Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
ಕ್ರೈಸ್ತ ಮತದವರಿಗೆ ಗುಡ್‌ಫ್ರೈಡೇ ದುಃಖದ ದಿನ. ಈ ದಿನದಂದು ಏಸುಕ್ರಿಸ್ತನನ್ನು ಶಿಲುಬೆಗೇರಿಸಿದರು, ಹೀಗಾಗಿ ಈ ದಿನವನ್ನು ಉಪವಾಸ ನಿಯಮ ಆಚರಿಸುವ ಮೂಲಕ ಪಾಲಿಸುತ್ತಾರೆ. ಈಸ್ಟರ್ ಭಾನುವಾರದ ಮೊದಲ ಶುಕ್ರವಾರವನ್ನು ಗುಡ್‌ಫ್ರೈಡೇ ಎಂದು ಆಚರಿಸಲಾಗುವುದು. ಈ ವರ್ಷ ಮಾರ್ಚ್ 29ರಂದು ಆಚರಿಸಲಾಗುವುದು.

ಈ ದಿನ ವಿಶೇಷ ದಿನ
ಈ ಮಾನವ ಕುಲಕ್ಕಾಗಿ ಯೇಸು ಕಿಸ್ತನುಮಾಡಿರುವ ಬಲಿದಾನ ನೆನೆಯಲು ಗುಡ್ ಫ್ರೈಡೇ ಆಚರಿಸಲಾಗುವುದು. ಈ ದಿನ ಯೇಸುವಿನ ಹಾಡುಗಳನ್ನು ಹಾಡುತ್ತಾ, ಬೈಬಲ್ ಓದುತ್ತಾ ಆಚರಿಸಲಾಗುವುದು. ಕ್ರೈಸ್ತರು ಗುಡ್ ಫ್ರೈಡೆಯನ್ನು ತುಂಬಾ ವಿಶೇಷ ದಿನವೆಂದು ಪರಿಗಣಿಸುತ್ತಾರೆ.
ಯೇಸು ಶಿಲುಬೆಗೇರಿದ ದಿನ ಗುಡ್ ಫ್ರೈಡೇ ಎಂದು ಏಕೆ ಕರೆಯಲಾಗುವುದು
ಯೇಸು ಶಿಲುಬೆಗೇರಿದ ಈ ದಿನವನ್ನು ಒಳ್ಳೆಯ ದಿನವೆಂದು ಕರೆಯಲು ಮುಖ್ಯ ಕಾರಣವೆಂದರೆ ಇಂಗ್ಲಿಷ್ ಶಬ್ದಕೋಶದಲ್ಲಿ ಗುಡ್' ಎಂದರೆ ಪವಿತ್ರ ಎಂದರ್ಥ. ಈ ದಿನಯೇಸು ಜಗತ್ತಿನ ಒಳಿತಿಗಾಗಿ ಶಿಲುಬೆಗೇರಿದ ದಿನ, ಯೇಸು ಕ್ರಿಸ್ತನು ಸಾವನ್ನಪ್ಪಿದ ದಿನ, ಒಳ್ಳೆಯ ಕಾರಣಕ್ಕೆ ಬಲಿದಾನ ಮಾಡಿದ ದಿನವಾಗಿರುವುದರಿಂದ ಈ ದಿನವನ್ನು ಗುಡ್‌ಫ್ರೈಡೇ ಎಂದು ಕರೆಯಲಾಗುವುದು.
ಇದನ್ನು ಹೇಗೆ ಆಚರಿಸಲಾಗುವುದು?
ಕ್ರೈಸ್ತರು ಈ ದಿನ ಶೋಕದಲ್ಲಿದ್ದು ಯೇಸುವಿನ ಧ್ಯಾನ ಮಾಡುತ್ತಾರೆ. ಈ ದಿನ ಯಾವುದೇ ಸಮೂಹ ಪ್ರಾರ್ಥನೆ ಈ ದಿನ ನಡೆಯುವುದಿಲ್ಲ. ಈ ಗುಡ್ ಫ್ರೈಡೇಯನ್ನು ಮತ್ತೊಂದು ರೀತಿಯಲ್ಲಿ ಪವಿತ್ರ ಶುಕ್ರವಾರ, ಶ್ರೇಷ್ಠ ಶುಕ್ರವಾರ ಅಥವಾ ಕಪ್ಪು ಶುಕ್ರವಾರವೆಂದು ಎಂದು ಕೂಡ ಕರೆಯಲಾಗುವುದು. ಗುಡ್ ಫ್ರೈಡೇಯ ದಿನ ಚರ್ಚ್ ನಲ್ಲಿ ಯಾವುದೇ ರೀತಿಯ ಆಚರಣೆ ನಡೆಯುವುದಿಲ್ಲ. ಈ ಸಮಯದಲ್ಲಿ ಆಚರಿಸಲ್ಪಡುವ ಪವಿತ್ರ ವಿಧಿಗಳೆಂದರೆ ಬ್ಯಾಪಿಸ್ಟಮ್(ಸಾವಿನ ಅಪಾಯದಲ್ಲಿರುವವರು), ಪ್ರಾಯಶ್ಚಿತ್ತ ಮತ್ತು ರೋಗಿಗಳಿಗೆ ಅಭಿಷೇಕ. ಈ ವೇಳೆ ಶಿಲುಬೆಗಳು, ಕ್ಯಾಂಡಲ್ ಗಳು ಮತ್ತು ಬಟ್ಟೆಯನ್ನು ಬಲಿಪೀಠದಿಂದ ತೆಗೆಯಲಾಗುತ್ತದೆ.
