Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಚೀನಾದಲ್ಲಿ ಶ್ರೀಮಂತರಾಗಲು ಭಯ ಪಡುತ್ತಿರುವುದೇಕೆ? ಸೂಪರ್ ರಿಚ್ ಅಂತ ಯಾವ ಬಿಲಿನಿಯರ್ ಮುಂದೆ ಬರ್ತಿಲ್ಲ!
ಚೀನಾದಲ್ಲಿ ಸೂಪರ್ ರಿಚ್ ಎಂದು ಕರೆಸಿಕೊಳ್ಳಲು ಭಯ ಪಡುತ್ತಿದ್ದಾರೆ, ಯಾರೂ ಶ್ರೀಮಂತರು ಎಂದು ತೋರಿಸಿಕೊಳ್ಳುತ್ತಿಲ್ಲ, ಏಕೆಂದರೆ ಶ್ರೀಮಂತರು ನಮ್ಮಲ್ಲಿನ ಸಂಪತ್ತು ಬಹಿರಂಗ ಪಡಿಸಿದ ತಕ್ಷಣ ಮುಂದಿನ ತಿಂಗಳಿನಿಂದ ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಉಂಟಾಗಿದೆ, ಹಾಗಾಗಿ ಯಾರೂ ಶ್ರೀಮಂತರಾರು ನಾವೇ ನಂಬರ್ 1 ಶ್ರೀಮಂತರು ಎಂದು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಚೀನಾದ ಶ್ರೀಮಂತರ ಸಿದ್ಧಾಂತವೆಂದರೆ ನೀವು ಬೇರೆಯವರಿಗೆ ಹಣ ಮಾಡಲು ಬಿಡಿ, ಆವಾಗ ನಿಮಗೆ ಹೆಚ್ಚು ಹಣ ಬರುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ನಿಯಾನ್ ಗೌಂಗಿಜು, ಇವರು ಚೈನೀಸ್ ಸ್ನಾಕ್ ಕಂಪನಿಯ ಒಡೆಯ, ಈತ ಬಡತನದಿಂದ ತುಂಬಾ ಶ್ರೀಮಂತನಾಗಿ ಬೆಳೆದ ಕತೆಯಿದು. ಆದರೆ ಅವನು ಶ್ರೀಮಂತನಾಗಿ ಬೆಳೆದ ಮೇಲೆ ಆತನ ಕಂಪನಿಯನ್ನು ಆತನಿಂದ ಕಿತ್ತುಕೊಳ್ಳಲಾಗುವುದು. ಅವನು ನಂತರ ಬದುಕನ್ನು ಜೈಲಿನಲ್ಲಿ ಕಳೆಯುವಂತಾಯ್ತು. ಇದು ಬರಿ ಒಬ್ಬರ ಕತೆಯಲ್ಲ, ಅಲ್ಲಿ ಶ್ರೀಮಂತರಾದ ಬಹುತೇಕರ ಕತೆಯಿದು.
ಈಗೀನ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 2012ಕ್ಕೆ ಅಧಿಕಾರಕ್ಕೆ ಬಂದ ಮೇಲೆ ಸರ್ವ್ ದಿ ಪೀಪಲ್ ಹಾಗೂ ಕಾಮನ್ ಪ್ರಾಪರ್ಟಿ ಎಂಭ ಸ್ಲೋಗನ್ ತಂದರು. ಅಂದರೆ ಹೆಚ್ಚಿನ ಆಸ್ತಿ ಇದ್ದರೆ ಅದು ಎಲ್ಲರಿಗೆ ಸೇರಿದ್ದು ಎಂಬುವುದಾಗಿದೆ. ಹಾಗಾಗಿ ಯಾರಲ್ಲಿ ಸಂಪತ್ತು ಹೆಚ್ಚಿದೆಯೋ ಅವರ ಮೇಲೆ ಚೀನಾ ಸರ್ಕಾರದ ಕಣ್ಣು ಬೀಳುತ್ತದೆ, ಈ ಕಾರಣದಿಂದಲೇ ನಮ್ಮಲ್ಲಿ ಹೆಚ್ಚಿನ ಸಂಪತ್ತಿದೆ, ನಾನೇ ಶ್ರೀಮಂತ ವ್ಯಕ್ತಿ ಎಂದು ತೋರಿಸಿಕೊಳ್ಳಲು ಯಾರೂ ಮುಂದೆ ಬರ್ತಿಲ್ಲ, ಎಷ್ಟೇ ಆದಾಯ ಬರ್ತಾ ಇದ್ದರೂ ಕಂಪನಿ ನಷ್ಟದಲ್ಲಿದೆ ಎಂಬಂತೆ ತೋರಿಸಲಾಗುತ್ತಿದೆ.
