Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ನೇಹಿತರ ದಿನಾಚರಣೆ: ಆಗಸ್ಟ್ ಮೊದಲ ಭಾನುವಾರವೇ ಸ್ನೇಹಿತರ ದಿನ ಆಚರಿಸೋದ್ಯಾಕೆ?
ಸ್ನೇಹ ಎನ್ನುವುದು ಎಲ್ಲವನ್ನು ಮೀರಿ ನಿಲ್ಲುವಂತಹ ಸಂಬಂಧ. ಇಲ್ಲಿ ಕಪಟವಿಲ್ಲ, ಸ್ವಾರ್ಥವಿಲ್ಲ. ನಮ್ಮ ಜೀವನದಲ್ಲಿ ಹಲವಾರು ಮಂದಿ ಸ್ನೇಹಿತರಾಗಿ ಬರುತ್ತಾರೆ. ಬ್ಯಾಲದಿಂದ ಹಿಡಿದು ವೃದ್ಧಾಪ್ಯದ ತನಕ ಸ್ನೇಹವೆನ್ನುವುದು ಸಿಗುವುದು. ಇದರಲ್ಲಿ ಕೆಲವು ಮಂದಿ ಪ್ರಾಣ ಸ್ನೇಹಿತರಾದರೆ, ಇನ್ನು ಕೆಲವರು ಹಾಗೆ ಸ್ನೇಹಿತರಾಗಿ ಉಳಿಯುವರು. ಸ್ನೇಹವು ಗಡಿ, ಭಾಷೆ, ಜಾತಿ ಧರ್ಮ ಎಲ್ಲವನ್ನು ಮೀರಿ ನಿಲ್ಲುವಂತಹದ್ದಾಗಿದೆ.
ವಿಶ್ವದೆಲ್ಲೆಡೆಯಲ್ಲಿ ಅಗಸ್ಟ್‌ನಲ್ಲಿ ಸ್ನೇಹಿತರ ದಿನವನ್ನು ಆಚರಿಸಲಾಗುತ್ತೆ. ಆದರೆ ಹಲವು ಕಡೆ ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಅಂದರೆ ಪ್ರತಿ ವರ್ಷ ಈ ಸ್ನೇಹಿತರ ದಿನಾಚರಣೆ ಬೇರೆ ಬೇರೆ ದಿನಾಂಕದಂದು ಆಚರಿಸಲಾಗುತ್ತದೆ. ಆದರೆ ಆಗಸ್ಟ್ ಮೊದಲ ಭಾನುವಾರದಂದೇ ಇದನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಮೊದಲ ಭಾನುವಾರವೇ ಸ್ನೇಹಿತರ ದಿನಾಚರಣೆ ಆಚರಿಸುವುದು ಏಕೆ? ಏನಿದರ ಹಿಂದಿರುವ ಕಥೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

1930ರಲ್ಲಿ ಹಾಲ್‌ಮಾರ್ಕ್ ಕಾರ್ಡ್‌ಗಳ ಸಂಸ್ಥಾಪಕರಾದ ಜಾಯ್ಸ್ ಹಾಲ್ ಅವರು ಮಾರ್ಕೆಟಿಂಗ್ ತಂತ್ರವಾಗಿ ಫ್ರೆಂಡ್‌ಶಿಪ್ ಡೇ ಅನ್ನು ಪರಿಚಯಿಸಿದರು ಎಂಬುದು ನಮಗೆಲ್ಲ ತಿಳಿದಿದೆ. ಈ ಆಚರಣೆ ವೇಗವಾಗಿ ಅಮೆರಿಕದಾದ್ಯಂತ ಹರಡಿತ್ತು. ಅಲ್ಲದೆ ಎಲ್ಲೆಡೆ ಬಹುಬೇಗ ಜನಪ್ರಿಯವಾಯಿತು. ಮೊದಲು ವಿಶ್ವ ಸ್ನೇಹಿತರ ದಿನವನ್ನು 1958ರಲ್ಲಿ ಪರಾಗ್ವೆಯಲ್ಲಿ ಆಚರಿಸಲಾಗಿತ್ತು.
ಇದಾಗಿ 1998ರಲ್ಲಿ ವಿನ್ನಿ ದಿ ಪೂಹ್ ಅವರನ್ನು ವಿಶ್ವಸಂಸ್ಥೆ ಸ್ನೇಹದ ವಿಶ್ವದ ರಾಯಭಾರಿ ಎಂದು ಹೆಸರಿಸಿತು. ಅಂತಿಮವಾಗಿ ವಿಶ್ವಸಂಸ್ಥೆಯು ಜುಲೈ 30 ಅನ್ನು ಅಂತರರಾಷ್ಟ್ರೀಯ ಸ್ನೇಹಿತರ ದಿನವೆಂದು ಅಧಿಕೃತವಾಗಿ ಘೋಷಿಸಿತು.
