Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ವಿಮಾನದ ಕಿಟಕಿಗಳು ಚಿಕ್ಕದಾಗಿರಲು ಕಾರಣವೇನು? ಈ ವಿನ್ಯಾಸಕ್ಕೆ ಇದೆ ಕಾರಣ..!
ನಿಮ್ಮಲ್ಲಿ ಹಲವರು ವಿಮಾನದಲ್ಲಿ ಪ್ರಯಾಣಿಸಿರಬಹುದು. ಇಲ್ಲ ಮುಂದೊಂದು ದಿನ ಪ್ರಯಾಣಿಸಲೂ ಬಹುದು. ಅಥವಾ ಹತ್ತಿರದಿಂದ ನೀವು ವಿಮಾನದಿಂದ ಖಂಡಿತವಾಗಿಯೂ ನೋಡಿರುತ್ತೀರಿ. ಕೆಲವರಿಗೆ ವಿಮಾನ ಪ್ರಯಾಣ ಮಾಡಬೇಕು ಎಂಬುದು ಕನಸಾಗಿರುತ್ತೆ.
ಆದ್ರೆ ವಿಮಾನದ ಕುರಿತ ಕೆಲವು ಅಚ್ಚರಿ ವಿಚಾರಗಳ ಬಗ್ಗೆ ನಿಮಗೆ ತಿಳಿದಿರುವುದೇ ಇಲ್ಲ. ಅದರಲ್ಲೂ ನಿಮಗೆ ವಿಮಾನದ ಕಿಟಕಿಗಳು ಚಿಕ್ಕದಾಗಿರಲು ಕಾರಣ ಏನು ಎಂಬುದು ತಿಳಿದಿದ್ಯಾ? ನೀವು ಯಾವುದೇ ಸಂಸ್ಥೆಯ ವಿಮಾನ ನೋಡಿ ಅದರ ಕಿಟಕಿ ತುಂಬಾನೆ ಚಿಕ್ಕದಾಗಿರುತ್ತೆ. ಯಾವ ವಿಮಾನದ ಕಿಟಕಿಯು ದೊಡ್ಡದಾಗಿರುವುದಿಲ್ಲ. ಹೀಗ್ಯಾಕೆ ಎಂದು ಯೋಚಿಸಿದ್ದೀರಾ?

ವಿಮಾನದಲ್ಲಿ ದೊಡ್ಡ ಕಿಟಕಿ ಇದ್ದರೆ ಹೊರಗಿನ ದೃಶ್ಯಗಳು ಸ್ಪಷ್ಟವಾಗಿ. ಇನ್ನೂ ಚೆನ್ನಾಗಿ ಕಾಣಿಸುತ್ತವೆ ಎಂದು ನೀವು ಅಂದುಕೊಳ್ಳಬಹುದು. ಆದರೆ ವಿಮಾನದ ಕಿಟಕಿಗಳ ವಿನ್ಯಾದಕ್ಕೂ ಒಂದಿ ನಿಯಮವಿದೆ ಎಂದು ನಿಮಗೆ ಗೊತ್ತಾ. ಹೌದು ವಿಮಾನ ದೊಡ್ಡ ಕಿಟಕಿಗಳು ವಿಮಾನದ ಮೇಲ್ಮೈಯಲ್ಲಿ ಗಾಳಿಯ ಮೃದುವಾದ ಹರಿವನ್ನು ಅಡ್ಡಿಪಡಿಸುತ್ತದೆ, ಇದು ಡ್ರ್ಯಾಗ್ ಮತ್ತು ಕಡಿಮೆ ದಕ್ಷತೆಗೆ ಕಾರಣವಾಗುತ್ತದೆ.
ಇಷ್ಟು ಮಾತ್ರವಲ್ಲದೆ ವಿಮಾನದ ಕಿಟಕಿಗಳು ವೃತ್ತಾಕಾರದಲ್ಲಿ ಮಾತ್ರ ಇರುತ್ತದೆ. ಎಂದಿಗೂ ಬೇರೆ ಬೇರೆಯ ಆಕಾರದಲ್ಲಿ ಈ ಕಿಟಕಿಗಳು ಇರುವುದಿಲ್ಲ. ಇದರ ಹಿಂದಿನ ಕಾರಣ ಏನು ಗೊತ್ತಾ? ಸುರಕ್ಷತೆಗೆ ಏನಾದರೂ ಸಂಬಂಧವಿದೆಯೇ ಎಂಬುದನ್ನು ನಾವಿಂದು ತಿಳಿಯೋಣ.
ವಿಮಾನದ ಕಿಟಕಿಗಳು ಫ್ಯೂಸ್ಲೇಜ್‌ನ ಭಾಗವಾಗಿದೆ. ಅವುಗಳನ್ನು ದೊಡ್ಡದಾಗಿ ಮಾಡಿದರೆ, ವಿಮಾನದ ರಚನೆಯು ಪರಿಣಾಮ ಬೀರುತ್ತದೆ ಮತ್ತು ದುರ್ಬಲಗೊಳ್ಳುತ್ತದೆ. ವಿಮಾನ ಹಾರಾಟ ನಡೆಸುವಾಗ ಗಾಳಿಯ ಹರಿವು ಹಾಗೂ ಘರ್ಷಣೆಗೆ ಒಳಗಾಗುತ್ತದೆ. ಇಷ್ಟು ಪ್ರಬಲ ಘರ್ಷಣೆಯನ್ನು ಆ ಕಿಟಕಿಗಳು ತಡೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಆಕಾಶದಲ್ಲಿ ತೀವ್ರ ತರವಾದ ಗಾಳಿಗೆ ಸಿಲುಕಬೇಕಾಗುತ್ತದೆ.
