Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರತಿ ವರ್ಷ ಹುಟ್ಟೂರಿನ ಪ್ರತಿಯೊಬ್ಬರಿಗೆ ₹1 ಲಕ್ಷ ನೀಡುವ ಉದ್ಯಮಿ.! ಏಕೆ ಗೊತ್ತಾ?
ಕಷ್ಟಪಟ್ಟು ಓದಿ ಮೇಲೆ ಬಂದು ಉದ್ಯಮ ಕಟ್ಟಿ ಶ್ರೀಮಂತರಾದವರ ಹಲವು ಕಥೆಗಳನ್ನು ನೀವು ಕೇಳಿರುತ್ತೀರಿ. ಅವರ ಬಾಲ್ಯ ಹಾಗೂ ಕಾಲೇಜು ದಿನಗಳಲ್ಲಿ ಅನುಭವಿಸಿದ್ದ ಕಷ್ಟಗಳನ್ನು ಕೂಡ ಕೇಳಿರುತ್ತೀರಿ. ಕಷ್ಟದಿಂದ ಬಂದು ಉದ್ಯಮಿಗಳಾಗಿ ಬದಲಾಗಿ ಸಾವಿರಾರು ಕೋಟಿ ರೂಪಾಯಿ ದುಡಿದ, ದುಡಿಯುತ್ತಿರುವವರು ಕೂಡ ನಮ್ಮ ನಡುವೆ ಇದ್ದಾರೆ.
ಹಾಗೆ ಇಲ್ಲೊಬ್ಬ ಕಾಲೇಜು ದಿನದಲ್ಲಿ ಫೀಸ್‌ಗಾಗಿ ಅಲೆದಾಡಿ, ಈ ದೊಡ್ಡ ಉದ್ಯಮಿಯಾಗಿದ್ದಾನೆ. ಹಾಗೆ ತಾನು ಬೆಳೆದು ಬಂದ ಹಾದಿ ಮರೆಯದೆ ಈಗಲೂ ತನ್ನ ಓದಿಗೆ ನೆರವಾಗಿದ್ದವರಿಗೆ ಸಹಾಯ ಮಾಡುತ್ತಿದ್ದಾನೆ. ಚೀನಾದ ಬಿಲಿಯನೇರ್ ರಿಚರ್ಡ್ ಲಿಯು ಕಿಯಾಂಗ್‌ಡಾಂಗ್ ಎಂಬಾತನ ಕಥೆ ಇದು. ಆತ ಪ್ರತಿ ವರ್ಷ ತನ್ನ ಹುಟ್ಟೂರಿಗೆ ಸಹಾಯ ಮಾಡುತ್ತಾನೆ.

ಚೀನಾದ ಚಿಕ್ಕ ಗ್ರಾಮದಲ್ಲಿ ಬೆಳೆದ ಆತ ಕಾಲೇಜು ಫೀಸ್ ಕಟ್ಟಲಾಗದೆ ಪರದಾಡಿದ್ದ ಆದ್ರೆ ಗ್ರಾಮದವರು ಆತನ ಸಹಾಯಕ್ಕೆ ಬಂದಿದ್ದರು. ಆತನ ಕಾಲೇಜು ಶುಲ್ಕ ಒಟ್ಟು ಮಾಡಿ ನೀಡಿದ್ದರು. ಹೀಗಾಗಿ ಈಗ ದೊಡ್ಡ ಉದ್ಯಮಿಯಾದ ಮೇಲೂ ಈ ಸಹಾಯ ನೆನಪಿಟ್ಟು ಪ್ರತಿ ವರ್ಷ ತನ್ನ ಹುಟ್ಟೂರಿನ ಪ್ರತಿ ಕುಟುಂಬಕ್ಕೂ 1 ಲಕ್ಷ ರೂಪಾಯಿ ನೀಡುತ್ತಾನೆ.
ಹಾಗೆ ಈ ಹಳ್ಳಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ 1,400 ಡಾಲರ್ ನಗದು ರೂಪದಲ್ಲಿ ನೀಡುತ್ತಾನೆ. ಹಾಗೆ ಪ್ರತಿ ಕುಟುಂಬಕ್ಕೆ ಸಾವಿರಾರು ಯುವಾನ್ ಮೌಲ್ಯದ ಆಹಾರ ಪದಾರ್ಥ, ಬಟ್ಟೆ, ಗೃಹಪಯೋಗಿ ವಸ್ತುಗಳು ಸೇರಿದಂತೆ ಉಡುಗೊರೆಗಳನ್ನು ನೀಡುತ್ತಾ ಬಂದಿದ್ದಾನೆ. ಇದು ಆರಂಭಗೊಂಡಿದ್ದು 90ರ ದಶಕದಲ್ಲಿ.
