Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ನೋ ಶೇವ್ ನವೆಂಬರ್ ಆಚರಿಸೋದ್ಯಾಕೆ? ಅದರ ಹಿಂದಿನ ಉದ್ದೇಶ ನಿಮಗೆ ಗೊತ್ತಾ?
ಗಡ್ಡ ಬಿಡೋದು ಈಗಿನ ದಿನದ ಫ್ಯಾಷನ್ ಎಂದು ಹಲವರು ಭಾವಿಸುತ್ತಾರೆ. ಹಾಗೆ ಕೆಲವರು ತಮ್ಮಿಷ್ಟದ ನಟರಂತೆ, ಕ್ರೀಡಾಪಟುಗಳಂತೆ, ಇಷ್ಟವಾಗುವ ವ್ಯಕ್ತಿತ್ವದವರನ್ನು ಅನುಕರಣೆ ಮಾಡಲು ಗಡ್ಡ ಬಿಡುವುದು ನೋಡಬಹುದು. ಹಾಗೆ ಗಡ್ಡ ಬಿಡುವುದು ಹಲವು ರೀತಿಯ ಉಪಯೋಗಕ್ಕೂ ಕಾರಣವಾಗೋದು ನೋಡಬಹುದು. ಯುವ ಜನರಲ್ಲಿ ಗಡ್ಡ ಬಿಡುವುದು ಇಷ್ಟದ ಹವ್ಯಾಸವೂ ಆಗಿ ಹೋಗಿದೆ.
ಹಾಗೆ ಗಡ್ಡ ಸರಿಯಾಗಿ ಬರಬೇಕೆಂದು ಅವರು ಹಲವು ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದು ಸಹ ನೋಡಬಹುದು. ಇನ್ನು ಈ ನವೆಂಬರ್ ಬಂತೆಂದರೆ ನೋ ಶೇವ್ ನವೆಂಬರ್ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದು ನೀವು ಗಮನಿಸಿರಬಹುದು. ಹಲವರು ಈ ರೀತಿ ನಡೆದುಕೋಳ್ಳುವುದು ಸಹ ಉಂಟು.

ನವೆಂಬರ್‌ನಲ್ಲಿ ಶೇವ್ ಮಾಡಿಸುವುದರಿಂದ ಹಲವರು ದೂರವೇ ಉಳಿಯುತ್ತಾರೆ. ಮತ್ತೆ ಕೆಲವರು ಇಡೀ ತಿಂಗಳು ಗಡ್ಡ ಬಿಟ್ಟು ಅನಂತರ ಟ್ರಿಮ್ ಮಾಡುತ್ತಾರೆ. ಈ ರೀತಿ ನೋ ಶೇವ್ ನವೆಂಬರ್ ಎಂಬ ಆಚರಣೆ ಮಾಡೋದು ಏಕೆ ಅನ್ನೋದು ನಿಮಗೆ ಗೊತ್ತಿದ್ಯಾ? ಅದರ ಹಿಂದಿರುವ ಕಾರಣ ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನವೆಂಬರ್ ತಿಂಗಳಲ್ಲಿ ಯಾರೂ ತಮ್ಮ ಗಡ್ಡವನ್ನು ತೆಗೆಯಬಾರದು ಅಥವಾ ಕತ್ತರಿಸಬಾರದು ಎಂದು ಹೇಳಲಾಗುತ್ತದೆ. ಇದಕ್ಕಾಗಿ ಖರ್ಚು ಮಾಡಿದ ಹಣವನ್ನು ಬಡವರಿಗೆ ನೀಡಬೇಕು ಎಂದು ಹೇಳುವ ಅಭಿಯಾನವು ನಮ್ಮ ನಡುವೆ ಇದೆ. ಸದ್ಯಕ್ಕೆ ಈ ರೀತಿಯ ಸಂಪ್ರದಾಯ ಪಾಶ್ಚಿಪಾತ್ಯ ದೇಶದಲ್ಲಿ ಬಹಳ ಫೇಮಸ್ ಆಗಿವೆ. ಆದ್ರೆ ಭಾರತದಲ್ಲಿ ಅದಷ್ಟೊಂದು ಪ್ರಚಲಿತವಾಗಿಲ್ಲ.
ಕ್ಯಾನ್ಸರ್ ರೋಗಿಗಳಿಗೆ ಬೆಂಬಲ ನೀಡಲು ಅಮೆರಿಕದಲ್ಲಿ ನೋ ಶೇವ್ ನವೆಂಬರ್ ಎಂಬ ನವೀನ ಅಭಿಯಾನ ಆರಂಭಿಸಲಾಗಿತ್ತು. ಈ ಅಭಿಯಾನದಲ್ಲಿ ಭಾಗಿಯಾಗುವ ಮಂದಿ ನವೆಂಬರ್‌ನಲ್ಲಿ ಗಡ್ಡ ತೆಗೆಸುವುದಿಲ್ಲ. ಅಂದರೆ ಅವರು ಸಲೂನ್ ಕಾರಣಕ್ಕೆ ಹಣ ಬಳಕೆ ಮಾಡುವುದಿಲ್ಲ. ಇಡೀ ತಿಂಗಳು ಉಳಿಸಿದ ಹಣವನ್ನು ಬಡವರಿಗೆ ನೀಡುವುದು ಅಥವಾ ಕ್ಯಾನ್ಸರ್ ರೋಗಿಗಳಿಗೆ ನೀಡುವ ಸಂಪ್ರದಾಯವಿದೆ.
