Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ತನ್ನ ಶೇ. 100ರಷ್ಟು ಆಸ್ತಿ ಯಾರ ಪಾಲಾಗಬೇಕು ಎಂದು ಘೋಷಿಸಿದ ಸಲ್ಮಾನ್ ಖಾನ್
ಬಾಲಿವುಡ್‌ನ ಮೋಸ್ಟ್... ಮೋಸ್ಟ್ ಎಲಿಜಿಬಲ್ ಬ್ಯಾಚುರಲ್ ಅಂದ್ರೆ ಸಲ್ಮಾನ್ ಖಾನ್. ವಯಸ್ಸು ಬರೋಬರಿ 59 ವರ್ಷ. ಮದುವೆಯಿಲ್ಲ, ದತ್ತು ಪಡೆದ ಮಕ್ಕಳಿಲ್ಲ, ಕೋಟ್ಯಾಂತರ ರುಪಾಯಿ ಆಸ್ತಿ ಇದೆ. ಇನ್ನು ಮದುವೆಯಾಗುವುದು ಕೂಡ ಡೌಟು, ಈ ವಯಸ್ಸಿನಲ್ಲಿ ಮದುವೆಯಾಗಲು ಅವರು ಕೂಡ ಮನಸ್ಸು ಮಾಡುತ್ತಿಲ್ಲ, ಹೀಗಿರುವಾಗ ಅವರ ಕೋಟ್ಯಾಂತರ ರುಪಾಯಿಯ ಆಸ್ತಿ ಅವರ ನಂತರ ಯಾರಿಗೆ ಸೇರಲಿದೆ ಎಂಬ ಪ್ರಶ್ನೆ ಮೂಡುತ್ತದೆ, ಅದಕ್ಕೆ ಸಲ್ಮಾನ್ ಖಾನ್ ಉತ್ತರಿಸಿದ್ದಾರೆ, ನನ್ನ ಶೇ. 100ರಷ್ಟು ಆಸ್ತಿ ಯಾರ ಪಾಲಾಗಬೇಕು ಎಂಬುವುದನ್ನು ಬಹಿರಂಗವಾಗಿ ಹೇಳಿದ್ದಾರೆ.

ಮದುವೆಯಾಗದೇ ಉಳಿದ ಸಲ್ಮಾನ್‌ಖಾನ್
ಸಲ್ಮಾನ್ ಖಾನ್ ಸುರುದ್ರೂಪಕ್ಕೆ, ನಟನೆಗೆ ಹೆಣ್ಮಕ್ಕಳು ಫಿದಾ ಆಗಿದ್ದರು, ನಮ್ಮ ಹುಡುಗ ಸಲ್ಮಾನ್‌ಖಾನ್‌ನಂತೆ ಇರಬೇಕು ಎಂದು ಬಯಸುತ್ತಿದ್ದರು ಅಂಥ ಸಲ್ಮಾನ್ ಖಾನ್ ಬ್ಯಾಚುರಲ್ ಆಗಿಯೇ ಉಳಿದು ಬಿಟ್ಟರು. ಹಲವು ಹೆಣ್ಮಕ್ಕಳ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು, ಅವರ ಲವ್ ಅಫೇರ್‌ಗಳಲ್ಲಿ ಹೆಚ್ಚು ಸದ್ದು ಮಾಡಿದ್ದು ಐಶ್ವರ್ಯ ರೈ ಜೊತೆಗಿನ ಪ್ರೀತಿ, ಆದರೆ ಈ ಪ್ರೀತಿಯೂ ಮುರಿದು ಬಿತ್ತು, ಅದಾದ ಬಳಿಕ ಕತ್ರಿನಾ ಕೈಫ್, ಲುಲಿಯಾ ವಂತೂರ್ ಇವರೆಲ್ಲರ ಜೊತೆಗಿನ ಪ್ರೀತಿ ಮುರಿದು ಬಿತ್ತು, ಕೊನೆಗೆ ಮದುವೆಯಾಗದೆಯೇ ಉಳಿದರು.
ಬಾಲಿವುಡ್‌ನ ಟಾಪ್ ನಟರ ಸಾಲಿನಲ್ಲಿ ಗುರುತಿಸಿಕೊಂಡಿರುವ ಸಲ್ಮಾನ್ ಖಾನ್
ಸಲ್ಮಾನ್‌ಖಾನ್ ಬಾಲಿವುಡ್ ನಟರ ಸಾಲಿನಲ್ಲಿ ಗುರುತಿಸಿಕೊಂಡಿರು ನಟ, ಒಂದು ಚಿತ್ರಕ್ಕೆ ನೂರು ಕೋಟಿಗೂ ಅಧಿಕ ಹಣ ಪಡೆಯುತ್ತಾರೆ, ಅವರ ಒಟ್ಟು ಆಸ್ತಿ ರುಪಾಯಿ 2900 ಕೋಟಿಗೂ ಅಧಿಕವಿದೆ, ಅವರು ಅನೇಕ ಬ್ರ್ಯಾಂಡ್‌ಗಳಿಗೆ ಹಣ ಹೂಡಿಕೆ ಮಾಡಿದ್ದಾರೆ, ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ, ಬಿಗ್‌ಬಾಸ್ ಶೋ ನಿರೂಪಣೆ ಮಾಡುತ್ತಾರೆ, ಹೀಗೆ ಅವರ ಆಸ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಕೋಟ್ಯಾಂತರ ರುಪಾಯಿ ಹಣ ಗಳಿಸುವ ಸಲ್ಲು ಬಾಯ್ ಕೋಟ್ಯಾಂತರ ರುಪಾಯಿ ದಾನ ಕೂಡ ಮಾಡುತ್ತಾರೆ.
