Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಆಫೀಸರ್ ಆಗಿದ್ದ ಪತಿಗೆ ತರಕಾರಿ ತರಲು ಪತ್ನಿ ಕಳುಹಿಸಿದ ಚೀಟಿ ವೈರಲ್: ನಮ್ಮ-ನಿಮ್ಮೆಲ್ಲರ ಮನೆಯ ವಿಷಯಂತು ಹೌದು
ಗಂಡ ದೊಡ್ಡ ಆಫೀಸ್‌ರ್, ಆದರೂ ಹೆಂಡತಿಗೆ ಗೊತ್ತಿದೆ ಅವರಿಗೆ ತರಕಾರಿ ತರುವಷ್ಟು ಬುದ್ಧಿವಂತಿಕೆಯಿಲ್ಲ ಎಂದು, ಹಾಗಾಗಿ ಚೀಟಿ ಮಾಡಿ ಕೊಟ್ಟಿದ್ದಾರೆ, ಮನೆಗೆ ತರಕಾರಿ-ಅಡುಗೆ ಸಾಮಗ್ರಿ ತರಬೇಕೆಂದರೆ ಚೀಟಿ ಮಾಡಿಕೊಡುತ್ತಾರೆ, ಆದರೆ ಈ ಅಫೀಸರ್ ಪತ್ನಿ ಮಾತ್ರ ಇನ್ನೂ ಸೂಪರ್ ತರಕಾರಿ ಹೇಗಿರುತ್ತದೆ, ಎಂಥ ತರಕಾರಿ ತರಬೇಕು ಎಂದು ಪ್ರತಿಯೊಂದು, ಡ್ರಾಯಿಂಗ್ ಎಲ್ಲಾ ಬರೆದು ಕಳುಹಿಸಿದ್ದಾರೆ, ಇದೀಗ ಆ ಆಫೀಸ್‌ರ್ ಆ ಚೀಟಿಯನ್ನು ಶೇರ್ ಮಾಡಿದ್ದೇ ತಡ ಸಕತ್ ವೈರಲ್ ಆಗಿದೆ.

ಅವರು ಅಂಥದ್ದೊಂದು ಚೀಟಿ ಮಾಡಿಕೊಡಬೇಕೆಂದರೆ ಇವರನ್ನು ತರಕಾರಿ ತರಲು ಕಳುಹಿಸಿದಾಗ ಇವರು ಮಾಡುವ ಎಡವಟ್ಟು ಅವರಿಗೆ ಗೊತ್ತಿರುತ್ತದೆ, ಹೀಗಾಗಿಯೇ ಹಾಗೆ ಕಳುಹಿಸಿದ್ದಾರೆ, ಇದು ಇವರ ಮಾತ್ರ ಕತೆಯಲ್ಲ, ಬಹುತೇಕ ಪುರುಷರ ಹಾಗೂ ಮಕ್ಕಳ ಹಣೆಬರವೂ ಇದೆ.
For those who have responded to this tweet it is informed that this content was created 7 years ago by Era @eralondhe and it was later circulated in WA to us which was shared . This credit was already acknowledged in next tweet . pic.twitter.com/NCCRVA6kcC
— Mohan Pargaien IFS🇮🇳 (@pargaien) September 16, 2024
ಒಂದು ಕೆಜಿ ಟೊಮೆಟೊ ತಗೊಂಡು ಬನ್ನಿ ಎಂದರೆ ಅಂಗಡಿಯವ ಬಳಿ ಹೋಗಿ ಒಮದು ಕೆಜಿ ಟೊಮೆಟೊ ಎಂದು ಸುಮ್ಮನಿದ್ದು ಬಿಡುತ್ತಾರೆ, ಅವರು ಕೊಳೆತ ಟೊಮೆಟೊ ಹಾಕಿಕೊಟ್ಟರೂ ತಗೊಂಡು ಬರ್ತಾರೆ, ಅದೇ ರೀತಿ ಟೊಮೆಟೊ ತಗೊಂಡು ಬಾ, ಹಸಿ ಮೆಣಸು ತಗೊಂಡು ಬಾ ಎಂದು ಕಳುಹಿಸಿದರೆ ಟೊಮೆಟೊ ಒಂದು ಕೆಜಿ ಹಸಿ ಮೆಣಸು ಒಂದು ಕೆಜಿ ತಗೊಂಡು ಬರುವವರಿಗೇನೂ ಕಡಿಮೆಯಿಲ್ಲ...ಹಾಗಾಗಿ ಎಲ್ಲರ ಮನೆಯ ದೋಸೆ ತೂತ ಎಂಬಂತೆ ಎಲ್ಲರ ಮನೆಯಲ್ಲಿ ಇಂಥವರು ಇದ್ದೇ ಇರ್ತಾರೆ, ಹಾಗಾಗಿ ಇವರು ತಮ್ಮ ಹೆಂಡತಿ ತರಕಾರಿ ತರಲು ಕಳುಹಿಸಿದ ಚೀಟಿ ಎಲ್ಲರಿಗೂ ಕನೆಕ್ಟ್ ಆಗಿದೆ.
