Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಯಾರು ಈ ಪ್ರಿಯಾಂಕ? ಈಕೆ ಪತ್ನಿಯಾಗಿ, ತಾಯಿಯಾಗಿ, ಮಗಳಾಗಿ ಸೋತಿದ್ದಾಳೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿರುವುದೇಕೆ?
ನೀವು ಸೋಷಿಯಲ್‌ಮೀಡಿಯಾ ಬಳಕೆದಾರರಾಗಿದ್ದರೆ ಕೆಂಪು ವಸ್ತ್ರ ಧರಿಸಿದ ಮಹಿಳೆಯ ಉಡುಪನ್ನು ಪುರುಷನೊಬ್ಬ ಕತ್ತರಿಸಿ ಡಿಸೈನ್ ಮಾಡುತ್ತಿರುವ ವೀಡಿಯೋ ನೋಡಿರಬಹುದು, ಅದರ ಕೆಳಗಡೆ ಒಂದು ರಾಶಿ ಮೆಸೇಜ್‌ಗಳು.
ನೆಟ್ಟಿಗರು ಆ ಮಹಿಳೆಯನ್ನು ಇವರು ಪತ್ನಿಯಾಗಿ,ತಾಯಿಯಾಗಿ, ಮಗಳಾಗಿ ಸೋತಿದ್ದೀಯ(She failed as a wife, as a mother, as a daughter) ಎಂಬ ಕ್ಯಾಪ್ಷನ್ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ, ಅಷ್ಟಕ್ಕೂ ಈ ಮಹಿಳೆ ಮಾಡಿದ ತಪ್ಪಾದರೂ ಏನು? ಚಿಕ್ಕ ಎಡವಟ್ಟಿಗೆ ಜೀವನದಲ್ಲಿ ದೊಡ್ಡ ದಂಡವನ್ನು ತೆರಬೇಕಾಗುತ್ತದೆ ಎಂಬುವುದಕ್ಕೆ ಇದು ಕೂಡ ಒಂದು ಉದಾಹರಣೆ ಹೇಗ? ಎಂದು ನೋಡೋಣ ಬನ್ನಿ....

'Indiasgotlatent' ಎಂಬ ಟಿವಿ ಶೋದಲ್ಲಿ ಈ ಮಹಿಳೆ ತಮ್ಮ ಫ್ರೆಂಡ್ ಜೊತೆ ಭಾಗವಹಿಸಿದ್ದರು, ಇಂಥ ಶೋಗಳಿಗೆ ಬಂದಾಗ ಫೇಮಸ್ ಆಗುತ್ತೇವೆ ಅಂತ ಬರ್ತಾರೆ, ಕೆಲವರಿಗೆ ಇಂಥ ಶೋಗಳಲ್ಲಿ ಕಾಣಿಸಿದ ಮೇಲೆ ಅವರ ಪ್ರತಿಭೆಗೆ ಮತ್ತಷ್ಟು ಮನ್ನಣೆ ದೊರೆಯುವುದು, ಇದರಿಂದ ಅವರಿಗೆ ಮತ್ತಷ್ಟು ಅವಕಾಶಗಳು ದೊರೆಯವುದು, ಆದರೆ ಕೆಲವರು ಕಾಂಟ್ರೋವರ್ಸಿ ಮಾಡಿಕೊಂಡು ತಮ್ಮ ಬದುಕಿನ ಸಂತೋಷಕ್ಕೆ ತಾವೇ ಕೊಳ್ಳಿ ಇಟ್ಟು ಬಿಡುತ್ತಾರೆ. ಇಲ್ಲಿ ಈ ಮಹಿಳೆ ಎರಡೇ ಗುಂಪಿಗೆ ಸೇರುತ್ತಾರೆ, ತಾವು ಮಾಡಿದ ಎಡವಟ್ಟಿನಿಂದಾಗಿ ಟ್ರೋಲ್‌ಗಳಿಗೆ ಆಹಾರವಾಗಿದ್ದರೆ.
ಏನಿದು ಕಾಂಟ್ರೋವರ್ಸಿ?
ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆ ಹೆಸರು ಪ್ರಿಯಾಂಕ, costume cutter ಫ್ರೆಂಡ್‌ಗೆ ಮಾಡೆಲ್ ಆಗಿ ಬಂದಿದ್ದರು. ರೆಡ್ ಕಲರ್‌ನ ಬಾಡಿಕಾನ್ ಡ್ರೆಸ್ ಧರಿಸಿ ಬಂದಿದ್ದರು, ಅವರ ಜೊತೆ ಬಂದಿದ್ದ ಪುರುಷ ಫ್ರೆಂಡ್ ಪ್ರಿಯಾಂಕ ಧರಿಸಿದ್ದ ಡ್ರೆಸ್ ಕತ್ತರಿಸಿ ಸ್ಟೇಜ್‌ನಲ್ಲಿಯೇ ವಿನ್ಯಾಸಗೊಳಿಸಿದರು, ಅವರ ಎದೆಭಾಗದಲ್ಲಿ, ಸೊಂಟದ ಬಳಿ ಡ್ರೆಸ್ ಕತ್ತರಿಸಿ ಬಾಡಿಕಾನ್ ಡ್ರೆಸ್ ಅನ್ನು ಮತ್ತಷ್ಟು ಹಾಟ್ ಡ್ರೆಸ್ ಆಗಿ ಪರಿವರ್ತಿಸಿದರು, ಆದರೆ ಹೀಗೆ ಡ್ರೆಸ್ ಸ್ಟಿಚ್ ಮಾಡುವಾಗ ಆತ ಡ್ರೆಸ್ ಒಳಗಡೆ ಕೈ ಹಾಕಿ ಆ ಡ್ರೆಸ್‌ನ ಜೋಡಿಸಿ ಡ್ರೆಸ್ ವಿನ್ಯಾಸಗೊಳಿಸಿದ ನಿಜ, ಮೈ ಮುಟ್ಟದೆ ಡ್ರೆಸ್ ವಿನ್ಯಾಸ ಮಾಡಲೂ ಸಾಧ್ಯವಿರಲಿಲ್ಲ, ಆದರೆ ಜಡ್ಜಸ್ ಸೇರಿ ಅಲ್ಲಿದ್ದವರು ಆತ ಆಕೆಯ ಬಾಯ್ ಫ್ರೆಂಡ್ ಇರಬಹುದು ಎಂದು ಭಾವಿಸಿದ್ದರು. ಬಹುಶಃ ಅವರಿಬ್ಬರು ಬಾಯ್‌ಫ್ರೆಂಡ್-ಗರ್ಲ್‌ಫ್ರೆಂಡ್ ಆಗಿದ್ದರೆ ಇಷ್ಟೊಂದು ಕಾಂಟ್ರೋವರ್ಸಿ ಆಗ್ತಾ ಇರಲಿಲ್ಲ, ಆದರೆ ಪ್ರಿಯಾಂಕ ಬಂದಿರುವುದು ಬಾಯ್‌ಫ್ರೆಂಡ್ ಜೊತೆಗಲ್ಲ, ಫ್ರೆಂಡ್ ಜೊತೆ. ಪ್ರಿಯಾಂಕಳಿಗೆ ಮದುವೆಯಾಗಿ 12ವರ್ಷದ ಮಗ ಇದ್ದಾನೆ, ಆಕೆಯ ಪತಿ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರಂತೆ, ಅಲ್ಲದೆ ಆಕೆ ಈ ಶೋಗೆ ಬಂದಿರುವುದು ಪತಿಗೆ ಗೊತ್ತಿಲ್ವಂತೆ!
ಪತಿ, ಮಗನಿರುವ ಒಬ್ಬ ಮಹಿಳೆ ಫ್ರೆಂಡ್ ಜೊತೆ ಈ ರೀತಿಯ ಮಾಡೆಲ್ ಆಗಿ ಕಾಣಿಸಿಕೊಂಡಿದ್ದು ಸರಿಯಲ್ಲ ಎಂದು ಆಕೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಆಕೆ ತನ್ನ ಪತಿಗೆ ಮೋಸ ಮಾಡುತ್ತಿದ್ದಾಳೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಆಕೆಯ ಗಂಡ ದೈರ್ಯವಾಗತಿ ವಿಚ್ಛೇದನ ಪಡೆಯಬಹುದು, ಈ ವೀಡಿಯೋ ಸಾಕ್ಷಿಯಾಗಿ ಕೊಟ್ಟರೆ ಯಾವುದೇ ಜೀವನಾಂಶ ನೀಡಬೇಕಾಗಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಸಭ್ಯತೆಯ ಗೆರೆ ದಾಟಿದ್ದಾರೆ
ನಮ್ಮ ಸಮಾಜದಲ್ಲಿ ಮದುವೆಯಾದ ಮೇಲೆ ಹೇಗಿರಬೇಕು ಎಂಬುವುದಕ್ಕೆ ಕೆಲ ನಿಯಮಗಳಿವೆ, ಪತಿ ಇರುವಾಗ ಪತ್ನಿಯ ದೇಹವನ್ನು ಬೇರೆ ಪುರುಷ ಮುಟ್ಟಿದರೆ ಅದನ್ನು ಯಾವ ಪತಿಯೂ ಸಹಿಸುವುದಿಲ್ಲ, ಆದರೆ ಕಾಸ್ಟ್ಯೂಮ್ ಕಟ್ಟರ್ ಡ್ರೆಸ್ ವಿನ್ಯಾಸಗೊಳಿಸಿದ ಪರಿ ನೋಡಿದ ಜನರು ಆತನ ಪತಿ ಇದನ್ನೆಲ್ಲಾ ಹೇಗೆ ಸಹಿಸುತ್ತಾರೆ ಎಂದು ಕೇಳುತ್ತಿದ್ದಾರೆ, ಆ ಕಾರ್ಯಕ್ರಮದ ತೀರ್ಪುಗಾರರು ಕೂಡ ಈ ಬಗ್ಗೆ ಕೇಳಿದ್ದಾರೆ.
ಈ ವೀಡಿಯೋ ಸಾಮಾಜಿಕ ತಾಣದಲ್ಲಿ ಪೋಸ್ಟ್ ಆಗಿದ್ದೇ ಜನರು ಆಕೆ ಪತ್ನಿಯಾಗಿ, ತಾಯಿಯಾಗಿ, ಮಗಳಾಗಿ ಸೋತಿದ್ದಾಳೆ, ಅವರನ್ನೆಲ್ಲಾ ತಲೆ ತಗ್ಗಿಸುವ ಕಾರ್ಯ ಮಾಡಿದ್ದಾಳೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಈ ಕಾರ್ಯಕ್ರಮ ಆಕೆಯ ಬದುಕಿನಲ್ಲಿ ಆಕೆಯ ಬದುಕಿನಲ್ಲಿ ದೊಡ್ಡ ಡ್ಯಾಮೇಜ್ ಉಂಟು ಮಾಡಲಿದೆ ಎಂಬುವುದು ಮಾತ್ರ ನಿಜ.



Click it and Unblock the Notifications