ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಪತ್ನಿ, ಹಾಡು ಹೇಳಿ ಒಲಿಸಿಕೊಂಡ ಪತಿ,

ಗಂಡ-ಹೆಂಡತಿ ನಡುವೆ ಸಮಸ್ಯೆಯಾದಾಗ ಇಬ್ಬರ ನಡುವಿನ ಸಮಸ್ಯೆ ಬಗೆಹರಿದು ಮೊದಲಿನಂತೆ ಖುಷಿ-ಖುಷಿಯಿಂದ ಬಾಳಲಿ ಎಂದು ಅವರ ಮನೆಯವರು ಹಿತೈಷಿಗಳು ಬಯಸುತ್ತಾರೆ. ಕೋರ್ಟ್ ಮೆಟ್ಟಿಲೇರಿದ ಎಷ್ಟೋ ಜೋಡಿಗಳು ಕೋರ್ಟ್‌ನಲ್ಲಿ ಮತ್ತೆ ಒಂದಾಗಿ ಬಾಳುವ ನಿರ್ಧಾರಕ್ಕೆ ಬಂದ ಎಷ್ಟೋ ಪ್ರಕರಣಗಳಿವೆ. ಕೋರ್ಟ್ ಕೂಡ ಇಬ್ಬರನ್ನು ಬೇರೆ ಮಾಡುವ ಬದಲಿಗೆ ಒಂದು ಮಾಡು ಪ್ರಯತ್ನಿಸುತ್ತಿದೆ. ಇವರಿಬ್ಬರು ಒಟ್ಟಿಗೆ ಬದುಕಲು ಸಾಧ್ಯವೇ ಇಲ್ಲ ಎಂದಾಗ ಕೋರ್ಟ್ ಅವರಿಗೆ ವಿಚ್ಛೇದನಕ್ಕೆ ಅನುಮತಿ ನೀಡುತ್ತೆ.

ಆದರೆ ಇಲ್ಲೊಂದು ಕೇಸ್‌ ತುಂಬಾನೇ ಭಿನ್ನ, ಮುನಿಸಿಕೊಂಡ ವ್ಯಕ್ತಿ ಪೊಲೀಸ್‌ ಸ್ಟೇಷನ್ ಮೆಟ್ಟಿಲೇರಿದಾಗ ಹಾಡಿನ ಮೂಲಕ ಮತ್ತೆ ಒಲಿಸಿಕೊಂಡಿದ್ದಾರೆ. ಪತಿಯ ಹಾಡಿಗೆ ಮನಸೋತ ಪತ್ನಿ ಎಲ್ಲಾ ಮುನಿಸು ಮರೆತು ಪತಿಯನ್ನು ಅಪ್ಪಿಕೊಂಡಿದ್ದಾರೆ. ಈ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಗಮನ ಸೆಳೆದಿದೆ. ಇವರ ಕತೆ ಸುಖಾಂತ್ಯ ಕಂಡಿರುವುದು ನೋಡಿ ವೀಕ್ಷಕರಿಗೂ ಖುಷಿ ನೀಡಿದ್ದು ಈ ವೀಡಿಯೋ ವೈರಲ್ ಆಗುತ್ತಿದೆ.

 Man Signs Song For Wife In police station

ಈ ವೀಡಿಯೋದಲ್ಲಿ ಬದ್ಲಾಪುರ್ ಸಿನಿಮಾದ ಜೀನಾ-ಜೀನಾ ಬಾಲಿವುಡ್‌ ಹಾಡು ಹೇಳಿದಾಗ ಮಂಜಿಗೆ ಸೂರ್ಯನ ರಶ್ಮಿ ಬಿದ್ದಾಗ ಕರಗುವಂತೆ ಪತ್ನಿಯ ಕೋಪವೆಲ್ಲಾ ಕರಗಿ ಹೋಗಿದೆ. ಈ ಸುಂದರ ಘಟನೆಯನ್ನು ಪೊಲೀಸ್‌ನವರೇ ವೀಡಿಯೋ ಮಾಡಿದ್ದಾರೆ. ಹೆಂಡತಿ ಗಂಡನ ವಿರುದ್ಧ ದೂರು ನೀಡಲು ಪೊಲೀಸ್‌ ಸ್ಟೇಷನ್‌ಗೆ ಬಂದಿದ್ದಳು, ಪೊಲೀಸರು ಪತಿಯನ್ನೂ ಕರಿಸಿದರು. ಹೆಂಡತಿ ತನ್ನ ವಿರುದ್ಧ ದೂರು ನೀಡಲು ಬಂದಿದ್ದರೂ ಈತ ಮಾತ್ರ ಆಕೆಯನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಜೀನಾ ಜೀನಾ ಅಂತ ಅವಳಿಗಾಗಿ ಹಾಡಿದ್ದಾನೆ. ಆಕೆಯ ಕೋಪ ಕರಗಿ ಪತಿಯನ್ನು ಅಪ್ಪಿಕೊಂಡಳು.

ಸಂಸಾರ ಎಂದ ಮೇಲೆ ಅಲ್ಲಿ ಕೆಲವೊಂದು ಸಮಸ್ಯೆಗಳು ಬರುವುದು ಸಹಜ. ಆದರೆ ಕೆಲವೊಮ್ಮೆ ಗಂಡ-ಹೆಂಡತಿ ಸಂಬಂಧದಲ್ಲಿ ಸಮಸ್ಯೆ ಬಂದರೆ ಮೂರನೇಯ ವ್ಯಕ್ತಿ ಪ್ರಭಾವ ಬೀರಿದಾಗ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಕೆಲವೊಮ್ಮೆ ಪ್ರೀತಿಯಿದ್ದರೂ 'ಈಗೋ' ಹೆಚ್ಚಾಗಿ ಸಂಬಂಧ ಮುರಿದು ಹೋಗುವುದು. ಅಂಥದ್ದೇ ಒಂದು ಪ್ರಕರಣ ಇದು ಕೂಡ. ಇಬ್ಬರ ನಡುವೆ ಏನೋ ಸಮಸ್ಯೆ ಉಂಟಾಗಿ ಹೆಂಡತಿ ಪೊಲೀಸ್‌ ಸ್ಟೇಷನ್ ಮೆಟ್ಟಿಲೇರಿದ್ದಾಳೆ. ಆದರೆ ಗಂಡ ಆಕೆಯನ್ನು ನೋಡಿ ಜೀನಾ ಜೀನಾ ಹಾಡಲಾರಂಭಿಸಿದ್ದಾನೆ, ಆ ಭಾವಪೂರ್ಣ ಹಾಡು ಅವರಿಬ್ಬರನ್ನು ಮತ್ತೆ ಒಂದಾಗಿಸಿದೆ. ಹ್ಯಾಪಿ ಎಂಡಿಂಗ್ ಸ್ಟೋರಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

English summary

Wife Who Filed Complaint at Police Station, Husband Sings And Melt Her Angry: Video Goes Viral

Man Signs Song For Wife In police station, happy ending story goes viral story read on.....
X
Desktop Bottom Promotion