Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಯಾವ ಮಾಲ್‌ನಲ್ಲೂ ಗಡಿಯಾರ ಏಕಿಲ್ಲಾ.!! ಇದರ ಹಿಂದಿನ ಕಹಿ ಸತ್ಯ ನಿಮಗೆ ಗೊತ್ತಾ?
ನೀವು ದೊಡ್ಡ ದೊಡ್ಡ ಮಾಲ್‌ಗಳಿಗೆ ಶಾಪಿಂಗ್‌ಗಾಗಿ ಹೋಗಿರುತ್ತೀರಿ. ಅಲ್ಲಿಯೇ ಗಂಟೆಗಳ ಕಾಲ ಕಳೆಯುತ್ತೀರಿ. ಕೆಲವೊಮ್ಮೆ ಮಾಲ್ ಮುಚ್ಚುವ ವರೆಗೂ ಅಲ್ಲಿಯೇ ಇರುತ್ತೀರಿ. ಅಲ್ಲಿನ ಸಿಬ್ಬಂದಿ ಒತ್ತಾಯ ಪೂರ್ವಕವಾಗಿ ನಿಮ್ಮನ್ನು ಅಲ್ಲಿಂದ ಹೊರಕಳಿಸುತ್ತಾನೆ. ಆದ್ರೆ ಇದೆಲ್ಲಾ ನಿಮ್ಮ ಗಮನಕ್ಕೆ ಬರುವುದೇ ಇಲ್ಲ. ಮಾಲ್ ಒಳಗೆ ಹೋದಾಗ ನಿಮ್ಮ ಸಮಯ ಕಳೆಯುವುದೇ ನಿಮಗೆ ತಿಳಿಯುವುದಿಲ್ಲ.
ಇನ್ನೊಂದೆಡೆ ನೀವು ಯಾವುದೇ ಮಾಲ್ ನೋಡಿ ಅಲ್ಲಿ ಗಡಿಯಾರ ನೋಡಲು ನೀವು ಸಾಧ್ಯವೇ ಇಲ್ಲ. ಮಾಲ್‌ಗಳಲ್ಲಿ ಎಲ್ಲವೂ ಸಿಗುತ್ತದೆ. ಅತ್ಯಾಕರ್ಷಕ ಡಿಸೈನ್‌ಗಳ, ಜನರನ್ನು ಸೆಳೆಯಲು ಗೋಡೆಗಳ ಮೇಲೆ ಅಲಂಕಾರಿಕ ವಸ್ತುಗಳ ಹಾಕಿರುತ್ತಾರೆ. ಆದರೆ ಅಲ್ಲಿಯೂ ಚಿಕ್ಕ ಗಡಿಯಾರವನ್ನು ನೋಡಲು ಸಾಧ್ಯವೇ ಇಲ್ಲ.

ಹಾಗಾದರೆ ಮಾಲ್‌ಗಳಲ್ಲಿ ಗಡಿಯಾರಗಳು ಇಲ್ಲದಿರಲು ಕಾರಣವೇನು? ಇದರ ಹಿಂದಿರುವ ವಿಜ್ಞಾನವೇನು? ಗಡಿಯಾರಕ್ಕೂ ನಿಮಗೂ ಅವರ ವ್ಯಾಪಾರಕ್ಕೂ ಏನು ಸಂಬಂಧ ಎಂಬ ಪ್ರಶ್ನೆಗೆ ನಾವಿಂದು ಉತ್ತರ ಹುಡುಕುವ ಪ್ರಯತ್ನ ಮಾಡಿದ್ದೇವೆ ನೋಡಿ.
