Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ನಿದ್ರೆ ಇಲ್ಲದೆ ರಾತ್ರಿ ಕಳೆಯುವ ಇಡೀ ಗ್ರಾಮ: ಕಾರಣ 100ಕ್ಕೂ ಹೆಚ್ಚು ಕಾಡು ಕೋಳಿಗಳು..!
ನೀವು ಕೋಳಿಗಳ ಸಾಮಾನ್ಯ ದೈನಂದಿನ ಕಾರ್ಯಗಳ ಗಮನಿಸಿರಬಹುದು. ಅವು ರಾತ್ರಿಯಾಗುತ್ತಿದ್ದಂತೆ ಗೂಡು ಸೇರಿಕೊಳ್ಳುತ್ತವೆ. ಸರಿಯಾಗಿ ಸೂರ್ಯ ಉದಯಿಸುವ ಸಮಯಕ್ಕೆ ಸರಿಯಾಗಿ ಜೋರಾಗಿ ಕೂಗುತ್ತವೆ. ಕೋಳಿ ಕೂಗಲು ಆರಂಭಿಸಿದೆ ಎಂದರೆ ಬೆಳಗಾಗಿದೆ ಎಂದರ್ಥ. ಹಾಗೆ ಹಲವು ಕಡೆ ಇನ್ನೂ ಕೋಳಿಗಳ ಸಾಕುವವರು ಅವುಗಳ ಪಾಲನೆ ಫೋಷಣೆ ಮಾಡುವವರು ಇದ್ದಾರೆ.
ಹಳ್ಳಿಗಳಲ್ಲಿ ಇಂದಿಗೂ ಕೋಳಿಗಳು ಕೂಗಿದ ಬಳಿಕ ಏಳುವ ಜನರೂ ಇದ್ದಾರೆ. ಅದೊಂದು ನಿತ್ಯದ ಕೆಲಸವಾಗಿ ಬಿಟ್ಟಿರುತ್ತದೆ. ಅದೇ ರೀತಿ ನೀವು ಕೋಳಿಗಳು ನಾಡಿನಲ್ಲಿರುವಂತೆ ಕಾಡಿನಲ್ಲಿಯೂ ಕೋಳಿಗಳಿವೆ ಎಂದು ತಿಳಿದಿದ್ದೇವೆ. ಅವುಗಳನ್ನು ಕಾಡು ಕೋಳಿಗಳು ಎನ್ನಲಾಗುತ್ತದೆ.

ಈ ಕಾಡು ಕೋಳಿಗಳು ಹಿಂದೆ ಊರಿನಿಂದ ಕಾಡಿಗೆ ತೆರಳಿ ಅಲ್ಲಿಯೇ ಬೆಳೆದ ಜಾತಿಯಾಗಿದೆ. ಇವು ನಾಡಿನಲ್ಲಿರುವ ಕೊಳಿಗಳಿಗಿಂತ ಭಿನ್ನವಾಗಿ ಕಾಣಿಸುವುದಿಲ್ಲ. ಆದರೆ ಸ್ವಲ್ಪ ಚುರುಕಾಗಿ ಕಾಣಿಸುತ್ತವೆ ಅಷ್ಟೇ. ಆದ್ರೆ ಕೋಳಿಗಳ ಕುರಿತಂತೆ ಇಷ್ಟೊಂದು ಟಿಪ್ಪಣಿ ಕೊಡುತ್ತಿರಲು ಇಲ್ಲಿ ಕಾರಣವೂ ಇದೆ.
ಈ ಕಾಡುಕೋಳಿಗಳು ಊರು ಹಾಗೂ ಕಾಡಿನ ಅಂಚಿನಲ್ಲಿ ವಾಸವಿರುತ್ತವೆ, ದಟ್ಟ ಕಾಡಿನಲ್ಲಿ ಇವು ಇರುವುದಿಲ್ಲ. ನಾಡು ಕೋಳಿಗಳು ಸೇವಿಸುವಂತಹ ಆಹಾರವನ್ನೇ ಅವು ಸಹ ಸೇವಿಸುತ್ತವೆ. ಆದ್ರೆ ಇಲ್ಲೊಂದು ಕಡೆ ಈ ಕಾಡುಕೋಳಿಗಳು ಇಡೀ ಊರಿನ ಜನರ ನಿದ್ದೆ ಹಾಳು ಮಾಡಿವೆ. ಅದರಲ್ಲೂ 100ಕ್ಕೂ ಹೆಚ್ಚು ಕಾಡುಕೋಳಿಗಳು ವಿನಾಶಕಾರಿಯಾಗಿ ಕಾಡುತ್ತಿವೆ.
ಇಂಗ್ಲೆಂಡ್‌ನ ನಾರ್ಫೋಕ್ ಕೌಂಟಿಯಲ್ಲಿರುವ ಸ್ನೆಟ್ಟಿಶ್ಯಾಮ್ ಎಂಬ ಗ್ರಾಮ ಈ ಕಾಡುಕೋಳಿಗಳ ದಾಳಿಗೆ ಸಿಲುಕಿ ಹೈರಾಣಾಗಿದೆ. ಒಂದು ಕಾಲದಲ್ಲಿ ಶಾಂತಿಯಿಂದ ಇದ್ದ ಗ್ರಾಮದಲ್ಲೀಗ ಎಲ್ಲಿ ನೋಡಿದರು ವಿನಾಶ, ಗದ್ದಲಕ್ಕೆ ಕಾರಣವಾಗಿದೆ. ಈ ಕಾಡುಕೋಳಿಗಳು ಎಷ್ಟರ ಮಟ್ಟಿಗೆ ದಾಳಿ ಮಾಡಿವೆ ಅಂದರೆ ಅಲ್ಲಿನ ರೈತರು ಕೌಂನ್ಸಿಲ್ ಸಂರ್ಪಕಿಸಿ ದೂರು ನೀಡಿದ್ದಾರೆ.
