Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಂಗಳನಲ್ಲಿ ನದಿಗಳು ಮಾಯವಾಗಿದ್ದು ಏಕೆ..? ಉತ್ತರಕ್ಕಾಗಿ ಕ್ಯೂರಿಯಾಸಿಟಿ ಪ್ರಯಾಣ..!
ಮನುಷ್ಯರಿಗೆ ಭೂಮಿ ಬಿಟ್ಟರೆ ಬೇರೆ ಯಾವ ಗ್ರಹದಲ್ಲೂ ವಾಸಯೋಗ್ಯವಾದ ಪರಿಸರ ವ್ಯವಸ್ಥೆ ಇಲ್ಲ. ಇದೂ ಶತಮಾನದ ಹಿಂದೆಯೇ ರುಜುವಾತಾಗಿದೆ. ಆದರೂ ಮಾನವನಿಗೆ ಆಕಾಶದ ಮೇಲೆ ಕುತೂಹಲ. ಈ ಭೂಮಿ ಬಿಟ್ಟು ಬೇರೊಂದು ಗ್ರಹದಲ್ಲಿ ವಾಸ ಮಾಡಬಹುದು ಎಂಬ ಆಸೆ ಆತನದ್ದು. ಹೀಗಾಗಿಯೇ ಭೂಮಿಯ ಹತ್ತಿರದ ಗ್ರಹ ಮಂಗಳನತ್ತ ಆತನ ದೃಷ್ಟಿ ಯಾವಾಗಲೂ ಹರಿಯುತ್ತಿರುತ್ತದೆ.
ಇನ್ನು ಅಮೆರಿಕ ಒಂದು ಹೆಜ್ಜೆ ಮುಂದೆ ಹೋಗಿ ಮಂಗಳನ ಮೇಲೆ ತನ್ನ ಕ್ಯೂರಿಯಾಸಿಟಿ ರೋವರ್ ಇಳಿಸಿ ಅಲ್ಲಿ ಅಧ್ಯಯನ ನಡೆಸುತ್ತಲೇ ಬಂದಿದೆ. ಮಂಗಳನ ಮೇಲೆ ಏನಿದೆ, ಶತಮಾನಗಳ ಹಿಂದೆ ಮಂಗಳನಲ್ಲಿ ಏನಿತ್ತು ಎಂಬ ಕುರಿತು ಹಲವು ಅಂಶಗಳನ್ನು ಈ ರೋವರ್ ಮೂಲಕ ಪತ್ತೆ ಮಾಡಿದೆ.

ಆದರೆ ಈಗ ಇದೇ ರೋವರ್ ಮಂಗಳನ ಮೇಲಿದ್ದ ನದಿಗಳು ಏನಾದವು ಎಂಬ ಅಧ್ಯಯನಕ್ಕೆ ಸಿದ್ಧಗೊಂಡಿದೆ. ಹೌದು ಮಂಗಳನಲ್ಲಿರುವ ನಾಸಾದ ಕ್ಯೂರಿಯಾಸಿಟಿ ರೋವರ್ ಗೆಡಿಜ್ ವ್ಯಾಲಿಸ್ ಚಾನಲ್ ಮೂಲಕ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ, ವಿಜ್ಞಾನಿಗಳಿಗೆ ಗ್ರಹದ ಮೇಲೆ ನೀರಿನ ಮೂಲ ಕುರಿತ ಸಂಕ್ಷಿಪ್ತ ನೋಟವನ್ನು ನೀಡಲು ಮುಂದಾಗಿದೆ.
ಮಂಗಳನ ಮೇಲೆ ನೀರಿತ್ತು ಎಂಬುದು ಈಗಾಗಲೇ ದೃಢಪಟ್ಟಿದೆ. ಆದರೆ ಆ ನೀರಿನ ಮೂಲ ಮಾಯವಾಗಿದ್ದು ಹೇಗೆ? ಮಂಗಳನಲ್ಲಿದ್ದ ನದಿಗಳು ಏನಾದವು ಎಂಬುದು ಮಾತ್ರ ನಿಗೂಢವಾಗಿ ಉಳಿದಿದೆ. ಹೀಗಾಗಿ ರೋವರ ಇನ್ನು ಮುಂದೆ ನದಿ ಮೂಲಕ ಹುಡುಕಲು ಮುಂದಾಗಲಿದೆ.
ಶತಕೋಟಿ ವರ್ಷಗಳ ಹಿಂದೆ, ಮಂಗಳವು ಭೂಮಿಯಂತೆಯೇ ಪರಿಸರ ಹೊಂದಿತ್ತು. ಅಲ್ಲಿಯೂ ನದಿಗಳಿದ್ದವು, ನೀರಿನ ಮೂಲವಿತ್ತು. ಇದು ಅಲ್ಲಿನ ಗೆಡಿಜ್ ವ್ಯಾಲಿಯಿಂದ ತಿಳಿಯುತ್ತದೆ. ಇದೇ ವ್ಯಾಲಿ ಮೂಲಕ ಈಗ ರೋವರ್ ತನ್ನ ಅಧ್ಯಯನ ಆರಂಭಿಸಿದೆ. ಹಾವಿನಂತಹ ಅಂಕುಡೊಂಕಾದ ವ್ಯಾಲಿ ಇದಾಗಿದ್ದು, ಮಂಗಳ ಗ್ರಹದ ಹಲವು ನಿಗೂಢತೆಗಳ ತನ್ನಲ್ಲಿಟ್ಟುಕೊಂಡಿದೆ.