ಅಷ್ಟಕ್ಕೂ ಅವರು ತರಕಾರಿಯನ್ನು ಹೇಗೆ ತರಬೇಕು ಎಂದು ಎಷ್ಟೊಂದು ವಿವರವಾಗಿ ಹೇಳಿದ್ದಾರೆ ಗೊತ್ತಾ?
ಟೊಮೆಟೊ: ಕೆಲವು ಕೆಂಪು, ಕೆವೊಂದು ಸ್ವಲ್ಪ ಹಳದಿ ಬಣ್ಣದಲ್ಲಿರಬೇಕು
ಅದರಲ್ಲಿ ರಂಧ್ರಗಳಿರಬಾರದು, ಕಪ್ಪು ಚಿಕ್ಕಿಗಳಿರಬಾರದು
1.5 ಕೆಜಿ
ಈರುಳ್ಳಿ
ಚಿಕ್ಕ ಗಾತ್ರದ್ದು, ರೌಂಡ್ ಶೇಪ್‌ನಲ್ಲಿರುತ್ತದೆ
1.5 ಕೆಜಿ
ಮೆಂತೆ ಸೊಪ್ಪು
ಉದ್ದವಿರಬಾರದು, ಸೊಪ್ಪು ಫ್ರೆಷ್ ಇರಬೇಕು, ಒಂದು ಬಂಡಲ್
ಆಲೂಗಡ್ಡೆ ಸಾಧಾರಣ ಗಾತ್ರದ್ದು
ಮೆಣಸಿನಕಾಯಿ
ಹಸಿರು ಬಣ್ಣವಿರಬೇಕು, ಉದ್ದವಿರಬೇಕು, ತುದಿ ಮಡಚಿರಬಾರದು(ಇದನ್ನು ಫ್ರೀ ಕೆಳು)
ಪಾಲಾಕ್
ಹಸಿರು ಬಣ್ಣದ್ದು, ಅದರ ದಂಟು ಉದ್ದವಿರಬಾರದು, ಎರಡು ಬಂಡಲ್
ಹೀಗೆ ಪ್ರತಿಯೊಂದನ್ನು ತುಂಬಾನೇ ವಿವರವಾಗಿ ಬರೆದಿದ್ದಾರೆ, ಇದೀಗ ಆ ಚೀಟಿ ಸಿಕ್ಕಪಾಟ್ಟೆ ವೈರಲ್ ಆಗಿದೆ. ಇನ್ನು ಇಷ್ಟೊಂದು ವಿವರವಾಗ ಬರೆದ ಮೇಲೂ ತರಕಾರಿ ಅವರ ಪತ್ನಿ ಬಯಸಿದ ರೀತಿಯಲ್ಲೇ ತಲುಪಿಸಿರುವ ಬಗ್ಗೆ ಡೌಟು ಕಾಡುತ್ತೆ. ಎಷ್ಟೇ ಬುದ್ಧಿವಂತರಾಗಿದ್ದರೂ, ಎಷ್ಟೇ ಮೇಧಾವಿ ಅನಿಸಿಕೊಂಡಿದ್ದರೂ ಇಂಥ ಸಾಮಾನ್ಯ ವಿಷಯದಲ್ಲಿ ಬಹುತೇಕರಿಗೆ ಅಷ್ಟೊಂದು ಅರಿವು ಇರಲ್ಲ.
