Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ನಿಮ್ಮ ಮನೆಗಿಂತ ಬೇರೆಯವರ ಮನೆ ವಾಸನೆ ಬೇಗ ಗ್ರಹಿಸುತ್ತೀರಿ ಏಕೆ?
ನೀವು ನಿತ್ಯ ಒಂದಲ್ಲಾ ರೀತಿಯಲ್ಲಿ ನಿಮ್ಮ ಎಲ್ಲಾ ಇಂದ್ರಿಯಗಳಿಗೂ ಕೆಲಸ ಕೊಟ್ಟಿರುತ್ತೇವೆ. ಅದ್ರಲ್ಲೂ ಮೂಗಿಗೆ ಹತ್ತು ಹಲವು ರೀತಿಯ ವಾಸನೆ-ಸುವಾಸನೆ ತಾಕುತ್ತಲೇ ಇರುತ್ತದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮೂಗು ಎಷ್ಟೋ ರೀತಿಯ ವಾಸನೆಗಳ ಗ್ರಹಿಸುತ್ತದೆ.
ಅದು ನೆಲದಿಂದ ಹಿಡಿದು ಸಿಹಿ ತಿಂಡಿ, ಕೊಳಚೆ, ಹೂವು ಹೀಗೆ ಪ್ರತಿಯೊಂದು ವಸ್ತುವಿನ ವಾಸನೆಯನ್ನೂ ಗ್ರಹಿಸುತ್ತೆ. ಆದ್ರೆ ನೀವು ಮನೆಯಲ್ಲಿ ಇದ್ದಾಗ ನಿಮ್ಮ ಮೂಗಿಗೆ ಯಾವುದೇ ವಾಸನೆ ಬಂದಂತೆ ಅನಿಸುವುದಿಲ್ಲ ಆದರೆ ನೀವು ಮತ್ತೊಬ್ಬರ ಮನೆಗೆ ಹೋದಾಗ ಮಾತ್ರ ಅವರ ಮನೆ ಅಥವಾ ಕೊಠಡಿಯ ವಾಸನೆ ನಿಮ್ಮ ಮೂಗಿಗೆ ಬಡಿಯುತ್ತದೆ.

ಹಾಗಾದ್ರೆ ಬೇರೆಯವರ ಮನೆ ಒಳಗೆ ಹೋದಾಗ ನಿಮ್ಮ ಮೂಗಿಗೆ ವಾಸನೆ ಬರುವುದೇಕೆ? ನಿಮ್ಮ ಮನೆಯಲ್ಲಿ ನಿಮಗೆ ಯಾವ ವಾಸನೆ ಗ್ರಹಿಸಲು ಆಗುವುದಿಲ್ಲ ಏಕೆ? ನಿಮ್ಮ ಇಂದ್ರಿಯ ಈ ರೀತಿ ವರ್ತಿಸುವುದೇಕೆ? ಎಂಬುದನ್ನು ನೋಡೋಣ.
ನೀವು ಬೇರೆಯವರ ಮನೆ ಪ್ರವೇಶಿಸುತ್ತಿದ್ದಂತೆಯೇ ನಿಮ್ಮ ಮೂಗು ಹಲವು ರೀತಿ ವಾಸನೆ ಗ್ರಹಿಸುತ್ತದೆ. ಆದರೆ ನೀವು ಮನೆಯಲ್ಲಿದ್ದಾಗ ಯಾವ ವಾಸನೆಯೂ ಗ್ರಹಿಸುವುದಿಲ್ಲ ಇದಕ್ಕೆ 'ನೋಸ್ ಬ್ಲೈಂಡ್‌ನೆಸ್' ಎಂದು ಕರೆಯಲಾಗುತ್ತದೆ. ಅಂದರೆ ಮೂಗು ಕುರುಡುತನ ಎನ್ನಬಹುದು. ಏಕೆಂದರೆ ನಿಮ್ಮ ಮನೆಯಲ್ಲಿನ ವಾಸನೆಯನ್ನು ಗ್ರಹಿಸಲು ನಿಮ್ಮ ಮೂಗು ವಿಫಲವಾಗುತ್ತದೆ.
ನೀವು ಮೊದಲು ಹೊಸ ವಾಸನೆಯನ್ನು ಎದುರಿಸಿದಾಗ, ಏರೋಸಾಲ್‌ಗಳು (ವಾಸನೆ ಗ್ರಹಿಸುವ ಅಣುಗಳು) ನಿಮ್ಮ ಮೂಗಿನ ಮೂಲಕ ಹಾದುಹೋಗುತ್ತವೆ ಮತ್ತು ನಿಮ್ಮ ವಾಸನೆ-ಸಂವೇದಿ ಗ್ರಾಹಕಗಳ ಮೇಲೆ ಹಾದು ಹೋಗುತ್ತದೆ. ವಾಸನೆ-ಸಂವೇದಿ ಗ್ರಾಹಕಗಳು ನಿಮ್ಮ ಮೆದುಳಿನ ಲಿಂಬಿಕ್ ಸಿಸ್ಟಮ್‌ನಲ್ಲಿರುವ ಘ್ರಾಣ ಬಲ್ಬ್‌ಗೆ ನರ ಸಂಕೇತಗಳನ್ನು ಕಳುಹಿಸುತ್ತವೆ.
