Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಾವಿಗಳು ರೌಂಡ್ ಆಗಿರುವುದು ಏಕೆ ಗೊತ್ತಾ? ಇದರ ಹಿಂದಿದೆ ದೊಡ್ಡ ರಹಸ್ಯ
ಬಾವಿಗಳು ಯಾವಾಗಲೂ ವೃತ್ತಾಕಾರವಾಗಿರುವುದು ಏಕೆ ಗೊತ್ತಾ? ಇದರ ಹಿಂದಿದೆ ಒಂದು ದೊಡ್ಡ ರಹಸ್ಯ. ಹೌದು, ಗ್ರಾಮಗಳು ಅಥವಾ ಹಳ್ಳಿಗಳು ಎಂದರೆ ನಮ್ಮೆಲ್ಲರ ಮನಸ್ಸಿನಲ್ಲಿ ಮೊದಲು ಮೂಡುವುದು ಅಲ್ಲಿನ ಹಸಿರು ವಾತಾವರಣ ಮತ್ತು ವೃತ್ತಾಕಾರದ ಬಾವಿಗಳು (Wells). ಇಂದಿಗೂ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರು ಮತ್ತು ಕೃಷಿಗಾಗಿ ಬಾವಿಯನ್ನೇ ಅವಲಂಬಿಸಿದ್ದಾರೆ. ಬಾವಿಗಳು ನೀರಿನ ಪ್ರಮುಖ ಮೂಲವಾಗಿದೆ. ಮಾನವ ನಾಗರಿಕತೆಯ ಆರಂಭದಿಂದಲೂ ಬಾವಿಗಳು ವಿಶ್ವಾಸಾರ್ಹ ನೀರಿನ ಮೂಲವಾಗಿವೆ. ಆದರೆ, ನೀವು ಎಂದಾದರೂ ಯೋಚಿಸಿದ್ದೀರಾ? ಈ ವಿಷಯ ನೀವು ತಿಳಿದುಕೊಳ್ಳಲೇಬೇಕು.
ಬಾವಿಗಳು ಚೌಕಾಕಾರ, ತ್ರಿಕೋನ ಇತ್ಯಾದಿ ಆಕಾರಗಳಲ್ಲಿರದೆ ಕೇವಲ ವೃತ್ತಾಕಾರದಲ್ಲಿ ಮಾತ್ರ ಯಾಕೆ ಇರುತ್ತವೆ (Why Are Wells Round in Shape) ಅಂತ ತಿಳಿದಿದೆಯೇ? ಬಹಳಷ್ಟು ಜನರು ಬಾವಿಯ ಆಕಾರವನ್ನು ಬದಲಾಯಿಸಲು ಬಯಸದ ಕಾರಣ ಇದು ಸಾಂಪ್ರದಾಯಿಕವಾಗಿದೆ ಎಂದು ನಂಬುತ್ತಾರೆ. ಆದರೆ, ಇದರ ಹಿಂದೆ ಕೇವಲ ಸಂಪ್ರದಾಯ ಮಾತ್ರವಲ್ಲ, ವೈಜ್ಞಾನಿಕ ಮತ್ತು ಪ್ರಾಯೋಗಿಕ ಕಾರಣಗಳೂ ಇವೆ. ಬಾವಿಗಳನ್ನು ವೃತ್ತಾಕಾರದಲ್ಲಿ (square shpae) ನಿರ್ಮಿಸುವುದರಿಂದ ಅವು ಹೆಚ್ಚು ಕಾಲ ಬಾಳಿಕೆ ಬರುತ್ತವೆ.

ಬಾವಿಗಳು ಏಕೆ ವೃತ್ತಾಕಾರವಾಗಿರುತ್ತವೆ?
ಸಾವಿರಾರು ವರ್ಷಗಳ ಹಿಂದೆ ಬಾವಿಗಳನ್ನು ನಿರ್ಮಿಸಿದಾಗಿನಿಂದಲೂ ಅವು ವೃತ್ತಾಕಾರದಲ್ಲಿವೆ. ಇದಕ್ಕೆ ಮುಖ್ಯ ಕಾರಣ, ಈ ವಿನ್ಯಾಸವು ಎಲ್ಲಾ ದಿಕ್ಕುಗಳಲ್ಲಿಯೂ ಒತ್ತಡವನ್ನು ಸಮಾನವಾಗಿ ಹಂಚುತ್ತದೆ. ಬಾವಿಯನ್ನು ಅಗೆದಾಗ, ಸುತ್ತಮುತ್ತಲಿನ ಮಣ್ಣು ಮಧ್ಯಭಾಗದ ಮೇಲೆ ಒತ್ತಡವನ್ನು ಹೇರುತ್ತದೆ. ಒಂದು ವೇಳೆ ಬಾವಿಯ ರಚನೆ ವೃತ್ತಾಕಾರದಲ್ಲಿ ಇಲ್ಲದಿದ್ದರೆ, ಈ ಒತ್ತಡವು ಸಮಾನವಾಗಿ ಹಂಚಿಕೆಯಾಗುವುದಿಲ್ಲ. ಮತ್ತು ಬಾವಿಯ ಗೋಡೆಗಳನ್ನು ದುರ್ಬಲಗೊಳಿಸುತ್ತದೆ.
