ಥಿಯೇಟರ್‌ನಲ್ಲಿ ಕೆಂಪು ಬಣ್ಣದ ಸೀಟ್‌ಗಳೇ ಏಕಿರುತ್ತವೆ.?! ಈ ತಂತ್ರ ತಿಳಿದರೆ ಅಚ್ಚರಿಯಾಗುತ್ತೆ..!

ನೀವು ಸಿನಿಮಾ ಥಿಯೇಟರ್‌ಗೆ ಯಾವಾಗೆಲ್ಲ ಹೋಗುತ್ತೀರಿ? ನೀವು ಬಿಡುವಿದ್ದಾಗ, ಸ್ಟಾರ್ ನಟರ ಸಿನಿಮಾ ಬಿಡುಗಡೆಯಾದಾಗ, ವೀಕೆಂಡ್‌ನಲ್ಲಿ, ಸ್ನೇಹಿತರ ಜೊತೆ, ಕುಟುಂಬದ ಜೊತೆ ಅಥವಾ ಕಾಲೇಜಿಗೆ ಬಂಕ್‌ ಮಾಡಿಯೂ ಸಿನಿಮಾಗೆ ಹೋಗಿರುತ್ತೀರಿ. ಈಗ ಸಿನಿಮಾ ಬರಿ ಮನರಂಜನೆಯಾಗಿ ಉಳಿದಿಲ್ಲ ಬದಲಾಗಿ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ.

ಸಿಂಗಲ್ ಸ್ಟ್ರೀನ್ ಚಿತ್ರಮಂದಿರದಿಂದ ಈಗ ಮಲ್ಟಿಫ್ಲೆಕ್ಸ್ ಹಾಗೂ ಮಾಲ್‌ಗಳ ದೊಡ್ಡ ದೊಡ್ಡ 3ಡಿ ಪರದೆ, 4ಡಿಎಕ್ಸ್ ನಂತಹ ಆಧುನಿಕ ಟೆಕ್ನಾಲಜಿ ಸಹ ಸಿನಿಮಾವನ್ನ ಆವರಿಸಿದೆ. ಸಿನಿಮಾ ಅಭಿಮಾನಿಗಳು ಸಹ ಈ ಹೊಸ ಹೊಸ ಆವಿಷ್ಕಾರಗಳ ಒಪ್ಪಿಕೊಂಡು ಮನರಂಜನೆಯ ಉತ್ತುಂಗ ಅನುಭವಿಸುತ್ತಿದ್ದಾರೆ.

Why There Are Only Red Colored Seats In The Movie Theater

ಆದ್ರೆ ನಾವು ಹೆಚ್ಚಾಗಿ ಯಾವ ಸಿನಿಮಾ, ಯಾವ ಮಾಲ್‌ನಲ್ಲಿ ಹಾಕಲಾಗಿದೆ, ಎಷ್ಟು ಹಣ ನೀಡಬೇಕು ನಾವು ಇರುವ ಸ್ಥಳದಿಂದ ಎಷ್ಟು ದೂರದಲ್ಲಿ ಈ ಚಿತ್ರಮಂದಿರ ಇದೆ ಎಂಬುದನಷ್ಟೇ ಯೋಚಿಸುತ್ತೇವೆ. ಬೇರೆ ಯಾವ ವಿಚಾರಗಳಿಗೂ ಹೆಚ್ಚು ಒತ್ತು ನೀಡುವುದಿಲ್ಲ. ಇನ್ನು ಸಿನಿಮಾ ಮಂದಿರಕ್ಕೆ ಬಂದಾಗ ಅಲ್ಲಿ ಯಾವ ಸೀಟ್‌ ನಂಬರ್‌ನಲ್ಲಿ ಕುಳಿತುಕೊಳ್ಳಬೇಕು ಎಂಬುದನ್ನು ಹುಡುಕಾಡುತ್ತೇವೆ.

ಆದ್ರೆ ನೀವು ಸಿನಿಮಾ ಮಂದಿರಕ್ಕೆ ಎಂಟ್ರಿ ಕೊಟ್ಟಾಗ ಎಲ್ಲಾ ಚಿತ್ರಮಂದಿರಗಳ ಸೀಟ್‌ಗಳು ಕೆಂಪು ಬಣ್ಣದಲ್ಲಿರುವುದನ್ನು ಗಮನಿಸಿದ್ದೀರಾ? ಹೌದು ಇಷ್ಟು ದಿನ ಗಮನಿಸಿಲ್ಲ ಎಂದರೆ ಇನ್ನು ಮುಂದೆ ಗಮನಿಸಿ. ನೀವು ಸಿನಿಮಾ ನೋಡಲು ಹೋಗುವ ಬಹುತೇಕ ಎಲ್ಲಾ ಚಿತ್ರಮಂದಿರದ ಸೀಟ್‌ಗಳು ಕೆಂಪು ಬಣ್ಣದಲ್ಲಿಯೇ ಇರಲಿದೆ.