ಅಷ್ಟಕ್ಕೂ ಈ ಕೋಳಿಗಳಿಂದಾಗುವ ಸಮಸ್ಯೆ ಏನು?
ರಾತ್ರಿ ಶಾಂತವಾಗಿರುವ ಈ ಕೋಳಿಗಳು ಹಗಲು ಆಗುತ್ತಿದ್ದಂತೆ ಬೆಳಗಿನ ವೇಳೆ ಕೂಗಲು ಆರಂಭಿಸುತ್ತವೆ. ಹೀಗಾಗಿ ಬೆಳಗ್ಗೆ 5 ಗಂಟೆಯ ನಂತರ ಇಡೀ ಊರಿನ ಮಂದಿ ಯಾರು ಸಹ ಮಲಗಿ ನಿದ್ರೆ ಮಾಡಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಈ ಕೋಳಿಗಳು ಕೂಗುತ್ತಾ ಇಡೀ ಗ್ರಾಮದಲ್ಲಿ ಓಡಾಡುತ್ತವೆ. ಇದು ನಿದ್ರೆ ಇಲ್ಲದೆ ಪರದಾಡುವ ಸ್ಥಿತಿ ತಂದಿದೆ.
ಇದರ ಜೊತೆಗೆ ಇವು ರಾತ್ರಿ ವೇಳೆ ಸಹ ಕೂಗುತ್ತವೆ. ಇದರಿಂದ ಗ್ರಾಮದ ಜನರ ನೆಮ್ಮದಿಯೇ ಹಾಳಾಗಿದೆ. ಆದರೆ ಈ ವಿಚಾರ ತಿಳಿದ ಬಳಿಕ ಈ ಗ್ರಾಮಗಳತ್ತ ಸಾಲು ಸಾಲು ಪ್ರವಾಸಿಗರು ಈ ಕಾಡಕೋಳಿ ಹಿಂಡು ನೋಡಲೆಂದು ಬರುತ್ತಿದ್ದಾರೆ. ಈ ಪ್ರವಾಸಿಗರು ಕಾಡುಕೋಳಿಗಳಿಗೆ ಆಹಾರ ನೀಡುತ್ತಿದ್ದು, ಆ ಕೋಳಿಗಳಿಗೆ ಶಾಶ್ವತ ಸ್ಥಳ ನಿರ್ಮಾಣ ಮಾಡಲು ಹೊರಟ್ಟಿದ್ದಾರೆ. ಇದಲ್ಲದೆ ಈ ಆಹಾರಗಳು ಇಲಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಇನ್ನು ರೈತರು ಬೆಳೆದಿರುವ ತರಕಾರಿ ತೋಟಕ್ಕೆ ಈ ಕೋಳಿಗಳು ದಾಳಿ ಮಾಡುತ್ತವೆಯಂತೆ. ಕಾಲುಗಳಿಂದ ನೆಲವನ್ನು ಅಗೆದು ಇಡೀ ತೋಟವನ್ನು ಇವು ಹಾಳು ಮಾಡುತ್ತಿವೆ. ಇವು ಎರೆಹುಳುಗಳನ್ನು ಹುಡುಕಿ ಹುಡುಕಿ ತಿನ್ನಲು ಆರಂಭಿಸಿವೆಯಂತೆ. ಜೊತೆಗೆ ಕೋಳಿಗಳು ರಾತ್ರಿಯಾದರೆ ಎಲ್ಲೆಂದರಲ್ಲಿ ಕೂರುವುದು ಹಿಂಕೆಗಳ ಹಾಕುವುದು ಆರಂಭಿಸಿವೆ, ಇದು ಅನೇಕ ಅನಾರೋಗ್ಯಕ್ಕೆ ಕಾರಣವಾಗುವ ಆತಂಕ ಗ್ರಾಮಸ್ಥರಲ್ಲಿ ಕಾಡುತ್ತಿವೆ. ಈ ಕೋಳಿಗಳಿಂದ ಮುಕ್ತಿ ನೀಡುವಂತೆ ಕೌನ್ಸಿಲ್‌ಗೆ ಗ್ರಾಮಸ್ಥರು ದೂರು ನೀಡಿದ್ದು, ತ್ವರಿತ ಕ್ರಮದ ಭರವಸೆಯನ್ನು ನೀಡಲಾಗಿದೆಯಂತೆ. ಆದರೆ ಈ ಕೋಳಿಗಳ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವುದು ಅಥವಾ ಅವುಗಳಿಗೆ ಶಾಶ್ವತ ಸ್ಥಳ ನಿರ್ಮಿಸಿಕೊಡುವುದು ಅಷ್ಟು ಸುಲಭದ ಕೆಲಸವಾಗಿ ಉಳಿದಿಲ್ಲ.



Click it and Unblock the Notifications
