Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Radhika Yadav: ತಂದೆಯ ಕೋಪಕ್ಕೆ ಟೆನಿಸ್ ತಾರೆ ಬಲಿ! ಯಾರು ಈ ರಾಧಿಕಾ ಯಾದವ್? ಕರುಳು ಹಿಂಡುವ ಸತ್ಯ
ಹರಿಯಾಣದ ರಾಧಿಕಾ ಯಾದವ್ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ! ತಂದೆಯ ಕೋಪವೇ ಸಾವಿಗೆ ಕಾರಣವಾಯ್ತಾ? ಹರಿಯಾಣದ ಗುರುಗ್ರಾಮ್‌ನಿಂದ ಹೃದಯ ವಿದ್ರಾವಕ ಸುದ್ದಿಯೊಂದು ಹೊರಬಿದ್ದಿದೆ. ಇದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ರಾಷ್ಟ್ರೀಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು (Tennis Player Radhika Yadav) ಗುರುಗ್ರಾಮ್‌ನ ಸೆಕ್ಟರ್ -57 ಪ್ರದೇಶದಲ್ಲಿ ಅವರ ಸ್ವಂತ ತಂದೆಯೇ ಗುಂಡಿಕ್ಕಿ ಕೊಂದಿದ್ದಾರೆ. ಅಕಾಡೆಮಿಯ ಇನ್ಸ್ಟಾ ರೀಲ್ಸ್, ಜನರ ಕುಹುಕಗಳೇ ತಂದೆಯ ಆಕ್ರೋಶಕ್ಕೆ ಕಾರಣವಾಯಿತೇ? ಎಂಬ ಪ್ರಶ್ನೆ ಉದ್ಭವಿಸಿದೆ. ತಂದೆಯ ನಿರ್ಧಾರವೇ ಮಗಳ ಬದುಕನ್ನು ಕಸಿದುಕೊಂಡಿದ್ದೇಕೆ? ಎಂಬ ಇಲ್ಲಿದೆ ಮಾಹಿತಿ.
ಗುರುಗ್ರಾಮದಲ್ಲಿ ರಾಷ್ಟ್ರೀಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ (Radhika Yadav) ಎಂಬಾಕೆಯನ್ನು ಆಕೆಯ ತಂದೆಯೇ ಗುಂಡಿಕ್ಕಿ ಕೊಂದಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬೆಳಗ್ಗೆ 10.30ರ ಸುಮಾರಿಗೆ ರಾಧಿಕಾ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಈ ಘಟನೆ ನಡೆದಿದೆ. 25 ವರ್ಷದ ರಾಧಿಕಾ ಯಾದವ್ ದೇಶದ ಉದಯೋನ್ಮುಖ ಟೆನಿಸ್ ಆಟಗಾರ್ತಿಯಾಗಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದರು. ರಾಧಿಕಾ ಯಾದವ್ ಯಾರು? ಮತ್ತು ಆಕೆಯನ್ನು ಏಕೆ ಕೊಲೆ ಮಾಡಲಾಯಿತು? ಎಂಬುದನ್ನು ತಿಳಿಯೋಣ ಬನ್ನಿ.

ರಾಧಿಕಾ ಯಾದವ್ ಯಾರು?
ರಾಧಿಕಾ ಯಾದವ್ ಭರವಸೆಯ ಟೆನಿಸ್ ಆಟಗಾರ್ತಿಯಾಗಿದ್ದು, ಅನೇಕ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ. ಅವರು ಮಾರ್ಚ್ 23, 2000 ರಂದು ಜನಿಸಿದರು. ಇಂಟರ್ನ್ಯಾಷನಲ್ ಟೆನಿಸ್ ಫೆಡರೇಶನ್ (ITF) ಡಬಲ್ಸ್ ವಿಭಾಗದಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 113 ನೇ ಸ್ಥಾನವನ್ನು ತಲುಪಿದ್ದರು ಮತ್ತು ITF ಡಬಲ್ಸ್ ವಿಭಾಗದಲ್ಲಿ ಟಾಪ್ 200 ಆಟಗಾರರಲ್ಲಿ ಒಬ್ಬರಾಗಿದ್ದರು. ಅವರು ಅನೇಕ ಪದಕಗಳು ಮತ್ತು ಟ್ರೋಫಿಗಳನ್ನು ಗೆದ್ದು ತಮ್ಮ ಕುಟುಂಬ ಮತ್ತು ದೇಶಕ್ಕೆ ಕೀರ್ತಿ ತಂದಿದ್ದರು. ರಾಧಿಕಾ ದೇಶದ ಉದಯೋನ್ಮುಖ ಕ್ರೀಡಾ ಪ್ರತಿಭೆಗಳಲ್ಲಿ ಒಬ್ಬರಾಗಿದ್ದರು. ಇತ್ತೀಚೆಗೆ ಟೆನಿಸ್ ಅಕಾಡೆಮಿಯನ್ನೂ ಸಹ ನಡೆಸುತ್ತಿದ್ದರು.
