Latest Updates
-
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ!
ನಮ್ಮ ಭೂಮಿಗೆ ಹೆಸರಿಟ್ಟಿದ್ದು ಯಾರು.? ಇದರ ಅರ್ಥವೇನು?
ನಿಮಗೆ ಹೆಸರಿಟ್ಟಿದ್ದು ಯಾರು? ನಿಮ್ಮ ಹೆಸರಿನ ಅರ್ಥವೇನು ಎಂದು ಯಾರಾದ್ರು ಕೇಳಿದ್ರೆ ನಿಮಗೆ ಖಂಡಿತ ಉತ್ತರ ಗೊತ್ತಿರತ್ತೆ. ಆದ್ರೆ ನಮ್ಮ ಭೂಮಿಗೆ ಹೆಸರಿಟ್ಟಿದ್ದು ಯಾರು? ಭೂಮಿ ಹೆಸರು ಹುಟ್ಟಿಕೊಂಡಿದ್ದು ಹೇಗೆ? ಇದರ ಅರ್ಥವೇನು? ಎಂಬುದು ನಿಮಗೆ ಗೊತ್ತಿದ್ಯಾ? ಹಲವರಿಗೆ ಈ ಕುರಿತು ತಿಳಿದಿರೋದಿಲ್ಲ.
ಹಾಗಾದ್ರೆ ನಾವಿಂದು ಈ ಭೂಮಿಗೆ ಹೆಸರು ಬಂದಿದ್ದು ಹೇಗೆ? ಇದರ ಅರ್ಥವೇನು? ಮೊದಲು ಈ ಹೆಸರು ಇಟ್ಟಿದ್ದು ಯಾರು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಸೌರವ್ಯೂಹದಲ್ಲಿರುವ ಪ್ರತಿಯಿಂದು ಗ್ರಹಗಳಿಗೂ ಒಂದೊಂದು ಹೆಸರಿರುವಂತೆ ಭೂಮಿಯ ಮೂಲ ಹೆಸರು ಸಹ ಇತಿಹಾಸ ಸೇರಿಕೊಂಡಿದೆ.

Ertha ಎಂಬುದು ಆಂಗ್ಲೋ-ಸ್ಯಾಕ್ಸನ್ನಲ್ಲಿ ನೆಲ (ಅಂದರೆ, ನಾವು ನಿಂತಿರುವ ನೆಲ) ಎಂದರ್ಥವಾಗುತ್ತದೆ. ''ಆಂಗ್ಲೋ-ಸ್ಯಾಕ್ಸನ್" ಎಂಬುದು ಐದನೇ ಶತಮಾನ ಮತ್ತು 1066 ರ ನಾರ್ಮನ್ ವಿಜಯದ ನಡುವೆ ರೋಮನ್ ಸಾಮ್ರಾಜ್ಯದ ಪತನದ ಸ್ವಲ್ಪ ಸಮಯದ ನಂತರ ಆಧುನಿಕ ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ವಾಸಿಸುತ್ತಿದ್ದ ಸಾಂಸ್ಕೃತಿಕ ಗುಂಪನ್ನು ಉಲ್ಲೇಖಿಸಲು ಆಧುನಿಕ ಪದವಾಗಿದೆ.
ಮೊದಲು ಭೂಮಿಯನ್ನು ಆಂಗ್ಲಭಾಷೆಯ ಅರ್ಥ್ಗೂ ಮುನ್ನ ಎರ್ಥಾ ಎಂದು ಕರೆಯಲಾಗಿತ್ತು. ಆಂಗ್ಲೋ-ಸ್ಯಾಕ್ಸನ್ನಲ್ಲಿ ಎರ್ಥಾ ಎಂದರೆ ನೀವು ನಡೆಯುವ ನೆಲ, ನಿಮ್ಮ ಬೆಳೆಗಳನ್ನು ಬಿತ್ತುವ ನೆಲ ಎಂದು ಪುರಾತತ್ವಶಾಸ್ತ್ರಜ್ಞ ಎಂದು ಕರೆಯಲ್ಪಡುವ ಸ್ವತಂತ್ರ ಪುರಾತತ್ವಶಾಸ್ತ್ರಜ್ಞ ಮತ್ತು ಇತಿಹಾಸಕಾರ ಗಿಲಿಯನ್ ಹೋವೆಲ್ ಉಲ್ಲೇಖಿಸಿದ್ದಾರೆ.