ಆಚರಣೆ ಭಿನ್ನವಾಗಿರುತ್ತದೆ
ಎಲ್ಲಾ ಕಡೆ ಒಂದೇ ರೀತಿ ಆಚರಿಸುವುದಿಲ್ಲ. ಸಂಪ್ರದಾಯದಲ್ಲಿ ಭಿನ್ನತೆ ಕ್ರೈಸ್ತ ಧರ್ಮದ ವಿವಿಧ ಪಂಗಡದವರು ಭಿನ್ನ-ಭಿನ್ನವಾಗಿ ಆಚರಿಸುತ್ತಾರೆ. ವಿಶ್ವದ ವಿವಿಧ ಭಾಗಗಳಲ್ಲಿ ಆಚರಣೆ ಕೂಡ ಭಿನ್ನವಾಗಿ ಆಚರಿಸಿದರೂ ನೀಡುವ ಸಂದೇಶ ಮಾತ್ರ ಒಂದೇ. ಏಸು ಕ್ರೈಸ್ತನು ಮಾನವ ಕುಲಕ್ಕಾಗಿ ತನ್ನ ಬಲಿದಾನ ನೀಡಿರುವುದನ್ನು ನೆನಪಿಸಿಕೊಂಡು, ಕ್ರಿಸ್ತ ಹೇಳಿದ ಪ್ರೀತಿಯನ್ನು ಹರಡುವುದು. ಇದಾದ ಬಳಿಕ ಮೂರನೇಯ ದಿನ ಯೇಸು ಕ್ರಿಸ್ತ ಮತ್ತೆ ಬರುತ್ತಾನೆ ಎಂದು ನಂಬಲಾಗಿದೆ ಆ ದಿನವನ್ನು ಈಸ್ಟರ್ ಎಂದು ಸಂಭ್ರಮದಿಂದ ಆಚರಿಸಲಾಗುವುದು.
ಲಾಂಗ್ ವೀಕೆಂಡ್
ಈ ಗುಡ್ ಫ್ರೈಡೇ ದಿನ ಬಹುತೇಕ ಆಫೀಸ್‌ನಲ್ಲಿ ರಜೆ ಇರುತ್ತದೆ, ಶನಿವಾರ, ಭಾನುವಾರ ರಜೆಯಿದ್ದರೆ ಲಾಂಗ್ ವೀಕೆಂಡ್ ಕೂಡ ಹೌದು. ಯೇಸು ಕ್ರಿಸ್ತನು ಶಿಲುಬೆಗೆ ಏರಿದ ಮೇಲೆ 3ನೇ ದಿನಕ್ಕೆ ಯೇಸು ಬರಳಿ ಬರುತ್ತಾನೆ ಎಂದು ಹೇಳಲಾಗುವುದು, ಈ ದಿನವನ್ನು ಈಸ್ಟರ್ ಎಂದು ಸಂಭ್ರಮದಿಂದ ಆಚರಿಸಲಾಗುವುದು.
ತನ್ನನ್ನು ಶಿಲುಬೆಗೆ ಏರಿಸಿದವರನ್ನು ನೋಡಿ ಯೇಸು ಹೇಳುತ್ತಾನೆ ಹೇ ಪ್ರಭು ಇವರಿಗೆ ತಾವು ಏನು ಮಾಡುತ್ತಿದ್ದೇವೆ ಎಂದು ತಿಳಿಯದು, ಇವರನ್ನು ಕ್ಷಮಿಸಿ ಬಿಡಿ, ತನ್ನನ್ನು ಶಿಲುಗೆ ಏರಿಸುವವರನ್ನೂ ಕ್ಷಮಿಸಿದ ಮಹಾನ್ ವ್ಯಕ್ತಿ. ಯೇಸು ಈ ಜಗತ್ತಿನಲ್ಲಿ ಬದುಕಿದ್ದು 33 ವರ್ಷ, ಆದರೆ ಅವರು ಬದುಕಿನ ಮೌಲ್ಯಗಳ ಬಗ್ಗೆ ತಿಳಿಸಿ ಹೇಳಿದ ರೀತಿ ಇಂದಿಗೂ ಆದರ್ಶ. ಯೇಸುವಿನ ಬೋಧನೆಯನ್ನು ಇಂದಿಗೂ ಪಾಲಿಸುತ್ತಿದ್ದಾರೆ.
ತನಗೆ ಕೆಡಕು ಮಾಡುವವರನ್ನು ಕೂಡ ಕ್ಷಮಿಸು ಎನ್ನುವುದು ಯೇಸು ಮನುಷ್ಯರಿಗೆ ಹೇಳಿದ ಪಾಠ.



Click it and Unblock the Notifications