ನೀವು ಒಂದು ಮಾಲ್ ಪ್ರವೇಶಿಸಿದರೆ ನೀವು ಎಷ್ಟು ಹೊತ್ತು ಮಾಲ್‌ನಲ್ಲಿ ಕಳೆಯುತ್ತೀರಾ ಎಂಬುದು ಸಹ ಅಲ್ಲಿರುವ ಕಂಪನಿಗಳ ಆಧಾಯಕ್ಕೆ ಕಾರಣವಾಗಿರುತ್ತದೆ. ಯಾರು ಹೆಚ್ಚು ಹೊತ್ತು ಮಾಲ್‌ನಲ್ಲಿ ಕಳೆಯುತ್ತಾರೋ ಅವರು ಒಂದಲ್ಲಾ ಒಂದು ವಸ್ತು ಖರೀದಿಸಿಯೇ ಹೊರಬರುತ್ತಾರೆ. ಇದೆಲ್ಲವು ಮನಸ್ಸಿಗೆ ಸಂಬಂಧಿಸಿದ ವಿಷಯಗಳಾಗಿವೆ.
ನೀವು ಎಷ್ಟು ಹೊತ್ತು ಮಾಲ್‌ನಲ್ಲಿರುತ್ತೀರೋ ಅಷ್ಟು ಹೊತ್ತು ನಿಮ್ಮ ಕಣ್ಣು ಒಂದಲ್ಲಾ ಒಂದು ವಸ್ತುವಿನ ಮೇಲೆ ಬೀಳುತ್ತದೆ. ಅದರ ಅವಶ್ಯಕತೆ ಇಲ್ಲದಿದ್ದರೂ ನೀವು ಅದರ ದರವನ್ನು ಪರಿಶೀಲನೆ ಮಾಡಿಯೇ ಮಾಡುತ್ತೀರಾ. ಅದರಲ್ಲೂ ಅಲಂಕಾರಿಕಾ ವಸ್ತುಗಳು, ಐಷಾರಾಮಿ ವಸ್ತುಗಳ ದರಗಳ ಪರಿಶೀಲನೆ ಮಾಡುವುದು ಅಭ್ಯಾಸ ಆಗಿಬಿಟ್ಟಿದೆ. ಹೀಗಾಗಿ ಹೆಚ್ಚು ಹೊತ್ತು ನೀವು ಮಾಲ್‌ಗಳಲ್ಲಿ ಕಳೆಯುವಂತೆ ಮಾಡಲಾಗುತ್ತದೆ.
ಗಡಿಯಾರ ಏಕಿಲ್ಲ.?
ಇನ್ನು ನೀವು ಮಾಲ್‌ನಲ್ಲಿ ಗಡಿಯಾರ ನೋಡಿದರೆ ನಿಮ್ಮ ಗಮನ ಬೇರೆಡೆ ಹೋಗುತ್ತದೆ. ಒಂದು ವೇಳೆ ನೀವು ದೊಡ್ಡ ಗಡಿಯಾರದಲ್ಲಿ ಸಮಯ ನೋಡಿದರೆ ನಿಮಗೆ ಮನೆಯಲ್ಲಿರುವ ಕೆಲಸದ ಬಗ್ಗೆ ನೆನಪಾಗುತ್ತದೆ ಎಂಬುದು ಮನಃಶಾಸ್ತ್ರದ ಆಳವಾದ ವಾದವಾಗಿದೆ. ಹೀಗಾಗಿ ನೀವು ಮಾಲ್‌ಗಳಲ್ಲಿ ಗಡಿಯಾರ ನೋಡಲು ಸಾಧ್ಯವೇ ಇಲ್ಲ. ಅಲ್ಲಿ ಯಾವ ಗೋಡೆ ಮೇಲೆಯೂ ಸಣ್ಣ ಗಡಿಯಾರವೂ ನಿಮ್ಮ ಕಣ್ಣಿಗೆ ಬೀಳುವುದಿಲ್ಲ. ಒಂದು ವೇಳೆ ಗಡಿಯಾರದ ಅಂಗಡಿ ಇದ್ದರೂ ಅಲ್ಲಿರುವ ಗಡಿಯಾರಗಳು ಒಂದೇ ಸಮಯ ತೋರಿಸುತ್ತಿರುವುದಿಲ್ಲ. ಎಲ್ಲವೂ ಬೇರೆ ಬೇರೆ ಸಮಯ ತೋರಿಸುತ್ತವೆ. ಮುಂದೆ ನೀವು ಮಾಲ್‌ಗೆ ಹೋದರೆ ಈ ಅಂಶಗಳು ಖುದ್ದು ನೀವೆ ಪರಿಶೀಲಿಸಿ ನೊಡಿ.