ಭೂಮಿ ಎಂಬ ಪದವು ಲ್ಯಾಟಿನ್ ಪದದಿಂದ ಉತ್ಪತ್ತಿಯಾಗಿದೆ. ಟೆರ್ರಾ ಎಂದರೆ ಭೂಮಿ - ಮತ್ತೆ, ನೀವು ನಿಂತಿರುವ ಭೂಮಿ, ಕೃಷಿ ಭೂಮಿ ಎಂದಾಗಿದೆ. ಬಳಿಕ ಗ್ಲೋಬ್ ಅಂದರೆ ಭೂಮಿ ದುಂಡಗಿರುವುದು ಸಹ ಅವರ ಅರಿವಿಗೆ ಇತ್ತು. ಗ್ರೀಕ್ನ ಎರಾಟೋಸ್ತನೀಸ್ ನಮ್ಮ ಗ್ರಹದ ಸುತ್ತಳತೆಯನ್ನು 240 BC ಯಲ್ಲಿ ಅಳೆಯುತ್ತಾನೆ.
ಭೂಮಿ ದುಂಡಾಗಿದ್ದ ಕಾರಣ ಅದನ್ನು ಆರ್ಬಿಸ್ ಎನ್ನಲಾಯಿತು. ಆರ್ಬಿಸ್ ಎಂಬುದು ಆಧುನಿಕ ಕಕ್ಷೆಯ ಮೂಲ ಪದವಾಗಿದೆ. ಆದರೆ ಇಡೀ ಬ್ರಹ್ಮಾಂಡವನ್ನು ಮುಂಡಸ್ ಎಂಬ ಮತ್ತೊಂದು ಪದದಿಂದಲೂ ಗುರುತಿಸಲಾಗಿತ್ತು. ಮುಂಡಸ್ ಆಧುನಿಕ-ದಿನದ ಫ್ರೆಂಚ್ ಪದ ಮಾಂಡೆ (ಜಗತ್ತು), ಇಟಾಲಿಯನ್ ಮೊಂಡೋ, ಸ್ಪ್ಯಾನಿಷ್ ಮುಂಡೋ ಮತ್ತು ಪೋರ್ಚುಗೀಸ್ ಮುಂಡೋ ಎಂಬ ಅರ್ಥ ನೀಡುವ ಪದವಾಗಿದೆ.
ರೋಮನ್ ಲೇಖಕ ಪ್ಲಿನಿ ದಿ ಎಲ್ಡರ್ ಮುಂಡಸ್ ಎಂಬ ಪದ ಹೇರಳವಾಗಿ ಬಳಸಿದ್ದಾರೆ ಎಂದು ಹೋವೆಲ್ ಸಹ ಹೇಳಿದ್ದಾರೆ. ಇಂಟರ್ನ್ಯಾಷನಲ್ ಆಸ್ಟ್ರೋನಾಮಿಕಲ್ ಯೂನಿಯನ್ ಮೂಲಕ ಗ್ರಹಗಳನ್ನು ಹೆಸರಿಸಲು ಬಳಸಲಾಗುವ ಬಹಳಷ್ಟು ಪರಿಭಾಷೆಯನ್ನು ಪಡೆಯುತ್ತೇವೆ. ಆದರೆ ಉಳಿದ ಎಲ್ಲಾ ಗ್ರಹಗಳಿಗೂ ಗ್ರೀಕ್ನಿಂದ ಹೆಸರು ಇಡಲಾಗಿತ್ತು. ಯುರೇನಸ್, ನೆಪ್ಚೂನ್ ಮತ್ತು ಪ್ಲುಟೊ ಎಲ್ಲವೂ ರೋಮ್ಮನ್ನರು ಹಾಗೂ ಗ್ರೀಕ್ನ ದೇವರುಗಳ ಹೆಸರು ಎಂದು ನಂಬಲಾಗಿದೆ.
ಇದೆಲ್ಲದರ ಮೂಲಕ ನಮಗೆ ತಿಳಿದುಬರುವುದೇನೆಂದರೆ ನಮ್ಮ ಸೌರವ್ಯೂಹದಲ್ಲಿರುವ ಎಲ್ಲಾ ಗ್ರಹಗಳಿಗೂ ಗ್ರೀಕ್ ಅಥವಾ ರೋಮನ್ ದೇವರು ಮತ್ತು ದೇವತೆಗಳ ಹೆಸರನ್ನು ಇಡಲಾಗಿದೆ. ಆದರೆ ಭೂಮಿಗೆ ಮಾತ್ರ ಗ್ರೀಕ್ ದೇವರ ಹೆಸರಿಡಲಾಗಿಲ್ಲ ಬದಲಿಗೆ ಆಂಗ್ಲೋ-ಸ್ಯಾಕ್ಸನ್ ಪದದಿಂದ ಬಂದ ಎರ್ಥಾ ಎಂಬ ಪದದಿಂದ ಹುಟ್ಟುಕೊಂಡಿದೆ.



Click it and Unblock the Notifications
