Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಇಂಟರ್‌ನೆಟ್ ಬಳಸಿದ್ದು ಯಾರು? ಈ ಲೆಜೆಂಡ್ ಬಗ್ಗೆ ಗೊತ್ತಾ?
ಭಾರತದಲ್ಲಿ ಇಂಟರ್‌ನೆಟ್ ಬಳಕೆ ಏರಿಕೆ ಪ್ರಮಾಣದಲ್ಲಿದೆ. ಹೀಗಾಗಿ ಸ್ಮಾರ್ಟ್‌ಫೋನ್ ಹಾಗೂ ಟೆಲಿಕಾಂ ಇಂಡಸ್ಟ್ರೀ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದಾಗಿವೆ. ಭಾರತದಲ್ಲಿ ಬಹುತೇಕರ ಕೈಗೆ ಮೊಬೈಲ್ ಬಂದಾಗಿದೆ. ಹಾಗೆ ಎಲ್ಲರೂ ಈಗ ಸ್ಮಾರ್ಟ್ ಫೋನ್ ಬಳಕೆದಾರರಾಗಿದ್ದಾರೆ. ವಿಶ್ವದಲ್ಲೇ ಕಡಿಮೆ ದರಕ್ಕೆ ಇಂಟರ್‌ನೆಟ್ ಸೇವೆ ನೀಡುತ್ತಿರುವ ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ.
5ಜಿ ಸ್ಪೀಡ್‌ನ ಇಂಟರ್‌ನೆಟ್ ದರ ಉಳಿದ ದೇಶಗಳಿಗೆ ಹೋಲಿಸಿದರೆ ಬಹಳ ಅಗ್ಗವಾಗಿದೆ. ಹಾಗೆ ಇಂಟರ್‌ನೆಟ್ ಬಳಕೆ ಕೂಡ ವಿಶ್ವದಲ್ಲೇ ಅತೀ ಹೆಚ್ಚು ಸಮಯ ಕಳೆಯುವ ಮಂದಿ ಭಾರತೀಯರಾಗಿದ್ದಾರೆ. ಆದ್ರೆ ಭಾರತದಲ್ಲಿ ಇಂಟರ್‌ನೆಟ್ ಸೇವೆ ಆರಂಭವಾಗಿದ್ದು ಮಾತ್ರ ಬಹಳ ತಡವಾಗಿ 1991ರ ಆಸುಪಾಸಿನಲ್ಲಿ ಇಂಟರ್‌ನೆಟ್ ಭಾರತಕ್ಕೆ ಎಂಟ್ರಿಕೊಟ್ಟಿತ್ತು. ಆದ್ರೆ 1995ರ ಸುಮಾರಿಗೆ ಒಂದಿಷ್ಟು ಮಂದಿ ಮಾತ್ರ ಇದನ್ನು ಬಳಸುತ್ತಿದ್ದರು.

ಇನ್ನು ಭಾರತದಲ್ಲಿ ಮೊದಲ ಬಾರಿಗೆ ಇಂಟರ್‌ನೆಟ್ ಬಳಸಿದ್ದು ಯಾರು ಎಂಬುದು ನಿಮಗೆ ಗೊತ್ತಾ? ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಇಂಟರ್‌ನೆಟ್ ಸೇವೆ ಬಳಸಿದ್ದು, ಬಾಲಿವುಡ್ ನಟ ಶಮ್ಮಿ ಕಪೂರ್ ಎಂದು ತಿಳಿದುಬಂದಿದೆ. ಆದ್ರೆ ಭಾರತಕ್ಕೆ ಇಂಟರ್‌ನೆಟ್ ಆಗಮಿಸುವ ಮುನ್ನವೇ ಅವರು ಇಂಟರ್‌ನೆಟ್ ಸೇವೆ ಪಡೆದಿದ್ದರೂ ಎಂಬುದು ಮತ್ತೂ ಅಚ್ಚರಿಯ ವಿಚಾರ.
60ರ ದಶಕದಲ್ಲಿ ಬಾಲಿವುಡ್‌ನಲ್ಲಿ ಒಬ್ಬ ಶ್ರೇಷ್ಠ ನಟ ಹಾಗೆ ನಟನೆಯಿಂದ ಎಲ್ಲರ ಸೆಳೆದಿದ್ದ ಅವರು ಮೊದಲ ಬಾರಿಗೆ ಅಂತರ್ಜಾಲ ಸೇವೆ ಅನುಭವಿಸಿದ್ದರು. ಶಮ್ಮಿ ಕಪೂರ್ ಭಾರತಕ್ಕೆ ಇಂಟರ್‌ನೆಟ್ ಬರುವವರೆಗೂ ಕಾಯಲೇ ಇಲ್ಲ. ಅವರು ನೇರವಾಗಿ ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಮೂಲಕ ಇಂಟರ್‌ನೆಟ್ ಸಂಪರ್ಕ ಪಡೆದುಕೊಂಡಿದ್ದರಂತೆ.
