Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪಾಕಿಸ್ತಾನ ನಮಗಿಂತ ಒಂದು ದಿನ ಮುನ್ನ ಸ್ವಾತಂತ್ರ್ಯ ಆಚರಿಸೋದ್ಯಾಕೆ?
ಭಾರತ ಇಂದು ತನ್ನ 78ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿದೆ. ಅದೇಷ್ಟೋ ಹೋರಾಟಗಾರರ ತ್ಯಾಗ ಬಲಿದಾನದ ಸಂಕೇತವಾಗಿ ನಾವಿಂದು ಸ್ವಾತಂತ್ರ್ಯ ಪಡದಿದ್ದೇವೆ. ಆದರೆ ಈ ದೇಶ ಬ್ರಿಟೀಷರಿಂದ ಮುಕ್ತಿಯಾಗುವ ಮೊದಲು ಪಾಕಿಸ್ತಾನ ವಿಭಾಗವಾಗದೆ ಒಂದೇ ದೇಶವಾಗಿತ್ತು. ಆದರೆ ಸ್ವಾತಂತ್ರ್ಯದ ಬಳಿಕ ಈ ವಿಭಜನೆಯೂ ನಡೆದಿತ್ತು ಎಂಬುದು ನಮಗೆಲ್ಲಾ ತಿಳಿದಿದೆ.
ಹೀಗಾಗಿ ಭಾರತದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣರ ಸಂಭ್ರಮದಿದ್ದರೆ ಇನ್ನೊಂದೆಡೆ ಪಾಕಿಸ್ತಾನದಲ್ಲಿ ಒಂದು ದಿನ ಮೊದಲು ಅಂದರೆ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ.

ಈ ಎರಡೂ ದೇಶಗಳು ಭಾರತೀಯ ಸ್ವಾತಂತ್ರ್ಯ ಕಾಯಿದೆ 1947 ರ ಅಡಿಯಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡವು. ಆದರೆ ಆಶ್ಚರ್ಯದ ಸಂಗತಿಯೆಂದರೆ ಎರಡೂ ದೇಶಗಳು ಒಂದೇ ದಿನದಲ್ಲಿ ಸ್ವಾತಂತ್ರ್ಯ ಪಡೆದಾಗ, ಪಾಕಿಸ್ತಾನವು ಒಂದು ದಿನ ಮುಂಚಿತವಾಗಿ ಅಂದರೆ ಆಗಸ್ಟ್ 14 ರಂದು ಸ್ವಾತಂತ್ರ್ಯವನ್ನು ಆಚರಿಸುತ್ತದೆ.
ಹಾಗಾದ್ರೆ ಪಾಕಿಸ್ತಾನದಲ್ಲಿ ಒಂದು ದಿನ ಮೊದಲು ಏಕೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತೆ? ಇದರ ಹಿಂದಿರುವ ಕಾರಣವೇನು? ಎಂಬುದನ್ನು ನಾವಿಂದು ನೋಡೋಣ.
ಬ್ರಿಟೀಷರು ಕಾಗದ ಪತ್ರ ನೀಡಿದ್ದು ಪಾಕಿಸ್ತಾನಕ್ಕೆ ಮೊದಲು
ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ದೆಹಲಿ ಮತ್ತು ಕರಾಚಿಗೆ ಏಕಕಾಲದಲ್ಲಿ ಪ್ರವಾಸ ಮಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಅವರು ಆಗಸ್ಟ್ 14 ರಂದು ಪಾಕಿಸ್ತಾನಕ್ಕೆ ಮತ್ತು ಆಗಸ್ಟ್ 15 ರಂದು ಭಾರತಕ್ಕೆ ಅಧಿಕಾರವನ್ನು ವರ್ಗಾಯಿಸಿದರು ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಅದಕ್ಕಾಗಿಯೇ ಪಾಕಿಸ್ತಾನವು ಭಾರತಕ್ಕಿಂತ ಒಂದು ದಿನ ಮುಂಚಿತವಾಗಿ ತನ್ನ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತದೆ.