ಅದರಲ್ಲಿಯೂ ಗಂಡನಿಗೆ, ಮಕ್ಕಳಿಗೆ(ಅದು ಹೆಣ್ಣಾಗಲಿ, ಗಂಡಾಗಲಿ) ಅವರಿಗೆ ಈ ತರಕಾರಿ, ಬೇಳೆ ಇವುಗಳ ಬಗ್ಗೆ ಗೊತ್ತಿರುವುದಿಲ್ಲ, ಹೋಗಿ ತೊಗರಿ ಬೇಳೆ ತಗೊಂಡು ಬಾ ಎಂದರೆ ಕಡ್ಲೆಬೇಳೆ ತಂದಿರುತ್ತಾರೆ. ಇನ್ನು ತರಕಾರಿ ತರಲು ಕಳುಹಿಸಿದರೆ ಯಾವುದನ್ನು ಎಷ್ಟು ತರಬೇಕು ಎಂದು ಗೊತ್ತಿರುವುದಿಲ್ಲ, ಒಂದು ವಾರಕ್ಕಿರುವ ತರಕಾರಿ ತರಲು ಕಳುಹಿಸಿದರೆ ಒಂದು ಚಿಕ್ಕ ಫಂಕ್ಷನ್ ಮಾಡಬಹುದು ಅಷ್ಟೊಂದು ತರಕಾರಿ ತಂದು ಮನೆಯಲ್ಲಿ ಬೈಯ್ಯಿಸಿಕೊಳ್ಳುವವರಿಗೇನೂ ಕಡಿಮೆಯಿಲ್ಲ.
ಹಾಗಾಗಿ ಅಮ್ಮಂದಿರಿಗೆ ಈ ಅಪ್ಪ-ಮಕ್ಕಳ ಕೈಯಲ್ಲಿ ಏನಾದರು ತನ್ನಿ ಎಂದು ಹೇಳಲು ಭಯವಾಗುತ್ತೆ, ಅಷ್ಟು ಮಾತ್ರ ಇದರಲ್ಲಿ ಹೈಲೈಟ್ಸ್ ಎಂದು ಮೆಣಸಿನಕಾಯಿ ಫ್ರೀ ಕೇಳಿ ಅಂತ ಹಾಕಿದ್ದಾರೆ. ಪಕ್ಕದ ತರಕಾರಿ ಅಂಗಡಿಗೆ ಹೋದಾಗ ಸ್ವಲ್ಪ ಕೊತ್ತಂಬರಿ ಫ್ರೀ ಹಾಕಪ್ಪಾ, ಸ್ವಲ್ಪ ಮೆಣಸಿನಕಾಯಿ ಹಾಕಪ್ಪಾ ಎಂದು ಹೇಳ್ತಾರೆ, ಅದರೆ ಮನೆಯವರು ನಾನು ಫ್ರೀ ಕೇಳಿ ತರುವ ವಸ್ತುವನ್ನು ಕೂಡ ದುಡ್ಡು ಕೊಟ್ಟು ತರ್ತಾರೆ ಎಂದು ಗೊತ್ತಿರುವುದಕ್ಕೆ ಅದನ್ನು ಫ್ರೀಯಾಗಿ ಕೇಳಿ ಎಂದು ಹೇಳಿದ್ದಾರೆ.
ಇವರು ಪಾಪ ಬರೆದು ಕಳುಹಿಸಿದ್ದಾರೆ, ಆದರೆ ಎಷ್ಟೋ ಜನ ಅಂಗಡಿಗೆ ಹೋಗಿ ವೀಡಿಯೋ ಕಾಲ್ ಮಾಡಿ ಇದಾ-ಅದಾ ಅಂತೆಲ್ಲಾ ಕೇಳುತ್ತಾರೆ, ಇವರು ಕೊಡುವ ಟಾರ್ಚರ್‌ಗೆ ಅಯ್ಯೋ ಏಕಪ್ಪಾ ಕಳುಹಿಸಿದೆ ನಾನೇ ಹೋಗಿ ತರ್ತಾ ಇದ್ದೆ ಎಂದನಿಸುವಂತೆ ಮಾಡಿ ಬಿಡುತ್ತಾರೆ.
ದೊಡ್ಡ ಕೆಲಸದಲ್ಲಿದ್ದು ತರಕಾರಿ ಬಗ್ಗೆ ಎಬಿಸಿಡಿ ಗೊತ್ತಿರದವರು ನಿಮ್ಮ ಮನೆಯಲ್ಲಿರೂ ಇರಬಹುದು ಅಲ್ವಾ? ಅವರ ಬಗ್ಗೆ ಇಂಟೆರೆಸ್ಟಿಂಗ್ ಸ್ಟೋರಿ ಕಮೆಂಟ್ ಮಾಡಿ.



Click it and Unblock the Notifications