ಆದ್ರೆ ಎಲ್ಲಿಯೋ ಅಲ್ಲೊಂದು ಇಲ್ಲೊಂದು ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಈ ಸೀಟ್‌ಗಳ ಬಣ್ಣ ಕಪ್ಪು ಇಲ್ಲವೆ ಕಂದು ಬಣ್ಣದಲ್ಲಿರಬಹುದು ಆದರೆ ಬಹುತೇಕ ಸಿನಿಮಾ ಹಾಲ್‌ಗಳ ಸೀಟ್‌ಗಳು ಕೆಂಪು ಬಣ್ಣದಲ್ಲಿವೆ. ಹಾಗಾದ್ರೆ ಚಿತ್ರಮಂದಿರ ಈ ಸೀಟ್‌ಗಳು ಕೆಂಪು ಬಣ್ಣದಲ್ಲಿರಲು ಕಾರಣವೇನು? ಇದರ ಹಿಂದಿರುವ ತಂತ್ರವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಚಿತ್ರಮಂದಿರಗಳ ಕೆಂಪು ಬಣ್ಣದ ಆದ್ಯತೆಗೆ ಮೊದಲ ಕಾರಣವೆಂದರೆ ಒಪೆರಾ ಹೌಸ್‌ಗಳ ಪ್ರಭಾವ. ಇಟಲಿಯಲ್ಲಿ, ಒಪೆರಾ ಕಲೆಯ ಕೇಂದ್ರ. ವೆನಿಸ್ನಲ್ಲಿ ನಿರ್ಮಿಸಲಾದ ಮೊದಲ ಒಪೆರಾ ಕಟ್ಟಡದಲ್ಲಿ ಕೆಂಪು ಮತ್ತು ಚಿನ್ನದ ಬಣ್ಣಗಳನ್ನು ಬಳಸಲಾಗಿತ್ತು. ಈ ಬಣ್ಣಗಳು ರಾಜಮನೆತನವನ್ನು ಪ್ರತಿನಿಧಿಸುತ್ತವೆ. ಒಪೆರಾ ಯುರೋಪಿನ ಉಳಿದ ಭಾಗಗಳಿಗೆ ಹರಡಿದಂತೆ, ಇತರ ಒಪೆರಾ ಮನೆಗಳು ಅದೇ ಬಣ್ಣದ ಪ್ಯಾಲೆಟ್ ಅನ್ನು ಅನುಕರಿಸಿದವು. ಕೇವಲ ಫ್ರೆಂಚ್ ರಾಜಮನೆತನವನ್ನು ಪ್ರತಿನಿಧಿಸುವ ನೀಲಿ ಬಣ್ಣವನ್ನು ಕೆಂಪು ಬಣ್ಣಕ್ಕೆ ಆದ್ಯತೆ ನೀಡಿದರು. ಒಪೆರಾ ಹೌಸ್‌ಗಳೆಂದರೆ ಸಿಡ್ನಿಯಲ್ಲಿರುವ ಐಕಾನಿಕ್ ಕಟ್ಟದಂತರುವ ಕಟ್ಟಡಗಳು, ಅದರ ಒಳಗಿರುವ ಚಿತ್ರ ಮಂದಿರಗಳಾಗಿವೆ.

ಕಾಲಾನಂತರದಲ್ಲಿ, ಒಪೆರಾದಲ್ಲಿನ ಆಸಕ್ತಿಯು ಕ್ಷೀಣಿಸಿತು ಮತ್ತು ಅದನ್ನು ರಂಗಭೂಮಿ ಮತ್ತು ಸಿನೆಮಾದಿಂದ ಬದಲಾಯಿಸಲಾಯಿತು. ಥಿಯೇಟರ್ ಮತ್ತು ಸಿನಿಮಾ ಹಾಲ್‌ಗಳು ಸಹ ಒಪೆರಾ ಸಂಪ್ರದಾಯವನ್ನು ಮುಂದುವರೆಸಿದವು ಮತ್ತು ತಮ್ಮ ಸಭಾಂಗಣಗಳಲ್ಲಿ ಕೆಂಪು ಬಣ್ಣವನ್ನು ಬಳಸಿದವು. ಈ ಬಣ್ಣವು ಪ್ರೇಕ್ಷಕರಿಗೆ ಹಳೆಯ ಸೊಬಗನ್ನು ಮರಳಿ ನೀಡುವಂತಿತ್ತು. ಅಲ್ಲದೆ ಕೆಂಪು ಬಣ್ಣ ಹಾಗೂ ಚಿನ್ನದ ಬಣ್ಣದಿಂದ ಇಡೀ ಹಾಲ್ ಶೃಂಗಾರಗೊಂಡದಾಗ ಅದು ಐಷಾರಾಮಿಯ ಭಾವನೆ ಮೂಡುವಂತೆ ಮಾಡಿತು. ಈ ಕಾರಣಕ್ಕೆ ಸಿನಿಮಾ ಹಾಲ್‌ನಲ್ಲಿ ಕೆಂಪು ಬಣ್ಣ ಬಳಕೆಗೆ ಬರಲು ಆರಂಭಿಸಿತು.

