Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶಿಖರ್ ಧವನ್ ಮಾಜಿ ಪತ್ನಿ ಯಾರು..? ಧವನ್ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ?
ಭಾರತ ಕ್ರಿಕೆಟ್ ತಂಡ ಓಪನಿಂಗ್ ಬ್ಯಾಟ್ಸ್‌ಮನ್ ಶಿಖರ್ ಧವನ್ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಶನಿವಾರ ಬೆಳಗಿನ ಜಾವ ಶಿಖರ್ ಧವನ್ ಭಾವನಾತ್ಮಕ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಅವರು ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಹಲವು ವರ್ಷದಿಂದ ಭಾರತ ಕ್ರಿಕೆಟ್ ತಂಡಕ್ಕೆ ವಾಪಾಸಾಗಲು ಕಠಿಣ ಪ್ರಯತ್ನ ಮಾಡಿದ್ದ ಅವರು, ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರು. ಆದರೆ ವಿಶ್ವಕಪ್ ತಂಡದಿಂದ ಅವರನ್ನು ಹೊರಗಿಡಲಾಗಿತ್ತು. ಇತ್ತ ಟಿ 20 ವಿಶ್ವಕಪ್ ತಂಡದ ಆಡುವ 11ರ ಬಳಗ ಸೇರಿ ಇತರೆ ಆಟಗಾರರ ಪಟ್ಟಿಯಲ್ಲೂ ಅವರ ಹೆಸರು ಇರಲಿಲ್ಲ. ಹೀಗಾಗಿ ಅವರು ನಿವೃತ್ತಿ ಘೋಷಿಸಿದ್ದಾರೆ ಎಂಬ ವರದಿಗಳಾಗಿವೆ.

ಇತ್ತೀಚಿನ ವರ್ಷದಲ್ಲಿ ಅವರ ಕ್ರಿಕೆಟ್ ಜೀವನ ಅಷ್ಟೊಂದು ಸುಗಮವಾಗಿರಲಿಲ್ಲ. ಹಾಗೆ ಅವರ ವೈಯಕ್ತಿಕ ಜೀವನ ಸಹ ಏಳು ಬೀಳುಗಳಿಂದಲೇ ಕೂಡಿತ್ತು. ಪತ್ನಿಯಿಂದ ವಿಚ್ಚೇದನ, ಪುತ್ರನಿಂದ ದೂರಾಗಿದ್ದ ನೋವು ಅವರನ್ನು ಕಾಡಲು ಆರಂಭಿಸಿತ್ತು. ಹಲವು ಬಾರಿ ಅವರು ಈ ನೋವಿನ ಸಂಗತಿಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದರು.
ಶಿಖರ್ ಧವನ್ ಮಾಜಿ ಪತ್ನಿ ಯಾರು..?
ಆಗಸ್ಟ್ 27, 1975 ರಂದು ಜನಿಸಿದ ಈಶಾ ಮುಖರ್ಜಿ ಮಧ್ಯಮ ವರ್ಗದ ಭಾರತೀಯ ಕುಟುಂಬದ ಹುಡುಗಿ. ಅವರು ಆಸ್ಟ್ರೇಲಿಯಾದಲ್ಲಿ ಶಿಕ್ಷಣ ಪಡೆದು ಭಾರತಕ್ಕೆ ಬಂದಿದ್ದರು. ಆದರೆ ಶಿಖರ್ ಧವನ್ ಅವರನ್ನು ಮದುವೆಯಾಗುವ ಮುನ್ನ ಅವರು ಉದ್ಯಮಿಯೊಬ್ಬರ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಆದರೆ 2012ರಲ್ಲಿ ಇಬ್ಬರು ಬೇರೆ ಬೇರೆಯಾಗಲು ನಿರ್ಧರಿಸಿದರು.
