Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಹಿಳೆಯರು ಧರಿಸೋ ಶರ್ಟ್‌ನಲ್ಲಿ ಬಟನ್ ಎಡಭಾಗದಲ್ಲಿರೋದ್ಯಾಕೆ.? ಇದರ ಹಿಂದಿರುವ ಸತ್ಯವೇನು?
ಸಾಮಾನ್ಯವಾಗಿ ಇತ್ತೀಚಿಗೆ ಪುರುಷರ ಉಡುಪನ್ನು ಮಹಿಳೆಯರು ಸಹ ಧರಿಸುತ್ತಾರೆ. ಅಂದರೆ ಜೀನ್ಸ್ ಪ್ಯಾಂಟ್, ಟೀ ಶರ್ಟ್, ಶರ್ಟ್ ಸೇರಿ ಇನ್ನು ಹಲವು ರೀತಿಯ ಬಟ್ಟೆ ಮಹಿಳೆಯರು ಸಹ ಧರಿಸುತ್ತಾರೆ. ಇತ್ತೀಚಿಗೆ ಇದರಲ್ಲಿ ಪುರುಷರ ಬಟ್ಟೆ ಯಾವುದು ಮಹಿಳೆಯರು ಧರಿಸುವುದು ಯಾವುದು ಪ್ರತ್ಯೇಕಿಸುವುದು ಸಹ ಕಷ್ಟವಾಗಿದೆ.
ಫ್ಯಾಷನ್ ಜಗತ್ತಿನಲ್ಲಿ ಮಹಿಳೆಯರು ಹಾಗೂ ಪುರುಷರು ವಿಭಿನ್ನ ರುಚಿ ಹೊಂದಿರುತ್ತಾರೆ. ಕೆಲವರು ಫ್ಯಾಷನ್ ಹಿಂದೆ ಬಿದ್ದು ತಮ್ಮ ಮನೆಯ ವಾರ್ಡ್ರೋಬ್‌ಗಳನ್ನು ಬಟ್ಟೆಯಿಂದ ತುಂಬಿಸಿರುತ್ತಾರೆ. ಅಷ್ಟೇ ಏಕೆ ತಿಂಗಳಲ್ಲಿ ಹಲವು ಬಾರು ಶಾಪಿಂಗ್ ತೆರಳಿ ಬಟ್ಟೆ ಖರೀದಿಸುತ್ತಾರೆ. ಆದ್ರೆ ಇತ್ತೀಚಿಗೆ ಯುವತಿಯರು ಯುವಕರಂತ ಶರ್ಟ್ ಧರಿಸುವುದನ್ನು ನಾವು ನೋಡಿದ್ದೇವೆ. ಹೆಚ್ಚು ಸ್ಟೈಲಿಸ್ ಲುಕ್‌ನಲ್ಲಿ ಯುವತಿಯರು ಶರ್ಟ್ ಧರಿಸಿ ಪೋಸ್ ಕೊಡುತ್ತಾರೆ.
ಆದ್ರೆ ಈ ಶರ್ಟ್‌ಗೂ ಪುರುಷರು ಧರಿಸುವ ಶರ್ಟ್‌ಗೂ ಯಾವ ವ್ಯತ್ಯಾಸವೂ ಮೇಲ್ನೋಟಕ್ಕೆ ಕಾಣುವುದಿಲ್ಲ. ಆದ್ರೆ ನೀವು ತೀರಾ ಗಮನವಿಟ್ಟು ನೋಡಿದರೆ ಇದರಲ್ಲಿರುವ ವ್ಯತ್ಯಾಸ ನಿಮಗೆ ತಿಳಿಯಬಹುದು. ಪುರುಷರು ಧರಿಸುವ ಶರ್ಟ್‌ಗೂ ಯುವತಿರು ಧರಿಸುವ ಶರ್ಟ್‌ಗೂ ವ್ಯತ್ಯಾಸವಿದೆ. ಅದು ಡಿಸೈನ್‌ನಲ್ಲಿ ಅಲ್ಲ ಬದಲಿಗೆ ಆ ಶರ್ಟ್‌ನಲ್ಲಿರುವ ಬಟನ್‌ಗಳ ಮೂಲಕ ನಾವು ವ್ಯತ್ಯಾಸ ಅಳೆಯಬಹುದು.
ಯುವತಿಯರು ಧರಿಸುವ ಶರ್ಟ್‌ನ ಬಟನ್ ಬೇರೆ ವಿನ್ಯಾಸವಿದೆ
ನೀವು ಪುರುಷರ ಶರ್ಟ್ ಹಾಗೂ ಯುವತಿಯರು ಧರಿಸುವ ಶರ್ಟ್ ಅನ್ನು ಒಟ್ಟಿಗೆ ಹಿಡಿದು ನೋಡಿದಾಗ ಮಾತ್ರ ನಿಮಗೆ ಈ ವ್ಯತ್ಯಾಸ ತಿಳಿಯಬಹುದು. ಯುವತಿಯರು ಧರಿಸುವ ಶರ್ಟ್‌ನ ಬಟನ್‌ಗಳ ನಡುವೆ ಸ್ವಲ್ಪ ಕಡಿಮೆ ಸ್ಥಳಾವಕಾಶ ಇರುತ್ತದೆ. ಆದರೆ ಪುರುಷರ ಶರ್ಟ್‌ನಲ್ಲಿ ಒಂದು ಬಟನ್ ಹಾಗೂ ಮತ್ತೊಂದು ಬಟನ್ ನಡುವಿನ ಅಂತರ ಹೆಚ್ಚಾಗಿರುತ್ತದೆ.