ವಿಎಸ್‌ಎನ್‌ಎಲ್ ಮೊದಲ ಬಾರಿಗೆ ಭಾರತದಲ್ಲಿ ಇಂಟರ್‌ನೆಟ್ ಸೇವೆ ನೀಡಿತ್ತು. ಆದ್ರೆ ವಿಎಸ್‌ಎನ್‌ಎಲ್ ಆಗಮನಕ್ಕೂ ಮುನ್ನವೇ ನಾನು ಸ್ಟೀವ್ ಜಾಬ್ಸ್ ಮುಖಾಂತರ ಇಂಟರ್‌ನೆಟ್ ಸೇವೆ ಪಡೆದುಕೊಂಡಿದ್ದೆ ಎಂದು ಅವರು ಹೇಳಿಕೊಂಡಿದ್ದರು. ವಿಎಸ್‌ಎನ್‌ಎಲ್ ಅನ್ನು ನಾನು ಹವ್ಯಾಸದ ಕಾರಣದಿಂದ ಪಡೆದುಕೊಂಡಿದ್ದೆ. ಆಪಲ್ ನವರು ನನಗೆ eWorld ಎಂಬ ವೆಬ್‌ಸೈಟ್ ನೀಡಿದ್ದರು. ಇದು ಇಂಟರ್‌ನೆಟ್ ಸೇವೆ ನೀಡುತ್ತಿತ್ತು ಎಂದು ಅವರು ಹೇಳಿಕೊಂಡಿದ್ದರು.
ವಿಎಸ್‌ಎನ್‌ಎಲ್ ಬ್ರಿಟಿಷ್ ಟೆಲಿಕಾಂ ಆಗಿತ್ತು. ಇದು ಎಲ್ಲಾ ಕಡೆಗಳಲ್ಲು ಲಭ್ಯವಿರಲಿಲ್ಲ. ಇನ್ನು ಭಾರತದಲ್ಲಿ ಇಂಟರ್‌ನೆಟ್ ಹರಡುವ ಮುನ್ನವೇ ಶಮ್ಮಿ ಕಪೂರ್ ಇಂಟರ್‌ನೆಟ್ ಬಳಸಿದ್ದರು. ಹಾಗೆ ಅವರು ತಮ್ಮ ವಂಶವೃಕ್ಷ ಕುರಿತ ಮಾಹಿತಿ ನೀಡಲೆಂದು ವೆಬ್‌ಸೈಟ್ ಕೂಡ ತೆರೆದಿದ್ದರು. 1990 ರ ದಶಕದಲ್ಲಿ ಶಮ್ಮಿ ಕಪೂರ್ ಆಪಲ್ ಮ್ಯಾಕಿಂತೋಷ್ ಕ್ಲಾಸಿಕ್ ಡೆಸ್ಕ್‌ಟಾಪ್ ಅನ್ನು ಖರೀದಿಸಿದರು ಮತ್ತು ಅಂತಾರಾಷ್ಟ್ರೀಯ ಡಯಲ್-ಅಪ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದರು.
ಅವರ ಆರಂಭಿಕ ಇಂಟರ್ನೆಟ್ ಯೋಜನೆಗಳಲ್ಲಿ ಒಂದು ಬಾಲಿವುಡ್‌ನ ಅತಿದೊಡ್ಡ ಮತ್ತು ಪ್ರಮುಖ ಚಲನಚಿತ್ರ ರಾಜವಂಶಗಳಲ್ಲಿ ಒಂದಾದ ಕಪೂರ್ ಕುಟುಂಬ ವೃಕ್ಷಕ್ಕೆ ಮೀಸಲಾದ ವೆಬ್‌ಸೈಟ್ ಆಗಿತ್ತು. ಇಂದಿಗೂ ಕೂಡ ನೀವು junglee.org.in ಗೆ ಭೇಟಿ ನೀಡಿ ಅವರ ವಂಶವೃಕ್ಷ ಹಾಗೆ ಕುಟುಂಬದ ಹಲವು ಫೋಟೋಗಳನ್ನು ವೀಕ್ಷಿಸಬಹುದು.
ದಶಕಗಳ ಕಾಲ ಬಾಲಿವುಡ್‌ನಲ್ಲಿ ಮಿಂಚಿದ್ದ ಶಮ್ಮಿ ಕುಪೂರ್ ಕುಟುಂಬ ಕಲೆಗಾಗಿ ಮೀಸಲಿಟ್ಟಿತ್ತು. ನಟಿ ಕರೀನಾ ಕಪೂರ್ ಕೂಡ ಇದೇ ಕುಟುಂಬಕ್ಕೆ ಸೇರಿದ ನಟಿಯಾಗಿದ್ದಾರೆ. ಶಮ್ಮಿ ಕಪೂರ್ 2011 ಆಗಸ್ಟ್ 14ರಂದು ಮೃತಪಟ್ಟರು. ಆದರೆ ಅವರ ಸಿನಿಮಾಗಳು ಇಂದಿಗೂ ಅಜರಾಮರವಾಗಿವೆ. ಅವರು ಸಿನಿಮಾರಂಗದಿಂದ ನಿವೃತ್ತಿ ಪಡೆದ ಬಳಿಕ ಕಂಪ್ಯೂಟರ್, ಇಂಟರ್‌ನೆಟ್ ಕಡೆ ಗಮನಹರಿಸಿದ್ದರು.



Click it and Unblock the Notifications