ಲಿಂಬಿಕ್ ವ್ಯವಸ್ಥೆಯು ಭಾವನಾತ್ಮಕ ಮತ್ತು ವರ್ತನೆಯ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ, ಆದ್ದರಿಂದ ವಾಸನೆಯನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಯಾವುದಾದರು ಹೊಸ ವಾಸನೆ ಗ್ರಹಿಸಿದಾಗ ಮಾತ್ರ ಈ ಅಣುಗಳು ಸಂಕೇತ ರವಾನಿಸುತ್ತವೆ. ಇಲ್ಲದಿದ್ದರೆ ಯಾವ ಸಂಕೇತಗಳು ಸಹ ರವಾನೆಯಾಗುವುದಿಲ್ಲ. ಹೀಗಾಗಿ ನೀವು ಬೆಳಗ್ಗೆಯಿಂದ ನಿಮ್ಮ ಮನೆಯಲ್ಲೇ ಇದ್ದಾಗ ಯಾವ ಹೊಸ ವಾಸನೆಯು ನಿಮ್ಮ ಮೂಗಿಗೆ ಹೋಗುವುದಿಲ್ಲ.
ಆದರೆ ನೀವು ಬೇರೆಯವರ ಮನೆ ಪ್ರವೇಶಿಸಿದ ತಕ್ಷಣ ಅಲ್ಲಿನ ಪರಿಸರಲ್ಲಿ ಹೊಸ ಹೊಸ ವಾಸನೆ ನಿಮ್ಮ ಮೂಗಿನ ಗ್ರಂಥಿಗಳಿಗೆ ರವಾನೆಯಾಗುತ್ತದೆ. ಇದರಿಂದ ಹೊಸ ಪ್ರದೇಶದಲ್ಲಿ ನಿಮ್ಮ ಮೂಗು ಅರಳುತ್ತದೆ. ಅಲ್ಲಿರುವ ಬಹುತೇಕ ಎಲ್ಲಾ ವಾಸನೆಗಳ ಗ್ರಹಿಸಲು ಆರಂಭಿಸುತ್ತದೆ. ಆದರೆ ನೀವು ಹೊಸ ಜಾಗಕ್ಕೆ ತೆರಳಿದ ಕೆಲವೇ ಹೊತ್ತಿನಲ್ಲಿ ಆ ವಾಸನೆ ನಿಂತು ಹೋದ ಭಾವನೆ ಸಹ ಎದುರಾಗುತ್ತದೆ.
ಇದಲ್ಲದೆ, ನಿಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಾಸನೆಯನ್ನು ನಿರಂತರವಾಗಿ ಗಮನಿಸುವುದು ನಿಮ್ಮ ಇಂದ್ರಿಯಗಳ ಅತಿಯಾದ ಪ್ರಚೋದನೆಗೆ ಕಾರಣವಾಗಬಹುದು. ಆದ್ದರಿಂದ ಮೂಗು ಪರಿಚಿತ ವಾಸನೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಗಮನಕ್ಕೆ ಅಗತ್ಯವಿರುವ ವಾಸನೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ನೀವು ಅನಿಲ ಸೋರಿಕೆಯನ್ನು ತ್ವರಿತವಾಗಿ ಗುರುತಿಸುತ್ತೀರಿ. ಅಲ್ಲದೆ ಒಗ್ಗರಣೆ ಸುವಾಸನೆ ಸಹ ಮೂಗಿಗೆ ಬಹಳ ಗಾಢವಾಗಿ ಬಡಿಯುತ್ತದೆ.
ಜೊತೆಗೆ ನಿಮ್ಮ ಮನೆಯಲ್ಲಿಯೇ ಒಂದೊಂದು ಕೋಣೆ ಒಂದೊಂದು ರೀತಿಯಾಗಿ ನಿಮ್ಮ ಮೂಗಿಗೆ ವಾಸನೆ ಬರುತ್ತದೆ. ನೀವು ಸ್ನಾನದ ಕೋಣೆಯಿಂದ ಮಲಗುವ ಕೋಣೆಗೆ ಬಂದಾಗ ನಿಮ್ಮ ಮೂಗಿಗೆ ಕೋಣೆಯಲ್ಲಿರುವ ಬಟ್ಟೆ, ಚಪ್ಪಲಿ ಸೇರಿ ಅಲ್ಲಿರುವ ಸುಗಂಧ ದ್ರವ್ಯದಂತಹ ವಸ್ತುಗಳ ವಾಸನೆ ಬರುತ್ತದೆ. ಆದರೆ ಕೆಲವು ಹೊತ್ತಿನಲ್ಲಿ ಅದರ ತೀವ್ರತೆ ಕಡಿಮೆಯಾಗುತ್ತದೆ. ಇದಕ್ಕೆ ನೋಸ್ ಬ್ಲೈಂಡ್‌ನೆಸ್ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ.



Click it and Unblock the Notifications
