Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಂದ್ರಯಾನ್-3 ಉಡಾವಣೆ 4 ಸೆಕೆಂಡ್ ನಿಲ್ಲಿಸಿದ್ಯಾಕೆ? ಇಸ್ರೋ ತಪ್ಪಿಸಿತು ದೊಡ್ಡ ಅನಾಹುತ
ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ಇಡೀ ವಿಶ್ವದ ಎದುರು ತನ್ನ ಸಾಮರ್ಥ್ಯವನ್ನು ತೋರಿಸಿದೆ. ತನ್ನ ಮೂರನೇ ಪ್ರಯತ್ನದಲ್ಲಿ ಚಂದ್ರಯಾನ್ ಸೇರಿದಂತೆ ಹತ್ತು ಹಲವು ಮೊದಲುಗಳು ಸಾಧನೆಗಳ ಮಾಡಿದೆ. ಮುಂದೆಯೂ ಜಗತ್ತಿಗೆ ಸವಾಲೊಡ್ಡುವ ಯೋಜನೆಗಳ ರೂಪಿಸಿಕೊಂಡಿದೆ.
ಇತ್ತೀಚಿಗೆ ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆಯಾಗಿದ್ದ ಆದಿತ್ಯಾ ಎನ್1 ತನ್ನ ಯಶಸ್ವಿ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಚಂದ್ರಯಾನ್ ಮಿಷನ್ ಇಂದಿಗೂ ಭಾರತದ ಪಾಲಿಗೆ ಅತೀ ದೊಡ್ಡ ಸಾಧನೆಯಾಗಿದೆ. ಈ ಚಂದ್ರಯಾನ್ ಉಡಾವಣೆಯ ದಿನ ಇಡೀ ದೇಶವೇ ಇಸ್ರೋಗಾಗಿ ಪ್ರಾರ್ಥನೆ ಸಲ್ಲಿಸಿತ್ತು.

ಈಗ ಚಂದ್ರನ ಮೇಲೆ ರೋವರ್ ಅಧ್ಯಯನದಲ್ಲಿ ತೊಡಗಿದ್ದು, ಹತ್ತು ಹಲವು ವರದಿಗಳ ವಿಶ್ಲೇಷಣೆ ನಡೆಯುತ್ತಿದೆ. ಅಲ್ಲದೆ ಚಂದ್ರನ ಕುರಿತು ನೂರಾರು ಅಂಶಗಳು ಹೊಸ ವಿಚಾರಗಳು ಈಗ ತಿಳಿದುಬಂದಿದೆ. ಆದರೆ ನಿಮಗೆ ಗೊತ್ತಾ ಚಂದ್ರಯಾನ್ ಉಡಾವಣೆಯ ಸಮಯದಲ್ಲಿ 4 ಸೆಕೆಂಡ್‌ಗಳಷ್ಟು ವಿಳಂಭವಾಗಿತ್ತು. ಕೌಂಟ್‌ಡೌನ್ ಮುಗಿದ ಬಳಿಕ 4 ಸೆಕೆಂಡ್‌ಗಳ ಕಾಲ ಉಡಾವಣೆಯಾಗಿರಲಿಲ್ಲ. ಇದು ಅಚ್ಚರಿಗೂ ಕಾರಣವಾಗಿತ್ತು.
ಆದರೆ ಈ ರೀತಿ 4 ಸೆಕೆಂಡ್‌ಗಳ ಕಾಲ ತಡವಾಗಿ ಉಡಾವಣೆ ಆಗಿದ್ದು ಏಕೆ ಎಂಬುದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈಗ ಬಹಿರಂಗಪಡಿಸಿದೆ. ISRO ಪ್ರಕಾರ, 14 ಜುಲೈ 2023 ರಂದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಉಡಾವಣೆಗೆ ನಿರ್ಧರಿಸಲಾಗಿತ್ತು. ಆದರೆ ಬಾಹ್ಯಾಕಾಶದಲ್ಲಿ ಸಂಭವಿಸಲಿದ್ದ ವಿಚಿತ್ರ ವಿದ್ಯಮಾನವೊಂದರ ಕಾರಣಕ್ಕೆ 4 ಸೆಕೆಂಡ್‌ಗಳ ಕಾಳ ತಡವಾಗಿ ಉಡಾವಣೆ ಮಾಡಲಾಗಿತ್ತು.
ಇತ್ತೀಚೆಗೆ ಪ್ರಕಟವಾದ ವರದಿಯಲ್ಲಿ, 2023ರ ಭಾರತೀಯ ಸಾಂದರ್ಭಿಕ ಬಾಹ್ಯಾಕಾಶ ಜಾಗೃತಿ ವರದಿ (ISSAR), ಚಂದ್ರಯಾನ-3 ಅನ್ನು ಹೊತ್ತ ಲಾಂಚ್ ವೆಹಿಕಲ್ ಮಾರ್ಕ್ -3 ಅನ್ನು ಬಾಹ್ಯಾಕಾಶದಲ್ಲಿರುವ ಅವಶೇಷಗಳಿಗೆ ಡಿಕ್ಕಿ ಹೊಡೆಯುವುದನ್ನು ತಡೆಯುವ ಕಾರಣಕ್ಕೆ 4 ಸೆಕೆಂಡ್‌ಗಳ ಕಾಲ ತಡವಾಗಿ ಉಡಾವಣೆ ಮಾಡಲಾಗಿತ್ತು ಎಂದು ತಿಳಿಸಿದೆ.
