Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ವಿಮಾನ ಹಾರಾಡುವಾಗ ಬಿಳಿ ಹೊಗೆ ಮೂಡುವುದೇಕೆ.? ಏನಿದರ ರಹಸ್ಯ?
ನೀವು ಆಕಾಶದಲ್ಲಿ ವಿಮಾನ ಹಾರಾಡುತ್ತಿರುವ ಸದ್ದು ಕೇಳಿ ತಲೆ ಎತ್ತಿ ನೋಡುವ ಅಭ್ಯಾಸ ಇಟ್ಟುಕೊಂಡಿರುತ್ತೀರಿ. ಇದು ಸಹಜ ಪ್ರಕ್ರಿಯೆ, ವಿಮಾನವೇನು ಯಾರಿಗೂ ಹೊಸತಲ್ಲ ಆದರೂ ವಿಮಾನದ ಸದ್ದಾದರೆ ಎಲ್ಲರು ಒಮ್ಮೆ ಅದರತ್ತ ನೋಡುತ್ತಾರೆ. ಮತ್ತೆ ಕೆಲವು ಬಾರಿ ವಿಮಾನ ಹಾರಾಡುವಾಗ ನಾವು ಅದರ ಹಿಂದೆ ಹೊಗೆಯಂತಹ ಮೋಡಗಳು ಸೃಷ್ಟಿಯಾಗುವುದು ಸಹ ನೋಡಿದ್ದೇವೆ.
ವಿಮಾನ ಹಾರಾಡುವಾಗ ಅದರ ಎರಡು ಇಂಜಿನ್ ಹಿಂಭಾಗದಲ್ಲಿ ಹೊಗೆ ಒಂದು ದಾರಿ ಮಾಡಿದಂತೆ ಕಾಣುತ್ತದೆ. ಇದು ಆಕಾಶದಲ್ಲಿ ಒಂದು ಗುರುತು ಮೂಡಿಸಿ ಬಹಳ ಕಾಲದವರೆಗೂ ಅದು ಹಾಗೆಯೇ ಉಳಿಯುತ್ತದೆ. ಹಾಗಾದ್ರೆ ಈ ರೀತಿ ಹೊಗೆ ಏಕೆ ಸೃಷ್ಟಿಯಾಗುತ್ತದೆ. ಎಲ್ಲಾ ವಿಮಾನಗಳು ಈ ರೀತಿ ಹೊಗೆ ಕಾಣಿಸುವುದಿಲ್ಲ ಏಕೆ ಎಂಬುದು ನಿಮಗೆ ಗೊತ್ತಾ?

ವಿಮಾನದ ಹಿಂದೆ ನೀವು ನೋಡುವ ಹೊಗೆಯನ್ನು ಕಾಂಟ್ರೇಲ್ಸ್ ಎನ್ನಲಾಗುತ್ತದೆ. ಇದು ಚಳಿಗಾಲದಲ್ಲಿ ನಿಮ್ಮ ಬಾಯಿಯಿಂದ ಬರುವ ಹೊಗೆಯಂತೆಯೇ ಕೆಲಸ ಮಾಡುತ್ತವೆ. ಹೇಗೆಂದರೆ ಚಳಿಗಾಲದ ಸಮಯ ತೇವಾಂಶ ಕಡಿಮೆಯಾಗಿದ್ದಾಗ ನಿಮ್ಮ ಬಾಯಿಂದ ಬರುವ ಹೊಗೆಯು ವಾತಾವರಣಕ್ಕೆ ಸೇರಿ ಘನೀಕರಣಗೊಳ್ಳುತ್ತದೆ. ಈ ವೇಳೆ ಅದು ನಿಮ್ಮ ಕಣ್ಣಿಗೆ ಗೋಚರವಾಗುತ್ತದೆ.
ಇದೇ ರೀತಿ ಆಕಾಶದಲ್ಲಿಯೂ ಸಹ ಎಂಜಿನ್‌ಗಳಿಂದ ಹೊರಬರುವ ಕಾಂಟ್ರೇಲ್ಸ್‌ಗಳು ವಾತಾವರಣದೊಂದಿಗೆ ಬೆರೆತು ಘನೀಕರಣಕ್ಕೆ ಒಳಗಾಗುತ್ತವೆ. ಒಂದು ತೇವಾಂಶ ಹೆಚ್ಚಾಗಿದ್ದಾರೆ ದಪ್ಪವಾದ ಗೆರೆಗಳಾಗಿ ಮೂಡುತ್ತದೆ, ಜೊತೆಗೆ ಬಹಳ ಕಾಲದವರೆಗೂ ಆಕಾಶದಲ್ಲಿ ಉಳಿದುಬಿಡುತ್ತವೆ. ಒಂದು ವೇಳೆ ತೇವಾಂಶ ಕಡಿಮೆ ಇದ್ದರೆ ತೆಳುವಾದ ಗೆರೆಗಳು ಮೂಡುತ್ತವೆ.
