Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ!
ನೋಟುಗಳು ವಿಶಿಷ್ಟ ವಾಸನೆ ಹೊಂದಿರೋದ್ಯಾಕೆ..? ನೀವು ಎಂದಾದ್ರು ಯೋಚಿಸಿದ್ದೀರಾ?
ನಾವು ಬಳಸುವ ಪ್ರತಿಯೊಂದು ವಸ್ತು ಸಹ ಒಂದೊಂದು ರೀತಿ ವಾಸನೆಯಿಂದ ಕೂಡಿರುತ್ತದೆ. ಅದೇ ರೀತಿ ನಾವು ಬಳಸುವ ಹಣ ಸಹ ಒಂದು ವಿಶಿಷ್ಟ ರೀತಿಯ ವಾಸನೆ ಹೊಂದಿರುತ್ತದೆ. ನೀವು ಬೇರೆ ಯಾವುದೇ ಕಾಗದದಲ್ಲಿಯೂ ಈ ರೀತಿಯ ವಾಸನೆ ನೋಡಿರುವುದಿಲ್ಲ.
ನೋಟಿನಿಂದ ವಿಶಿಷ್ಟ ರೀತಿಯ ವಾಸನೆ ಬರುತ್ತದೆ. ಕೆಲವರು ಈ ವಾಸನೆಯನ್ನ ಇಷ್ಟವೂ ಪಡಬಹುದು. ಮತ್ತೆ ಕೆಲವರಿಗೆ ಈ ವಾಸನೆ ಒಂದು ರೀತಿ ನೆಮ್ಮದಿ ಎನಿಸಬಹುದು. ನೋಟಿಗೆ ಇರುವಂತಹ ಈ ವಾಸನೆಯಿಂದಾಗಿಯೇ ಅದು ವಿಶಿಷ್ಟ ಎನಿಸಿದೆ. ಆದರೆ ನೋಟಿಗೆ ಈ ರೀತಿ ವಿಶಿಷ್ಟವಾದ ವಾಸನೆ ಇರಲು ಕಾರಣವೇನು ಎಂಬುದನ್ನು ನೀವು ಯೋಚಿಸಿದ್ದೀರಾ?

ಬಹುಪಾಲು ಮಂದಿ ಈ ನೋಟಿನ ವಾಸನೆ ತಿಳಿದಿದ್ದರೂ ನೋಟುಗಳು ಏಕೆ ವಾಸನೆ ಬರುತ್ತವೆ ಎನ್ನುವುದುನ್ನು ತಿಳಿದಿರುವುದಿಲ್ಲ. ಅಚ್ಚರಿಯ ವಿಚಾರ ಎಂದರೆ ನಾವು ನೋಟುಗಳನ್ನು ಕಾಗದಿಂದ ಮಾಡಲಾಗಿದೆ ಎಂದುಕೊಂಡಿರುತ್ತೇವೆ, ಮೇಲ್ನೋಟಕ್ಕೆ ಎಲ್ಲರು ಕಾಗದದ ನೋಟು ಎಂದರೂ ನೋಟುಗಳನ್ನು ಹಾಳೆಯಿಂದ ಮಾಡಲಾಗುವುದಿಲ್ಲ.
ಈ ನೋಟುಗಳಿಗೆ ವಿಶಿಷ್ಟ ವಾಸನೆ ಇರಲು ಅವುಗಳ ನಿರ್ಮಾಣವು ಸಹ ಒಂದು ಕಾರಣವಾಗಿದೆ, ಅವುಗಳ ಉತ್ಪಾದನೆಯಲ್ಲಿ ಬಳಸುವ ವಸ್ತುಗಳಿಗೂ ನೋಟಿನ ವಾಸನೆಗೂ ಸಂಬಂಧವಿದೆ. ಕಾಗದವು ಹೆಚ್ಚಿನ ದೀರ್ಘಾಯುಷ್ಯವನ್ನು ಹೊಂದಿಲ್ಲ, ಆದ್ದರಿಂದ ಅದನ್ನು ಬಳಸಲಾಗುವುದಿಲ್ಲ. ಕರೆನ್ಸಿ ನೋಟುಗಳನ್ನು ತಯಾರಿಸಲು ಹತ್ತಿಯನ್ನು ಬಳಸಲಾಗುತ್ತದೆ ಏಕೆಂದರೆ ಇದು ಹೆಚ್ಚು ಸಮರ್ಥನೀಯ ಮತ್ತು ದೀರ್ಘಕಾಲ ಉಳಿಯುತ್ತದೆ.
