Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕರೆ ಮಾಡಿದಾಗ ಜನ ಹಲೋ ಎಂದು ಏಕೆ ಹೇಳುತ್ತಾರೆ? ಹೇಗೆ ಈ ಪದ ಹುಟ್ಟಿತು ಗೊತ್ತಾ?
ಈಗ ನಿಮ್ಮ ಮೊಬೈಲ್‌ಗೆ ಯಾವುದಾದ್ರು ಕರೆ ಬಂದ್ರ ನಿಮ್ಮ ಅರಿವಿಲ್ಲದೆಯೇ ಹಲೋ ಎಂಬ ಪದದಿಂದಲೇ ಮಾತು ಆರಂಭಿಸುತ್ತೀರಿ. ಆ ಕಡೆಯಿಂದ ಕರೆ ಮಾಡಿದವರು ಸಹ ಮೊದಲು ಹಲೋ ಅಂತಲೇ ಮಾತು ಆರಂಭಿಸುತ್ತಾರೆ. ನಿಮಗೆ ಕರೆ ಮಾಡಿದವರು ಯಾರು ಎಂದು ಗೊತ್ತಿದ್ದರೂ ಮೊದಲು ಹಲೋ ಅಂತಲೇ ಮಾತು ಆರಂಭಿಸುತ್ತೇವೆ.
ಹಾಗಾದ್ರೆ ಈ ರೀತಿ ನಾವು ಮಾತು ಆರಂಭಿಸೋದ್ಯಾಕೆ? ಹಲೋ ಎಂಬ ಪದ ಮೊದಲು ಹುಟ್ಟಿದ್ದೆಲ್ಲಿ, ಮೊದಲು ಆರಂಭಿಸಿದ್ದು ಯಾರು? ಏಕೆ ಈ ರೀತಿ ಹಲೋ ಎಂದು ಹೇಳುತ್ತಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಆದ್ರೆ ಬರೀ ಫೋನಿನಲ್ಲಿ ಮಾತ್ರ ಅಲ್ಲ ಹೊರಗೆ ಯಾರಾದು ಸಿಕ್ಕಿದರೂ ಹಲೋ ಎಂದು ಮೊದಲು ಮಾತು ಆರಂಭಿಸುತ್ತಾರೆ. ಬಳಿಕ ತಮ್ಮ ಪರಿಚಯ ಹೇಳುತ್ತಾರೆ. ಹಲೋ ಎಂಬುದು ಇಷ್ಟೊಂದು ಪವರ್‌ಫುಲ್ ಪದ ಆಗಿಬಿಟ್ಟಿದೆ.
ಆಕ್ಸ್‌ಫರ್ಡ್ ಇಂಗ್ಲೀಷ್ ಡಿಕ್ಷನರಿಯಲ್ಲಿರುವಂತೆ "ಹಲೋ" ನ ಮೊದಲ ಪ್ರಕಟಿತ ಬಳಕೆಯು 1827 ಕ್ಕಿಂತಲೂ ಹಿಂದಿನದು ಎಂದು ಉಲ್ಲೇಖವಿದೆ. ಅದು ಮುಖ್ಯವಾಗಿ ಶುಭಾಶಯವಾಗಿರಲಿಲ್ಲ. 1830 ರ ದಶಕದಲ್ಲಿ ಜನರು ಗಮನ ಸೆಳೆಯಲು ಹಲೋ ಎಂದರು. ಅಚ್ಚರಿ ಎಂದರೆ ನಾವೀಗ ಹಾಯ್ ಎಂಬ ಪದ ಬಳಕೆ ಮಾಡುವ ಜಾಗದಲ್ಲಿ ಹಿಂದೆ ಹಲೋ ಎಂಬ ಪದ ಬಳಕೆಯಲ್ಲಿತ್ತಂತೆ. ಅದು ಮುಂದೆ ಟೆಲಿಫೋನ್ ಕಂಡು ಹಿಡಿಯುವವರೆಗೂ ಹಾಯ್ ಪದ ಬಳಕೆಗೆ ಬಂದಿರಲಿಲ್ಲವಂತೆ.
ಥಾಮಸ್ ಎಡಿಸನ್ ಹಲೋ ಅನ್ನು ಸಾಮಾನ್ಯ ಬಳಕೆಗೆ ತಂದವರು ಎಂದು ನಿಘಂಟು ಹೇಳುತ್ತದೆ. ಅವರು ಉತ್ತರಿಸುವಾಗ "ಹಲೋ" ಎಂದು ತಮ್ಮ ಫೋನ್ ಬಳಸುತ್ತಿರುವ ಜನರನ್ನು ಒತ್ತಾಯಿಸಿದ್ದರಂತೆ. ಅವರ ಪ್ರತಿಸ್ಪರ್ಧಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ಅವರು ಉತ್ತಮ ಪದ "ಅಹೋಯ್" ಎಂದು ಭಾವಿಸಿದ್ದರು.
