Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಹಿಂದೂಧರ್ಮದಲ್ಲಿ 9 ಸಂಖ್ಯೆಗೆ ಏಕಿಷ್ಟು ಮಹತ್ವ ಗೊತ್ತಾ?
ಹಿಂದೂ ಧರ್ಮದಲ್ಲಿ ಸಂಖ್ಯೆ 9ನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗುವುದು. ಸಂಖ್ಯೆ 9 ಸೃಷ್ಟಿಕರ್ತ ಬ್ರಹ್ಮನೊಂದಿಗೆ ಸಂಬಂಧ ಹೊಂದಿದೆ. ಅಲ್ಲದೆ ಹಲವಾರು ಪೂಜೆಯಲ್ಲಿ 9 ಸಂಖ್ಯೆಗೆ ತುಂಬಾನೇ ಮಹತ್ವವಿದೆ. ನವರಾತ್ರಿಯಲ್ಲಿ ನವದುರ್ಗೆಯರನ್ನು ಪೂಜಿಸುತ್ತೇವೆ, ಒಂದು ಮಗು ತಾಯಿಯ ಗರ್ಭದಿಂದ 9ನೇ ತಿಂಗಳು ಹೊರಬರುತ್ತದೆ. ಹೀಗೆ 9 ಎಂಬ ಸಂಖ್ಯೆಗೆ ತುಂಬಾನೇ ಮಹತ್ವವಿದೆ.
ಧಾರ್ಮಿಕವಾಗಿ 9 ಸಂಖ್ಯೆಯ ಮಹತ್ವವೇನು ಎಂದು ನೋಡುವುದಾದರೆ
ಬ್ರಹ್ಮ: ಬ್ರಹ್ಮನಿಗೂ ಸಂಖ್ಯೆ 9ಕ್ಕೂ ಸಂಬಂಧವಿದೆ ಎಂದು ಹೇಳಲಾಗುವುದು. ಬ್ರಹ್ಮ ವಿಶ್ವವನ್ನು 9 ದಿನದಲ್ಲಿ ಸೃಷ್ಟಿಸಿದ ಎಂದು ಹೇಳಲಾಗುವುದು.

ನವರಾತ್ರಿ: ನವರಾತ್ರಿಯನ್ನು 9 ದಿನಗಳು ಆಚರಿಸಲಾಗುವುದು. ನವರಾತ್ರಿಯ ಪ್ರತಿಯೊಂದು ದಿನದಲ್ಲಿ ಒಂದೊಂದು ಬಗೆಯ ದುರ್ಗೆಯನ್ನು ಆರಾಧಿಸಲಾಗುವುದು.
ನವರಾತ್ರಿ ಮೊದಲ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇಯ ದಿನ ಚಂದ್ರಘಂಟಾ, ನಾಲ್ಕನೇಯ ದಿನ ಕೂಷ್ಮಾಂಡ, ಐದನೇ ದಿನ ಸ್ಕಂದಮಾತಾ, 6ನೇ ದಿನ ಕಾತ್ಯಾಯನಿ, 7ನೇ ದಿ ಕಾಳರಾತ್ರಿ, 8ನೇ ದಿನ ಮಹಾಗೌರಿ, 9ನೇ ದಿನ ಸಿದ್ಧಿದಾತ್ರಿಯನ್ನು ಆರಾಧಿಸಲಾಗುವುದು.
ನವಗ್ರಹ: ನಮ್ಮ ಮೇಲೆ ನವಗ್ರಹಗಳು ಪ್ರಭಾವ ಬೀರುವುದು ಎಂದು ಹೇಳಲಾಗುವುದು. ನವಗ್ರಹಗಳ ಸ್ಥಾನದ ಆಧಾರದ ಮೇಲೆ ಭವಿಷ್ಯವನ್ನು ಹೇಳಲಾಗುವುದು. ನವಗ್ರಹಗಳು ನಮ್ಮ ದಿನನಿತ್ಯದ ಬದುಕಿನ ಮೇಲೆ ತುಂಬಾನೇ ಪ್ರಭಾವ ಬೀರುವುದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
ಯಂತ್ರಗಳು: ಯಂತ್ರಗಳನ್ನು ಪರಿಹಾರವಾಗಿ ಬಳಸಲಾಗುವುದು. ಯಂತ್ರಗಳನ್ನು ಸ್ಥಾಪಿಸಿ ಪೂಜೆ ಸಲ್ಲಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಯಂತ್ರಗಳಲ್ಲಿ 9 ಚೌಕಾಕೃತಿ ಅಥವಾ 9 ತ್ರಿಭುಜಾಕೃತಿ ಇದೆ.
ಅಲ್ಲದೆ ಒಂದೊಂದು ಯುಗಕ್ಕೂ ಸಂಖ್ಯೆ 9ಕ್ಕೆ ಸಂಬಂಧವಿದೆ
ಹಿಂದೂ ಧರ್ಮದಲ್ಲಿ 4 ಯುಗಗಳ ಬಗ್ಗೆ ಹೇಳಲಾಗಿದೆ
ಸತ್ಯಾಯುಗ: 172,800 ವರ್ಷ ಸತ್ಯಾಯುಗವಿತ್ತು ಎಂದು ಹೇಳಲಾಗಿದೆ. 1+7+2+8 (18=1+9=9)
ತ್ರೇತಾಯುಗ: 1296000 ವರ್ಷ ತ್ರೇತಾಯುಗವಿತ್ತು: ಇದನ್ನು ಸಂಖ್ಯಾಶಾಸ್ತ್ರ ಪ್ರಕಾರ ಲೆಕ್ಕ ಹಾಕಿದರೆ 9 ಸಂಖ್ಯೆ ಬರುತ್ತದೆ.
ದ್ವಾಪರಯುಗ: 864000 ವರ್ಷವಿತ್ತು ಎಂದು ಹೇಳಲಾಗುವುದು. ಇದರ ಸಂಖ್ಯೆ 9 ಬರುತ್ತದೆ.
ಕಲಿಯುಗ: 432000 ವರ್ಷ ಇರುತ್ತದೆ ಎಂದು ಹೇಳಲಾಗುವುದು. ನಾವೀಗ ಇರುವುದು ಕಲಿಯುಗ, ಇದರ ಸಂಖ್ಯೆ ಕೂಡ 9 ಬರುತ್ತದೆ.
ಅಲ್ಲದೆ ಒಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿದಿನ 21600 ಉಸಿರಾಡುತ್ತಾನೆ. ಇದನ್ನು ಲೆಕ್ಕ ಹಾಕಿದರೂ 9 ಸಂಖ್ಯೆ ಬರುತ್ತದೆ. ಸಂಖ್ಯೆ 9 ಜ್ಞಾನ, ನಾಯಕತ್ವದ ಸಂಕೇತ ಎಂದು ಹೇಳಲಾಗುವುದು.
ಒಂದು ವೃತ್ತ 360 ಡಿಗ್ರಿ ಎಂದು ಹೇಳಲಾಗುವುದು. 3+6 ಕೂಡ 9 ಆಗುತ್ತದೆ. ಆದ್ದರಿಂದ ಸಂಖ್ಯೆ 9 ಹಾಗೂ ಸೃಷ್ಟಿಗೂ ಸಂಬಂಧವಿದೆ ಎಂದು ಹೇಳಲಾಗಿದ್ದು, ಈ ಸಂಖ್ಯೆಯನ್ನು ತುಂಬಾ ಪವಿತ್ರ ಸಂಖ್ಯೆ ಎಂದು ಪರಿಗಣಿಸಲಾಗಿದೆ.



Click it and Unblock the Notifications