Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚಲಿಸುವ ರೈಲಿನ ಮುಂದೆ ಫೋಟೋ ಏಕೆ ಕ್ಲಿಕ್ಕಿಸಬಾರದು.? ಉತ್ತರ ಈ ವಿಡಿಯೋದಲ್ಲಿದೆ..!
ಜನರು ಸೆಲ್ಫಿ ಹುಚ್ಚಿಗೆ ಬಿದ್ದು ಒಂದು ಫೋಟೋ ತೆಗೆದುಕೊಳ್ಳಲು ಎಷ್ಟೆಲ್ಲಾ ಸಾಹಸ ಮಾಡುತ್ತಾರೆ ಎಂಬುದನ್ನು ನೋಡಿದ್ದೇವೆ. ಒಂದು ಫೋಟೋಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸಾಹಸಗಳ ಮಾಡುತ್ತಾರೆ. ಆದ್ರೆ ರೈಲು ಹಳಿಗಳ ಮೇಲೆ ಚಲಿಸುವ ರೈಲಿನ ಮುಂದೆ ಫೋಟೋ ತೆಗೆದುಕೊಳ್ಳುವಾಗ ಆಗುವ ಅಪಾಯಗಳಿಗೇನು ಕಡಿಮೆ ಇಲ್ಲ.
ರೈಲು ಹಳಿಗಳು, ರೈಲಿನ ಮುಂದೆ ಫೋಟೋ ತೆಗೆದುಕೊಳ್ಳಬಾರದು ಎಂದು ಯಾವಾಗಲು ಹೇಳುತ್ತಾರೆ. ಆದರೆ ಕೆಲವರು ಎಷ್ಟು ಬಾರಿ ಹೇಳಿದರು ಈ ಮಾತು ಕೇಳುವುದೇ ಇಲ್ಲ. ಈಗ ಇದೇ ಸೆಲ್ಫಿ ಹುಚ್ಚು ಮಹಿಳೆಯೊಬ್ಬರ ಪ್ರಾಣವನ್ನೇ ತೆಗೆದಿದೆ. ಅದರಲ್ಲೂ ರೈಲಿನ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜೀವವೇ ಹೋಗಿದೆ.

ಮೆಕ್ಸಿಕೋದಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೆಕ್ಸಿಕೋದ ಐಕಾನಿಕ್ ರೈಲು ಎಂದು ಕರೆಯಲ್ಪಡುವ ಹಬೆಯ ರೈಲು ಬರುವಾಗ ಜನರು ಮುಗಿಬಿದ್ದು ಸೆಲ್ಫಿ, ಫೋಟೋ ಕ್ಲಿಕ್ಕಿಸಲು ಮುಂದಾಗುತ್ತಾರೆ. ಆದ್ರೆ ಹಿಡಾಲ್ಗೊ ಬಳಿ ಹಬೆ ಎಂಜಿನ್ ಹೊಂದಿರುವ ವಿಂಟೇಜ್ ರೈಲಿನ ಫೋಟೋ ಕ್ಲಿಕ್ ಮಾಡುವಾಗ ಮಹಿಳೆಯೊಬ್ಬರು ಜೀವ ಕಳೆದುಕೊಂಡಿದ್ದಾರೆ.
ರೈಲು ಬರುತ್ತಿರುವಾಗ ಎಲ್ಲರೂ ಫೋಟೋಗಳ ಕ್ಕಿಕ್ಕಿಸಲು ಮುಂದಾಗುತ್ತಾರೆ, ಆದರೆ ಕಿತ್ತಲೆ ಬಣ್ಣದ ಬಟ್ಟೆ ಹಾಕಿದ್ದ ಮಹಿಳೆಯೊಬ್ಬರು ಹಳಿಯ ಹತ್ತಿರಕ್ಕೆ ಹೋಗುತ್ತಾಳೆ. ರೈಲು ಬರುವ ವೇಳೆ ಆಕೆ ಸೆಲ್ಫಿ ತೆಗೆಯುವಾಗ ರೈಲು ಡಿಕ್ಕಿಯಾಗಿದೆ. ಈ ವಿಡಿಯೋ ನೋಡಿದ ಮಂದಿ ಶಾಕ್ ಆಗಿದ್ದಾರೆ.
ಆಕೆಗೆ ರೈಲು ಡಿಕ್ಕಿ ಹೊಡೆಯುತ್ತಿದ್ದಂತೆ ಮಹಿಳೆ ನೆಲದ ಮೇಲೆ ಬಿದ್ದಿದ್ದಾಳೆ. ರೈಲು ಡಿಕ್ಕಿಯಾದ ರಭಸಕ್ಕೆ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಕೆಯನ್ನು ಮೇಲೆ ಎತ್ತಲು ಪ್ರಯತ್ನಿಸುವ ವ್ಯಕ್ತಿ ಆಕೆಯನ್ನು ರೈಲು ಹಳಿಯಿಂದ ಸ್ವಲ್ಪ ದೂರಕ್ಕೆ ಎಳೆಯುತ್ತಾನೆ. ಆದರೆ ಆಕೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.
