Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮೊಬೈಲ್ ಫೋನ್ ಬ್ಯಾಟರಿ ಬೇಗ ಕಡಿಮೆಯಾಗುತ್ತಾ? ಇಲ್ಲಿದೆ ನೋಡಿ ಪರಿಹಾರ!
ಎಲ್ಲರ ಕೈಯಲ್ಲೂ ಈಗ ಮೊಬೈಲ್ ಫೋನ್ ಇರುವುದು ಸಾಮಾನ್ಯ. ಅದ್ರಲ್ಲೂ ಸ್ಮಾರ್ಟ್ ಫೋನ್ ಬಳಕೆ ಮಾಡುವವರ ಸಂಖ್ಯೆ ಏರಿಕೆಯಾಗುತ್ತಲೇ ಇರುತ್ತದೆ. ಸಾವಿರದಿಂದ ಹಿಡಿದು ಲಕ್ಷ ಲಕ್ಷ ರೂಪಾಯಿ ನೀಡಿ ಗ್ರಾಹಕರು ಸ್ಮಾರ್ಟ್ ಫೋನ್‌ಗಳ ಖರೀದಿಸುತ್ತಾರೆ. ಆದ್ರೆ ಈ ಸ್ಮಾರ್ಟ್ ಫೋನ್‌ಗಳು ಒಂದಲ್ಲಾ ಒಂದು ಸಮಸ್ಯೆ ಹೊಂದಿರುತ್ತವೆ.
ನಾವು ಫೋನ್ ಖರೀದಿಸುವಾಗ ಆ ಮೊಬೈಲ್ ಫೋನ್ ಎಷ್ಟು ದೊಡ್ಡ ಬ್ಯಾಟರಿ ಹಾಗೂ ಎಷ್ಟು ದಿನಗಳ ಕಾಲ ಬ್ಯಾಕ್‌ಅಪ್ ಬರಲಿದೆ ಎಂಬುದನ್ನು ನೋಡುತ್ತೇವೆ. ಏಕೆಂದರೆ ಜನರೀಗ ಹೆಚ್ಚು ಸಮಯ ಮೊಬೈಲ್ ಬಳಸುವ ಸ್ಥಿತಿ ತಲುಪಿದ್ದಾರೆ. ಯಾರು ಕೂಡ ಅರ್ಧ ಗಂಟೆಗೂ ಅಧಿಕ ಕಾಲ ಫೋನ್ ಬಿಟ್ಟಿರಲಾಗದ ಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ಯಾರು ಸಹ ಹೆಚ್ಚು ಸಮಯ ಫೋನ್ ಅನ್ನು ಚಾರ್ಜ್ ಮಾಡಲು ಇಷ್ಟಪಡುವುದಿಲ್ಲ.

ಇನ್ನೊಂದೆಡೆ ನಿಮ್ಮ ಫೋನ್ ಅತ್ಯಂತ ವೇಗವಾಗಿ ಚಾರ್ಜ್ ಕಡಿಮೆಯಾಗುತ್ತಿರಬಹುದು. ಹೌದು ಫೋನ್ ಕೆಲ ವರ್ಷಗಳ ಬಳಿಕ ತನ್ನ ಬ್ಯಾಟರಿ ಬಳಕೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಸಹಜವಾಗಿ, ಕಡಿಮೆ ಬ್ಯಾಟರಿ ಮೋಡ್ ಅನ್ನು ಬಳಸುವುದು ಅಥವಾ ಡೇಟಾವನ್ನು ಸ್ವಿಚ್ ಆಫ್ ಮಾಡುವುದು ಸ್ವಲ್ಪ ಸಮಯದವರೆಗೆ ಅದನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಬ್ಯಾಟರಿ ಬಹುಬೇಗ ಕಡಿಮೆಯಾಗುವುದನ್ನು ತಡೆಯುವುದು ಹೇಗೆ? ಇದಕ್ಕೆ ಕೆಲವು ಉಪಾಯ ನಾವಿಂದು ಹೇಳುತ್ತೇವೆ ನೋಡಿ.
