Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಆಗಸ್ಟ್ 2ರಂದು ಸೂರ್ಯಗ್ರಹಣ ಇದೆಯೇ? ಸತ್ಯಾಂಶವೇನು?
ಆಕಾಶಕಾಯಗಳು, ಸೂರ್ಯ, ಚಂದ್ರ, ಗ್ರಹಗಳ ಚಲನೆಯು ವಿಸ್ಮಯಗಳ ತರುವುದು ನೋಡಬಹುದು. ಅದ್ರಲ್ಲೂ ಗ್ರಹಣಗಳು ದೊಡ್ಡ ವಿಸ್ಮಯಗಳಿಗೆ ಕಾರಣವಾಗುವುದು ನೋಡಬಹುದು. ಆದ್ರೆ ಈಗ ಆಗಸ್ಟ್ 2ರಂದು ಶತಮಾನದ ದೊಡ್ಡ ಸೂರ್ಯಗ್ರಹಣ ಸಂಭವಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿರುವುದು ನೀವು ಕೂಡ ನೋಡಿರಬಹುದು.
ಹಲವು ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಈ ಕುರಿತಾದ ಪೋಸ್ಟ್ ಅನ್ನು ನೀವು ಕೂಡ ನೋಡಿರಬಹುದು. ಹಾಗೆ ಹಲವರು ಆಗಸ್ಟ್ 2ರಂದು ದೊಡ್ಡ ಸೂರ್ಯಗ್ರಹಣ ಸಂಭವಿಸಲಿದೆ ಎಂದು ನಂಬಿದ್ದಾರೆ. ಆದ್ರೆ ಇಲ್ಲೊಂದು ಸತ್ಯ ಸಂಗತಿ ಕೂಡ ಅಡಗಿದೆ. ಈ ಸೂರ್ಯಗ್ರಹಣ ಸಂಭವಿಸುತ್ತಿರುವುದು ಆಗಸ್ಟ್ 2 2025ರಂದು ಅಲ್ಲವೇ ಅಲ್ಲ.

ಈ ಸೂರ್ಯ ಗ್ರಹಣ ಸಂಭವಿಸುತ್ತಿರುವುದು ಆಗಸ್ಟ್ 2 2027ರಂದು. ಹೌದು ಇನ್ನೂ ಸರಿಯಾಗಿ 2 ವರ್ಷಗಳ ಬಳಿಕ ಈ ಸೂರ್ಯಗ್ರಹಣ ಸಂಭವಿಸುತ್ತಿದೆ. ಆದ್ರೆ ಹಲವರು 2025ರ ಆಗಸ್ಟ್ 2ರಂದು ಈ ಸೂರ್ಯಗ್ರಹಣ ಸಂಭವಿಸುತ್ತಿದೆ ಎಂಬ ಗೊಂದಲ ಹಾಗೂ ತಪ್ಪು ಗ್ರಹಿಕೆಗೆ ಒಳಗಾಗಿದ್ದಾರೆ. ಆದ್ರೆ ಇದು ಆಗಸ್ಟ್ 2 2027ರಂದು ಸಂಭವಿಸುತ್ತಿರುವ ಸುದೀರ್ಘ ಸೂರ್ಯ ಗ್ರಹಣವಾಗಿದೆ.
ಇದು ಬರೋಬ್ಬರಿ 6 ನಿಮಷಗಳ ಕಾಲ ಸಂಪೂರ್ಣ ಕತ್ತಲೆ ಆವರಿಸಲು ಕಾರಣವಾಗುತ್ತಿದೆ. ಚಂದ್ರನು ಸೂರ್ಯನ ಮುಂದೆ ಚಲಿಸುತ್ತಾನೆ, ಅದನ್ನು ಸಂಪೂರ್ಣವಾಗಿ ಆವರಿಸುತ್ತಾನೆ. ಹೀಗಾಗಿ ಹಗಲು ಕೂಡ ಕತ್ತಲಿನಂತೆ ಭಾಸವಾಗಲಿದೆ. ಚಂದ್ರನ ನೆರಳು ನೇರವಾಗಿ ಭೂಮಿಯ ಮೇಲೆ ಬೀಳಲಿದೆ. ಆದ್ರೆ ಈ ವಿದ್ಯಮಾನವನ್ನು ಹಲವರು ಈ ಆಗಸ್ಟ್ 2 2025ರಂದು ನಡೆಯುವ ವಿದ್ಯಮಾನ ಎಂದು ತಪ್ಪಾಗಿ ಗ್ರಹಿಸಿದ್ದಾರೆ. ಹಾಗೆ ಎಲ್ಲೆಡೆ ಈ ಕುರಿತ ಚರ್ಚೆ ನಡೆಯುತ್ತಿರುವುದು ನೋಡಬಹುದು.