ಶಿಖರ್ ಧವನ್ ಜೊತೆ ಈಶಾ ವಿವಾಹ
ಆಶಾ ಮುಖರ್ಜಿ ಮತ್ತು ಶಿಖರ್ ಧವನ್ ಪರಿಚಯವಿಲ್ಲದಿದ್ದರೂ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದರು ಎಂದು ತಿಳಿದುಬಂದಿದೆ. ಬಳಿಕ ಸೋಶಿಯಲ್ ಮೀಡಿಯಾ ಮೂಲಕ ಸ್ನೇಹ ಮುಂದುವರೆದಿತ್ತು. ಇದಾಗಿ ಕೆಲವೇ ತಿಂಗಳಗಳ ಕಾಲ ಒಟ್ಟಿಗೆ ಇದ್ದ ಅವರಿಬ್ಬರು ಮದವೆಯಾಗಲು ನಿರ್ಧರಿಸಿ 2012ರಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಧವನ್ ಹಾಗೂ ಆಕೆಯ ನಡುವೆ 12 ವರ್ಷಗಳ ಅಂತರವೂ ಇತ್ತು.
ಈಶಾ ಮತ್ತು ಶಿಖರ್ ವಿಚ್ಛೇದನ
2021 ರಲ್ಲಿ ಈಶಾ ಮುಖರ್ಜಿ ಅವರು ಶಿಖರ್ ಧವನ್‌ನಿಂದ ವಿಚ್ಛೇದನ ಪಡೆಯಲು ಮುಂದಾದರು. ಪತಿಯಿಂದ ಕಿರುಕುಳ ಅಂಶದಡಿ ಧವನ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಅಂತಿಮವಾಗಿ ಇಬ್ಬರಿಗೂ ವಿಚ್ಛೇದನ ನೀಡಲಾಗಿತ್ತು. ಇದಾದ ಬಳಿಕ ಧವನ್ ಒಂಟಿಯಾಗಿದ್ದರು.
ಶಿಖರ್ ಧವನ್ ಆಸ್ತಿ ಎಷ್ಟು?
ಇತ್ತೀಚಿನ ವರದಿಗಳ ಪ್ರಕಾರ ಧವನ್ ಸುಮಾರು 125 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಶಿಖರ್ ಧವನ್ ಅವರ ಜನಪ್ರಿಯತೆಯು ಅವರನ್ನು ಪ್ರಾಯೋಜಕತ್ವದ ಒಪ್ಪಂದಗಳಿಗಾಗಿ ದೇಶದಲ್ಲಿ ಹೆಚ್ಚು ಬೇಡಿಕೆಯಿರುವ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಅವರು ಜಿಯೋ, ನೆರೋಲಾಕ್ ಪೇಂಟ್ಸ್, ಜಿಎಸ್ ಕ್ಯಾಲ್ಟೆಕ್ಸ್, ಲೇಸ್, ಒಪ್ಪೋ, ಬೋಟ್, ಐಎಂಜಿ ರಿಲಯನ್ಸ್, ಅಲ್ಸಿಸ್ ಸ್ಪೋರ್ಟ್ಸ್ ಮತ್ತು ವಿ-ಸ್ಟಾರ್ ಸೇರಿ ಹಲವು ಕಂಪನಿಗಳ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಶಿಖರ್ ಧವನ್ ಬಳಿ ಮರ್ಸಿಡಿಸ್ ಜಿಎಲ್ 350 ಸಿಡಿಐ ಮತ್ತು ಆಡಿ ಹೊಂದಿದ್ದಾರೆ. ಅವರ ಬಳಿ ಬೈಕ್ ಕಲೆಕ್ಷನ್ ಸಹ ಇದೆ. ಐಕಾನಿಕ್ ಹಾರ್ಲೆ-ಡೇವಿಡ್ಸನ್ ಫ್ಯಾಟ್ ಬಾಯ್, ಸುಜುಕಿ ಹಯಾಬುಸಾ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಕವಾಸಕಿ ನಿಂಜಾ ZX-14R ಅವರ ಬಳಿ ಇದೆ.



Click it and Unblock the Notifications