ಚಾರ್ಜಿಂಗ್ ಸೈಕಲ್ ಬಗ್ಗೆ ತಿಳಿದುಕೊಳ್ಳಿ
ಸ್ಮಾರ್ಟ್‌ಫೋನ್ ಬಳಕೆದಾರರು ಸಾಮಾನ್ಯವಾಗಿ ಬ್ಯಾಟರಿ ಪರ್ಸೆಂಟೇಜ್ ಕಡಿಮೆಯಾದಾಗ ಮೊಬೈಲ್ ಚಾರ್ಜ್‌ಗೆ ಇಡುತ್ತಾರೆ. ಆದ್ರೆ ಅವರೆಂದು ತಮ್ಮ ಫೋನ್ 10% ಅಥವಾ 5% ಬ್ಯಾಟರಿಗೆ ಬರುವವರೆಗೆ ಬಿಡುವುದಿಲ್ಲ. 50 ಮತ್ತು 60 ರಷ್ಟು ಬ್ಯಾಟರಿ ಚಾರ್ಜ್ ಇದ್ದಾಗಲೇ ಮತ್ತೆ ಚಾರ್ಜ್ ಮಾಡುತ್ತಾರೆ, ಆದರೆ ಹೀಗೆ ಮಾಡಬಾರದಂತೆ. ನಿಮ್ಮ ಫೋನ್ ಬ್ಯಾಟರಿ ಪೂರ್ಣ ಖಾಲಿಯಾದಾಗ ಮಾತ್ರ ಚಾರ್ಜ್ ಮಾಡಬೇಕು, ಇದು ಚಾರ್ಜಿಂಗ್ ಸೈಕಲ್ ನಿಯಮ. ಅಂದರೆ ಫೋನ್ ಬ್ಯಾಟರಿ ತುಂಬ ಬಾಳಿಕೆ ಬರಬೇಕಾದರೆ ಅದರಲ್ಲಿನ ಚಾರ್ಜ್ ಕಡಿಮೆಯಾದಾಗ ಮತ್ತೆ ಚಾರ್ಜ್ ಮಾಡುತ್ತಿರಬೇಕು. ಮಧ್ಯ ಮಧ್ಯದಲ್ಲಿ ಯಾವಾಗಲು ಚಾರ್ಜ್ ಮಾಡಬಾರದು.
ರಾತ್ರಿಯಿಡೀ ಚಾರ್ಜ್ ಮಾಡಬೇಡಿ
ಕೆಲವರಿಗೆ ಈ ರೀತಿಯ ಅಭ್ಯಾಸ ಇರುತ್ತದೆ ಬೆಳಗ್ಗೆಯಿಂದ ಸಂಜೆಯ ವರೆಗೂ ಮೊಬೈಲ್ ಬಳಸಿ ರಾತ್ರಿ ಮಲಗುವ ವೇಳೆ ಚಾರ್ಜ್‌ಗೆ ಇಟ್ಟು ಮಲಗುತ್ತಾರೆ. ಬಳಿಕ ಬೆಳಗ್ಗೆ ಎದ್ದು ಮೊಬೈಲ್ ಬಳಸಲು ಆರಂಭಿಸುತ್ತಾರೆ. ಈ ರೀತಿ ಓವರ್ ನೈಟ್ ಬ್ಯಾಟರಿ ಚಾರ್ಜ್ ಮಾಡುವುದು ಫೋನ್ ಬ್ಯಾಟರಿ ಸಾಮರ್ಥ್ಯ ಕುಂದುವಂತೆ ಮಾಡಲಿದೆ. ಒಂದು ನಿಯಮದ ಪ್ರಕಾರ ಫೋನ್ ಬ್ಯಾಟರಿ 100ರಷ್ಟು ಚಾರ್ಜ್ ಮಾಡಲೇ ಬಾರದಂತೆ. 80% ಇಲ್ಲವೆ 90%ರಷ್ಟು ಮಾತ್ರ ಚಾರ್ಜ್ ಮಾಡಬೇಕಂತೆ.
ಕಂಪನಿ ಕೇಬಲ್ ಬಳಸಿ
ಫೋನ್ ಖರೀದಿಸುವಾಗ ಕೊಡುವ ಚಾರ್ಜಿಂಗ್ ಕೇಬಲ್‌ನಿಂದಲೇ ಫೋನ್ ಚಾರ್ಜ್ ಮಾಡಿ. ಇಲ್ಲವೆ ದುಬಾರಿ ಬೆಲೆ ನೀಡಿ ಉತ್ತಮ ಕಂಪನಿಯ ಚಾರ್ಜರ್ ಅಥವಾ ಕೇಬಲ್ ಖರೀದಿಸಿ. ಅದು ಬಿಟ್ಟು ಕಡಿಮೆ ಬೆಲೆಯ ಅಥವಾ ನಕಲಿ ಕೇಬಲ್‌ಗಳ ಸಹಾಯದಿಂದ ಎಂದಿಗೂ ಫೋನ್ ಚಾರ್ಜ್ ಮಾಡಬೇಡಿ. ಇದರಿಂದ ನಿಮ್ಮ ಫೋಣ್ ಬ್ಯಾಟರಿ ಬೇಗ ಹಾಳಾಗಲಿದೆ.
ಚಾರ್ಜ್‌ಗೆ ಹಾಕಿ ಫೋನ್ ಬಳಸುವುದು
ಮತ್ತೆ ಕೆಲವರು ಫೋನ್ ಅನ್ನು ಚಾರ್ಜ್ ಆಗಲು ಇಟ್ಟು ಬಳಸಲು ಆರಂಭಿಸುತ್ತಾರೆ. ಇದು ಮಹಾನ್ ತಪ್ಪು, ಇದರಿಂದ ಮೊಬೈಲ್ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗುವ ಜೊತೆಗೆ ಫೋನ್ ಬಹುಬೇಗ ಬಿಸಿಯಾಗಲು ಆರಂಭಿಸುತ್ತದೆ. ಮುಂದೊಂದು ದಿನ ಇದು ಅಪಾಯಕ್ಕೂ ಕಾರಣವಾಗಬಹುದು.



Click it and Unblock the Notifications
