Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಮಾನಗಳಲ್ಲಿ ಸಿಸಿ ಕ್ಯಾಮರಾ ಸೌಲಭ್ಯವಿಲ್ಲ ಏಕೆ? ಅದರ ಹಿಂದಿನ ರಹಸ್ಯ ಏನು ಗೊತ್ತಾ?
ವಿಮಾನಯಾನ ಸೇವೆಯಲ್ಲಿ ನಿತ್ಯವೂ ಬದಲಾವಣೆಗಳ ನೋಡುತ್ತಿದ್ದೇವೆ, ಪ್ರಯಾಣಿಕರ ಹಿತ ದೃಷ್ಟಿಯಿಂದ ಒಂದಿಷ್ಟು ನಿಯಮಗಳು, ರಚನೆಗಳು, ಬದಲಾಗುತ್ತಲೇ ಇರುತ್ತದೆ. ಸುರಕ್ಷತೆಗೆ ಹೆಚ್ಚು ಒತ್ತು ನೀಡುವುದು ಸಹ ನಡೆಯುತ್ತಲೇ ಇದೆ. ಆದ್ರೆ ವಿಮಾನದಲ್ಲಿ ನೀವು ಸಿಸಿಟಿವಿ ಅಥವಾ ವಿಡಿಯೋ ರೆಕಾರ್ಡಿಂಗ್ ನೋಡಲು ಸಾಧ್ಯವಾಗೋದಿಲ್ಲ.
ಈಗ ಸರ್ಕಾರಿ ಬಸ್‌ಗಳು, ಕ್ಯಾಬ್‌ಗಳು ಸೇರಿ ಹಲವು ಕಡೆಗಳಲ್ಲಿ ಕ್ಯಾಮರಾಗಳ ನೋಡುತ್ತೇವೆ. ಪ್ರಯಾಣಿಕರ ಸುರಕ್ಷತೆ ಹಾಗೂ ಚಾಲಕರ ಹಿತದೃಷ್ಟಿಯಿಂದ ಈ ವಾಹನಗಳಲ್ಲಿ ಸಿಸಿ ಕ್ಯಾಮರಾಗಳ ನೋಡುತ್ತೇವೆ. ಆದ್ರೆ ನೂರಾರು ಪ್ರಯಾಣಿಕರ ಹೊತ್ತೊಯ್ಯುವ ಹಾಗೆ ದುಬಾರಿ ಬೆಲೆಯ ಈ ವಿಮಾನಗಳಲ್ಲಿ ಮಾತ್ರ ಯಾವುದೇ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಇರುವುದಿಲ್ಲ.

ಪ್ರಯಾಣಿಕರು ಸೇರಿ ಪೈಲಟ್‌ಗಳಿರುವ ಕಾಕ್‌ಪಿಟ್‌ನಲ್ಲೂ ಕೂಡ ವಿಡಿಯೋ ಸೆರೆ ಹಿಡಿಯಲು ಯಾವುದೇ ಕ್ಯಾಮರಾಗಳು ಇರುವುದಿಲ್ಲ. ಆದ್ರೆ ಪೈಲಟ್‌ಗಳು ಒಪ್ಪಿಗೆಯ ಮೇರೆ ಆಯಾ ಸಂಸ್ಥೆ ಅಥವಾ ಪೈಲಟ್‌ಗಳೇ ಸ್ವಂತ ಕ್ಯಾಮರಾ ಮೂಲಕ ದೃಶ್ಯಗಳ ಸೆರೆಹಿಡಿಯಬಹುದು ಎಂಬ ವಿಚಾರ ನಿಮಗೆ ಗೊತ್ತಾ? ಹೌದು ನೀವು ಯಾವುದೇ ಐಷಾರಾಮಿ ಸಂಸ್ಥೆಯ ವಿಮಾನ ತೆಗೆದುಕೊಂಡರೂ ಕೂಡ ಅಲ್ಲಿ ಕ್ಯಾಮರಾಗಳ ನೋಡಲು ಸಾಧ್ಯವಿಲ್ಲ.
