Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸಾಂತಾ ಕ್ಲಾಸ್ ಕೆಂಪು ಬಿಳಿ ಬಟ್ಟೆಯಲ್ಲಿ ಕಾಣಿಸುವುದು ಏಕೆ? ಇದರ ಹಿಂದಿನ ಸತ್ಯವೇನು?
ಕ್ರಿಸ್‌ಮಸ್ ಹಬ್ಬ ಸಮೀಪಿಸುತ್ತಿದೆ. ಕ್ರಿಶ್ಚಿಯನ್ ಸಮುದಾಯ ಬಹಳ ಸಂಭ್ರಮದಿಂದ ಆಚರಿಸುವ ಹಬ್ಬ ಇದಾಗಿದೆ. ವಿಶ್ವದ ಬಹುತೇಕ ದೇಶದಲ್ಲಿ ಕ್ರಿಸ್‌ಮಸ್ ಆಚರಣೆ ನೋಡಬಹುದು. ಏಸು ಹುಟ್ಟಿದ ದಿನವನ್ನಾಗಿ ಈ ಆಚರಿಸುವ ಹಬ್ಬವಿದು. ಈ ಹಬ್ಬದಂದು ವಿಶೇಷ ರೀತಿಯ ಉಡುಗೊರೆಗಳು, ರೆಸಿಪಿಗಳ ಸವಿಯುವುದು ನೋಡಬಹುದು.
ಕ್ರಿಸ್‌ಮಸ್ ಹಬ್ಬ ಹಲವು ಕಡೆ ಒಂದು ವಾರಕ್ಕೂ ಹೆಚ್ಚು ದಿನಗಳ ಕಾಲ ಸಂಭ್ರಮದಿಂದ ಆಚರಿಸುವುದು ನೋಡಬಹುದು. ಹಾಗೆ ವಿಶೇಷ ಸಮಯದಲ್ಲಿ ಗಿಫ್ಟ್‌ಗಳು ಗಮನ ಸೆಳೆಯುತ್ತವೆ. ಹಾಗೆ ಸಾಂಟಾ ಕ್ಲಾಸ್ ಕುರಿತಾದ ಕಥೆಗಳು ಈ ಸಮಯದಲ್ಲಿ ಮತ್ತೆ ಮುನ್ನಲೆಗೆ ಬರುವುದು ನೋಡಬಹುದು. ಸಾಂತಾ ಕ್ಲಾಸ್ ಅಂದ್ರೆ ಮಕ್ಕಳಿಗೆ ಬಹಳ ಅಚ್ಚುಮೆಚ್ಚು. ಆತ ಈ ಕ್ರಿಸ್‌ಮಸ್ ದಿನದಂದು ಗಿಫ್ಟ್ ಹೊತ್ತು ಬರುತ್ತಾನೆ ಎಂಬ ನಂಬಿಕೆ ಇದೆ.

ಆದ್ರೆ ಸಾಂತಾ ಕ್ಲಾಸ್ ಯಾವಾಗಲು ನಿಮಗೆ ಕೆಂಪು ಮತ್ತು ಬಿಳಿ ಬಣ್ಣದ ಉಡುಪಿನಲ್ಲಿ ನೋಡಬಹುದು. ಆದ್ರೆ ಸಾಂತಾ ಕ್ಲಾಸ್ ಯಾವಾಗಲು ಕೆಂಪು ಬಣ್ಣದ ಬಟ್ಟೆಯಲ್ಲೇ ಕಾಣಿಸಿಕೊಳ್ಳುವುದು ಏಕೆ? ಇದರ ಹಿಂದಿರುವ ಕಾರಣವೇನು? ಈ ಕುರಿತಾದ ಅಚ್ಚರಿ ಮಾಹಿತಿ ನಾವಿಂದು ತಿಳಿದುಕೊಳ್ಳೋಣ.
ಇತಿಹಾಸದ ಉದ್ದಕ್ಕೂ ನೀವು ಸಾಂತಾ ಕ್ಲಾಸ್ ಬಟ್ಟೆ ನೋಡಿದಾಗಲೂ ಈ ರೀತಿ ಕೆಂಪು ಮತ್ತು ಬಿಳಿ ಬಣ್ಣದ ವಿನ್ಯಾಸ ನೋಡಬಹುದು. ಹಾಗಾದ್ರೆ ಈ ಸಾಂತಾ ಕ್ಲಾಸ್ ವಿನ್ಯಾಸ ಮಾಡಿದ್ಯಾರು. ಸಾಂತಾ ಕ್ಲಾಸ್ ಎಂದು ಹೆಸರು ಬರಲು ಕಾರಣವೇನು?