ಭಾರತ ಮತ್ತು ಪಾಕಿಸ್ತಾನದ ಸ್ವಾತಂತ್ರ್ಯದ ಹಿಂದೆ ಬ್ರಿಟೀಷ್ ಅಧಿಕಾರಿಯ ಕಾರಣ ಮಾತ್ರವಲ್ಲ, ಭೌಗೋಳಿಕ ಕಾರಣಗಳೂ ಅಡಗಿವೆ. ವಾಸ್ತವವಾಗಿ, ಸ್ವಾತಂತ್ರ್ಯದ ಇತಿಹಾಸವು ಎರಡೂ ದೇಶಗಳ ನಡುವಿನ ಸಮಯದ ಅಂತರ ಸಹ ಇದಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಪ್ರಮಾಣಿತ ಸಮಯವು ಭಾರತಕ್ಕಿಂತ 30 ನಿಮಿಷಗಳಷ್ಟು ಹಿಂದಿದೆ. ವಾಸ್ತವವಾಗಿ ಭಾರತದಲ್ಲಿ 12 ಗಂಟೆಯಾದಾಗ ಪಾಕಿಸ್ತಾನದ ಗಡಿಯಾರಗಳು 11.30 ಗಂಟೆ ತೋರಿಸಲಿದೆ. ಆದ್ದರಿಂದ ಕೆಲವು ವರದಿಗಳ ಪ್ರಕಾರ, ಬ್ರಿಟಿಷ್ ಸರ್ಕಾರವು ಭಾರತೀಯ ಸ್ವಾತಂತ್ರ್ಯ ಕಾಯಿದೆಗೆ ಸಹಿ ಹಾಕಿದಾಗ ಅದು 00.00 (12:00) ರಾತ್ರಿ ಎಂದು ನಂಬಲಾಗಿದೆ. ಅಂದರೆ ಭಾರತದಲ್ಲಿ ಆಗಸ್ಟ್ 15 ಮತ್ತು ಪಾಕಿಸ್ತಾನದಲ್ಲಿ ಆಗಸ್ಟ್ 14 ರಂದು ರಾತ್ರಿ 11:30 ಆಗಿತ್ತು ಎಂಬುದು ಹಲವರ ವಾದವಾಗಿದೆ.
ಇತಿಹಾಸದ ಪ್ರಕಾರ, ಸ್ವಾತಂತ್ರ್ಯದ ನಂತರದ ಮೊದಲ ಎರಡು ವರ್ಷಗಳ ಕಾಲ, ಪಾಕಿಸ್ತಾನವು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿತ್ತು, ಆದರೆ ಪಾಕಿಸ್ತಾನದ ಮೊದಲ ಗವರ್ನರ್ ಜನರಲ್ ಆಗಿದ್ದ ಪಾಕಿಸ್ತಾನದ ಉದಯಕ್ಕೆ ಕಾರಣರಾಗಿದ್ದ ಮೊಹಮ್ಮದ್ ಅಲಿ ಜಿನ್ನಾ ಅವರು ಮೃತಪಟ್ಟ ನಂತರ, ಆಗಸ್ಟ್ 14 ರಂದು ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ಆರಂಭಿಸಿಲಾಗಿತ್ತು. 1948ರಲ್ಲಿ ಪಾಕಿಸ್ತಾನ ಹೊರಡಿಸಿದ ಮೊದಲ ಅಂಚೆ ಚೀಟಿಯಲ್ಲೂ ಆಗಸ್ಟ್ 15 1947 ರಂದು ಸ್ವಾತಂತ್ರ್ಯ ದಿನಾ ಎಂಬುದಾಗಿಯೇ ದಾಖಲಾಗಿತ್ತು.
ರಂಜಾನ್ ಹಬ್ಬ ಕಾರಣ
1948 ರಲ್ಲಿ, ಪಾಕಿಸ್ತಾನದಲ್ಲಿ ಸ್ವಾತಂತ್ರ್ಯದ ದಿನಾಂಕವನ್ನು ಆಗಸ್ಟ್ 14 ಕ್ಕೆ ಬದಲಾಯಿಸಲಾಯಿತು. ಅನೇಕ ಮಾಧ್ಯಮ ವರದಿಗಳ ಪ್ರಕಾರ, ಆ ದಿನ ರಂಜಾನ್ 27 ನೇ ದಿನವಾಗಿತ್ತು. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಇದು ವಿಶೇಷ ಮತ್ತು ಪವಿತ್ರವಾಗಿದೆ. ಈ ದಿನ ಸ್ವಾತಂತ್ರ್ಯ ಆಚರಿಸಿಕೊಳ್ಳಲು ಎಲ್ಲರು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.



Click it and Unblock the Notifications