ಪುರುಷರಷ್ಟೇ ಅಲ್ಲ ಮಹಿಳೆಯರು ಕೂಡ ಈ ಅಭಿಯಾನದಲ್ಲಿ ಭಾಗಿಯಾಗುತ್ತಾರೆ. ಅವರು ಸಹ ಸಲೂನ್‌ಗೆ, ಬ್ಯೂಟಿ ಪಾರ್ಲರ್‌ಗಳಿಗೆ ಭೇಟಿ ನೀಡದೆ ಇಡೀ ತಿಂಗಳ ಹಣ ಉಳಿಸುತ್ತಾರೆ, ಬಳಿಕ ಅದನ್ನು ಕ್ಯಾನ್ಸರ್ ರೋಗಿಗಳ ದೇಣಿಗೆಗೆ ನೀಡುವದು ನೋಡಬಹುದು. ಹೀಗಾಗಿ ಅಮೆರಿಕೆಲ್ಲಿ ಈ ನೋ ಶೇವ್ ನವೆಂಬರ್ ಬಹಳ ಪ್ರಚಲಿತ ಅಭಿಯಾನವಾಗಿದೆ.
ಹಣ ಮಾತ್ರವಲ್ಲ ಅವರಿಗಾಗಿ ಹಲವು ರೀತಿಯ ವಸ್ತುಗಳನ್ನು ಸಹ ನೀಡುತ್ತಾರೆ. ಆಹಾರ ಸಾಮಗ್ರಿಗಳು, ಅಗತ್ಯ ವಸ್ತುಗಳು, ನಿತ್ಯ ಬಳಕೆಯ ವಸ್ತುಗಳು ಸೇರಿ ಹಲವು ರೀತಿಯಾಗಿ ಸಹಾಯಕ್ಕೆ ಮುಂದಾಗುವ ಸಮಯ ಇದಾಗಲಿದೆ. ಈ ಅಭಿಯಾನಕ್ಕೆ ಸರ್ಕಾರದ ವತಿಯಿಂದಲೂ ಸಹಕಾರ ಇರಲಿದೆ. ಹಲವು ಇಲಾಖೆಗಳು ಇದಕ್ಕೆ ಕೈ ಜೋಡಿಸುವುದು ನೋಡಬಹುದು.
ಈ ಅದ್ಭುತ ಪರಿಕಲ್ಪನೆಯು ಕೊರೊನಾದ ಸಮಯದಲ್ಲಿ ಭಾರೀ ಯಶಸ್ಸು ಗಳಿಸಿತ್ತು. ಕ್ಯಾನ್ಸರ್ ರೋಗಿಗಳು ಮಾತ್ರವಲ್ಲದೆ ಆ ಸಮಯದಲ್ಲಿ ಕಷ್ಟದಲ್ಲಿದ್ದ ಎಲ್ಲಾ ಸಮುದಾಯದ ಜನರಿಗೂ ದೇಣಿಗೆ ಸಂಗ್ರಹಿಸಲು ಮುಂದಾಗಲಾಗಿತ್ತು, ಒಂದೇ ತಿಂಗಳಲ್ಲಿ ಬರೋಬ್ಬರಿ 2 ಲಕ್ಷ ಡಾಲರ್ ವರೆಗೂ ದೇಣಿಗೆ ಸಂಗ್ರಹವಾಗಿದ್ದನ್ನು ನಾವು ನೆನೆಯಬಹುದು.
ಇನ್ನು ಈ ಸಮಯದಲ್ಲಿ ಚಳಿಗಾಲದ ಹಿನ್ನಲೆಯಲ್ಲೂ ಹಲವರು ಗಡ್ಡ ಬಿಡುತ್ತಾರೆ. ಇದರಿಂದ ನಿಮ್ಮ ಮುಖದ ತ್ವಚೆಯು ಒಣಗುವುದು ಚಳಿಗೆ ಹಾನಿಯಾಗುವುದರಿಂದ ನೀವು ಪಾರಾಗಬಹುದು. ಇದು ಕೂಡ ನೋ ಶೇವ್ ನವೆಂಬರ್‌ಗೆ ಒಂದು ಕಾರಣವಾಗಿದೆ. ಆದ್ರೆ ಭಾರತದಲ್ಲಿ ಈ ಅಭಿಯಾನ ಪ್ರಚಲಿತದಲ್ಲಿಲ್ಲ. ಆದ್ರೆ ನೋ ಶೇವ್ ನವೆಂಬರ್ ಅನ್ನು ಪಾಲಿಸುವವರ ನೋಡಬಹುದು.



Click it and Unblock the Notifications