ಸಾಂತಾ ಯಾವಾಗಲೂ ಕೆಂಪು ಬಣ್ಣದ ಬಟ್ಟೆ ಧರಿಸುತ್ತಿರಲಿಲ್ಲ. ಆದ್ರೆ ಸಾಂತಾ ಎಂಬ ವ್ಯಕ್ತಿಯ ಪಾತ್ರವು ಜನರ ಮನಸ್ಸಿನಲ್ಲಿ ಉಳಿಯಲು ದಶಕಗಳೇ ಬೇಕಾದವು, ಇದೊಂದು ಐಕಾನಿಕ್ ಪಾತ್ರವಾಗಿದೆ. ಕ್ರಿಶ್ಚಿಯನ್ ಬಿಷಪ್ ಸೇಂಟ್ ನಿಕೋಲಸ್ ಮತ್ತು ಅವನ ಡಚ್ ಆಪ್ತ ಸಿಂಟರ್ಕ್ಲಾಸ್ ಮೊದಲಿಗೆ ಈ ಕೆಂಪು ಮತ್ತು ಬಿಳಿ ಬಣ್ಣದ ಬಟ್ಟೆಯ ಪಾತ್ರ ರಚಿಸಿದ್ದರು. ಇದು 1820ರಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಬಟ್ಟೆ ಧರಿಸಿದ್ದ ಸಾಂತಾ ಕ್ಲಾಸ್ ಎಂಬ ಪಾತ್ರ ಹೊರಬಂದಿತ್ತು ಎಂದು ಹೇಳಲಾಗಿದೆ.
ಸಾಂತಾ ಕ್ಲಾಸ್‌ನ ಮೂಲವು ಡಚ್ ಸಿಂಟರ್‌ಕ್ಲಾಸ್, ಟೋಪಿ ಧರಿಸಿರುವ ಫ್ರೆಂಚ್ ವ್ಯಕ್ತಿ ಬೇರ್ ನೋಯೆಲ್ ಮತ್ತು ಜರ್ಮನ್ ಕ್ರಿಸ್ಟ್‌ಕಿಂಡ್ಲ್, ಉಡುಗೊರೆ ನೀಡುವ ಬೇಬಿ ಜೀಸಸ್ ಸೇರಿದಂತೆ ಹಲವಾರು ಪೂರ್ವಜರಿಂದ ಬಂದಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ ಕವನ, ಸಂಪಾದಕೀಯಗಳು ಮತ್ತು ಜಾಹೀರಾತುಗಳಿಂದ ಸ್ಫೂರ್ತಿ ಪಡೆದ ಸಾಂತಾನ ಅಧಿಕೃತ ರೂಪಾಂತರ ಹೊರಬಂದಿತ್ತು ಎಂದು ಹೇಳಲಾಗಿದೆ.
1820ರ ದಶಕದಲ್ಲಿ ಹಿಮ ಸಾರಂಗಗಳು ಸಾಂತಾ ಕ್ಲಾಸ್‌ನನ್ನು ಎಳೆದುಕೊಂಡು ಹೋಗುತ್ತಿರುವಂತಹ ಒಂದು ಕಥೆಯನ್ನು ರೂಪಿಸಲಾಗಿತ್ತು, ಇದು ಕ್ರಿಸ್‌ಮಸ್ ಸಮಯದಲ್ಲಿ ಬಹಳ ಫೇಮಸ್ ಆಗಿತ್ತು. ಹಲವು ಕಂಪನಿಗಳು ತಮ್ಮ ಉತ್ಪನ್ನದ ಜಾಹೀರಾತು ನೀಡುವ ಒಂದು ಮಾದ್ಯಮವಾಗಿ ಈ ಸಾಂತಾನನ್ನು ಬಳಸಿದರು ಅದ್ರಲ್ಲಿ ಈ ಕೆಂಪು ಮತ್ತು ಬಿಳಿ ಬಣ್ಣದ ಬಟ್ಟೆ ಹಾಕಿಕೊಂಡಿದ್ದ ಪಾತ್ರ ಬಹಳ ಫೇಮಸ್ ಆಗಿತ್ತು.
ಸಾಂತಾ ರೂಪಕ ರಚಿಸುವಲ್ಲಿ ಥಾಮಸ್ ನಾಸ್ಟ್ ಪ್ರಮುಖ ಪಾತ್ರ ವಹಿಸಿದ್ದರು. 1863 ರಲ್ಲಿ ಅಂತರ್ಯುದ್ಧದ ಸಮಯದಲ್ಲಿ, ಅವರು ಸಾಂತಾ ನಕ್ಷತ್ರಗಳು ಮತ್ತು ಅಮೆರಿಕದ ಬಾವುಟದ ಪ್ರತಿಕವಾದ ಬಟ್ಟೆ ಧರಿಸಿ ಸೈನಿಕರಿಗೆ ಉಡುಗೊರೆಗಳ ಹಂಚಿದ್ದರು. ಇದು ಮುಂದೆ ಸಾಂತಾ ಕ್ರಿಸ್‌ಮಸ್‌ನಲ್ಲಿ ಉಡುಗೊರೆ ನೀಡಲು ಬರುತ್ತಾರೆ ಎಂಬ ಸಂಪ್ರದಾಯಕ್ಕೆ ನಾಂದಿಯಾಗಿತ್ತು. 1931 ರಲ್ಲಿ ಕೋಕಾ-ಕೋಲಾ ಕಂಪನಿಯು ತಮ್ಮ ಕ್ರಿಸ್‌ಮಸ್ ಜಾಹೀರಾತುಗಳಿಗಾಗಿ ಸಾಂತಾ ಕ್ಲಾಸ್‌ನ ಬಳಸಿತ್ತು. ಇದು ಎಲ್ಲಾ ಕಡೆ ಹರಡಿದ ಪರಿಣಾಮ ಸಾಂತಾ ಕ್ಲಾಸ್ ಎಂಬ ಪಾತ್ರ ಈಗ ಅಚ್ಚಳಿಯದೆ ಉಳಿದಿದೆ.



Click it and Unblock the Notifications