ಆದರೆ ಭಾರತವು ಸೇರಿ ಹಲವು ರಾಷ್ಟ್ರಗಳಲ್ಲಿ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನ ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 4ರ ಭಾನುವಾರದಂದು ಭಾರತದಲ್ಲಿ ಸ್ನೇಹಿತರ ದಿನ ಆಚರಿಸಲಾಗುತ್ತಿದೆ. ಏಕೆಂದರೆ ಸ್ನೇಹಿತರ ಭೇಟಿಯಾಗಲು ಭಾನುವಾರ ಸೂಕ್ತ ದಿನವಾಗಿದೆ. ಈ ದಿನ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಒಂದಿಷ್ಟು ಕಾಲ ಕಳೆಯಬೇಕು ಎಂಬ ಕಾರಣಕ್ಕೆ ಸ್ನೇಹಿತರ ದಿನವನ್ನ ಆಗಸ್ಟ್ ಮೊದಲ ಭಾನುವಾರದಂದು ಆಚರಿಸಲು ಹಲವು ದೇಶಗಳು ಮುಂದಾಗಿವೆ.
ನಾವು ಸಾಮಾನ್ಯವಾಗಿ ನಮ್ಮ ಸ್ನೇಹಿತರೊಂದಿಗಿನ ಸಂಬಂಧವನ್ನು ಲಘುವಾಗಿ ತೆಗೆದುಕೊಳ್ಳುತ್ತೇವೆ. ಕೆಲವರು ಈ ದಿನ ತಮ್ಮ ಸ್ನೇಹಿತರ ಕಾಳಜಿ, ಗೌರವ ಮತ್ತು ನಂಬಿಕೆಯನ್ನು ನೆನಪಿಸಿಕೊಳ್ಳುವರು. ಇದು ಸ್ನೇಹಿತರ ನಡುವಿನ ಭಾಂದವ್ಯ ಉತ್ತಮಪಡಿಸಲು ಆಚರಿಸಲಾಗುತ್ತದೆ. ಇದರಿಂದ ಸ್ನೇಹಿತರ ನಡುವಿನ ಪ್ರೀತಿ ಹಾಗೂ ಸಂಬಂಧ ಬಲಗೊಳ್ಳುವುದು. ಸ್ನೇಹಿತರ ದಿನದಂದು ಅವರು ಜೊತೆ ಇಡೀ ದಿನ ಕಳೆಯುವುದು, ಅವರ ಆರೋಗ್ಯ ವಿಚಾರಿಸುವುದು, ಅವರ ಜೀವನ, ಗುರಿ, ಸವಾಲುಗಳ ಅರಿತು ಅವರೊಂದಿಗೆ ಬೆರೆಯಲು ಈ ದಿನ ಸೂಕ್ತ ಎಂಬ ಕಾರಣಕ್ಕೆ ವಿಶ್ವದಾದ್ಯಂತ ಆಚರಿಸಲ್ಪಡುತ್ತಿದೆ.
ಸ್ನೇಹಿತರ ದಿನದಂದು ಏನು ಮಾಡಬೇಕು?
ಸ್ನೇಹಿತರ ದಿನ ಸ್ನೇಹಿತರೆಲ್ಲ ಪರಸ್ಪರ ಉಡುಗೊರೆ ಮತ್ತು ಕಾರ್ಡ್ ಗಳನ್ನು ಹಂಚಿಕೊಳ್ಳುವರು. ಈ ದಿನ ಯಾವುದೇ ಜಾತಿ, ಧರ್ಮ, ವರ್ಣ, ಲಿಂಗ ಭೇದವಿಲ್ಲದೆ ಶುಭಾಶಯ ವಿನಿಮಯವಾಗುವುದು. ಜೊತೆಗೆ ಔಟಣ ಕೂಡ, ಪ್ರವಾಸ, ಚಾರಣ, ದೇವಾಲಯ ಭೇಟಿ ನೀಡುವುದು ಮಾಡುತ್ತಾರೆ. ಅದ್ರಲ್ಲೂ ಯುವ ಸಮುದಾಯ ಹೆಚ್ಚಾಗಿರುವ ಭಾರತದಲ್ಲಿ ಸ್ನೇಹಿತರ ದಿನಾಚರಣೆ ಬಹಳ ಮಹತ್ವ ಪಡೆದುಕೊಂಡಿದೆ. ಇನ್ನು ಸ್ನೇಹಿತರ ದಿನದಂದು ಸ್ನೇಹಿತರ ಕೂಟವು ಸಮಾಜಮುಖಿ ಕಾರ್ಯಗಳಲ್ಲೂ ತೊಡಗುತ್ತದೆ.



Click it and Unblock the Notifications