ಅಹೋಯ್ ಎಂಬ ಪದ ಸರಿ ಸುಮಾರು 100 ವರ್ಷಗಳ ಕಾಲ ಬಳಕೆಯಲ್ಲಿತ್ತು ಎಂದು ತಿಳಿದುಬಂದಿದೆ. ಈ ಪದವು ಡಚ್‌ನ ಹೋಯ್ ಎಂಬ ಪದದಿಂದ ಹುಟ್ಟಿಕೊಂಡಿದೆ. ಬೆಲ್ ಅವರು "ಅಹೋಯ್" ಪದವನ್ನು ತಮ್ಮ ಕೊನೆಯ ದಿನದ ವರೆಗೂ ಬಳಸಿದ್ದರು.
ಮೊದಲು ಟೆಲಿಫೋನ್ ಡಿಕ್ಷನರಿಗಳು ಹೌ ಟು ವಿಭಾಗ ಅಥವಾ ಮುನ್ನುಡಿಯಲ್ಲಿ ಹಲೋ ಎಂಬ ಪದದಿಂದಲೇ ಆರಂಭವಾಯಿತ್ತಂತೆ. ಇದು ಶುಭ ಕೋರುವ ಪದವಾಗಿ ರೂಪುಗೊಂಡಿತ್ತು. ವಾಸ್ತವವಾಗಿ, 1878 ರಲ್ಲಿ ಕನೆಕ್ಟಿಕಟ್‌ನ ಡಿಸ್ಟ್ರಿಕ್ಟ್ ಟೆಲಿಫೋನ್ ಕಂಪನಿಯಿಂದ (50 ಚಂದಾದಾರರನ್ನು ಪಟ್ಟಿಮಾಡಲಾಗಿದೆ) ಪ್ರಕಟಿಸಿದ ಮೊದಲ ಫೋನ್ ಪುಸ್ತಕವು ಬಳಕೆದಾರರಿಗೆ ತಮ್ಮ ಸಂಭಾಷಣೆಗಳನ್ನು "ದೃಢವಾದ ಮತ್ತು ಹರ್ಷಚಿತ್ತದಿಂದ 'ಹುಲ್ಲೋವಾ'ದೊಂದಿಗೆ ಪ್ರಾರಂಭಿಸುವಂತೆ ಸೂಚಿಸಿತ್ತು.
ಮುಂದೆ ಇದೇ ಅಹೋಯ್ ಎಂಬ ಪದ ಬಳಕೆಗೆ ಬರುತ್ತಾ ಹಲೋ ಎಂಬುದಾಗಿ ಮಾರ್ಪಟ್ಟಿತು ಎಂದು ಹೇಳಲಾಗುತ್ತದೆ. ಇದು ಶುಭ ಸೂಚಕ ಪದವಾಗಿ ಬಳಕೆಯಾಗುತ್ತಾ ಬಂದಿತು ಎಂದು ತಿಳಿದುಬಂದಿದೆ. ಈಗ ಈ ಪದ ಇಲ್ಲದೆ ಯಾವ ಕರೆಗಳು ಆರಂಭವಾಗುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಆಳವಾಗಿ ಬೇರೂರಿದೆ.
ಜನರು ಇದರ ಅರ್ಥ ತಿಳಿದೆಯೋ, ತಿಳಿಯದಿದ್ದರೂ ಈ ಪದ ಬಳಸುತ್ತಾರೆ. ಆದರೆ ಯಾಕೆ ಬಳಸುತ್ತಾರೆ? ಎಂಬುದು ಅವರಿಗೂ ತಿಳಿದಿಲ್ಲ, ಕರೆ ಮಾಡಿದವರಿಗೆ ತಿಳಿದಿರುವುದಿಲ್ಲ. ಆದ್ರೆ ಈ ಪದ ಮಾತ್ರ ಜನರ ಜೀವನದ ಜೊತೆ ಹಾಗೆಯೇ ಉಳಿದುಬಿಟ್ಟಿದೆ. ಇನ್ನು ಈವಿಶ್ವ ಹಲೋ ದಿನವನ್ನು ಸಹ ಆಚರಿಸಲಾಗುತ್ತದೆ. ಪ್ರತಿ ವರ್ಷನವೆಂಬರ್ 21ಕ್ಕೆ ಹಲೋ ದಿವನ್ನಾಗಿ ಆಚರಿಸಲಾಗುತ್ತದೆ. ಮ್ಯಾಕ್‌ಕಾರ್ಮ್ಯಾಕ್ ಎಂಬ Ph.D. ವಿದ್ಯಾರ್ಥಿ (Arizona State University) ಮೊದಲ ಬಾರಿಗೆ ವಿಶ್ವ ಹಲೋ ದಿನವನ್ನು ಆಚರಿಸಲಾಯಿತು ಎಂದು ತಿಳಿದುಬಂದಿದೆ.



Click it and Unblock the Notifications