ಈ ವ್ಯಾಲಿಯ ಎರಡೂ ಕಡೆಗಳಲ್ಲಿ ನೀರಿನ ಸೆಳೆತದ ಕುರುಹುಗಳಿವೆ. ಇವು ಕೇವಲ ಗಾಳಿಯ ಹೊಡೆತದಿಂದ ಉಂಟಾಗಿರುವುದಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಅಂದರೆ ಹಿಂದೊಮ್ಮೆ ಇಲ್ಲಿ ನದಿಗಳೂ ಉಕ್ಕಿ ಹರಿದಿವೆ, ಶಿಲಾ ಬಂಡೆಗಳು ಸಹ ನದಿ ಹರಿಯುವಿಕೆಯ ದಾರಿಗೆ ಸಾಕ್ಷಿಯಾಗಿವೆ, ಹಾಗಾದರೆ ನೀರಿನ ಮೂಲ ಇಗ್ಯಾಕೆ ಕಾಣುತ್ತಿಲ್ಲ ಎಂಬುದು ವಿಜ್ಞಾನಿಗಳ ಬಹುದೊಡ್ಡ ಪ್ರಶ್ನೆಯಾಗಿದೆ.
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮುಂದಾಗಿರುವ ನಾಸಾ ಕ್ಯೂರಿಯಾಸಿಟಿ ರೋವರ್ ಮೂಲಕ ಮಂಗಳನಲ್ಲಿ ನೀರು ಹುಡುಕಲು ಮುಂದಾಗಿದೆ. 2014 ರಿಂದ, ಕ್ಯೂರಿಯಾಸಿಟಿಯು ಮೌಂಟ್ ಶಾರ್ಪ್‌ನ ತಪ್ಪಲಿನಲ್ಲಿ ಅಳತೆ ಮಾಡುತ್ತಲೇ ಇದೆ. ಇದು ಗೇಲ್ ಕ್ರೇಟರ್‌ನ ನೆಲದಿಂದ 3 ಮೈಲುಗಳಷ್ಟು ಎತ್ತರದ ಎತ್ತರದ ಒಂದು ಚಿಕ್ಕ ಬೆಟ್ಟದ ಆಕೃತಿಯಾಗಿದೆ. ಈ ಪರ್ವತದ ಶ್ರೇಣೀಕೃತ ಪದರಗಳು ಲಕ್ಷಾಂತರ ವರ್ಷಗಳ ಮಂಗಳದ ಹವಾಮಾನ ಬದಲಾವಣೆಯನ್ನು ದಾಖಲಿಸಿವೆ, ಮಂಗಳ ಗ್ರಹದಲ್ಲಿ ನೀರು ಮತ್ತು ಜೀವಾಧಾರಕ ರಾಸಾಯನಿಕಗಳ ವಿಕಾಸದ ಮೇಲೆ ಅಮೂಲ್ಯವಾದ ದಾಖಲೆಗಳ ಒದಗಿಸುತ್ತವೆ.
2026ಕ್ಕೆ ಮತ್ತೊಂದು ರೋವರ್..!
ನಾಸಾ ಸಂಸ್ಥೆಯ 'ಪೆರ್‌ಸೆವೆರನ್ಸ್' ರೋವರ್ ಲ್ಯಾಂಡ್ ಆದ 5 ವರ್ಷಗಳ ನಂತರ ಅಂದರೆ 2026ಕ್ಕೆ ಮತ್ತೊಂದು ರೋವರ್ ಲ್ಯಾಂಡ್ ಆಗಲಿದೆ. ಈ ಬಾರಿ 'ಯೂರೋಪಿಯನ್ ಸ್ಪೇಸ್ ಏಜೆನ್ಸಿ' ಕಳುಹಿಸಿದ ಪುಟ್ಟ ರೋವರ್ ಮಂಗಳ ಗ್ರಹದ ಮೇಲೆ ಇಳಿಯಲಿದೆ. ನಂತರ 'ಪೆರ್‌ಸೆವೆರನ್ಸ್' ಬಿಟ್ಟುಹೋದ ಕೊಳವೆ ಆಕಾರದ ಕಂಟೇನರ್‌ಗಳನ್ನ ಬೇಟೆಯಾಡುವ ಯೂರೋಪಿಯನ್ ರೋವರ್, ತನ್ನೊಳಗೆ ಈ ಪುಟ್ಟ ಪುಟ್ಟ ಕಂಟೇನರ್‌ಗಳನ್ನ ತುಂಬಿಸಿಕೊಳ್ಳಲಿದೆ. ನಂತರ ಅವನ್ನೆಲ್ಲಾ ಒಟ್ಟುಗೂಡಿಸಿ ಮತ್ತೊಂದು ದೊಡ್ಡ ಕಂಟೇನರ್‌ಗೆ ಶಿಫ್ಟ್ ಮಾಡುತ್ತದೆ. ಕೊನೆಯದಾಗಿ ಮಣ್ಣು ತುಂಬಿರುವ ದೊಡ್ಡ ಕಂಟೇನರ್ ತೆಗೆದು ಭದ್ರವಾಗಿ ಪುಟಾಣಿ ರಾಕೇಟ್‌ಗೆ ವರ್ಗಾಯಿಸಲಿದೆ.



Click it and Unblock the Notifications