ಚಂದ್ರಯಾನ್ ಉಡಾವಣೆಯ ಸಮಯಕ್ಕೆ ಸರಿಯಾಗಿ ಬಾಹ್ಯಾಕಾಶದಲ್ಲಿ ಅವೇಶಗಳು ಉಪಗ್ರಹ ಚಲಿಸುವ ಮಾರ್ಗದಲ್ಲಿ ತೇಲುತ್ತಿರುವುದು COLA (Collision on Launch Avoidance) ತಿಳಿಸಿತ್ತು. ಹೀಗಾಗಿ 4 ಸೆಕೆಂಡ್ ತಡವಾಗಿ ಲಾಂಚ್ ಮಾಡಲಾಗಿತ್ತು ಎಂದು ಇಸ್ರೋ ಮಾಹಿತಿ ನೀಡಿದೆ.
ಏನಿದು ಬಾಹ್ಯಾಕಾಶ ಅವಶೇಷ?
ಭೂಮಿ ಮೇಲೆ ನಮಗೆ ಕಾಣುವಂತೆ ಕಸಗಳು, ಆಕಾಶದಲ್ಲೂ ಇವೆ. ಇದು ಭೂಮಿಯ ಗುರುತ್ವಾಕರ್ಷಣಾ ಬಲಕ್ಕೆ ಸಿಗದೆ ಗಾಳಿಯಲ್ಲಿ ವರ್ಷಾನುಗಟ್ಟಲೆ ಸಮಯದಿಂದ ತೇಲಾಡುತ್ತಿವೆ. ಇದರಲ್ಲಿ ಉಪಗ್ರಹದ ಅವೇಶಷಗಳು, ಸ್ಪೇಸ್ ಸ್ಟೇಷನ್‌ನ ಕಸಗಳು, ಇತರೆ ಮಾನವ ನಿರ್ಮಿತ ಕಸಗಳು ಅಲ್ಲಿದೆ. ಇವು ನಾಶವಾಗದೆ ಉಳಿಯುವುದರಿಂದ ಬಾಹ್ಯಾಕಾಶದಲ್ಲಿ ಈ ಪ್ರಮಾಣ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಇವು ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿ ಬೆಂಕಿ ಹೊತ್ತಿಕೊಂಡು ಭೂಮಿಯತ್ತ ಬಂದು ಬೀಳುವುದನ್ನು ನಾವು ನೋಡಬಹುದು.
ಚಂದ್ರಯಾನ ಉಡಾವಣೆ ದಿನವೂ ಅಡ್ಡಿಯಾಗಿತ್ತು ಅವಶೇಷ
ಚಂದ್ರಯಾನ್ ಉಡಾವಣೆಯ ದಿನವೂ ಬಾಹ್ಯಾಕಾಶದಲ್ಲಿ ಅವಶೇಷಗಳು ಉಪಗ್ರಹ ಹಾರಾಡುವ ಮಾರ್ಗದಲ್ಲಿ ತೇಲುತ್ತಿರುವುದಾಗಿ ಕೋಲಾ ತಿಳಿಸಿತ್ತು. ಈ ಡಿಕ್ಕಿಯನ್ನು ತಪ್ಪಿಸುವ ಸಲುವಾಗಿ ಇಸ್ರೋ 4 ಸೆಕೆಂಡ್‌ಗಳ ಕಾಲ ಉಡಾವಣಾ ಸಮಯ ಮುಂದೂಡಿತ್ತು. ಆದರೆ ಉಡಾವಣೆಯ ಸಮಯದಲ್ಲಿ 4 ಸೆಕೆಂಡ್ ತಡವಾಗಿದ್ದಕ್ಕೆ ಜನರು ಸೇರಿ ಅಲ್ಲಿದ್ದವರು ಶಾಕ್ ಆಗಿದ್ದರು. ಕೌಂಟ್‌ಡೌನ್ ಮುಗಿದರೂ ಚಂದ್ರಯಾನ್ ಉಡಾವಣೆಯಾಗದೆ ಇದ್ದಾಗ ಕೆಲವರು ಅಚ್ಚರಿಗೆ ಒಳಗಾಗಿದ್ರು, ಜೊತೆಗೆ ಟೆಕ್ನಿಕಲ್ ಸಮಸ್ಯೆಯಾಗಿದೆ ಎಂದುಕೊಂಡಿದ್ದರು. ಆದರೆ ಈ ರೀತಿ ತಡವಾಗಿ ಉಡಾವಣೆಯಾಗಿದ್ದು ಇಸ್ರೋದ ಉಪಗ್ರಹ ಮಾತ್ರವಲ್ಲ ಹಲವು ದೇಶದಲ್ಲಿಯೂ ಈ ರೀತಿ ಉಡಾವಣೆಗಳು ತಡವಾಗಿದ್ದ ಉದಾಹರಣೆ ಇದೆ.



Click it and Unblock the Notifications