ಚೀನಾದ ಬೀಜಿಂಗ್‌ನಲ್ಲಿರುವ ವಿಶ್ವವಿದ್ಯಾಲಯ ವಿಶ್ವದಲ್ಲೇ ಶ್ರೇಷ್ಠವಾದ ಹಾಗೆ ಎಲ್ಲರು ಇಲ್ಲಿ ಓದಬೇಕು ಎಂಬ ಕನಸು ಕಾಣುವಂತಹ ವಿವಿ ಆಗಿದೆ. ವಿಶ್ವದ ಮೂಲೆ ಮೂಲೆಯಿಂದ ಈ ವಿಶ್ವವಿದ್ಯಾಲಯಕ್ಕೆ ಆಗಮಿಸುತ್ತಾರೆ. ಅದೇ ರೀತಿ 1990ರಲ್ಲಿ ಲಿಯು ಕೂಡ ಹೊರಟ್ಟಿದ್ದ ಆದ್ರೆ ವಿವಿಯ ಶುಲ್ಕ ಅತ್ಯಧಿಕವಾಗಿತ್ತು. ಈ ಸಮಯದಲ್ಲಿ ಊರಿನವರು ಸೇರಿ ಆತನಿಗೆ 500 ಯುವಾನ್ ಹಣ ಹಾಗೆ 76 ಮೊಟ್ಟೆಗಳನ್ನು ನೀಡಿ ಕಳುಹಿಸಿದ್ದರಂತೆ.
ಯಾರು ಈ ಬಿಲಿಯನೇರ್ ರಿಚರ್ಡ್ ಲಿಯು ಕಿಯಾಂಗ್‌ಡಾಂಗ್? ಆತ ಕಟ್ಟಿದ ಉದ್ಯಮವೇನು?
ಲಿಯು ಬೀಜಿಂಗ್ ವಿಶ್ವವಿದ್ಯಾಲಯದಲ್ಲಿ ಓದು ಮುಗಿಸಿ ತನ್ನದೇ ಸ್ವಂತ ಉದ್ಯಮ ಕಟ್ಟುವ ಕನಸು ಕಂಡಿದ್ದ. ಈ ವೇಳೆ ಆತನ ಕಣ್ಣಿಗೆ ಬಿದ್ದಿದ್ದೇ ಇ-ಕಾಮರ್ಸ್. ಚೀನಾದಲ್ಲಿ ಇ-ಕಾಮರ್ಸ್ ಅಂದ್ರೆ ಅಲಿಬಾಬಾ ಎಂಬ ಮಾತಿದೆ. ಇಂತಹ ದೊಡ್ಡ ಕ್ಷೇತ್ರದಲ್ಲಿ ಜೆಡಿ.ಕಾಮ್ ಎಂಬ ಇ-ಕಾಮರ್ಸ್ ಸಂಸ್ಥೆ ಹುಟ್ಟುಹಾಕಿದ. ಇದು ನೋಡ ನೋಡುತ್ತಲೇ ದೊಡ್ಡ ಉದ್ಯಮವಾಗಿ ಬೆಳೆಯಿತು. ವರ್ಷದಿಂದ ವರ್ಷಕ್ಕೆ ಲಾಭವೂ ಕಂಡಿತು. ಈಗ ಈ ಜೆಡಿ.ಕಾಮ್ 49.5 ಬಿಲಿಯನ್ ಯುವಾನ್ ಮೌಲ್ಯ ಹೊಂದಿದೆ. ಅಂದರೆ ಸುಮಾರು 6.8 ಬಿಲಿಯನ್ ಡಾಲರ್ ಉದ್ಯಮವಾಗಿದೆ.
ಅವರು 2016ರಿಂದಲೂ ಪ್ರತಿ ವರ್ಷ ತಮ್ಮ ಹುಟ್ಟೂರಿಗೆ ತೆರಳುವ ಅಭ್ಯಾಸ ಇಟ್ಟುಕೊಂಡರು. ಮೊದಲ ಬಾರಿಗೆ 2016ರಲ್ಲಿ ತನ್ನ ಪತ್ನಿಯೊಂದಿಗೆ ಹುಟ್ಟೂರಿಗೆ ಅವರು ಬಂದರು. ಇದಾದ ಬಳಿಕ ಪ್ರತಿ ವರ್ಷ ಬರುತ್ತಾರೆ. ಅವರು ಬರುತ್ತಿರುವ ಸುದ್ದಿ ತಿಳಿದಾಗ ಇಡೀ ಗ್ರಾಮ ಹಬ್ಬದಂತೆ ಆಚರಿಸುತ್ತೆ, ಅವರನ್ನು ಭರ್ಜರಿಯಾಗಿ ಸ್ವಾಗತಿಸಿಕೊಳ್ಳುತ್ತಾರೆ, ಅವರ ಜೊತೆಗೆ ಹಲವು ವಸ್ತುಗಳ ತುಂಬಿರುವ ಟ್ರಕ್‌ಗಳು ಕೂಡ ಗ್ರಾಮದೊಳಗೆ ಬರುತ್ತವೆ.
ಸದ್ಯ ಈಗ ಅವರು 50 ವರ್ಷದವರಾಗಿದ್ದು, ತಮ್ಮ ಊರಿನಲ್ಲಿದ್ದ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿದ್ದಾರೆ, ಹಳ್ಳಿಗೆ ಬೇಕಿದ್ದ ಎಲ್ಲಾ ಸೌಲಭ್ಯ ನೀಡಿದ್ದಾರೆ. ಪ್ರತಿ ಕುಟುಂಬ ಈಗ ಅವರನ್ನು ನೆನೆಯುತ್ತಿದೆ. ಹಾಗೆ ಅವರು ಕೂಡ ಕಷ್ಟದಲ್ಲಿ ಸಹಾಯ ಮಾಡಿದ್ದ ಗ್ರಾಮಸ್ಥರ ಮರೆಯದೆ ಅವರ ಜೀವನವನ್ನೂ ಹಸನಾಗಿದ್ದಾರೆ.



Click it and Unblock the Notifications