ಇದಿಷ್ಟೇ ಅಲ್ಲ ಕೆಲವು ಬಾರಿ ಯುವತಿಯರ ಶರ್ಟ್‌ಗೆ ಎಡಭಾಗದಲ್ಲಿ ಬಟನ್‌ಗಳಿರುತ್ತವೆ. ಆದರೆ ಪುರುಷರಿಗೆ ಬಲ ಭಾಗದಲ್ಲಿ ಬಟನ್‌ಗಳಿರುವುದನ್ನು ನಾವು ನೋಡಬಹುದು. ಆದರೆ ಇದಕ್ಕೆ ಕಾರಣವೇನು ಎಂಬುದು ಈವರೆಗೂ ತಿಳಿದಿಲ್ಲ.
ಆದರೆ ಇದು ಹಿಂದಿನ ಕಾಲದಲ್ಲಿ ಮಾಡಲಾದ ನಿಯಮವಂತೆ ಹೀಗಾಗಿ ಇದಕ್ಕೆ ಉತ್ತರ ಹುಡುಕಲು ನಾವು ನಿಂತರೆ ಅದು ನಮ್ಮನ್ನು ರಾಜರ ಆಳ್ವಿಕೆ ಕಾಲಕ್ಕೆ ಕರೆದೊಯ್ಯುತ್ತದೆ. ಹಿಂದಿನ ಕಾಲದಲ್ಲಿ ಪುರುಷರು ತಮ್ಮ ಬಲಗೈಯಲ್ಲಿ ಕತ್ತಿಯನ್ನು ಹಿಡಿದು ಎಡಗೈನಲ್ಲಿ ಗುರಾಣಿ ಹಿಡಿದು ಯುದ್ಧಕ್ಕೆ ಸಿದ್ಧರಾಗಿರುತ್ತಿದ್ದರು. ಆದ್ದರಿಂದ ಅವರ ಶಸ್ತ್ರಾಸ್ತ್ರಗಳ ಹಿಡಿದ ಕಾರಣ ಒಂದೇ ಬದಿಯಲ್ಲಿ ಗುಂಡಿಗಳನ್ನು ಹೊಂದುವುದು ಅನುಕೂಲಕರವೆಂದು ಭಾವಿಸಲಾಗಿತ್ತು. ಅದರಂತೆ ಮಹಿಳೆಯರು ತಮ್ಮ ಎಡ ಕೈ ಬಳಸಿ ಮಕ್ಕಳನ್ನು ಹಿಡಿದುಕೊಳ್ಳುತ್ತಿದ್ದರು. ಮಹಿಳೆಯರಿಗೆ ಬಲಗೈ ಬಳಸಿ ಶರ್ಟ್ ಗುಂಡಿ ಹಾಕಲು ಸುಲಭವಗುವಂತೆ ವಿನ್ಯಾಸ ಮಾಡಲಾಗಿದೆ. ಅದರಲ್ಲೂ ಶಿಶುಗಳಿಗೆ ಹಾಲುಣಿಸಲು, ಅವರು ಅಂಗಿಯ ಗುಂಡಿಗಳನ್ನು ಬಿಚ್ಚಲು ಬಲಗೈಯನ್ನು ಬಳಸಬೇಕಾಗಿತ್ತು.
ಇನ್ನೊಂದು ಕಥೆಯ ಪ್ರಕಾರ ನೆಪೋಲಿಯನ್ ಬೋನಪಾರ್ಟೆ ಮಹಿಳೆಯರ ಬಟ್ಟೆಯಲ್ಲಿ ಬಟನ್ ಯಾವ ಭಾಗದಲ್ಲಿ ಇರಬೇಲು ಎಂಬ ಕುರಿತು ತೀರ್ಪು ನೀಡಿದ ಎಂಬ ವಾದಿವಿದೆ. ಆತ ಮಹಿಳೆಯರ ಬಟ್ಟೆಯಲ್ಲಿ ಎಡಭಾಗದಲ್ಲಿ ಮಾತ್ರ ಬಟನ್‌ಗಳು ಇರಬೇಕು ಎಂಬ ತೀರ್ಪು ನೀಡಿದ್ದ ಎನ್ನಲಾಗುತ್ತದೆ. ಆದರೆ ಇದಕ್ಕೆ ನಿಖರವಾದ ಪುರಾವೆಗಳಿಲ್ಲ.

ಇನ್ನು ಮಹಿಳೆಯರು ಮತ್ತು ಪುರುಷರ ಬಟ್ಟೆಗಳ ನಡುವೆ ಬೇಗ ವ್ಯತ್ಯಾಸ ಕಂಡುಕೊಳ್ಳಲು ಈ ರೀತಿ ಎರಡು ವಿಧವಾಗಿ ಬಟ್ಟೆಯನ್ನು ವಿನ್ಯಾಸ ಮಾಡಲಾಗಿತ್ತು. ಮುಂದೆ ಇದು ಸಂಪ್ರದಾಯದಂತೆ ನಡೆದು ಬಂದಿತು ಎಂಬ ವಾದ ಸಹ ಇದೆ. ಆದರೆ ಈ ಬಗ್ಗೆ ಅಷ್ಟೊಂದು ಆಳವಾಗಿ ಯಾರು ಸಹ ಯೋಚಿಸುವುದಿಲ್ಲ.



Click it and Unblock the Notifications