ಈ ವಿಡಿಯೋ ಎಷ್ಟು ಭಯಾನಕವಾಗಿದೆ ಅಂದರೆ ನೋಡಿದ ಮಂದಿ ಒಮ್ಮೆ ಶಾಕ್ ಗೆ ಒಳಗಾಗಿದ್ದಾರೆ. ಮಹಿಳೆ ತನ್ನ ಮಗ ಮತ್ತು ಹತ್ತಿರದ ಶಾಲೆಯ ಮಕ್ಕಳೊಂದಿಗೆ ಅಲ್ಲಿಗೆ ಬಂದಿದ್ದಳು ಎಂದು ತಿಳಿದುಬಂದಿದೆ.
1930 ರಲ್ಲಿ ನಿರ್ಮಿಸಲಾದ ಉಗಿ ಲೋಕೋಮೋಟಿವ್ ರೈಲು ಇದಾಗಿದೆ. ಅಂತಿಮ ಸ್ಪೈಕ್ ಸ್ಟೀಮ್‌ನ ಭಾಗವಾಗಿ ಕೆನಡಾ, ಯುಎಸ್ ಮತ್ತು ಮೆಕ್ಸಿಕೊವನ್ನು ಒಂದೇ ಟ್ರಿಪ್‌ನಲ್ಲಿ ಪ್ರಯಾಣಿಸಲು ಪ್ಯಾಸೆಂಜರ್ ರೈಲು ಏಪ್ರಿಲ್‌ನಲ್ಲಿ ಕ್ಯಾಲ್ಗರಿಯಿಂದ ಹೊರಟಿತ್ತು. ಶುಕ್ರವಾರ ಮೆಕ್ಸಿಕೋ ನಗರದಲ್ಲಿ ಪ್ರವಾಸ ಮುಕ್ತಾಯವಾಗಲಿದೆ. ಬಳಿಕ ಈ ರೈಲು ನಿವೃತ್ತಿ ಪಡೆದುಕೊಳ್ಳಲಿದೆ. ಹೀಗಾಗಿ ಈ ರೈಲಿನ ಕೊನೆಯ ಪ್ರವಾಸ ಕಣ್ತುಂಬಿಕೊಳ್ಳಲು ಅಲ್ಲಿ ಜನ ಸೇರಿದ್ದರು.
ಆದರೆ ಈ ನಡುವೆ ದುರಂತವೇ ಸಂಭವಿಸಿದೆ. ಹೀಗಾಗಿ ರೈಲಿನ ಹಳಿಗಳ ಪಕ್ಕದಲ್ಲಿ ಹಾಗೂ ಚಲಿಸುವ ರೈಲಿನ ಹತ್ತಿರದಲ್ಲಿ ಫೋಟೋ ಕ್ಲಿಕ್ಕಿಸಲು ಎಂದಿಗೂ ಮುಂದಾಗಬಾರದು. ಇದು ಅತ್ಯಂತ ಅಪಾಯಕಾರಿ. ಈ ರೀತಿಯ ದುರಂತಗಳ ಸಂಖ್ಯೆ ಸಹ ಹೆಚ್ಚಾಗುತ್ತಿರುವುದು ಎಷ್ಟು ಜಾಗೃತಿ ಮೂಡಿಸಿದರು ಜನರು ಮಾತ್ರ ಇಂತಹ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ. ಈ ದುರಂತದ ವಿಡಿಯೋ ನೋಡಿದ ಜನರು ಶಾಕ್‌ಗೆ ಒಳಗಾಗಿದ್ದಾರೆ.
ಒಂದು ನಿಮಿಷದ ಹಿಂದೆ ನಗು ನಗುತ್ತಾ ಇದ್ದ ಮಹಿಳೆ ಕಣ್ಣ ಮುಂದೆ ಪ್ರಾಣ ಕಳೆದುಕೊಂಡಿದ್ದನ್ನು ನೋಡಿದವರು ರೈಲು ದುರಂತಗಳು ಎಷ್ಟು ಭೀಕರ ಎಂದು ನಡುಗುವಂತಾಗಿದೆ. ಅಲ್ಲದೆ ಜನರು ಈ ವಿಡಿಯೋ ಹಂಚಿಕೊಂಡು ಸುರಕ್ಷತೆಯ ಬಗ್ಗೆ ಧ್ವನಿ ಎತ್ತಿದ್ದಾರೆ. ಈ ವಿಡಿಯೋ ನೋಡಿದ ಒಂದಿಷ್ಟು ಮಂದಿಯಾದರು ಜಾಗೃತರಾಗಲಿ ಎಂಬುದು ಅವರ ಮನವಿಯಾಗಿದೆ.



Click it and Unblock the Notifications