2027ರಲ್ಲಿ ಸಂಭವಿಸುತ್ತಿರುವ ಈ ಗ್ರಹಣವು ಪೆಸಿಫಿಕ್ ಮಹಾಸಾಗರದ ಮೇಲೆ ಪ್ರಾರಂಭವಾಗುತ್ತದೆ, ನಂತರ ಮೆಕ್ಸಿಕೊದ ಮೂಲಕ, ಮಧ್ಯ ಅಮೆರಿಕದಾದ್ಯಂತ ಮತ್ತು ಬ್ರೆಜಿಲ್, ಕೊಲಂಬಿಯಾ ಮತ್ತು ನಿಕರಾಗುವಾ ಸೇರಿದಂತೆ ದಕ್ಷಿಣ ಅಮೆರಿಕದ ಕೆಲವು ಭಾಗಗಳಲ್ಲಿ ಗೋಚರವಾಗುತ್ತಿದೆ. ಇದು ಶತಮಾನದ ಸುದೀರ್ಘ ಸೂರ್ಯ ಗ್ರಹಣ ಎನಿಸಿಕೊಂಡಿದೆ. ಈ ಸಮಯದಲ್ಲಿ ಭೂಮಿಯು ಚಂದ್ರನಿಗೆ ಸಮೀಪವಾಗಿ ಹಾಗೆ ಸೂರ್ಯನಿಂದ ಸ್ವಲ್ಪ ದೂರವಾಗಿ ಚಲಿಸಲಿದೆ. ಹೀಗಾಗಿ ಹೆಚ್ಚಿನ ಗ್ರಹಣ ಸಮಯ ನೋಡಬಹುದಾಗಿದೆ.
ಸೆಪ್ಟೆಂಬರ್ 2025ರಲ್ಲಿ ಸೂರ್ಯಗ್ರಹಣ!
ಈ ವರ್ಷ ಕೂಡ ಸೂರ್ಯ ಗ್ರಹಣ ಸಂಭವಿಸುವುದು ಬಾಕಿ ಇದೆ. ಇದು 2025ರ ಸೆಪ್ಟೆಂಬರ್ 21ರಂದು ಸಂಭವಿಸಲಿದೆ. ಇದಕ್ಕೂ ಮೊದಲು ಮಾರ್ಚ್ 29ರಂದು ಕೂಡ ಸೂರ್ಯಗ್ರಹಣ ಸಂಭವಿಸಿತ್ತು. ಆದ್ರೆ ಭಾರತದಲ್ಲಿ ಗೋಚರವಾಗಿರಲಿಲ್ಲ. ಈ ಸೂರ್ಯ ಗ್ರಹಣವು ಭಾಗಶಃ ಸೂರ್ಯ ಗ್ರಹಣ ಆಗಿರಲಿದೆ. ಇದು ನ್ಯೂಜಿಲೆಂಡ್, ಪೂರ್ವ ಆಸ್ಟ್ರೇಲಿಯಾ, ಪೆಸಿಫಿಕ್ ದ್ವೀಪಗಳು ಮತ್ತು ಅಂಟಾರ್ಕ್ಟಿಕಾದಲ್ಲಿ ಗೋಚರಿಸುತ್ತದೆ. ಈ ಗ್ರಹಣವು 17:29 ಕ್ಕೆ ಅಂದರೆ ಭಾರತದಲ್ಲಿ ರಾತ್ರಿ 10:59ಕ್ಕೆ ಸರಿಯಾಗಿ ಆರಂಭಗೊಳ್ಳುತ್ತದೆ. ಹಾಗೆ ರಾತ್ರಿ 1:11ಕ್ಕೆ ತನ್ನ ಉತ್ತುಂಗವನ್ನು ತಲುಪಿ, ರಾತ್ರಿ 3:23ಕ್ಕೆ ಕೊನೆಗೊಳ್ಳುತ್ತದೆ. ಹೀಗಾಗಿ ಭಾರತದಲ್ಲಿ ಇದು ಗೋಚರ ಆಗುವುದಿಲ್ಲ.
ಫೆಬ್ರವರಿ 17, 2026ರಲ್ಲಿ ಮತ್ತೊಂದು ಸೂರ್ಯಗ್ರಹಣ
ಸೆಪ್ಟೆಂಬರ್ ಬಳಿಕ ಮುಂದಿನ ವರ್ಷ ಫೆಬ್ರವರಿಯಲ್ಲಿ ಮತ್ತೊಂದು ಸೂರ್ಯಗ್ರಹಣ ಸಂಭವಿಸಲಿದೆ. ಇದು ಉಂಗುರಾಕಾರದ ಸೂರ್ಯಗ್ರಹಣ ಆಗಿರಲಿದೆ. ಇದು ಕೂಡ ಭಾರದಲ್ಲಿ ಗೋಚರ ಆಗುವುದಿಲ್ಲ.
ಇದಾದ ಬಳಿಕ ಆಗಸ್ಟ್ 12, 2026 ರಂದು ಮತ್ತೊಂದು ಸೂರ್ಯಗ್ರಹಣ ನೋಡಬಹುದು. ಹಾಗೆ ಫೆಬ್ರವರಿ 6, 2027 ರಂದು ಉಂಗುರಾಕಾರದ ಸೂರ್ಯಗ್ರಹಣ ಸಂಭವಿಸಲಿದೆ. ಆದ್ರೆ ಆಗಸ್ಟ್ 2 2025ರಲ್ಲಿ ಯಾವುದೇ ಸೂರ್ಯಗ್ರಹಣ ಸಂಭವಿಸುತ್ತಿಲ್ಲ.



Click it and Unblock the Notifications