ತಂದೆಯಿಂದಲೇ ಮಗಳ ಕೊಲೆ
ರಾಧಿಕಾ ತನ್ನ ತಂದೆ ತಾಯಿಯೊಂದಿಗೆ ಗುರ್‌ಗಾಂವ್‌ನ ಸೆಕ್ಟರ್ 57ರ (Gurugram's Sector 57) ಮನೆಯಲ್ಲಿ ವಾಸಿಸುತ್ತಿದ್ದರು. ಗುರುವಾರ ಮಧ್ಯಾಹ್ನ ರಾಧಿಕಾ, ಆಕೆಯ ತಾಯಿ ಮತ್ತು ತಂದೆ ದೀಪಕ್ ಯಾದವ್ ಮನೆಯಲ್ಲಿ ಇದ್ದಾಗ ಈ ಘಟನೆ ನಡೆದಿದೆ. ತಂದೆ ದೀಪಕ್ ಯಾದವ್ ಕೆಲವು ಸಮಯದಿಂದ ರಾಧಿಕಾಳ ಮೇಲೆ ಕೋಪಗೊಂಡಿದ್ದರು ಎನ್ನಲಾಗಿದೆ. ಮಧ್ಯಾಹ್ನದ ಸಮಯದಲ್ಲಿ ರಾಧಿಕಾಳೊಂದಿಗೆ ಯಾವುದೋ ವಿಷಯಕ್ಕೆ ಜಗಳವಾಡಿದ ನಂತರ ಕೋಪದಲ್ಲಿ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಮಗಳ ಮೇಲೆ ಒಂದರ ನಂತರ ಒಂದು ಐದು ಗುಂಡುಗಳನ್ನು ಹಾರಿಸಿದ್ದಾನೆ. ಅದರಲ್ಲಿ ಮೂರು ಗುಂಡುಗಳು ರಾಧಿಕಾಗೆ ತಗುಲಿವೆ.
ಗುಂಡಿನ ಸದ್ದು ಕೇಳಿ ಅಕ್ಕಪಕ್ಕದ ಮನೆಯವರು ಮನೆಗೆ ಬಂದು ಕೂಡಲೇ ರಾಧಿಕಾಳನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟರಲ್ಲಿ ಸಮಯ ಕೈಮೀರಿ ಹೋಗಿತ್ತು. ವೈದ್ಯರು ಆಕೆಯನ್ನು ಮೃತಪಟ್ಟಿದ್ದಾರೆಂದು ಘೋಷಿಸಿದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ತಂದೆ ದೀಪಕ್ ಯಾದವ್ ಅವರನ್ನು ತಕ್ಷಣ ಬಂಧಿಸಲಾಗಿದೆ.
ಕೊಲೆಗೆ ಕಾರಣದ ತನಿಖೆ
ಪೊಲೀಸರು ಸದ್ಯಕ್ಕೆ ಕೊಲೆಗೆ ಕಾರಣ ಏನೆಂದು ತನಿಖೆ ನಡೆಸುತ್ತಿದ್ದಾರೆ. ಆದರೆ, ಪ್ರಾಥಮಿಕ ವರದಿಗಳ ಪ್ರಕಾರ ರಾಧಿಕಾ ಮತ್ತು ಆಕೆಯ ತಂದೆಯ ನಡುವೆ ಬಹಳ ದಿನಗಳಿಂದ ಭಿನ್ನಾಭಿಪ್ರಾಯವಿತ್ತು. ರಾಧಿಕಾ ಟೆನಿಸ್ ಅಕಾಡೆಮಿಯನ್ನು ಪ್ರಾರಂಭಿಸಿದ್ದಳು. ಅದನ್ನು ಮುಚ್ಚುವಂತೆ ಆಕೆಯ ತಂದೆ ನಿರಂತರವಾಗಿ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಈ ವಿಷಯದ ಬಗ್ಗೆ ತಂದೆ ಮತ್ತು ಮಗಳ ನಡುವೆ ವಾಗ್ವಾದ ನಡೆದಿದೆ ಮತ್ತು ದೀಪಕ್ ಯಾದವ್ ತನ್ನ ಮಗಳ ಜೀವವನ್ನೇ ತೆಗೆದಿದ್ದಾನೆ.
ರೀಲ್ಸ್ ಮಾಡುವುದಕ್ಕೆ ತಂದೆಯ ವಿರೋಧವಿತ್ತಾ?
ಕೆಲವು ಮಾಧ್ಯಮ ವರದಿಗಳ ಪ್ರಕಾರ, ರಾಧಿಕಾಗೆ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಮಾಡುವ ಹವ್ಯಾಸವಿತ್ತು. ಆದರೆ, ಇದು ಆಕೆಯ ತಂದೆಗೆ ಇಷ್ಟವಿರಲಿಲ್ಲ. ರಾಧಿಕಾ ಈ ವಿಷಯಗಳಿಂದ ದೂರವಿರಬೇಕೆಂದು ಅವರು ಬಯಸಿದ್ದರು. ಇದೇ ವಿಷಯಕ್ಕೆ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಪೊಲೀಸರು ಈ ಆಂಗಲ್‌ನಲ್ಲೂ ತನಿಖೆ ನಡೆಸುತ್ತಿದ್ದು, ಈವರೆಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಒಟ್ಟಿನಲ್ಲಿ, ತಂದೆ ಮಗಳ ನಡುವಿನ ಭಿನ್ನಾಭಿಪ್ರಾಯವು ರಾಧಿಕಾ ಯಾದವ್ ಎಂಬ ಟೆನಿಸ್ ಆಟಗಾರ್ತಿಯ ಸಾವಿಗೆ ಕಾರಣವಾಗಿದೆ. ಈ ಘಟನೆಯು ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಕುಟುಂಬದ ಮೌಲ್ಯಗಳ ಕುಸಿತದ ಬಗ್ಗೆ ಬೆಳಕು ಚೆಲ್ಲುತ್ತದೆ.



Click it and Unblock the Notifications