ಇದನ್ನು ಹೊರತು ಪಡಿಸಿ ಮತ್ತೊಂದು ಕಾರಣವೇನೆಂದರೆ ಮಾನವನ ಕಣ್ಣು ತನ್ನ ರೆಟಿನಾದಲ್ಲಿ ರಾಡ್‌ಗಳು ಮತ್ತು ಕೋನ್‌ಗಳು ಎಂದು ಕರೆಯಲ್ಪಡುವ ಎರಡು ರೀತಿಯ ಕೋಶಗಳೊಂದಿಗೆ ಬಣ್ಣಗಳನ್ನು ಗ್ರಹಿಸುತ್ತದೆ. ಸಾಮಾನ್ಯ ಬೆಳಕಿನಲ್ಲಿ, ಕೋನ್ ಕೋಶಗಳು ಬಣ್ಣಗಳನ್ನು ಗ್ರಹಿಸುತ್ತವೆ, ಆದರೆ ಕಡಿಮೆ ಬೆಳಕಿನಲ್ಲಿ ರಾಡ್‌ ಕೋಶಗಳು ಬೆಳಕನ್ನು ಗ್ರಹಿಸುತ್ತವೆ. ರಾಡ್ ಕೋಶಗಳು ಹೆಚ್ಚಾಗಿ ಹಸಿರು ಬೆಳಕನ್ನು ಗ್ರಹಿಸುತ್ತವೆ, ಆದರೆ ಕೆಂಪು ಬೆಳಕನ್ನು ಅಲ್ಲ. ಹೀಗಾಗಿ ಸಿನಿಮಾ ಹಾಲ್‌ನಲ್ಲಿ ಕತ್ತಲಿನಲ್ಲಿ ಸೀಟ್‌ಗಳು ಕಾಣಿಸಬಾರದು ಎಂಬ ಕಾರಣಕ್ಕೆ ಕೆಂಪು ಬಣ್ಣದ ಸೀಟ್ ಹಾಕಲಾಗುತ್ತದೆ.

ಹೀಗೆ ಮಾಡುವುದರಿಂದ ನಮ್ಮ ಕಣ್ಣು ಕೆಂಪು ಬಣ್ಣದ ಸೀಟ್ ಅನ್ನು ಹೆಚ್ಚು ಗಮನಿಸುವುದಿಲ್ಲ. ಅದರು ಕತ್ತಲೆಯಲ್ಲಿ ಮರೆಯಾಗಿರುತ್ತದೆ. ಇದರಿಂದ ಸಿನಿಮಾದ ಮೇಲೆ ನಮ್ಮ ಸಂಪೂರ್ಣ ಗಮನವಿರುತ್ತದೆ. ಅದೇ ಕೆಂಪು ಸೀಟಿನ ಬದಲು ಹಸಿರು, ನೀಲಿ, ಬಿಳಿ ಬಣ್ಣದ ಸೀಟ್‌ಗಳನ್ನು ಹಾಕಿದರೆ ಸಿನಿಮಾದ ಆರಂಭದಲ್ಲಿ ಈ ಸೀಟ್‌ಗಳು ನಿಮ್ಮ ದೃಷ್ಟಿಯಿಂದ ಮರೆಯಾಗುತ್ತವೆ. ಆದರೆ ಸಿನಿಮಾ ಹಾಲ್‌ನಲ್ಲಿ ನೀವು ಅರ್ಧ ಗಂಟೆ ಕಳೆದ ಬಳಿಕ ನಿಮ್ಮ ದೃಷ್ಟಿಗೆ ಸ್ಪಷ್ಟವಾಗಿ ಕಾಣಿಸಲು ಆರಂಭಿಸುತ್ತದೆ. ಇದು ಸಿನಿಮಾ ವೀಕ್ಷಿಸುವ ಮಂದಿಗೆ ಕಿರಿಕಿರಿ ಉಂಟು ಮಾಡಬಹುದು.

English summary

Why There Are Only Red Colored Seats In The Movie Theater?

When you enter a cinema hall, have you noticed that all the cinema seats are red? Almost all the seats in the theater where you go to watch a movie will be red in color.
Story first published: Tuesday, June 18, 2024, 13:30 [IST]
X
Desktop Bottom Promotion