ಇನ್ನು ಚೀನಾದ ಕೆಲ ಸೂಪರ್ ರಿಚ್ ವ್ಯಕ್ತಿಗಳು ಆ ದೇಶವನ್ನೇ ಬಿಡುತ್ತಿದ್ದಾರೆ
ಚೀನಾದ ದೊಡ್ಡ ಬೊಲಿನಿಯರ್ ಆದ ಅಲಿಬಾಬಾ ಆ ದೇಶ ಬಿಟ್ಟು ಹೋಗಿ ಆಗಿದೆ, ಹೀಗೆ ಹೋಗುವಾಗ ಅವರು ಚೀನಾದ ನೀತಿ ಕುರಿತು ಕಟುವಾಗಿ ಟೀಕಿಸಿದ್ದಾರೆ, ಇವರಂತೆ ಹಲವರು ಚೀನಾ ಬಿಟ್ಟು ಹೋಗಿದ್ದಾರೆ. ಚೀನಾ ತನ್ನ ವಿಚಿತ್ರ ನಿಯಮದಿಂದಾಗಿ 155ಕ್ಕೂ ಅಧಿಕ ಬಿಲಿನಿಯರ್‌ಗಳನ್ನು 2023-2024 ಅಂತರದಲ್ಲಿ ಕಳೆದುಕೊಂಡಿದೆ, ಹೀಗಾಗಿ ಅಲ್ಲಿ ಈಗ ಶ್ರೀಮಂತರ ಪಟ್ಟಿಯಲ್ಲಿ ಈಗ 814 ಬಿಲಿನಿಯರ್ ಮಾತ್ರ ಉಳಿದಿದ್ದಾರೆ.
ಚೀನಾದ ಆರ್ಥಿಕತೆಯೂ ಕುಸಿಯುತ್ತಿದೆ
ಕಳೆದ ಎರಡು ವರ್ಷಗಳಿಂದ ಚೀನಾದ ಆರ್ಥಿಕತೆ ತುಂಬಾನೇ ಕುಸಿಯುತ್ತಿದೆ, ಇದು ಕೂಡ ಚೀನಾಕ್ಕೆ ಭಾರೀ ಹೊಡೆತ ನೀಡಿದೆ. ಇದರಿಂದ ಅಲ್ಲಿಯ ಜೀವನ ಕಷ್ಟವಾಗುತ್ತಿದೆ.
ಬಿಲಿನಿಯರ್ ಚೀನಾ ಬಿಟ್ಟು ಹೋಗುತ್ತಿರುವುದರಿಂದ ಹೂಡಿಕೆ, ಉತ್ಪಾದನೆಗೆ ಹೊಡೆತ ಉಂಟಾಗುತ್ತಿದೆ
ಒಂದು ವರದಿ ಪ್ರಕಾರ 13, 899 ಮಿಲಿನಿಯರ್ ಚೀನಾ ಬಿಟ್ಟು ಹೋಗಿದ್ದಾರೆ, ಇವರು ಯುಎಸ್, ಕೆನಡಾ, ಸಿಂಗಾಪುರ್ ಅಂತ ಹೋಗಿ ನೆಲೆಸಿದ್ದಾರೆ. ಇದರಿಂದಾಗಿ ದೇಶದ ಆರ್ಥಿಕತೆ ಮೇಲೆ ಬಹುದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಚೀನಾದ ಎಲೆಕ್ಟ್ರಿಕ್ ವಾಹನ ಸಂಸ್ಥಾಪಕ ವಾಂಗ್ ಚುವಾನ್ಫು ಕಳೆದ ಕೆಲ ವರ್ಷಗಳಿಂದ ಉತ್ತಮ ಆದಾಯ ಗಳಿಸುತ್ತಿದ್ದಾನೆ, ಈತನ ಆದಾಯ ಡಬಲ್ ಆಗಿದೆ. ಆದರೂ ಆತ ಸೇಫ್. ಇನ್ನು ಮತ್ತೊಬ್ಬ ಶ್ರೀಮಂತ ಝಾಂಗ್ ಶಾನ್ಶನ್ ಒಮದು ಮಿನಿರಲ್ ವಾಟರ್ ಬಾಟಲಿಗಳ ಫ್ಯಾಕ್ಟರಿ ಓಪನ್ ಮಾಡಿದ್ದಾನೆ, ಆತನೂ ಸೇಫ್. ಚೀನಾದಲ್ಲಿ ಸೂಪರ್ ರಿಚ್ ಆಗಲು ಒಂದೋ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮಾಡುವ ವಸ್ತುವಾಗಿರಬೇಕು, ಆದರೆ ತುಂಬಾ ಕಡಿಮೆ ಟೆಕ್ನಾಲಾಜಿ ಬಳಸಿ ಮಾಡುವ ಕೆಲಸ ಆಗಿರಬೇಕು. ಅಂದರೆ ಮಾತ್ರ ವರ್ಕ್ ಆಗುತ್ತೆ.
ಸೂಪರ್ ರಿಚ್ ಆದಂತೆ ಚೀನಾದಲ್ಲಿ ಸವಾಲುಗಳು ಎದುರಾಗುವುದು, ಈ ರಗಳೆ ಬೇಡ ಬಹುತೇಕ ಮಿಲಿನಿಯರ್ ಅಥವಾ ಬಿಲಿನಿಯರ್‌ಗಳು ಚೀನಾ ಬಿಟ್ಟು ತಮ್ಮ ಹೂಡಿಕೆಯನ್ನು ಇತರ ರಾಷ್ಟ್ರಗಳಲ್ಲಿ ಮಾಡುತ್ತಿದೆ. ಇವೆಲ್ಲವೂ ಚೀನಾದ ಆರ್ಥಿಕತೆ ಮೇಲೆ ನೇರ ಹೊಡೆತ ನೀಡಿದೆ ಎಂದು ವರದಿಗಳು ಹೇಳುತ್ತವೆ.



Click it and Unblock the Notifications