ಯುನೈಟೆಡ್ ಕಿಂಗ್‌ಡಮ್‌ನ ಬ್ಯಾಂಗೋರ್ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ನಾವು ಶಾಪಿಂಗ್ ಮಾಡುವಾಗ, ಪ್ರಶ್ನಾರ್ಹ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನಮ್ಮನ್ನು ತಡೆಯುವ ಶಕ್ತಿಯನ್ನು ನಮ್ಮ ಮಿದುಳು ಕಳೆದುಕೊಳ್ಳುವ ಮೊದಲು ನಮಗೆ ಸುಮಾರು 20 ನಿಮಿಷಗಳಿರುತ್ತವೆ. ಅಂದರೆ ನಾವು ಏನನ್ನಾದರೂ ಹಣಕಾಸಿನ ಲೆಕ್ಕಾಚಾರದಲ್ಲಿ ಖರೀದಿಸುವ ನಿರ್ಧಾರ ಮಾಡಿದ್ದರೆ ಅದು ಕೇವಲ 20 ನಿಮಿಷದ ಒಳಗೆ ಖರೀದಿ ಮುಗಿಯಬೇಕಾಗುತ್ತದೆ. ಒಂದು ವೇಳೆ ನೀವು 20 ನಿಮಿಷಕ್ಕೂ ಹೆಚ್ಚು ಸಮಯ ಅದೇ ನಿರ್ಧಾರದ ಕುರಿತು ಯೋಚಿಸಿದರೆ ನಿಮ್ಮ ಹಣಕಾಸಿನ ನಿರ್ಧಾರಕ್ಕೆ ಅಲ್ಲಿ ಪೆಟ್ಟುಬಿದ್ದಂತಾಗುತ್ತದೆ. ನಂತರ ನಿಮ್ಮ ಮೆದುಳು ಹಣಕಾಸಿನ ಬಗೆಗಿನ ನಿಯಂತ್ರಣ ಕಳೆದುಕೊಳ್ಳುತ್ತದೆ.
ಇದೇ ನಿಯಮವನ್ನೇ ಮಾಲ್‌ಗಳು ಸಹ ಅನುಸರಿಸುತ್ತಿವೆ. ನೀವು ಯಾವಾಗ ಮಾಲ್‌ಗೆ ಬಂದಿದ್ದೀರಿ? ಈಗ ಎಷ್ಟು ಸಮಯ ಆಗಿದೆ? ಎಷ್ಟು ಸಮಯ ಮಾಲ್‌ನಲ್ಲಿ ಕಳೆದಿದ್ದೀರಿ ಎಂಬುದನ್ನು ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿಡಲು ಮುಂದಾಗುತ್ತವೆ. ಹೀಗಾಗಿ ಎಲ್ಲಾ ಮಾಲ್‌ಗಳಲ್ಲೂ ಕಿವಿಗೆ ಇಂಪೆನಿಸುವ ಸಂಗೀತ, ಮೈಗೆ ಹಿತವಾಗುವ ತಣ್ಣನೆಯ ಗಾಳಿ, ಐಸ್ ಕೂಲ್ಡ್ ಪರ್ಫ್ಯೂಮ್, ವಿಶ್ರಾಂತಿ ಸ್ಥಳ, ಗೇಮ್, ಹೀಗೆ ಹತ್ತಾರು ರೀತಿಯ ಅಂಶಗಳಿಂದ ನಿಮ್ಮನ್ನು ಕಟ್ಟಿಹಾಕುತ್ತವೆ. ಇದು ಅಕ್ಷರಶಃ ನಿಮ್ಮ ಮನಸ್ಸಿಗೆ ಸಂಬಂಧಿಸಿದ ಪ್ರಕ್ರಿಯೆಯಾಗಿರುತ್ತದೆ.



Click it and Unblock the Notifications