ಕೆಲವೊಮ್ಮೆ ಈ ಕ್ಯಾಮರಾಗಳಿದ್ದರೆ ಅಪಘಾತವಾಗಾದ, ಇಲ್ಲವೆ ಯಾವುದಾದರು ತಾಂತ್ರಿಕ ಸಮಸ್ಯೆಗಳು ಎದುರಾದಾಗ ತನಿಖೆ ನಡೆಸಲು ಅಥವಾ ಕೊನೆಯ ಗಳಿಗೆಯಲ್ಲಿ ಅಲ್ಲಿ ಏನು ನಡೆದಿದೆ ಎಂಬುದನ್ನು ಪತ್ತೆ ಮಾಡಲು ಸುಲಭವಾಗುತ್ತಿತ್ತು. ಆದ್ರೆ ವಿಮಾನಗಳಲ್ಲಿ ಇಂದಿಗೂ ಕ್ಯಾಮರಾ ಅಳವಡಿಕೆ ಸಾಧ್ಯವಾಗಿಲ್ಲ. ಹಾಗಾದ್ರೆ ಈ ಸೌಲಭ್ಯ ವಿಮಾನಗಳಲ್ಲಿ ಏಕಿಲ್ಲ ಎಂಬುದು ನಿಮಗೆ ಗೊತ್ತಾ?
ಇತ್ತೀಚಿಗೆ ಹಲವು ವಿಮಾನಗಳಲ್ಲಿ ಕ್ಯಾಮರಾಗಳು ಸಾಮಾನ್ಯವಾಗಿ ನೋಡಲು ಸಿಗುತ್ತಿವೆ. ಆದ್ರೆ ಅವುಗಳು ಎಲ್ಲಾ ಸಮಯದಲ್ಲು ಕಾರ್ಯ ನಿರ್ವಹಿಸುವುದಿಲ್ಲ. ಹಾಗೆ ಇದು ಸುರಕ್ಷತೆಯ ದೃಷ್ಟಿಯಿಂದ ಅಥವಾ ಕಣ್ಗಾವಲಿಗಾಗಿ ಹಾಕಲಾದ ಕ್ಯಾಮರಾಗಳಲ್ಲ. ಇನ್ನು ಇತ್ತೀಚಿಗೆ ವಿಮಾಣದ ಕಾಕ್‌ಪಿಟ್‌ನಲ್ಲಿ ಕ್ಯಾಮರಾ ಅಳವಡಿಸಬೇಕು ಎಂಬ ವಾದ ಜೋರಾಗಿ ಕೇಳಿಬರುತ್ತಿದೆ.
ಆದರೆ ಪೈಲಟ್ ಒಕ್ಕೂಟಗಳು ಮತ್ತು ಇತರ ಗುಂಪುಗಳು ಕಾಕ್‌ಪಿಟ್ ವಿಡಿಯೋ ಕ್ಯಾಮರಾಗಳನ್ನು ಬಹಳ ಹಿಂದಿನಿಂದಲೂ ವಿರೋಧಿಸುತ್ತಿವೆ, ಅಪಘಾತ ತನಿಖಾಧಿಕಾರಿಗಳು, ಪ್ರಾಸಿಕ್ಯೂಟರ್‌ಗಳು ಅಥವಾ ಸುದ್ದಿ ಮಾಧ್ಯಮಗಳು ಈ ದೃಶ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತವೆ ಎಂದು ವಾದಿಸಲಾಗಿದೆ. ವಿಮಾನದ ಕಾಕ್‌ಪಿಟ್‌ನಲ್ಲಿ ಕ್ಯಾಮರಾ ಅಳವಡಿಸಬೇಕು ಎಂಬ ಕೂಗು ಕೇಳಿಬಂದಾಗಲೆಲ್ಲ ಪೈಲಟ್‌ಗಳು ಬಲವಾಗಿ ವಿರೋಧಿಸಿದ್ದಾರೆ. ಈ ನಿಮಯ ಜಾರಿಯಾಗದಂತೆ ಒಕ್ಕೂಟ ಕೂಡ ವಾದಿಸುತ್ತಾ ಬಂದಿದೆ. ಇದಕ್ಕೆ ಹಲವು ರೀತಿಯ ಕಾರಣಗಳನ್ನು ಸಹ ಅವರು ಪಟ್ಟಿ ಮಾಡಿದ್ದಾರೆ.