ಅದೇ ರೀತಿ, ಬಾವಿಯಲ್ಲಿ ನೀರು ತುಂಬಿದಾಗ ಅದರ ಆಂತರಿಕ ಗೋಡೆಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಒಂದು ವೃತ್ತಾಕಾರದ ವಿನ್ಯಾಸವು ಈ ಒತ್ತಡವನ್ನು 360 ಡಿಗ್ರಿಗಳಲ್ಲಿ ಸಮಾನವಾಗಿ ವಿತರಿಸುವುದರಿಂದ, ಬಾವಿಯ ಗೋಡೆಗಳು ಬಲಗೊಳ್ಳುತ್ತವೆ. ಮತ್ತು ಬಾವಿಯ ಬಾಳಿಕೆ ಹೆಚ್ಚುತ್ತದೆ. ಇದಕ್ಕೆ ವಿರುದ್ಧವಾಗಿ, ಚೌಕಾಕಾರ ಅಥವಾ ತ್ರಿಕೋನಾಕಾರದ ಬಾವಿಯ ಮೂಲೆಗಳಲ್ಲಿ ಅಸಮವಾದ ಒತ್ತಡವು ಬಿರುಕುಗಳನ್ನು ಉಂಟುಮಾಡುತ್ತದೆ. ಇದು ಬಾವಿಯನ್ನು ಬೇಗನೆ ದುರ್ಬಲಗೊಳಿಸುತ್ತದೆ.
ವೃತ್ತಾಕಾರದ ಬಾವಿಗಳು ಏಕೆ ಉತ್ತಮ?
ಹಿಂದಿನ ಕಾಲದಲ್ಲಿ ಮಾತ್ರವಲ್ಲ, ಇಂದಿಗೂ ಬಾವಿಗಳನ್ನು ಅಗೆಯಲು ಬಳಸುವ ಯಂತ್ರಗಳು ಕೂಡ ಯಾವಾಗಲೂ ವೃತ್ತಾಕಾರದ ರಂಧ್ರವನ್ನೇ ಕೊರೆಯುತ್ತವೆ. ಏಕೆಂದರೆ, ಈ ಆಕಾರವು ತೀವ್ರವಾದ ಒತ್ತಡವನ್ನು ತಡೆದುಕೊಳ್ಳಲು ಗೋಡೆಗಳಿಗೆ ಅವಕಾಶ ನೀಡುತ್ತದೆ. ಮತ್ತು ಒತ್ತಡವನ್ನು ಸಮಾನವಾಗಿ ಹಂಚುತ್ತದೆ. ಇದರಿಂದಾಗಿ ಬಾವಿಯು ಬಲವಾಗಿಯೂ, ಹೆಚ್ಚು ಕಾಲ ಬಾಳಿಕೆ ಬರುವಂತೆಯೂ ಇರುತ್ತದೆ. ಹಾಗಾಗಿ, ವೃತ್ತಾಕಾರದ ಬಾವಿಗಳು ವೈಜ್ಞಾನಿಕವಾಗಿ ಮತ್ತು ಪ್ರಾಯೋಗಿಕವಾಗಿ ಹೆಚ್ಚು ಬಾಳಿಕೆ ಬರುವ ಮತ್ತು ಸುರಕ್ಷಿತ ಆಯ್ಕೆಯಾಗಿವೆ. ಏಕೆಂದರೆ, ಅವು ನೀರು ಮತ್ತು ಮಣ್ಣಿನಿಂದ ಉಂಟಾಗುವ ಒತ್ತಡವನ್ನು ತಡೆದುಕೊಳ್ಳುತ್ತವೆ. ಮತ್ತು ಅವುಗಳಿಗೆ ಕಡಿಮೆ ನಿರ್ವಹಣೆ ಸಾಕಾಗುತ್ತದೆ.
ಹೂಳು ಸಂಗ್ರಹ ತಡೆಯುವುದು
ಮಳೆಗಾಲದಲ್ಲಿ ಅಥವಾ ಬೇಸಿಗೆಯಲ್ಲಿ ನೀರಿನ ಮಟ್ಟ ಏರಿಳಿಕೆಯಾಗುತ್ತದೆ. ವೃತ್ತಾಕಾರದ ಬಾವಿಯಲ್ಲಿ ಪಾಚಿ ಅಥವಾ ಹೂಳು (ಕೊಳೆ, ಕಸ, ಶೈವಲ) ಸಂಗ್ರಹವಾಗುವ ಮೂಲೆಗಳಿರುವುದಿಲ್ಲ. ಚೌಕಾಕಾರದ ಬಾವಿಯಲ್ಲಿ ಬಕೆಟ್ ಅಥವಾ ಪಂಪ್‌ಗಳು ಮೂಲೆಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ, ವೃತ್ತಾಕಾರದ ಬಾವಿಯಲ್ಲಿ ಈ ಸಮಸ್ಯೆ ಇರುವುದಿಲ್ಲ. ಇದರಿಂದಾಗಿ, ಸಾವಿರಾರು ವರ್ಷಗಳಿಂದ ಬಾವಿಗಳು ವೃತ್ತಾಕಾರದಲ್ಲಿರುವುದಕ್ಕೆ ಕೇವಲ ಸಂಪ್ರದಾಯವಲ್ಲ. ಬದಲಾಗಿ, ಪ್ರಮುಖ ವೈಜ್ಞಾನಿಕ ಮತ್ತು ಪ್ರಾಯೋಗಿಕ ಕಾರಣಗಳಿವೆ. ಬಾವಿಗಳನ್ನು ವೃತ್ತಾಕಾರದಲ್ಲಿ ಮಾಡುವುದರಿಂದ ಅವು ಹೆಚ್ಚು ಸುರಕ್ಷಿತ, ಬಲವಾದ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತವೆ.



Click it and Unblock the Notifications