ಜೆಟ್ ಇಂಜಿನ್‌ಗಳಿಂದ ಬಿಸಿಯಾದ, ಆರ್ದ್ರ ನಿಷ್ಕಾಸವು ವಾತಾವರಣದೊಂದಿಗೆ ಬೆರೆಯುತ್ತದೆ, ಇದು ಹೆಚ್ಚಿನ ಎತ್ತರದಲ್ಲಿ ನಿಷ್ಕಾಸ ಅನಿಲಕ್ಕಿಂತ ಕಡಿಮೆ ಆವಿಯ ಒತ್ತಡ ಮತ್ತು ತಾಪಮಾನವನ್ನು ಹೊಂದಿರುತ್ತದೆ. ಜೊತೆಗೆ ಇವು ಗಾಳಿಗೆ ಬೆರೆತಾಗ ಸ್ಪಟಿಕದಂತೆ ವರ್ತಿಸುತ್ತವೆ, ಬಳಿಕ ಗಾಳಿಯಲ್ಲಿ ಆವಿಯಾಗಿ ಬೆರೆಯುತ್ತವೆ.
ಏರ್‌ಲೈನರ್‌ಗಳ ಹಿಂದೆ ಕಂಡುಬರುವ ಕಾಂಟ್ರಾಲ್‌ಗಳು ಅಪಾಯಕಾರಿಯಲ್ಲ, ಏಕೆಂದರೆ ಅವುಗಳ ಮುಖ್ಯ ಸಂಯೋಜನೆಯು ಶುದ್ಧ ನೀರು. ಮಾಲೀನ್ಯವನ್ನು ತಡೆಯುವ ಉದ್ದೇಶದಿಂದ ಈ ಜೆಟ್ ಇಂಧನಗಳನ್ನು ಹೆಚ್ಚು ಬಾರಿ ಸಂಸ್ಕರಿಸಲಾಗುತ್ತದೆ. ಹೀಗಾಗಿ ವಿಮಾನಗಳು ಹೊರಸೂಸುವ ಅನಿಲದಿಂದ ಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ.
ಮೊಟ್ಟ ಮೊದಲ ಬಾರಿಗೆ ಈ ರೀತಿಯ ವಿಮಾನ ಹಾರಾಡಿದ್ದ ಕುರಿತು ಭೌತಶಾಸ್ತ್ರಜ್ಞ ರಾಬರ್ಟ್ ಎಟೆನ್‌ರಿಚ್ ದಕ್ಷಿಣ ಟಿರೋಲ್‌ನಲ್ಲಿ ವಿಮಾನದ ಹಿಂದೆ ಮೋಡದಂತಹ ರಚನೆ ಉಂಟಾದ ಕುರಿತು 1919ರಲ್ಲಿ ಉಲ್ಲೇಖಿಸಿದ್ದರು. ವಿಮಾನದ ನಿಷ್ಕಾಸ ಅನಿಲಗಳಿಂದ ಕ್ಯುಮುಲಸ್ ಪಟ್ಟಿಯ ಘನೀಕರಣ ಎಂದು ವಿವರಿಸಿದರು. ಇದು ದೀರ್ಘ ಸಮಯದವರೆಗೆ ಗೋಚರಿಸುತ್ತದೆ ಎಂದು ಗಮನಿಸಿದರು.
ಆದರೆ ಮಹಾಯುದ್ಧದ ಸಮಯದಲ್ಲಿ ವಿಮಾನಗಳು ಈ ರೀತಿ ತಮ್ಮ ಹಾರಾಟದ ಗುರುತು ಆಕಾಶದಲ್ಲಿ ಬಿಟ್ಟು ಬಿಡುವ ಪ್ರಕ್ರಿಯೆಯನ್ನು ತಪ್ಪಿಸಲಾಗಿತ್ತು. ಈ ಮೂಲಕ ಶತ್ರು ರಾಷ್ಟ್ರಗಳಿಗೆ ವಿಮಾನಗಳ ಹಾರಾಟದ ವಿಚಾರ ತಿಳಿಯದಂತೆ ಮಾಡಲು ಈ ವಿಮಾನ ಹಾರಾಟದ ವೇಳೆ ಬಿಳಿಯ ಹೊಗೆ ಮೂಡದಂತೆ ಮಾಡಿದ್ದರು.
ಆದರೆ ಎಲ್ಲಾ ವಿಮಾನಗಳು ಈ ಹೊಗೆಯ ಪ್ರಕ್ರಿಯೆಯಿಂದ ಹೊರಗುಳಿಯಬಹುದಂತೆ. ಆದರೆ ಎತ್ತರಕ್ಕೆ ವಿಮಾನ ಹಾರಬೇಕಾದರೆ ಈ ಕಾಂಟ್ರೆಲ್‌ಗಳ ಸಹಾಯ ಬೇಕಾಗುತ್ತದೆ. ಈ ಕಾಂಟ್ರೇಲ್‌ಗಳ ಸಹಾಯದಿಂದಲೇ ಇತ್ತೀಚಿಗೆ ಆಕಾಶದೆತ್ತರದಲ್ಲಿ ಎಷ್ಟು ತಾಪಮಾನ ಇದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ.
ಇನ್ನೂ ಈ ಕಾಂಟ್ರೇಲ್‌ಗಳ ಕಡಿಮೆ ಮಾಡಬೇಕಾದರೆ ವಿಮಾನ ಹಾರುವ ಎತ್ತರ ಕಡಿಮೆ ಮಾಡಬೇಕಾಗುತ್ತದೆ. ಇಂದು ವೇಳೆ ವಿಮಾನ ಅತ್ಯಂತ ಕೆಳಗೆ ಹಾರಾಡಬೇಕಾದರೆ ಅದಕ್ಕೆ ಇಂಧನ ಹೆಚ್ಚಾಗಿ ಬಳಸಬೇಕಾಗುತ್ತದೆ.



Click it and Unblock the Notifications