ಹಾಗೆ ಈ ಕ್ಯಾಮರಾಗಳ ಹ್ಯಾಕ್ ಮಾಡುವ ಮೂಲಕ ಇಡೀ ವಿಮಾನವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಅಪಾಯ ಇರಬಹುದು ಎಂದು ವಾದಿಸಲಾಗುತ್ತದೆ. ಹಾಗೆ ನಿಯಂತ್ರಕರು ಪೈಲಟ್‌ಗಳನ್ನು ಕ್ಯಾಮರಾಗಳ ಮೂಲಕ ನಿಯಂತ್ರಿಸುವುದು, ಅವರ ಮೇಲೆ ಕಣ್ಗಾವಲು ಇಡುವುದು,, ಕ್ಯಾಮರಾ ರೆಕಾರ್ಡ್‌ಗಳ ಬಳಸಿ ಪೈಲಟ್‌ಗಳಿಗೆ ಪ್ರಶ್ನೆ ಮಾಡುವುದು, ಕ್ಯಾಮರಾ ಮೂಲಕ ಪ್ರಯಾಣಿಕರ ಮೇಲೆ ಕಣ್ಣಿಡುವುದು ಇಂತಹ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ವಾದಿಸಲಾಗುತ್ತದೆ. ಇತ್ತೀಚಿಗೆ ವಿಮಾನವೊಂದರ ಮನೋರಂಜನಾ ಸ್ಕ್ರೀನ್ ಮೇಲೆ ಕ್ಯಾಮರಾ ಅಳವಡಿಸಿದ್ದ ಪ್ರಕರಣ ಬಹಳಷ್ಟು ಸುದ್ದಿಯಾಗಿತ್ತು. ಬಳಿಕ ಅದನ್ನು ಸರಿಪಡಿಸಲಾಗಿತ್ತು.
1997 ಮತ್ತು 1999 ರಲ್ಲಿ ಕ್ರಮವಾಗಿ ಸಿಲ್ಕ್‌ಏರ್ ಫ್ಲೈಟ್ 185 ಮತ್ತು ಈಜಿಪ್ಟ್‌ಏರ್ ಫ್ಲೈಟ್ 990 ಅಪಘಾತಗಳಲ್ಲಿ, ಕಾಕ್‌ಪಿಟ್ ಕ್ಯಾಮೆರಾಗಳಿಂದ ಬಂದ ಮಾಹಿತಿಯು ಶಂಕಿತ ಪೈಲಟ್ ಆತ್ಮಹತ್ಯೆಗಳನ್ನು ದೃಢೀಕರಿಸಲು ಸಾಧ್ಯವಾಗುತ್ತಿತ್ತು ಎಂದು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಅಧ್ಯಕ್ಷ ಕ್ರಿಸ್ಟೋಫರ್ ಹಾರ್ಟ್ ಸೆನೆಟ್ ಸಮಿತಿಯ ಮುಂದೆ ವಾದಿಸಿದರು. ಆದ್ರೆ ಇಂದಿಗೂ ಕ್ಯಾಮರಾ ಅಳವಡಿಕೆ ಮಾತ್ರ ಚರ್ಚೆಯ ವಿಷಯವಾಗಿ ಉಳಿದಿದೆ.



Click it and Unblock the Notifications