿರುತ್ತವೆ. ಜನವರಿ 19 ರಂದು ನಾವು ಶುಕ್ರ ಮತ್ತು ಶನಿಯ ಸಂಯೋಗವನ್ನು ನೋಡಬಹುದು. ಜನವರಿ 21ರ ಸಂಜೆ ಇತರ ನಾಲ್ಕು ಗ್ರಹಗಳು ಕೂಡ ಒಂದೇ ರೇಖೆಯಲ್ಲಿ ಚಲಿಸುವುದು ನೋಡಬಹುದು.
ಸೌರ ಮಂಡಲದ ಕೇಂದ್ರ ಬಿಂದು ಆಗಿರುವ ಸೂರ್ಯನ ನೇರಕ್ಕೆ ಎಲ್ಲಾ ಗ್ರಹಗಳು ಬರುವ ಅಪರೂಪದ ವಿದ್ಯಮಾನ ಇದಾಗಿದೆ. ಸೂರ್ಯನನ್ನು ಸುತ್ತುಬರಲು ಎಲ್ಲಾ ಗ್ರಹಗಳು ಬೇರೆ ಬೇರೆ ಕಾಲಾವಧಿ ತೆಗೆದುಕೊಳ್ಳುತ್ತವೆ. ಸೂರ್ಯಕ್ಕೆ ಸಮೀಪದಲ್ಲಿರುವ ಬುಧನು ಭೂಮಿಯ ಸಮಯಕ್ಕೆ ಹೋಲಿಸಿದರೆ ಕೇವಲ 88 ದಿನಗಳ ತೆಗೆದುಕೊಳ್ಳುತ್ತದೆ. ಅದೇ ರೀತಿ ನೆಪ್ಚ್ಯೂನ್ 60,190 ದಿನಗಳ ತೆಗೆದುಕೊಳ್ಳುತ್ತದೆ. ಆದ್ರೆ ಎಲ್ಲಾ ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳುವುದು ಅಪರೂಪ.
ನೀವು ನಾಳೆ ಸಂಜೆ ಆಕಾಶ ನೋಡಿದಾಗ ಮಂಗಳ ಹಾಗೂ ಶುಕ್ರ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತವೆ. ಹಾಗೆ ಬಹಳ ಹತ್ತಿರದಲ್ಲಿ ನಿಮಗೆ ಕಾಣಿಸುತ್ತವೆ. ಆದ್ರೆ ಅವು ಮಿಲಿಯನ್ ಕಿ.ಮೀ ದೂರದಲ್ಲಿರುತ್ತವೆ. ಸಾಮಾನ್ಯವಾಗಿ ಮೂರರಿಂದ 8 ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸುತ್ತವೆ. ಆದ್ರೆ ಎಲ್ಲಾ ಗ್ರಹಗಳು ಒಂದೇ ಸಾಲಿನಲ್ಲಿ ಬರುವುದು ಅಪರೂಪ. ಹಾಗೆ 5ರಿಂದ 6 ಗ್ರಹಗಳು ಒಂದೇ ಸಾಲಿಗೆ ಬರುವುದು ದೊಡ್ಡ ವಿದ್ಯಮಾನ ಎಂದು ಪರಿಗಣಿಸಲಾಗಿದೆ.
ಎರಡು ಅಥವಾ ಮೂರು ಗ್ರಹಗಳು ಸೂರ್ಯನಿಗೆ ನೇರ ಕಕ್ಷೆಯಲ್ಲಿ ಕಾಣಿಸಿಕೊಳ್ಳುವುದು ಬಹಳವಾಗಿ ನಡೆಯುತ್ತದೆ. ಈ ವಿದ್ಯಮಾನದಲ್ಲಿ ಯಾವುದೇ ಅಚ್ಚರಿಯ ಬೆಳವಣಿಗೆಯಲ್ಲ. ಆದ್ರೆ ಎಲ್ಲಾ ಗ್ರಹಗಳು ಅಥವಾ 5ಕ್ಕಿಂತ ಹೆಚ್ಚು ಗ್ರಹಗಳು ಒಂದು ಸಾಲಿನಲ್ಲಿ ಬರುವುದು ವಿಶೇಷ ವಿದ್ಯಮಾನ ಎಂದು ಪರಿಗಣಿಸಲಾಗಿದೆ. ನೀವು ಕೂಡ ಬರಿಗಣ್ಣಿನಲ್ಲಿ ಈ ವಿದ್ಯಮಾನ ನೋಡಬಹುದು, ದೂರದರ್ಶಕದ ಮೂಲಕ ನೋಡಿದ್ದರೆ ಇಡೀ ವಿಸ್ಮಯ ಕಣ್ಣ ಮುಂದೆಯೇ ಬರಲಿದೆ.



Click it and Unblock the Notifications