ದೊಡ್ಡ ಕಿಟಕಿಗಳು ವಿಮಾನದ ಮೇಲ್ಮೈಯಲ್ಲಿ ಗಾಳಿಯ ಮೃದುವಾದ ಹರಿವನ್ನು ಅಡ್ಡಿಪಡಿಸುತ್ತದೆ, ಜೊತೆಗೆ ಹೊರಗಿನಿಂದ ಯಾವುದಾದರು ವಸ್ತು ವಿಮಾನಕ್ಕೆ ಅಡ್ಡಿಯಾದರೆ ಅಥವಾ ಡಿಕ್ಕಿಯಾದರೆ ಅದರ ತೀವ್ರತೆ ಕಡಿಮೆಯಾಗಬೇಕಾದರೆ ಚಿಕ್ಕ ಕಿಟಕಿಗಳ ಅಗತ್ಯರಿತ್ತದೆ. ಏಕೆಂದರೆ ವಿಮಾನದ ಸುತ್ತ ಎಷ್ಟರ ಮಟ್ಟಿಗೆ ಲೋಹವಿರುತ್ತದೆಯೋ ಅಷ್ಟು ಸುರಕ್ಷಿತ ಎಂಬ ನಿಯಮವಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಬೋಯಿಂಗ್ 787 ವಿಮಾನವು ದೊಡ್ಡ ಕಿಟಕಿಗಳ ಮೂಲಕ ಆಗಮಿಸುತ್ತಿದೆ. ದೊಡ್ಡ ಕ್ಯಾಬಿನ್ ಜೊತೆ ಒಂದಿಷ್ಟು ದೊಡ್ಡ ಪರದೆಯ ವೀಕ್ಷಣೆಯೊಂದಿಗೆ ಬೋಯಿಂಗ್ ಹಾರಾಟ ನಡೆಸಲಿದೆ.
1950 ರ ದಶಕದವರೆಗೆ ವಿಮಾನದ ಕಿಟಕಿ ಸೀಟುಗಳು ಚೌಕಾಕಾರವಾಗಿದ್ದವು. ವಿಮಾನಯಾನವು ಕ್ರಮೇಣ ಹೆಚ್ಚು ಜನಪ್ರಿಯವಾಗುತ್ತಿದ್ದಂತೆ, ವೆಚ್ಚ ಕಡಿತದ ಉದ್ದೇಶಗಳಿಗಾಗಿ ವಿಮಾನಯಾನ ಸಂಸ್ಥೆಗಳು ಹೆಚ್ಚಿನ ಎತ್ತರದಲ್ಲಿ ಹಾರಲು ಪ್ರಾರಂಭಿಸಿದವು. ಹೆಚ್ಚು ಎತ್ತರದಲ್ಲಿ ಹಾರಾಟ ಮಾಡುವಾಗ ಕಡಿಮೆ ಇಂಧನ ಬಳಸುತ್ತವೆ. ಎತ್ತರದಲ್ಲಿ ಗಾಳಿಯ ಒತ್ತಡ ಕಡಿಮೆ ಇರುವುದರಿಂದ ಕಡಿಮೆ ಇಂಧನ ಬೇಕಾಗುತ್ತದೆ.
ವಿಮಾನಗಳು ಹೆಚ್ಚು ಎತ್ತರದಲ್ಲಿ ಹಾರುವಂತೆ ಮಾಡಲು, ಅವುಗಳು ಹೆಚ್ಚು ಒತ್ತಡಕ್ಕೆ ಒಳಗಾಗಬೇಕಾಗಿತ್ತು. ಪರಿಣಾಮವಾಗಿ, ವಿಮಾನದ ಒಳ ಮತ್ತು ಹೊರಭಾಗದ ನಡುವಿನ ಒತ್ತಡದ ವ್ಯತ್ಯಾಸಗಳು ಏರಿತು, ಹೆಚ್ಚುವರಿ ಒತ್ತಡವನ್ನು ಸೃಷ್ಟಿಸುತ್ತದೆ. ಇದರ ಜೊತೆಗೆ ಹಲವು ವಿಮಾನ ದುರಂತಗಳು ಅದರ ವಿನ್ಯಾಸದ ಕುರಿತಂತೆ ಇಂಜಿನಿಯರ್‌ಗಳು ಯೋಚಿಸುವಂತೆ ಮಾಡಿತ್ತು. ಇದು ಸಣ್ಣ ಕಿಟಕಿ ವಿನ್ಯಾಸಕ್ಕೆ ಕಾರಣವಾಗಿತ್ತು.
ಒಟ್ಟಿನಲ್ಲಿ ವಿಮಾನದ ಇಂಧನ ದಕ್ಷತೆ ಹಾಗೂ ಅದರ ದುರಂತಗಳ ಸರಮಾಲೆ ಕಡಿಮೆ ಮಾಡುವ ಉದ್ದೇಶದಿಂದ ಕಿಟಕಿಯ ವಿನ್ಯಾಸವೂ ಪ್ರಮುಖ ಪಾತ್ರ ವಹಿಸಿತ್ತು. ಹೀಗಾಗಿ ಎಲ್ಲಾ ವಿಮಾನಗಳಲ್ಲೂ ಸಣ್ಣ ಕಿಟಕಿಗಳ ನಾವು ಇಂದು ನೋಡುತ್ತಿದ್ದೇವೆ.



Click it and Unblock the Notifications