ಒಮ್ಮೆ ನೋಟು ಮುದ್ರಣಗೊಂಡು ಹೊರಬಂದಾಗ ಅದು ದೀರ್ಘಕಾಲದ ವರೆಗೂ ಸಾರ್ವಜನಿಕರ ಬಳಿ ಉಳಿಯಬೇಕಾಗುತ್ತದೆ. ಜೊತೆಗೆ ಪ್ರತಿಯೊಬ್ಬರ ಕೈನಲ್ಲೂ ಅದು ಓಡಾಡುತ್ತದೆ. ಹೀಗಾಗಿ ನೋಟುಗಳು ಕಾಗದದಿಂದ ಮಾಡಲ್ಪಟ್ಟಿಲ್ಲ, ಬದಲಿಗೆ ಅವು ಕಾಟನ್ ಹಾಗೂ ಕೆಲವು ವಸ್ತುಗಳ ಮಿಶ್ರಣದಿಂದಾಗಿ ಮಾಡಲ್ಪಟ್ಟಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ನೋಟು 100 ಪ್ರತಿಶತ ಹತ್ತಿಯನ್ನು ಬಳಸುತ್ತದೆ. ಹತ್ತಿಯು ಕಾಗದಕ್ಕಿಂತ ಬಲವಾಗಿರುತ್ತದೆ ಮತ್ತು ಅವು ಸುಲಭವಾಗಿ ಹರಿದು ಹೋಗುವುದಿಲ್ಲ. ಭಾರತದಲ್ಲಿ ಮಾತ್ರವಲ್ಲದೆ ಇತರ ಹಲವು ದೇಶಗಳಲ್ಲಿಯೂ ಕರೆನ್ಸಿ ನೋಟುಗಳನ್ನು ತಯಾರಿಸಲು ಹತ್ತಿಯನ್ನು ಬಳಸಲಾಗುತ್ತದೆ
ಕಾಟನ್ ಫೈಬರ್ ಲಿನಿನ್ ಎಂದು ಕರೆಯಲ್ಪಡುವ ಫೈಬರ್ ಅನ್ನು ಹೊಂದಿರುತ್ತದೆ ಮತ್ತು ಬ್ಯಾಂಕ್ನೋಟುಗಳನ್ನು ಹತ್ತಿ ಕಾಗದದಿಂದ ತಯಾರಿಸಲಾಗುತ್ತದೆ, ಇದು ಹತ್ತಿಯ 75 ಪ್ರತಿಶತ ಮತ್ತು 25 ಪ್ರತಿಶತ ಲಿನಿನ್ ಮಿಶ್ರಣವಾಗಿದೆ. ಇದು ಗಾಳಿಯಲ್ಲಿ ಬೆರೆತು ಒಂದು ರೀತಿಯ ವಾಸನೆ ಹೊಂದುತ್ತದೆ. ಹೀಗಾಗಿ ನೋಟುಗಳು ವಿಶಿಷ್ಟ ಎನಿಸುವ ವಾಸನೆ ಹೊಂದಿದೆ. ಬೇರೆ ಯಾವುದೇ ಕಾಗದಗಳು ಹೊಂದಿಲ್ಲದಂತಹ ವಾಸನೆಯನ್ನು ನೋಟುಗಳು ಹೊಂದಿವೆ.
ನೋಟುಗಳ ತಯಾರಿಕೆ ವೇಳೆ ಹತ್ತಿಗೆ ಜೆಲಾಟಿನ್ ಅಂಟಿಕೊಳ್ಳುವ ದ್ರಾವಣದೊಂದಿಗೆ ಬೆರೆಸಲಾಗುತ್ತದೆ ಅದು ಅವುಗಳನ್ನು ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ. ಭಾರತೀಯ ನೋಟುಗಳು ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ನಕಲಿ ನೋಟುಗಳನ್ನು ಸುಲಭವಾಗಿ ಗುರುತಿಸಲು ಅನುವು ಮಾಡಿಕೊಡುತ್ತದೆ. ಮತ್ತೊಂದು ಕಡೆ ನೋಟಿನ ಮೇಲೆ ನೀರು, ಬೆವರು, ಧೂಳು, ಕೊಳೆಗಳಿಗೆ ಬೆರೆತು ಈ ವಿಶಿಷ್ಟ ರೀತಿಯ ವಾಸನೆ ನೋಟಿಗೆ ಬರಲಿದೆ.
ನಿಮ್ಮ ಕಣ್ಣನ್ನು ಬಟ್ಟೆಯಿಂದ ಕಟ್ಟಿ ನಿಮ್ಮ ಮುಂದೆ ನೋಟು ಹಾಗೂ ಕಾಗದವನ್ನು ಹಿಡಿದಾಗ ನೀವು ಅದರ ವಾಸನೆಯಿಂದ ನೋಟುಗಳನ್ನು ಸುಲಭವಾಗಿ ಗುರುತಿಸಬಹುದು. ಭಾರತೀಯ ನೋಟುಗಳು ಮಾತ್ರವಲ್ಲದೆ ಯಾವುದೇ ದೇಶದ ನೋಟು ನೀವು ತೆಗೆದುಕೊಂಡರು ಸಹ ಅದು ವಿಶಿಷ್ಟ ವಾಸನೆ ಹೊಂದಿರುತ್ತದೆ, ಏಕೆಂದರೆ ಬಹುಪಾಲು ದೇಶಗಳು ಒಂದೇ ರೀತಿಯ ವಸ್ತುಗಳ ಬಳಸಿಯೇ ನೋಟುಗಳ ಮುದ್ರಿಸುತ್ತವೆ.



Click it and Unblock the Notifications