ಒಂದು ಕಾಲದ ಬ್ಯಾಡ್‌ಬಾಯ್ ಈಗ ಎಲ್ಲರ ಕಣ್ಮಣಿ
ಒಂದು ಕಾಲದಲ್ಲಿ ಸಕ್ಸಸ್ ಮದ, ನಿಲುಕದ ಪ್ರೀತಿ ಈ ಎಲ್ಲಾ ಕಾರಣಗಳಿಂದ ಕೆಟ್ಟ ಸುದ್ದಿಗಳಿಗೆ ಹೆಡ್‌ಲೈನ್ ಆಗಿದ್ದರು ಸಲ್ಮಾನ್‌ಖಾನ್. ಕೃಷ್ಣಾಮೃಗವನ್ನು ಕೊಂಡ ಕೇಸ್, ಜನರ ಮೇಲೆ ಗಾಡಿ ಹತ್ತಿಸಿದ ಕೇಸ್, ಗರ್ಲ್ ಫ್ರೆಂಡ್‌ಗೆ ನೀಡಿದ ಕಿರುಕುಳ ಹೀಗೆ ಬೇಡದ ವಿಚಾರಗಳ ಕಾರಣದಿಂದ ಬ್ಯಾಡ್‌ಬಾಯ್ ಇಮೇಜ್ ಬಂದಿತ್ತು. ಆದರೆ ಈಗ ಸಲ್ಮಾನ್ ಈಗ ಅದೆಲ್ಲಾ ಬದಲಾಯಿಸಿದ್ದಾರೆ, ಬೀಯಿಂಗ್ ಹ್ಯೂಮನ್ ಎಂಬ ಸಂಸ್ಥೆ ಮೂಲಕ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ, ಇವರಿಂದ ಹಲವಾರು ವ್ಯಕ್ತಿಗಳ ಬದುಕಿನಲ್ಲಿ ಬೆಳಕು ಮೂಡಿದೆ, ಹೀಗಾಗಿ ಸಲ್ಮಾನ್ ಖಾನ್ ಬಗ್ಗೆ ಈಗ ಎಲ್ಲರಿಗೆ ಗೌರವ ಹೆಚ್ಚಾಗಿದೆ. ಒಬ್ಬ ನಟನಾಗಿ ಮಾತ್ರವಲ್ಲ ಒಬ್ಬ ಒಳ್ಳೆಯ ಮನುಷ್ಯನಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಎಲ್ಲವೂ ಒಳ್ಳೆಯದೇ ಆಗುತ್ತಿರುವಾಗ ವಿಧಿ ಅವರನ್ನು ಮತ್ತೆ ಬೇಟೆಯಾಡಲಾರಂಭಿಸಿದೆ.
ಪ್ರತಿ ಕ್ಷಣವೂ ಪ್ರಾಣಭಯದಿಂದ ಓಡಾಡಬೇಕಾದ ಪರಿಸ್ಥಿತಿ
ಬಾಲಿವುಡ್‌ನ ಯಾವ ನಟರಿಗೂ ಇಂಥ ಆತಂಕವಿಲ್ಲ, ಆದರೆ ಸಲ್ಮಾನ್ ಖಾನ್‌ಗೆ ಮಾತ್ರ ಈಗ ಒಂದು ಕ್ಷಣವೂ ನೆಮ್ಮದಿಯಿಲ್ಲ, ಯಾವಾಗ ಏನು ಆಗುತ್ತದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ, ಸದಾ ಪ್ರಾಣಭಯದಿಂದಲೇ ಓಡಾಡುತ್ತಿದ್ದಾರೆ. ಅವರ ಸೆಕ್ಯೂರಿಟಿ ಮತ್ತಷ್ಟು ಬಿಗಿಗೊಳಿಸಲಾಗಿದೆ. ಸಲ್ಮಾನ್ ಖಾನ್ ಈಗ ತಮ್ಮ ನಂತರ ಆಸ್ತಿ ಏನಾಗಲಿದೆ ಎಂದು ಹೇಳಿದ್ದಾರೆ. ತನ್ನ ಅರ್ಧದಷ್ಟು ಆಸ್ತಿಯನ್ನು ಟ್ರಸ್ಟ್‌ಗೆ ದಾನ ಮಾಡಿರುವುದಾಗಿ ಹೇಳಿದ್ದಾರೆ. ನಾನು ಮದುವೆಯಾಗದೆ ಉಳಿದರೆ ಶೇ. 100ರಷ್ಟು ಆಸ್ತಿ ತನ್ನ ನಂತರ ಟ್ರಸ್ಟ್‌ಗೆ ಹೋಗುವುದಾಗಿ ಹೇಳಿದ್ದಾರೆ.



Click it and Unblock the Notifications